ಆರೆಸ್ಸೆಸ್ ಎಂದರೇನು? ಎಂಬ ಪ್ರಶ್ನೆಗೆ ಸಂಘದ ಸಂಸ್ಥಾಪನೆಯ ಮೊದಲ ಸಭೆಯಲ್ಲಿದ್ದ, ನಂತರ ಪ್ರಚಾರಕರಾಗಿದ್ದ ದಾದಾರಾವ್ ಪರಮಾರ್ಥ್ “RSS is the Evolution of the Life Mission for the Hindu Nation” ಎಂದು ಉತ್ತರಿಸಿದ್ದರು. ವ್ಯಕ್ತಿನಿರ್ಮಾಣದ ಮೂಲಕ ಸಮಾಜ ಪರಿವರ್ತನೆಯ ಆಶಯದೊಂದಿಗೆ ಹಿಂದು ಧರ್ಮ, ಹಿಂದು ಸಂಸ್ಕೃತಿ, ಹಿಂದು ಸಮಾಜದ ಸಂರಕ್ಷಣೆ ಮಾಡುವುದು ಹಾಗೂ ರಾಷ್ಟ್ರದ ಸರ್ವಾಂಗೀಣ ಉನ್ನತಿಯ ಧ್ಯೇಯದೊಂದಿಗೆ ಕೋಟ್ಯಂತರ ಜನರಲ್ಲಿ ಸಮಾಜಸೇವಾಕಾರ್ಯದ ಭಾವಜಾಗೃತಿಯನ್ನುಂಟು ಮಾಡಿ ಅವರನ್ನು ಸಮಾಜಮುಖಿ ಕಾರ್ಯಗಳಿಗಾಗಿ ತೊಡಗುವಂತೆ ಪ್ರೇರಣೆ ನೀಡುತ್ತಾ ಸದೃಢ ಭಾರತದ ನಿರ್ಮಾಣದಲ್ಲಿ ತೊಡಗಿರುವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದೀಗ ಶತಾಬ್ದಿಯ ಸಂಭ್ರಮ. ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸಂಘಟನಾತ್ಮಕ ವಿಕಾಸದ ನೂರು ವರ್ಷಗಳಲ್ಲಿ ಕಾರ್ಯಪದ್ಧತಿ ಹಾಗೂ ಕಾರ್ಯಶೈಲಿಯ ಅನೇಕ ವೈಶಿಷ್ಟ್ಯಗಳ ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟಿದೆ. ಈ ಪೈಕಿ ಕೆಲವು ವಿಶೇಷತೆಗಳನ್ನು ಗಮನಿಸೋಣ. ಸಾಮೂಹಿಕ ಚಿಂತನೆ: 1925 ರಲ್ಲಿ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ತಮ್ಮ ಮನೆಯ ಮೊದಲ ಮಹಡಿಯಲ್ಲಿ ಸೇರಿದ್ದ 17 ಮಂದಿ ಸಮಾನ ಮನಸ್ಕರೊಂದಿಗೆ ಸಂಘದ ಚಿಂತನೆಯನ್ನು ಮುಂದಿಟ್ಟರು. ವಿಶ್ವನಾಥ ರಾವ್ ಕೇಳ್ಕರ್, ಭಾವೂಜಿ ಕಾವರೆ, ಡಾ. ಲ. ವಾ. ಪರಾಂಜಪೆ, ರಘುನಾಥರಾವ್ ಬಾಂಡೆ, ಭಯ್ಯಾಜಿ ದಾಣಿ, ಬಾಪು ಭೇದಿ, ಅಣ್ಣಾ ವೈದ್ಯ, ಕೃಷ್ಣಾರಾವ್ ಮೋಹಲಾಲ್, ನರಹರ್ ಪಾಲೇಕರ್, ದಾದಾರಾವ್ ಪರಮಾರ್ಥ್, ಅಣ್ಣಾಜಿ ಗಾಯಕವಾಡ್, ದೇವಘರೆ, ಬಾಬೂ ರಾವ್ ತೆಲಂಗ್, ತಾತ್ಯಾ ತೆಲಂಗ್, ಬಾಬಾ ಸಾಹೇಬ ಅಠಲ್ಯೆ, ಬಾಲಾಜಿ ಹುದ್ದಾರ್ ಮತ್ತು ಅಣ್ಣಾ ಸೋಹೋನಿ - ಇವರು ಸಂಘದ ಪ್ರಾರಂಭದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದವರು. ಈ ಮೊದಲ ಸಭೆಯಿಂದ ಪ್ರಾರಂಭಿಸಿ ಸಂಘ ಕ್ರಮಿಸಿದ ನೂರುವರ್ಷಗಳಲ್ಲಿ ಇದೇ ರೀತಿಯ ಸಾಮೂಹಿಕ ಚಿಂತನೆಯ ಆಧಾರದಲ್ಲಿಯೇ ಸಂಘದ ಎಲ್ಲಾ ನಿರ್ಣಯಗಳು, ನೀತಿಗಳು, ಯೋಜನೆಗಳು ರೂಪುಗೊಳ್ಳುತ್ತದೆ. ಇದಕ್ಕಾಗಿ ನಿಯಮಿತವಾಗಿ ಬೈಠಕ್ ಗಳು ನಡೆಯುತ್ತವೆ. ಸಾಮೂಹಿಕ ನಿರ್ಣಯ: ಸಂಘದ ನಿರ್ಣಯಗಳು ಮೂಡಿಬರುವುದೇ ಬೈಠಕ್ಗಳಲ್ಲಿ. ಅದಕ್ಕೆ ನಿಶ್ಚಿತವಾದ ಅಪೇಕ್ಷಿತ ಕಾರ್ಯಕರ್ತರಿರುತ್ತಾರೆ. ಒಂದು ವಿಷಯದ ಕುರಿತು ನಿರ್ಣಯ ಮಾಡಲು ಒಟ್ಟು ಸೇರಿರುತ್ತಾರೆ. ಎಲ್ಲರೂ ಅವರವರ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಎಲ್ಲರ ಸಹಮತದ ನಿರ್ಧಾರದ ಸಾಮೂಹಿಕ ನಿರ್ಣಯ ಪ್ರಕ್ರಿಯೆ ಸಂಘಕಾರ್ಯದ ವಿಶೇಷತೆ. ಬಹುಮತದ (Majority) ಮೇಲಲ್ಲ, ಬದಲಾಗಿ ಸಹಮತದ (Consensus) ಆಧಾರದಲ್ಲಿ ನಿರ್ಣಯಗಳು ಸಾಮೂಹಿಕವಾಗಿ ಅಂಗೀಕರಿಸಲ್ಪಡುತ್ತವೆ. ಸಾಮೂಹಿಕವಾಗಿ ಒಮ್ಮೆ ಅಂಗೀಕರಿಸಿದ ನಿರ್ಣಯವನ್ನು ಎಲ್ಲರೂ ಸಹಜವಾಗಿಯೇ ಶ್ರದ್ಧೆಯಿಂದ ಸ್ವೀಕರಿಸಿ ಆ ನಿರ್ಣಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ. ಸರ್ವವ್ಯಾಪಿ: 1925ರ ವಿಜಯದಶಮಿಯಂದು (ಸೆಪ್ಟಂಬರ್ 27, 1925) ಮಹಾರಾಷ್ಟ್ರದ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭಗೊಂಡಿತು. ನಾಗಪುರದಲ್ಲಿ ಅದಾಗ್ಗೆ ವೈದ್ಯಕೀಯ ಶಿಕ್ಷಣ ಮುಗಿಸಿದ್ದ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಯುವನೇತಾರ ಡಾ| ಕೇಶವ ಬಲಿರಾಂ ಹೆಡಗೇವಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು. 1926ರಲ್ಲಿ ನಾಗಪುರದ ಮಹಲ್ ಪರಿಸರದ ಮೊಹಿತೇವಾಡದ ಮೊದಲ ಶಾಖೆಯಿಂದ ಮೊದಲ್ಗೊಂಡು ಇದೀಗ ದೇಶದುದ್ದಗಲ ಸಂಘದ ಶಾಖೆಗಳು ವಿಸ್ತರಿಸಿದೆ. 1940ರ ವೇಳೆಗೆ ಭಾರತದ ಎಲ್ಲಾ ಪ್ರಾಂತಗಳನ್ನು ತಲುಪಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು 1980ರ ವೇಳೆ ಎಲ್ಲಾ ಜಿಲ್ಲೆಗಳನ್ನು ಹಾಗೂ 1996ರ ವೇಳೆ ಎಲ್ಲಾ ತಾಲೂಕುಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿತು. ಮುಂದಿನ ವರ್ಷಗಳಲ್ಲಿ ದೇಶದ ಎಲ್ಲಾ ಮಂಡಲಗಳಿಗೆ ಸಂಘಟನಾತ್ಮಕ ವಿಸ್ತಾರದ ಗುರಿಯನ್ನು ಹೊಂದಿದೆ. ಈಗಾಗಲೇ ಹಲವಾರು ಪ್ರಾಂತಗಳಲ್ಲಿ ಎಲ್ಲಾ ಮಂಡಲಗಳಿಗೆ ಸಂಘಕಾರ್ಯ ವಿಸ್ತಾರಗೊಂಡಿದೆ. 53 ದೇಶಗಳಲ್ಲಿ ಹಿಂದೂ ಸ್ವಯಂಸೇವಕ ಸಂಘ ಸಕ್ರಿಯವಾಗಿದೆ. ಹೀಗೆ ಭೌಗೋಳಿಕವಾಗಿ ಸಂಘಕಾರ್ಯವು ದೇಶದ ಮೂಲೆಮೂಲೆಗೂ ತಲುಪಿ ಸರ್ವವ್ಯಾಪಿ ಎನಿಸಿದೆ. ಸರ್ವಸ್ಪರ್ಶಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವ ಬೃಹತ್ ಸಂಘಟನೆ. ಸಮಾಜ ಜೀವನದ ಎಲ್ಲರೂ ಆರೆಸ್ಸೆಸ್ಸಿನಲ್ಲಿದ್ದಾರೆ. ಜಾತಿ, ಭಾಷೆ, ಪ್ರಾಂತ, ಮತ, ಪಂಥ – ಈ ಎಲ್ಲವನ್ನೂ ಮೀರಿದ ಸಾಮಾಜಿಕ ಏಕತೆ ಸಂಘದಲ್ಲಿ ಸದಾ ಕಾಣಸಿಗುತ್ತದೆ. ಸಂಘದ ಪ್ರಾರಂಭದ ದಿನದಿಂದಲೂ ಜಾತಿ ಮೀರಿ ಹಿಂದುಭಾವದಿಂದ ಎಲ್ಲರನ್ನು ನೋಡುವ ದೃಷ್ಟಿಕೋನವನ್ನು ನೀಡಿದೆ. 1934ರಲ್ಲಿ ವಾರ್ಧಾದ ಆರೆಸ್ಸೆಸ್ ಶಿಬಿರಕ್ಕೆ ಮಹಾತ್ಮಾ ಗಾಂಧೀಜಿ ಹಾಗೂ 1939ರಲ್ಲಿ ಪುಣೆಯ ಶಿಬಿರಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿದಾಗ ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧಿತ್ವ ಕಂಡು ಸಂಘದ ಸಮರಸತೆಯ ವಾತಾವರಣವನ್ನು ಕೊಂಡಾಡಿದ್ದರು. 2021ರ ಜನವರಿ 31 ರಂದು ಬೆಂಗಳೂರಿನ ಕೇಶವಕೃಪಾ ಕಾರ್ಯಾಲಯಕ್ಕೆ ಭೇಟಿ ನೀಡಿದ್ದ ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿಯವರು ತೃತೀಯಲಿಂಗಿಗಳ ಕುರಿತು ಸಂಘದ ಸಂಪರ್ಕ, ನಿಲುವುಗಳನ್ನು ಪ್ರಶಂಸಿದ್ದರು. ಸಂಘದ ಅಂಗಳಕ್ಕೆ ಸಮಾಜ ಜೀವನದ ಎಲ್ಲಾ ಜಾತಿ-ಪಂಗಡದವರು ಸದಾ ಬರುತ್ತಿರುತ್ತಾರೆ. ಸಂಘದ್ದು ಸದಾ ತೆರೆದ ಬಾಗಿಲು. ಸದಾ ಸರ್ವಸ್ಪರ್ಶಿ ಸಂಘಟನೆ. Progressive unfoldment: ಸಂಘದ ಸಂಸ್ಥಾಪನೆಯ ಸಂದರ್ಭದಲ್ಲಿ ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ಯೋಚಿಸುತ್ತಾ, ಅದಕ್ಕಾಗಿ ಕಾರ್ಯಪ್ರವೃತ್ತವಾಗಬಲ್ಲ ಸಮಾಜವನ್ನು ರೂಪಿಸುವುದಕ್ಕಾಗಿ ಸಂಘಕಾರ್ಯವು ಕ್ರಮೇಣ ದೇಶಾದ್ಯಂತ ವಿಸ್ತಾರವಾಗಬೇಕು ಹಾಗೂ ಅದಕ್ಕಾಗಿ ಲಕ್ಷಾಂತರ ಕಾರ್ಯಕರ್ತರ ಅಗತ್ಯವಿದೆ ಎಂಬುದನ್ನು ಸಂಸ್ಥಾಪಕರು ಮನಗಂಡಿದ್ದರು. ಪ್ರಾಮಾಣಿಕತೆಯಿಂದ, ನಿಸ್ವಾರ್ಥಬುದ್ಧಿಯಿಂದ ಸಂಘಟನೆಯ ಕೆಲಸ ಮಾಡುತ್ತಾ ಹಿಂದು ಸಮಾಜ, ಹಿಂದು ಸಂಸ್ಕೃತಿ, ಹಿಂದು ಧರ್ಮ, ಹಿಂದು ರಾಷ್ಟ್ರ ಇವುಗಳ ಉನ್ನತಿ ಮತ್ತು ಸಂರಕ್ಷಣೆಗಾಗಿ ಕಟಿಬದ್ಧರಾಗುವ ಕಾರ್ಯಕರ್ತರನ್ನು ನಿರ್ಮಿಸಬೇಕು. ಅದಕ್ಕಾಗಿ ಕಾರ್ಯಕರ್ತರ ನಿರ್ಮಾಣ ಎನ್ನುವುದು ಒಂದು ಸತತ, ನಿಯಮಿತ ಪ್ರಕ್ರಿಯೆಯಾಗಬೇಕು ಎಂಬುದನ್ನು ಪ್ರಾರಂಭದಲ್ಲೇ ಯೋಚಿಸಿದ್ದರು. ಕಾರ್ಯಕರ್ತರು ಲಭಿಸಿದಂತೆ ಸಂಘಕಾರ್ಯವು ವಿಸ್ತರಿಸುತ್ತಾ ಸಾಗಿತು. ಹೊಸ ಕಾರ್ಯವಿಭಾಗಗಳು ಶಾರೀರಿಕ ವಿಭಾಗ, ಬೌದ್ಧಿಕ ವಿಭಾಗ, ವ್ಯವಸ್ಥಾ ವಿಭಾಗ ಪ್ರಾರಂಭವಾಯಿತು. 1990ರಲ್ಲಿ ಸೇವಾ ವಿಭಾಗ, 1994ರಲ್ಲಿ ಸಂಪರ್ಕ ಹಾಗೂ ಪ್ರಚಾರ ವಿಭಾಗ ಪ್ರಾರಂಭವಾಯಿತು. 1996ರಲ್ಲಿ ಧರ್ಮ ಜಾಗರಣ ಗತಿವಿಧಿ ಸೇರಿದಂತೆ ಕ್ರಮೇಣ 6 ಗತಿವಿಧಿಗಳು ಪ್ರಾರಂಭವಾಯಿತು. 1936ರಲ್ಲಿ ಮಹಿಳೆಯರಿಗಾಗಿ ರಾಷ್ಟ್ರ ಸೇವಿಕಾ ಸಮಿತಿ, 1949ರಲ್ಲಿ ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, 1952ರಲ್ಲಿ ಕಾಡಿನಲ್ಲಿರುವ ವನವಾಸಿ ಬಂಧುಗಳ ವಿಕಾಸಕ್ಕಾಗಿ ವನವಾಸಿ ಕಲ್ಯಾಣ ಆಶ್ರಮ, 1964ರಲ್ಲಿ ವಿಶ್ವ ಹಿಂದೂ ಪರಿಷತ್ - ಸೇರಿದಂತೆ 45ಕ್ಕೂ ಹೆಚ್ಚು ಸಂಘಟನೆಗಳ ಮೂಲಕ ಸಂಘದ ಸ್ವಯಂಸೇವಕರು ಸಮಾಜ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಸಂಘದ ವಿಕಾಸ ಪ್ರಕ್ರಿಯೆಯು progressive unfoldment ಸ್ವರೂಪದ್ದು ಎಂದು ಹಿರಿಯ ಪ್ರಚಾರಕ ದತ್ತೋಪಂತ ಠೇಂಗಡಿಯವರು ಒಮ್ಮೆ ಹೇಳಿದ್ದರು. ಅಂದರೆ ಬೀಜರೂಪದಿಂದ ಮೊಳಕೆಯೊಡೆದು ನಂತರ ಕಾಂಡ, ಬೇರು, ಎಲೆಗಳನ್ನು ಹೊಂದಿ ಕ್ರಮೇಣ ರೆಂಬೆ-ಕೊಂಬೆ, ಹೂ-ಹಣ್ಣುಗಳೊಂದಿಗೆ ವಟವೃಕ್ಷವಾಗಿ ಬೆಳೆದು ನಿಲ್ಲುವ ರೀತಿಯಲ್ಲಿ ಈ ವಿಕಾಸದ ಪ್ರಕ್ರಿಯೆ ನಿರಂತರವಾಗಿ ಸಾಗಿಬಂದಿದೆ. ಸ್ವಯಂಸೇವಕರೇ ಆಧಾರಸ್ತಂಭ: ಹಿಂದೂರಾಷ್ಟ್ರ, ಹಿಂದೂಸಂಸ್ಕೃತಿ, ಹಿಂದೂಸಮಾಜದ ಸರ್ವಾಂಗೀಣ ಉನ್ನತಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕನಾಗಿದ್ದು, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಬುದ್ಧಿಯಿಂದ ರಾಷ್ಟ್ರಕಾರ್ಯವನ್ನು ಆಜನ್ಮ ಪಾಲಿಸಲು ಆರೆಸ್ಸೆಸ್ ಸ್ವಯಂಸೇವಕನು ಕಟಿಬದ್ಧನಾಗುತ್ತಾನೆ. ಈ ರೀತಿಯ ಸಮರ್ಪಣಾ ಭಾವದ, ಸ್ವಂತಕ್ಕೇನೂ ಬಯಸದ, ಸಮಾಜಮುಖಿ ಚಿಂತನೆಯ ಕೋಟ್ಯಾಂತರ ಸ್ವಯಂಸೇವಕರೇ ಸಂಘಕಾರ್ಯದ ಆಧಾರಸ್ತಂಭಗಳು. ಆರೆಸ್ಸೆಸ್ಸಿನಲ್ಲಿ ಯಾವುದೇ ಮೆಂಬರ್ಶಿಪ್ ಇಲ್ಲ. ‘ನಮಸ್ತೇ ಸದಾವತ್ಸಲೇ ಮಾತೃಭೂಮೇ’ ಎಂದು ಪ್ರಾರ್ಥನೆಯ ಮೂಲಕ ಧ್ಯೇಯಸ್ಮರಣೆಯನ್ನು ಪ್ರತಿನಿತ್ಯ ಮಾಡುವ ಆರೆಸ್ಸೆಸ್ ಸ್ವಯಂಸೇವಕರು ರಾಷ್ಟ್ರದ ಪರಮವೈಭವಕ್ಕಾಗಿ ಕಟಿಬದ್ಧರಾಗುವ ಸಂಕಲ್ಪ ಮಾಡುತ್ತಾರೆ. ಹಿಂದೂ ಸಮಾಜ ಅಂದರೆ ಮಾತೃಸಮಾಜ ಅಥವಾ ಭಾರತೀಯ ಸಮಾಜದ ಸಂಘಟನೆ, ಎಲ್ಲರ ಹಿತಬಯಸುವ ಭಾರತೀಯ ಚಿಂತನೆಗಳ ಆಧಾರದಲ್ಲಿ (ಸಾಂಸ್ಕೃತಿಕ ರಾಷ್ಟ್ರೀಯತೆ) ರಾಷ್ಟ್ರದ ಸರ್ವಾಂಗೀಣ ಉನ್ನತಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯ. ಸ್ವಯಂಸೇವಕತ್ವವೂ ಒಂದು ಧನ್ಯತಾಭಾವ ಮೂಡಿಸುವ ಅಸ್ಮಿತೆ. ಹಾಗಾಗಿ ‘ನಾನು ಸಂಘದ ಸ್ವಯಂಸೇವಕ’ ಎಂದು ಅನೇಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವ್ಯಕ್ತಿನಿರ್ಮಾಣದ ಕೇಂದ್ರ ಶಾಖೆ: ಆರೆಸ್ಸೆಸ್ ಸ್ವಯಂಸೇವಕರು ಪ್ರತಿನಿತ್ಯ ಒಟ್ಟು ಸೇರುವ ನಿತ್ಯಶಾಖೆ, ವಾರಕ್ಕೊಮ್ಮೆ ನಡೆಯುವ ಮಿಲನ್, ತಿಂಗಳಿಗೊಮ್ಮೆ ನಡೆಯುವ ಸಂಘಮಾಡಲಿ - ಇವುಗಳೂ ನಿಯಮಿತವಾಗಿ ನಡೆಯುವ ಆರೆಸ್ಸೆಸ್ ಚಟುವಟಿಕೆಗಳು. ಒಂದು ಗಂಟೆಯ ಕಾರ್ಯಕ್ರಮ. ವ್ಯಾಯಾಮದ ಮೂಲಕ ಶಾರೀರಿಕ ಕ್ಷಮತಾವರ್ಧನೆ, ಬೌದ್ಧಿಕ ಚಟುವಟಿಕೆಗಳ ಮೂಲಕ ವೈಚಾರಿಕ ಕ್ಷಮತೆ, ಆಟಗಳ ಮೂಲಕ ಅನೇಕ ಗುಣಗಳು ಮೈಗೂಡುತ್ತವೆ. ಸಂಘದ ಧ್ಯೇಯ ನೆನಪಿಸುವ ಪ್ರಾರ್ಥನೆಯೊಂದಿಗೆ ಮುಕ್ತಾಯ. ದೇಶಾದ್ಯಂತ ಈ ಶಾಖೆಗಳು ನಡೆಯುತ್ತಿದೆ. 2024ರ ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ವರದಿಯಂತೆ ಭಾರತದಲ್ಲಿ 73,117 ನಿತ್ಯಶಾಖೆಗಳು 27,717 ಮಿಲನ್ಗಳು, 10,567 ಸಂಘಮಂಡಳಿಗಳು ನಡೆಯುತ್ತಿವೆ. ಅನೇಕ ದಶಕಗಳಿಂದ ನಿಯಮಿತವಾಗಿ ಶಾಖೆ-ಮಿಲನ್-ಮಂಡಳಿಗಳು ನಿಯಮಿತವಾಗಿ ನಡೆಯುತ್ತಿವೆ. ಆಯಾ ಪ್ರದೇಶಗಳಲ್ಲಿ ಶಾಖೆಯ ಮೂಲಕ ನಿರ್ದಿಷ್ಟವಾದ ಸಾಮಾಜಿಕ ಪರಿವರ್ತನೆಯನ್ನು ಸ್ಥಳೀಯರು ಗುರುತಿಸಿದ್ದಾರೆ. ‘ಶಾಖೆಯ ಮೂಲ ಉದ್ದೇಶವೆಂದರೆ ವ್ಯಕ್ತಿನಿರ್ಮಾಣ. ಅಲ್ಲಿ ತಯಾರಾದ ವ್ಯಕ್ತಿಯು ಸಮಾಜದ ಪರಿವರ್ತನೆಯ ಕಾರ್ಯಗಳನ್ನು ಮಾಡಬೇಕು. ಆ ಮೂಲಕ ರಾಷ್ಟ್ರದ ಪರಮವೈಭವವನ್ನು ಸಾಧಿಸಬೇಕು. ಇದು ಸಂಘದ ಮೂಲಕಲ್ಪನೆ. ಸಂಘವು ಏನೇನು ಕೆಲಸಗಳನ್ನು ಮಾಡುತ್ತಿದೆಯೋ ಅದಕ್ಕೆ ಶಾಖಾಶಕ್ತಿಯೇ ಆಧಾರ. ಶಾಖೆಗಳಿಗೆ ಎಷ್ಟು ಶಕ್ತಿ ಇದೆಯೋ ಅದೇ ಸಂಘದ ಶಕ್ತಿ,’ ಎಂದು ಜನವರಿ 1, 2023ರಂದು ಶಿವಮೊಗ್ಗದಲ್ಲಿ ನಡೆದ ಉಪನ್ಯಾಸವೊಂದರಲ್ಲಿ ಆರೆಸ್ಸೆಸ್ ಸರಸಂಘಚಾಲಕ ಡಾ| ಮೋಹನ್ ಭಾಗವತ್ ಉಲ್ಲೇಖಿಸಿದ್ದರು. ಎಲ್ಲರ ಆರೆಸ್ಸೆಸ್: ಆರೆಸ್ಸೆಸ್ಸಿಗೆ ಎಲ್ಲರಿಗೂ ಮುಕ್ತಪ್ರವೇಶ. ಪುಟಾಣಿ ಶಿಶುಗಳು, ಬಾಲಕರು, ತರುಣರು, ಹಿರಿಯ ನಾಗರಿಕರು, ವಯೋವೃದ್ಧರು, ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸುತ್ತಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೃಷಿಕರು, ಅಧ್ಯಾಪಕರು, ವ್ಯಾಪಾರಿಗಳು, ಉದ್ಯೋಗಿಗಳು, ಸೇವಾನಿವೃತ್ತರು, ವಿವಿಧ ಹುದ್ದೆ/ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಪಾಲ್ಗೊಳ್ಳುತ್ತಾರೆ. ಜಾತಿ, ಭಾಷೆ, ಪಂಥ, ಪ್ರದೇಶ, ಮತ -ಎಲ್ಲವನ್ನೂ ಮೀರಿ ಎಲ್ಲರೂ ಒಂದಾಗುತ್ತಾರೆ. ಸಂಘಕಾರ್ಯವನ್ನು ಮಾಡಲು ಕ್ಷಮತೆ ಹೊಂದಿರುವ, ಅದಕ್ಕಾಗಿ ಸಮಯ ನೀಡಬಲ್ಲ ಯಾವುದೇ ವ್ಯಕ್ತಿ ಸಂಘದ ಕಾರ್ಯಕರ್ತನಾಗಿ ತನ್ನೂರಿನಲ್ಲಿ ಸಂಘಕಾರ್ಯವನ್ನು ಮುನ್ನಡೆಸುತ್ತಾನೆ. ಪ್ರಚಾರಕ ಪದ್ಧತಿ: ಸಂಘಕಾರ್ಯಕ್ಕೆ ಕಾರ್ಯಕರ್ತರೇ ಆಧಾರ. ಕಾರ್ಯಕರ್ತರಲ್ಲಿ ಗೃಹಸ್ಥ ಕಾರ್ಯಕರ್ತರು ಹಾಗೂ ಪ್ರಚಾರಕರಿರುತ್ತಾರೆ. ಗತಿವಿಧಿ ಮತ್ತು ವಿವಿಧ ಕ್ಷೇತ್ರಸಂಘಟನೆಗಳಲ್ಲಿ ಪೂರ್ಣಾವಧಿ ಕಾರ್ಯಕರ್ತರೂ ಇರುತ್ತಾರೆ. ಪ್ರಚಾರಕ ಪದ್ಧತಿ ಎಂಬುದು ಸಂಘಕಾರ್ಯಪದ್ಧತಿಯ ಪ್ರಮುಖ ವಿಶೇಷತೆ. ವಿದ್ಯಾಭ್ಯಾಸದ ನಂತರ ಅಥವಾ ಅಲ್ಪಕಾಲದ ಉದ್ಯೋಗದ ನಂತರ ಪೂರ್ಣಸಮಯ ನೀಡಿ ಸಂಘಕಾರ್ಯ ಮಾಡುವ ಧ್ಯೇಯನಿಷ್ಠ ಕಾರ್ಯಕರ್ತರು. ಸಂಘ ನೀಡಿದ ಯಾವುದೇ ಜವಾಬ್ದಾರಿ ಸ್ವೀಕರಿಸಿ, ಸಂಘ ಅಪೇಕ್ಷೆಪಟ್ಟ ಪ್ರದೇಶದಲ್ಲಿ ಸಂಘಕಾರ್ಯ ಮಾಡುತ್ತಾರೆ. ಸ್ವಭಾವ ಮತ್ತು ಸರಳತೆಯಿಂದ ಎಲ್ಲಾ ಕಾರ್ಯಕರ್ತರಿಗೆ ಮೇಲ್ಪಂಕ್ತಿ. ವೈವಾಹಿಕ ಜೀವನ ಇಲ್ಲ, ಆರ್ಥಿಕ ಆದಾಯ ಇಲ್ಲ. ಇಡೀ ಜೀವನ ಸಮಾಜಕಾರ್ಯಕ್ಕೆ ಮುಡಿಪು. ಸಂಘದ ಕಾರ್ಯಾಲಯದಲ್ಲಿ ವಸತಿ. ಸಂತಸದೃಶ ಜೀವನ. ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಇದೇ ರೀತಿಯ ಜೀವನ ನಡೆಸಿ ಪ್ರಚಾರಕ ಪದ್ಧತಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಎರಡನೇ ಸರಸಂಘಚಾಲಕರಾದ ಗುರೂಜಿಯವರು ಪ್ರಚಾರಕ ವ್ಯವಸ್ಥೆಯನ್ನು ಮತ್ತಷ್ಟು ವಿಕಸಿತಗೊಳಿಸಿದರು. ಕರ್ನಾಟಕಕ್ಕೆ ಪ್ರಚಾರಕರಾಗಿ ಬಂದಿದ್ದ ಯಾದವ ರಾವ್ ಜೋಷಿಯವರ ಪ್ರೇರಣೆಯಿಂದ 1946ರಲ್ಲಿ ಕರ್ನಾಟಕದ ಮೊದಲ ಪ್ರಚಾರಕರ ತಂಡದಲ್ಲಿದ್ದ ಹೊ. ವೆ. ಶೇಷಾದ್ರಿ, ಕೃ. ಸೂರ್ಯನಾರಾಯಣ ರಾವ್ ಹಾಗೂ ಚಂಪಕನಾಥ್ ಕರ್ನಾಟಕದಲ್ಲಿ ಪ್ರಚಾರಕ ಪರಂಪರೆಯನ್ನು ಪ್ರಾರಂಭಿಸಿದರು. ರಾಷ್ಟ್ರಕಾರ್ಯದ ಮಹೋನ್ನತ ಧ್ಯೇಯಕ್ಕಾಗಿ ಒಂದು ಸಮರ್ಪಿತ ಜೀವನದ ಸಂಕಲ್ಪ ಪ್ರಚಾರಕರದ್ದು. ಕೌಟುಂಬಿಕ ಶೈಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಟ್ಟು ರಚನೆಯೇ ಪಾರಿವಾರಿಕ ಶೈಲಿಯದ್ದು. ಸರಸಂಘಚಾಲಕರ ನಿಯುಕ್ತಿಯ ಪ್ರಕ್ರಿಯೆಯಿಂದ ಪ್ರಾರಂಭಿಸಿ ಶಾಖಾಮಟ್ಟದಲ್ಲಿನ ಚಟುವಟಿಕೆಗಳವರೆಗೆ ಎಲ್ಲವೂ ಕೌಟುಂಬಿಕ ಶೈಲಿಯಲ್ಲಿಯೇ ಸಾಗುತ್ತದೆ. ಸಂಘದ ಒಳಗಡೆಯಿರುವವರಿಗೆ ಈ ಅನುಭವ ಸಹಜವಾಗಿಯೇ ಇರುತ್ತದೆ. ಅನೌಪಚಾರಿಕತೆಗೇ ಒತ್ತು. ಟಿವಿ, ವಿಡಿಯೋದಲ್ಲಿ ಸಂಘದ ಗಣವೇಷ, ದಂಡ ಕವಾಯತು ಎಲ್ಲಾ ನೋಡಿದಾಗ ಇದೊಂದು ಮಿಲಿಟರಿ ಶೈಲಿಯ ಸಂಘಟನೆ ಎಂದು ಅನಿಸಬಹುದು. ಆದರೆ ಸಂಘದೊಳಗಡೆ ಬಂದಾಗ ಆ ಆತ್ಮೀಯ ವಾತಾವರಣ ಅನುಭವಕ್ಕೆ ಬರುತ್ತದೆ. ಪ್ರಶಿಕ್ಷಣ ವರ್ಗಗಳು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನಾತ್ಮಕ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ ಕಾರ್ಯಕರ್ತರು ನಿಗದಿತವಾದ ಪ್ರಶಿಕ್ಷಣ ಪಡೆಯುವುದು ಅತ್ಯಾವಶ್ಯಕ. ಹೆಚ್ಚಿನ ಜವಾಬ್ದಾರಿ ಬಂದಷ್ಟೂ ಅದನ್ನು ಸೂಕ್ತವಾಗಿ ನಿರ್ವಹಿಸಲು ಸೂಕ್ತ ಪ್ರಶಿಕ್ಷಣ ಬೇಕು. ಕಾರ್ಯಕರ್ತರ ಪ್ರಶಿಕ್ಷಣದ ದೃಷ್ಟಿಯಿಂದ ಶಿಕ್ಷಾವರ್ಗಗಳನ್ನು ಆಯೋಜಿಸಲಾಗುತ್ತದೆ. 1927ರಲ್ಲಿ ಮೊತ್ತಮೊದಲ ಕಾರ್ಯಕರ್ತರ ಪ್ರಶಿಕ್ಷಣ ನಿಮಿತ್ತ ನಿವಾಸಿ ಶಿಬಿರವನ್ನು ನಾಗಪುರದಲ್ಲಿ ಆಯೋಜಿಸಲಾಯಿತು. ಸಂಘದ ಕಾರ್ಯಶೈಲಿ, ಕಾರ್ಯಪದ್ಧತಿಗಳು, ರೀತಿ-ನೀತಿಗಳು, ಸಂಘಕಾರ್ಯದ ವೈಚಾರಿಕ ಹಾಗೂ ತಾತ್ವಿಕ ನೆಲೆಗಟ್ಟು, ಗುರಿ - ಹಿಂದು ಸಂಘಟನೆ ಮತ್ತು ದಾರಿ - ನಿತ್ಯಶಾಖೆಯ ಏಕತ್ರೀಕರಣಗಳ ಮೂಲಕ ವ್ಯಕ್ತಿನಿರ್ಮಾಣ – ಇತ್ಯಾದಿ ಎಲ್ಲವನ್ನೂ ಅರಿತು ಸಂಘಕಾರ್ಯವನ್ನು ಅದರ ಮೂಲಧ್ಯೇಯಕ್ಕೆ ತಕ್ಕಂತೆ ಮಾಡುವ ಕಾರ್ಯಕರ್ತರ ನಿರ್ಮಾಣ ಮಾಡುವುದೇ ಇದರ ಉದ್ದೇಶವಾಗಿತ್ತು. 1935ರಲ್ಲಿ ಮೊದಲಬಾರಿಗೆ ನಾಗಪುರದಿಂದ ಹೊರಗಡೆ, ಪುಣೆಯಲ್ಲಿ ಕಾರ್ಯಕರ್ತರ ಪ್ರಶಿಕ್ಷಣ ನಿಮಿತ್ತ ಸಂಘ ಶಿಕ್ಷಾ ವರ್ಗ ನಡೆಯಿತು. ನಂತರದ ದಶಕಗಳಲ್ಲಿ ಬೇರೆ ಬೇರೆ ರಾಜ್ಯಗಳಿಗೆ ವಿಸ್ತಾರವಾಯಿತು. 1940ರಲ್ಲಿ ನಾಗಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಭಾರತದ ಎಲ್ಲಾ ಪ್ರಾಂತಗಳಿಂದ ಶಿಕ್ಷಾರ್ಥಿಗಳಾಗಿ ಕಾರ್ಯಕರ್ತರು ಬಂದಿದ್ದನ್ನು ನೋಡಿ ‘ನಾನು ಒಂದು ಪುಟ್ಟ ಭಾರತವನ್ನೇ ನೋಡುತ್ತಿದ್ದೇನೆ’ ಎಂದು ಸಂಘಸ್ಥಾಪಕ ಡಾ. ಹೆಡಗೇವಾರ್ ಆನಂದಿತರಾಗಿ ಹೇಳಿದ್ದರು. ನಂತರದ ವರ್ಷಗಳಲ್ಲಿ ವರ್ಗದ ಸ್ವರೂಪ, ಸಂರಚನೆಯಲ್ಲಿ ಕಾಲಕಾಲಕ್ಕೆ ಅಗತ್ಯ ಪರಿವರ್ತನೆಗಳನ್ನು ತರಲಾಗುತ್ತಿತ್ತು. ಪ್ರಸ್ತುತ ಕಾರ್ಯಕರ್ತ ಪ್ರಶಿಕ್ಷಣ ವರ್ಗದಲ್ಲಿ ಒಟ್ಟು 5 ಹಂತಗಳಿರುತ್ತವೆ. ತಾಲೂಕು/ಜಿಲ್ಲಾ ಹಂತದಲ್ಲಿ 3 ದಿನಗಳ ‘ಪ್ರಾರಂಭಿಕ ವರ್ಗ’ ಎಲ್ಲರಿಗೂ ಮೊದಲ ಮತ್ತು ಕಡ್ಡಾಯ ಪ್ರಶಿಕ್ಷಣ ವರ್ಗ. ಇದು ಪೂರೈಸಿದವರಿಗೆ ಮಾತ್ರ ಮುಂದಿನ 4 ವರ್ಗಗಳು. ನಂತರ ಜಿಲ್ಲಾ/ವಿಭಾಗ ಹಂತದಲ್ಲಿ 7 ದಿನಗಳ “ಪ್ರಾಥಮಿಕ ಶಿಕ್ಷಾವರ್ಗ”. ನಂತರ ಪ್ರಾಂತಸ್ತರದಲ್ಲಿ 15 ದಿನಗಳ ಸಂಘ ಶಿಕ್ಷಾ ವರ್ಗ ನಡೆಯುತ್ತದೆ. ಮುಂದಿನ ಹಂತದಲ್ಲಿ ಆಯ್ದ ಕಾರ್ಯಕರ್ತರಿಗೆ ಕ್ಷೇತ್ರಮಟ್ಟದಲ್ಲಿ 20 ದಿನಗಳ “ಕಾರ್ಯಕರ್ತ ವಿಕಾಸ ವರ್ಗ-ಪ್ರಥಮ” ನಡೆಯುತ್ತವೆ. ಈ ಪ್ರಶಿಕ್ಷಣ ವರ್ಗಗಳ ಸರಣಿಯ ಕೊನೆಯ ಹಂತವಾಗಿ ಅಖಿಲ ಭಾರತೀಯ ಮಟ್ಟದಲ್ಲಿ 25 ದಿನಗಳ “ಕಾರ್ಯಕರ್ತ ವಿಕಾಸ ವರ್ಗ- ದ್ವಿತೀಯ” ವು ನಾಗಪುರದ ರೇಶಿಮ್ಬಾಗ್ ಪರಿಸರದಲ್ಲಿ ನಡೆಯುತ್ತದೆ. ಇವೆಲ್ಲವೂ 40 ವರ್ಷ ವಯಸ್ಸಿನೊಳಗಿನ ಕಾರ್ಯಕರ್ತರಿಗಾಗಿ ನಡೆಯುವ “ಸಾಮಾನ್ಯ” ವರ್ಗಗಳು. 40 ವರ್ಷ ಮೇಲ್ಪಟ್ಟು 60 ವರ್ಷ ವಯಸ್ಸಿನೊಳಗಿನ ಕಾರ್ಯಕರ್ತರಿಗೆ ‘ವಿಶೇಷ’ ವರ್ಗಗಳು ನಡೆಯುತ್ತವೆ. ಅಖಿಲ ಭಾರತೀಯ ದೃಷ್ಟಿಕೋನ: ಭಾರತದ ಯಾವುದೇ ಒಂದು ಗ್ರಾಮ/ಜಿಲ್ಲೆಯ ಸಂಘಕಾರ್ಯದ ನಿರ್ವಹಣೆಗಾಗಿ ಬೇಕಾಗುವ ಅಖಿಲ ಭಾರತೀಯ ದೃಷ್ಟಿಕೋನವನ್ನು ಸಂಘದ ವಾತಾವರಣ ಕಟ್ಟಿಕೊಡುತ್ತದೆ. ಸಂಘದ ಸ್ವಯಂಸೇವಕನೊಬ್ಬನು ಅರುಣಾಚಲ ಪ್ರದೇಶದ ತವಾಂಗ್ನಲ್ಲಿರಲಿ ಅದೋ ದಕ್ಷಿಣದ ಕನ್ಯಾಕುಮಾರಿಯಲ್ಲಿರಲಿ, ಪ್ರತಿ ಕಾರ್ಯಕರ್ತನೂ ರಾಷ್ಟ್ರೀಯ ಏಕಾತ್ಮತೆಯ ಅನುಭೂತಿ, ಸಂಘಟಿತ ಹಿಂದೂ ಸಮಾಜದ ವೈಶ್ವಿಕ ಪಾತ್ರದ ಸ್ಪಷ್ಟತೆ, ಸಾಮಾಜಿಕ ಪರಿವರ್ತನೆಯಲ್ಲಿ ನಮ್ಮ ದೃಷ್ಟಿ-ಯೋಚನೆಗಳ ಸ್ಪಷ್ಟತೆ, ವಿವಿಧ ಕ್ಷೇತ್ರದ ಸಂಘಟನೆಗಳು ಮತ್ತು ಸಜ್ಜನ ಶಕ್ತಿಯನ್ನು ಜತೆಗೂಡಿಸಿಕೊಂಡು ಸಮಾಜದ ಪ್ರಶ್ನೆಗಳು ಹಾಗೂ ಸವಾಲುಗಳಿಗೆ ಪರಿಹಾರ ಮಾಡಬೇಕಾದ ಕುರಿತು ಸಿದ್ಧತೆಯನ್ನು ಅಖಿಲ ಭಾರತೀಯ ದೃಷ್ಟಿಕೋನದೊಂದಿಗೇ ಮಾಡುತ್ತಾನೆ. ಹಾಗಾಗಿ ಭಾರತದ ಎಲ್ಲಾ ಭಾಷೆಗಳನ್ನು- ವಿವಿಧತೆಗಳನ್ನು ತನ್ನದು ಎಂದುಕೊಳ್ಳುತ್ತಾನೆ. ‘ದೇಶ ದೇಶ ದೇಶ ದೇಶ ನನ್ನದು’ ಎಂಬ ಹಾಡನ್ನು ನುಲಿಯುತ್ತಾ ತನ್ನ ಪ್ರಾದೇಶಿಕ ಅಸ್ಮಿತೆ ಅಭಿಮಾನದ ಜತೆಗೇ ಸದಾ ರಾಷ್ಟ್ರೀಯ ಭಾವನೆಯನ್ನು ಹೊಂದಿರುತ್ತಾನೆ. ಶಾಂತಸ್ವಭಾವ: ಗಾಂಧೀಜಿಯವರ ಹತ್ಯೆಯ ಸುಳ್ಳು ಆರೋಪ ಹೊರಿಸಿ ನಿರ್ಬಂಧ ಹೇರಿದ 1948-49, ತುರ್ತುಪರಿಸ್ಥಿತಿ 1975-77 ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಹಾಗೂ ಕೇರಳ - ಪಶ್ಚಿಮ ಬಂಗಾಳದಲ್ಲಿ ಕಾರ್ಯಕರ್ತರ ನಿರಂತರ ಹತ್ಯೆ-ಹಲ್ಲೆ; ಈ ಎಲ್ಲಾ ವರ್ಷಗಳಲ್ಲಿ ಸಂಘವು ಶಾಂತವಾಗಿ ಪರಿಸ್ಥಿತಿಯನ್ನೆದುರಿಸಿ ಇದೀಗ ನೂರರ ಹಾದಿಯನ್ನು ಕ್ರಮಿಸಿದೆ. ಎಂದಿಗೂ ಹಿಂಸೆಯ ಹಾದಿ ಹಿಡಿಯಲಿಲ್ಲ. “Be Calm at all cost” ಎಂಬ ಗುರೂಜಿಯವರ ಮಾತಿನಂತೆ ಸಂಘವು ಎಂದಿಗೂ ಶಾಂತತೆಯ ಪ್ರತಿರೂಪವಾಗಿ ತನ್ನ ರಾಷ್ಟಿçಯ ಕಾರ್ಯದಲ್ಲಿ ತಲ್ಲೀನವಾಗಿದೆ. ಹಾಸ್ಯ, ಉಪೇಕ್ಷೆ, ವಿರೋಧಗಳನ್ನೆದುರಿಸಿ ಇದೀಗ ಸ್ವೀಕೃತಿಯ ಹಂತಕ್ಕೆ ಬಂದಿದೆ. ‘ಸರ್ವೇಷಾಂ ಅವಿರೋಧೇನ’ ಎಂಬಂತೆ ಯಾರ ವಿರೋಧವೂ ಮಾಡದೆ ಸಂಘ ತನ್ನ ಸಾತ್ವಿಕ ಸ್ವಭಾವದಿಂದಲೇ ಕೋಟ್ಯಾಂತರ ಜನರ ಮನಗೆದ್ದಿದೆ. ಆರು ಉತ್ಸವಗಳು: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಚಟುವಟಿಕೆಗಳಲ್ಲಿ ಆರು ಉತ್ಸವಗಳನ್ನು ಆಚರಿಸಲಾಗುತ್ತದೆ. ಚೈತ್ರ ಶುದ್ಧ ಪ್ರತಿಪದೆಯಂದು ಯುಗಾದಿ, ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಹಿಂದೂ ಸಾಮ್ರಾಜ್ಯ ದಿನೋತ್ಸವ, ಆಷಾಢ ಪೂರ್ಣಿಮೆಯಂದು ಶ್ರೀಗುರುಪೂಜಾ ಉತ್ಸವ, ಶ್ರಾವಣ ಪೂರ್ಣಿಮೆಯಂದು ರಕ್ಷಾಬಂಧನ, ಅಶ್ವಯುಜ ಶುದ್ಧ ದಶಮಿಯಂದು ವಿಜಯದಶಮಿ ಹಾಗೂ ಮಕರಮಾಸದ ಸಂಕ್ರಮಣದಂದು ಮಕರ ಸಂಕ್ರಾಂತಿ - ಹೀಗೆ ಆರು ಉತ್ಸವಗಳನ್ನು ಆಚರಿಸಲಾಗುತ್ತದೆ. ಇದಲ್ಲದೇ ಯುಗಾದಿಯ ಪಾವನ ದಿನ ಸಂಘಸಂಸ್ಥಾಪಕ ಡಾ| ಕೇಶವ ಬಲಿರಾಮ್ ಹೆಡಗೇವಾರ್ ಅವರ ಜಯಂತಿಯ ನಿಮಿತ್ತ ಯುಗಾದಿ ಉತ್ಸವದ ಸಂದರ್ಭದಲ್ಲಿ ಅವರ ಗೌರವಾರ್ಥ ಸ್ವಯಂಸೇವಕರೆಲ್ಲರೂ ‘ಆದ್ಯಸರಸಂಘಚಾಲಕ್ ಪ್ರಣಾಮ್’ ಗೌರವವಂದನೆ ನೀಡುತ್ತಾರೆ. ಮಾಘ ಬಹುಳ ಏಕಾದಶಿಯಂದು ಎರಡನೇ ಸರಸಂಘಚಾಲಕರಾದ ಗುರೂಜಿ ಎಂದೇ ಪರಿಚಿತ ಮಾಧವ ಸದಾಶಿವ ಗೋಳ್ವಲ್ಕರ್ ಜಯಂತಿಯಂದು ಅವರ ಸಂಸ್ಮರಣೆಯನ್ನು ದೇಶಾದ್ಯಂತ ಸ್ವಯಂಸೇವಕರು ಮಾಡುತ್ತಾರೆ. ವಿಜಯದಶಮಿಯ ದಿನದಂದು ಸಂಘಸ್ಥಾಪನೆಯ ದಿನವಾದ್ದರಿಂದ ಸ್ವಯಂಸೇವಕರಿಗೆ ಸಂಭ್ರಮದ ದಿನ. ಅಂದು ನಾಗಪುರದ ರೇಶಿಮ್ಬಾಗ್ ಮೈದಾನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಸರಸಂಘಚಾಲಕರು ಮಾತನಾಡುತ್ತಾರೆ. ರಾಷ್ಟ್ರಜೀವನವನ್ನು ಪ್ರಭಾವಿಸುವ ಅನೇಕ ಸಾಮಾಜಿಕ ಆಗುಹೋಗುಗಳ ಕುರಿತು ತಮ್ಮ ಒಳನೋಟಗಳನ್ನು ವಿಜಯದಶಮಿ ಭಾಷಣದಲ್ಲಿ ಉಲ್ಲೇಖಿಸುತ್ತಾರೆ. ಸಮಾಜದಲ್ಲಿ ತಮ್ಮ ವೃತ್ತಿಕಾರ್ಯದ ಮೂಲಕ ಸಾಧನೆ ಮಾಡಿರುವ ಗಣ್ಯರೊಬ್ಬರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗುತ್ತದೆ. ಈ ಹಿಂದೆ ಇಸ್ರೋದ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್, ಗಾಯಕ ಶಂಕರ ಮಹಾದೇವನ್, ಪರ್ವತಾರೋಹಿ ಸಂತೋಷ್ ಯಾದವ್ ಮೊದಲಾದ ಗಣ್ಯರು ಆಗಮಿಸಿದ್ದಾರೆ. ಆತ್ಮನಿರ್ಭರ ಸಂಘಟನೆ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾವಲಂಬಿ ಸಂಘಟನೆಯಾಗಿರಬೇಕೆಂಬುದು ಸಂಘ ಸಂಸ್ಥಾಪಕರ ಆಶಯವಾಗಿತ್ತು. ಮಾನವ ಸಂಪನ್ಮೂಲ ದೃಷ್ಟಿಯಿಂದಲೂ, ಆರ್ಥಿಕವಾಗಿ, ತಾತ್ವಿಕವಾಗಿ, ವೈಚಾರಿಕವಾಗಿ ಸದಾ ಸ್ವಾವಲಂಬಿಯಾಗಿಯೇ 100 ವರ್ಷಗಳನ್ನು ದಾಟಿಬಂದಿದೆ. ಸರಕಾರಿ ಅನುದಾನ ವ್ಯವಸ್ಥೆಗಳಿಗೆ ಅವಲಂಬಿತವಾಗಿಲ್ಲ. ಸ್ವಯಂಸೇವಕರೇ ಸಂಘವನ್ನು ಮುನ್ನಡೆಸುವ ಕಾರಣ ಮಾನವ ಸಂಪನ್ಮೂಲದ ಯಾವುದೇ ಕೊರತೆಯಿಲ್ಲ. ಸಂಘಸಂಸ್ಥಾಪಕ ಡಾ| ಕೇಶವ ಬಲಿರಾಮ್ ಹೆಡಗೇವಾರ್ ಅವರೇ ಹಾಕಿಕೊಟ್ಟ ಪದ್ಧತಿಯಂತೆ ಗುರುಪೂಜಾ ಉತ್ಸವದಂದು ಗುರುದಕ್ಷಿಣೆಯಾಗಿ ಸ್ವಯಂಸೇವಕರು ಅರ್ಪಿಸುವ ಮೊತ್ತವೇ ಸಂಘವನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿದೆ. ತಮ್ಮ ಮನೆಯ ಖರ್ಚನ್ನು ಮನೆಮಂದಿಯೇ ನೋಡಿಕೊಳ್ಳುವಂತೆ ಸಂಘದ ಆರ್ಥಿಕ ವ್ಯವಸ್ಥೆಯನ್ನು ಸ್ವಯಂಸೇವಕರೇ ನಿಭಾಯಿಸುತ್ತಾರೆ. ಹೀಗೆ ಎಲ್ಲಾ ದೃಷ್ಟಿಯಿಂದ ಆತ್ಮನಿರ್ಭರ ಸಂಘಟನೆಯಾಗಿ ಸಂಘ ಬೆಳೆದು ಬಂದಿದೆ. ಸೇವಾಭಾವ ಜಾಗರಣ: ಸಂಘದ ಸಂಪರ್ಕಕ್ಕೆ ಬಂದ ಪ್ರತಿಯೋರ್ವನಿಗೂ ಇನ್ನೊಬ್ಬರಿಗಾಗಿ ಯೋಚಿಸುವ ಸ್ವಭಾವ ಸಹಜವಾಗಿ ಮೈಗೂಡುತ್ತದೆ. ಸೇವಾ ಮನೋಭಾವ ಎಲ್ಲರಲ್ಲೂ ಸುಪ್ತವಾಗಿರುತ್ತದೆ. ಅದನ್ನು ಅರಳಿಸಿ, ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗುವ, ಅವರ ಸೇವೆ ಮಾಡುವ ಮಾನಸಿಕತೆ ಒಡಮೂಡುತ್ತದೆ. ಆದ್ದರಿಂದಲೇ 1.25 ಲಕ್ಷಕ್ಕೂ ಹೆಚ್ಚು ಸೇವಾಚಟುವಟಿಕೆಗಳನ್ನು ಸ್ವಯಂಸೇವಕರೇ ನಡೆಸುತ್ತಿದ್ದಾರೆ. ಯಾವುದೇ ಪ್ರದೇಶದಲ್ಲಿ ಸುನಾಮಿ, ನೆರೆ-ಪ್ರವಾಹ, ಭೂಕುಸಿತ, ರೈಲ್ವೇ ದುರ್ಘಟನೆ, ಕೊರೋನಾ ಮುಂತಾದ ಸಂದರ್ಭಗಳಲ್ಲಿ ಸ್ವಯಂಸೇವಕರು ತಕ್ಷಣ ನೆರವಿಗೆ ಧಾವಿಸುತ್ತಾರೆ. ಅವರ್ಯಾರೂ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಪರಿಣಿತರಲ್ಲ. ಆದರೆ ಸಮಾಜದ ಸಂಕಷ್ಟದ ಸಂದರ್ಭಗಳಲ್ಲಿ ಅಪಾಯವನ್ನೂ ಲೆಕ್ಕಿಸದೆ ಸಹಾಯಹಸ್ತ ಚಾಚುತ್ತಾರೆ. ಸೇವಾಭಾವಜಾಗರಣದ ಮೂಲಕ ಸ್ವಯಂಸೇವಕರಲ್ಲಿ ಸೇವೆ ಮಾಡುವ ಕರ್ತವ್ಯಪ್ರಜ್ಞೆ ಹೆಚ್ಚಾಗುತ್ತದೆ. ಹೊಸತನಕ್ಕೆ ಸದಾಸಿದ್ಧ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಾರಂಭದ ದಿನಗಳಿಂದಲೂ ಕಾಲಾನುಕೂಲ ಅಗತ್ಯ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಪ್ರಾರಂಭದ ಗಣವೇಷವು ಅಂದಿನ ಕಾಲಕ್ಕೆ ಒಂದು ಹೊಸತನದ ಸಂಗತಿಯಾಗಿತ್ತು. ಗಣವೇಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 2016ರಲ್ಲಿ ನಿಕ್ಕರ್ ಬದಲು ಪ್ಯಾಂಟ್ ಗಣವೇಷದ ಭಾಗವಾಯಿತು. ಘೋಷ್ (ಬ್ಯಾಂಡ್ ಸೆಟ್) ವಿಭಾಗದಲ್ಲಿ, ಶಾರೀರಿಕ ಕವಾಯತುಗಳಲ್ಲಿ, ಸಂಘದ ಪ್ರಶಿಕ್ಷಣ ವ್ಯವಸ್ಥೆಗಳಲ್ಲಿ ಪರಿವರ್ತನೆ ತರಲಾಯಿತು. ಪ್ರಾರಂಭದಲ್ಲಿದ್ದ ಪ್ರಾರ್ಥನೆಯಲ್ಲಿ ಬದಲಾವಣೆಯಾಗಿದೆ. ಹೀಗೆ ಸಂಘಟನಾತ್ಮಕ ವಿಷಯಗಳಲ್ಲಿ ಸದಾ ಕಾಲಕ್ಕೆ ತಕ್ಕಂತೆ ಅಗತ್ಯ ಬದಲಾಣೆಗಳನ್ನು ಮಾಡುತ್ತಾ ಬಂದಿದೆ. ಆದ್ದರಿಂದಲೇ ಸಂಘದಲ್ಲಿ ಎಲ್ಲಾ ಕಾಲಕ್ಕೂ ಯುವಕರು, ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ವ್ಯಕ್ತಿ ಗುರುವಲ್ಲ, ತತ್ತ್ವ: ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಗುರುವಾಗಿ ಭಗವಾಧ್ವಜವನ್ನು ಸ್ವೀಕರಿಸಿದೆ. ಯಾವುದೇ ವ್ಯಕ್ತಿಯನ್ನು ಗುರುವಾಗಿ ಸ್ವೀಕರಿಸಿಲ್ಲ. ವ್ಯಕ್ತಿ ಪರಿಪೂರ್ಣ ಅಲ್ಲ. ವ್ಯಕ್ತಿಯ ಕೊರತೆಗಳು, ತಪ್ಪುಗಳು ಅವರನ್ನು ಅನುಸರಿಸುವವರನ್ನು ಪ್ರಭಾವಗೊಳಿಸುತ್ತವೆ. ಹಾಗಾಗಿ ಶಾಶ್ವತ ಮೌಲ್ಯಗಳ ಪ್ರತೀಕವಾಗಿ ಸನಾತನ ಪರಂಪರೆಯ ಅಸ್ಮಿತೆಯಾದ ಭಗವಾಧ್ವಜವನ್ನು ಗುರುವಾಗಿ ಸಂಘ ಸ್ವೀಕರಿಸಿದೆ. ಆಷಾಢ ಪೂರ್ಣಿಮೆಯಂದು ಸ್ವಯಂಸೇವಕರು ಗುರುಪೂಜಾ ಉತ್ಸವವನ್ನು ಆಚರಿಸುತ್ತಾ ಭಗವಾಧ್ವಜಕ್ಕೆ ಗುರುವಂದನೆ ಸಲ್ಲಿಸುತ್ತಾರೆ. ಅನುಶಾಸನ: ಆರೆಸ್ಸೆಸ್ ಸಂಘಟನೆಯನ್ನು ವಿರೋಧಿಸುವವರೂ ಸಂಘದ ಶಿಸ್ತನ್ನು ಬಹುವಾಗಿ ಮೆಚ್ಚುತ್ತಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಸ್ವಯಂಸೇವಕರಲ್ಲಿ ಕಾಣಸಿಗುವ ಶಿಸ್ತಿಗೆ ಕಾರಣವೇ ಅನುಶಾಸನ. ಯಾರೋ ಹೇಳಿದ್ದಕ್ಕಾಗಿ ಮಾಡುವ ತಾತ್ಕಾಲಿಕ ಅನುಸರಿಸುವಿಕೆಯಲ್ಲ. ತನ್ನ ಅಂತರಂಗದ ಪ್ರಜ್ಞೆಗೆ ಪೂರಕವಾಗಿ ತಾನೇ ಸ್ವಯಂ ಪಾಲಿಸುವ ಸಾಮರ್ಥ್ಯ. ಅದು ಸಮಯಪಾಲನೆ, ಮಾತಿನ ಸಂಯಮ, ಸರಳತೆ, ಶಿಷ್ಟಾಚಾರ ಪಾಲನೆ, ವಾಣಿ ವಿವೇಕ, ಕೃತಿವಿವೇಕ ಸೇರಿದಂತೆ ಹತ್ತು ಹಲವು ರೀತಿಗಳಲ್ಲಿ ಸಂಘದ ಅಪೇಕ್ಷೆಗೆ ತಕ್ಕಂತೆ ತನ್ನನ್ನು ತಾನು ರೂಪಿಸುವುದು ಬಲು ಮುಖ್ಯ. ಹೀಗಾಗಿ ಸಂಘದ 100 ವರ್ಷದ ಯಾತ್ರೆಯಲ್ಲಿ ಸ್ವಯಂಸೇವಕರು ಮೈಗೂಡಿಸಿಕೊಂಡ ಅನುಶಾಸನ ಸಂಘದ ಪ್ರತಿಮೆಯನ್ನು ಸಮಾಜದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿಸಿದೆ. ಸಂಘಾವಲೋಕನ ಮಾಡಿದಾಗ ಒಂದೇ ಕಾರ್ಯಪದ್ಧತಿಯ ಮೂಲಕ ಒಂದೇ ಕಾಲಮಾನದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ, ಮನೆಯಿಂದ ಮನೆಗೆ, ಹೃದಯದಿಂದ ಹೃದಯಕ್ಕೆ (Man to Man, Door to Door, Heart to Heart) ತಲುಪುತ್ತಾ ನಿರಂತರವಾಗಿ ಸಮಾಜ ಜಾಗರಣೆಯ ಮೂಲಕ ಕೋಟ್ಯಂತರ ಮಂದಿಯನ್ನು ಒಂದು ಶತಮಾನದ ಅವಧಿಯಲ್ಲಿ ಸಂಘಟಿಸಿರುವ ವೈಶಿಷ್ಟ್ಯಪೂರ್ಣ ಸಂಘಕಾರ್ಯವು ಮಾನವ ನಾಗರಿಕ ಇತಿಹಾಸದ ಮಹತ್ವದ ಮೈಲಿಗಲ್ಲುಗಳಲ್ಲೊಂದು. ಸಂಘದ ಪ್ರಾರಂಭ, ವಿಕಾಸ, ವರ್ತಮಾನದ ಸ್ಥಿತಿಗತಿಗಳನ್ನು ಗಮನಿಸಿದರೆ ಶತಮಾನ ಕಾಣುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಆಂದೋಲನದ ಸ್ವರೂಪದಿಂದ ರಾಷ್ಟ್ರೀಯ ಏಕಾತ್ಮತೆ, ಸಮರಸತೆ, ದೇಶದ ಏಕತೆ-ಅಖಂಡತೆ, ಸೇವೆ, ಸಮರ್ಪಣೆ, ದೇಶಭಕ್ತಿ ಮುಂತಾದ ಕೆಲವು ವಿಷಯಗಳನ್ನು ಸ್ಥಾಪಿತಗೊಳಿಸುವತ್ತ (Movement to Establishment) ಸಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಸಂಘದ ಆರು ಮಂದಿ ಸರಸಂಘಚಾಲಕರು 1. ಡಾ.ಕೇಶವ ಬಲಿರಾಮ್ ಹೆಡಗೇವಾರ್ (1925 - 1940) 2. ಶ್ರೀ ಮಾಧವರಾವ್ ಸದಾಶಿವರಾವ್ ಗೋಳ್ವಲ್ಕರ್ (1940 - 1973) 3. ಶ್ರೀ ಮಧುಕರ ದತ್ತಾತ್ರೇಯ ದೇವರಸ್ (1973 - 1993) 4. ಶ್ರೀ ರಾಜೇಂದ್ರ ಸಿಂಗ್ (1993 - 2000) 5. ಶ್ರೀ ಕು. ಸೀ. ಸುದರ್ಶನ್ (2000 – 2009) 6. ಡಾ. ಮೋಹನ್ ಭಾಗವತ್ (2009ರಿಂದ )
ನಾನು ಆರ್ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಅನುಶಾಸನ ಹಾಗೂ ಅಸ್ಪೃಶ್ಯತೆಯ ಲವಲೇಶವೂ ಇಲ್ಲದ ವಾತಾವರಣ ಕಂಡು ತುಂಬಾ ಪ್ರಭಾವಿತನಾಗಿರುವೆ. – ಮಹಾತ್ಮ ಗಾಂಧಿ, ಸೆಪ್ಟೆಂಬರ್ 16, 1947 ದೆಹಲಿ. ತನ್ನ ಜೊತೆಗಿರುವ ಸ್ವಯಂಸೇವಕನ ಜಾತಿ ಯಾವುದೆಂಬುದನ್ನು ತಿಳಿಯುವ ಆಸಕ್ತಿ ತೋರದೆ, ಪರಸ್ಪರ ಸಹೋದರರಂತೆ ಹಾಗೂ ಸಂಪೂರ್ಣ ಸಮಾನತೆಯಿಂದ ಸ್ವಯಂಸೇವಕರು ವ್ಯವಹರಿಸುವುದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿರುವೆ. – ಡಾ. ಬಿ. ಆರ್. ಅಂಬೇಡ್ಕರ್, (1939ರ ಮೇ ತಿಂಗಳಲ್ಲಿ ಪುಣೆಯಲ್ಲಿ ನಡೆದ ಆರ್ಎಸ್ಎಸ್ ಶಿಬಿರದಲ್ಲಿ) ಆರ್ಎಸ್ಎಸ್ ನನ್ನ ಹೃದಯದ ಮಿಡಿತ. – ಜನರಲ್ ಕೆ. ಸಿ. ಕಾರ್ಯಪ್ಪ ನಾನೊಬ್ಬ ಆರ್ಎಸ್ಎಸ್ನ ಗೌರವ ಸದಸ್ಯ. – ಆಚಾರ್ಯ ವಿನೋಬಾ ಭಾವೆ ಸಾಮಾಜಿಕ ಪರಿವರ್ತನೆ, ಜಾತಿ ನಿರ್ಮೂಲನ ಹಾಗೂ ಬಡವರ ಕಣ್ಣೀರು ತೊಡೆಯುವ ಸಾಮರ್ಥ್ಯ ಆರ್ಎಸ್ಎಸ್ಗೆ ಮಾತ್ರವಿದೆ. – ಶ್ರೀ ಜಯಪ್ರಕಾಶ ನಾರಾಯಣ ಜಗತ್ತಿನಲ್ಲಿ ಕೇವಲ ಎಡಪಂಥೀಯೇತರ ಕ್ರಾಂತಿಕಾರಿ ಪಡೆ ಮತ್ತು ಅದರ ನೇತೃತ್ವವನ್ನು ವಹಿಸಿದ್ದ ನೂರಾರು, ಸಾವಿರಾರು ಸ್ವಯಂಸೇವಕರು ಭಾರತಕ್ಕೆ ಮತ್ತೆ ಪ್ರಜಾತಂತ್ರವನ್ನು ತಂದುಕೊಟ್ಟರು. - ದಿ ಎಕನಾಮಿಸ್ಟ್, ಲಂಡನ್, ಡಿಸೆಂಬರ್ 4, 1976. ‘ದೇಶದಲ್ಲಿ ಸಮುದಾಯಗಳ ನಡುವೆ ವಿಷಮತೆಯನ್ನು ಕಡಿಮೆ ಮಾಡಲು ನಡೆದಿರುವ ಎಲ್ಲ ಪ್ರಯತ್ನಗಳ ಪೈಕಿ ಸಂಘದ ಪ್ರಯತ್ನವೇ ಅತಿ ಪರಿಣಾಮಕಾರಿಯಾದದ್ದು. ಅಧ್ಯಾತ್ಮ, ಭಕ್ತಿ, ಸಾಮಾಜಿಕ ಎಲ್ಲದರಲ್ಲೂ ಈ ಪ್ರಯತ್ನದ ಪರಿಣಾಮ ಇದೆ. - ಪದ್ಮಶ್ರೀ ರಮೇಶ್ ಪತಂಗೆ, ಹಿರಿಯ ಚಿಂತಕ ಆರ್ಎಸ್ಎಸ್ನ ‘ಸೇವಾ ಉಪಕ್ರಮವು ಸೇವೆಯನ್ನು ಮಾಡುವವರು ಮತ್ತು ಅದನ್ನು ಪಡೆದುಕೊಳ್ಳುವವರು ಇಬ್ಬರನ್ನೂ 'ಇದು ನಮಗೆ ಸೇರಿದ್ದು' ಎನ್ನುವಂತಹ ಮನೋಭಾವಕ್ಕೆ ಮರುಜೀವ ನೀಡಿದೆ. - ಮಾಲಿನಿ ಭಟ್ಟಾಚಾರ್ಜಿ, ಲೇಖಕಿ ಸಂಘವು ಕೇವಲ ಒಂದಿಷ್ಟು ಚಟುವಟಿಕೆಗಳನ್ನು ಯಾಂತ್ರಿಕವಾಗಿ ಅನುಷ್ಠಾನಗೊಳಿಸಲು ಹುಟ್ಟಿರುವ ಸಂಸ್ಥೆಯಲ್ಲ. ದೇಶದ ಸಾಂಸ್ಕೃತಿಕ ಪುನರುಜ್ಜಿವನದ ತಾತ್ವಿಕ ಪರಿಕಲ್ಪನೆಗಳಿಂದ, ದೈಹಿಕ ಶಿಸ್ತು, ಮಾನಸಿಕ ಶಕ್ತಿ, ದೃಢ ಸಂಕಲ್ಪ ಮತ್ತು ಸೇವೆಗಳ ಮೂಲಕ ಸಮಾಜದ ಎಲ್ಲ ವರ್ಗಗಳ ಎಲ್ಲ ಜನರ ಹೃದಯ ಸ್ಪರ್ಶಿಸುವುದರ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನದ ದೂರದೃಷ್ಟಿಯ ಆಶಯವನ್ನು ಹೊಂದಿದೆ. - ಡಾ|| ಆರ್ ಬಾಲಸುಬ್ರಹ್ಮಣ್ಯಂ, ಸಾಮಾಜಿಕ ಕಾರ್ಯಕರ್ತ ಸಂಘಪರಿವಾರದ ತೇಜಸ್ಸು, ಶಿಸ್ತು, ಅಚ್ಚುಕಟ್ಟುತನ, ರಾಷ್ಟ್ರಭಕ್ತಿ, ನಿಃಸ್ವಾರ್ಥಸೇವಾ ಮನೋಭಾವವನ್ನು ಕಳೆದ ಕಾಲು ಶತಮಾನದಿಂದ ತುಂಬಾ ಹತ್ತಿರದಿಂದ ಕಾಣುತ್ತಿದ್ದೇನೆ. ಇಂಥ ಉನ್ನತಾದರ್ಶಗಳನ್ನು ಇಟ್ಟುಕೊಂಡ ಸಂಘಕ್ಕೆ ಈಗ ಶತಮಾನದ ಸಂಭ್ರಮ. ಇಂಥ ಸಂಸ್ಥೆಯ ಮೂಲಕ ರಾಷ್ಟçನಿರ್ಮಾಣದಲ್ಲಿ ಅದರ ಸಂಗೋಪನದಲ್ಲಿ ತೊಡಗಿಕೊಳ್ಳೋಣವೆಂಬ ಆಕಾಂಕ್ಷೆ ನಮ್ಮ ಜನರಲ್ಲಿ ಹೆಚ್ಚಲಿ, ಬೆಳೆಯಲೆಂದು ನಾನು ಆಶಿಸುತ್ತೇನೆ. - ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ಸಾಹಿತಿ. ಶಿಸ್ತು, ಅನುಶಾಸನ, ನೈತಿಕ ನಿಷ್ಠೆ, ದೈವಭಕ್ತಿ, ದೇಶಪ್ರೇಮ ಈ ಎಲ್ಲ ಸದ್ಗುಣಗಳನ್ನೂ ಜನರಲ್ಲಿ ಒಮ್ಮೆಗೇ ಉದ್ದುದ್ಧಗೊಳಿಸುವ ಜಗತ್ತಿನ ಏಕೈಕ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ನಿಮ್ಮ ಮಕ್ಕಳು ಯೋಗ್ಯವಾಗಿ, ಸರಿಯಾದ ಸಭ್ಯ ವಾತಾವರಣದಲ್ಲಿ ಬೆಳೆಯಬೇಕೆಂದು ಕಾಳಜಿಯಿದ್ದಲ್ಲಿ, ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಕಳಿಸಿ.” - ಕಂಚಿಯ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿಗಳು (1982ರ ಮೇ ತಿಂಗಳಲ್ಲಿ ಸೇಲಂನಲ್ಲಿ ನಡೆದ ರಾಜ್ಯಮಟ್ಟದ ಸಂಘಶಿಕ್ಷಾವರ್ಗದ ಸಮಾರೋಪ ಭಾಷಣದಲ್ಲಿ) ಉಜ್ವಲ ರಾಷ್ಟ್ರಭಕ್ತಿಯ ದ್ಯೋತಕವಾಗಿ ಇಂದಿಗೂ ಯುವಪೀಳಿಗೆಗೆ ಮಾರ್ಗದರ್ಶಕ ಸ್ಥಾನದಲ್ಲಿ ಸಂಘ ನಿಂತಿದೆ. ಶತಕದ ಹೊಸ್ತಿಲಲ್ಲಿ ದೇಶರಕ್ಷಣೆಯ ಭರವಸೆಯಾಗಿ ಸಂಘಕಾರ್ಯ ಬೆಳೆದು ನಿಂತಿದೆ. - ಪ್ರೊ| ಶಾಂತಿಶ್ರೀ ಧುಲಿಪುಡಿ ಪಂಡಿತ್, ಶಿಕ್ಷಣತಜ್ಞೆ ಆರ್ಎಸ್ಎಸ್ ತನ್ನ ಬೃಹತ್ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿ, ಯಾವುದೇ ಸಾರ್ವಜನಿಕ ನಿಧಿಯ ಮೇಲೆ ಅವಲಂಬಿತವಾಗದೆ. ಯಾವುದೇ ರೀತಿಯ ಫಲಾಕಾಂಕ್ಷೆ ಹೊಂದಿರದ ಜನರಿಂದ ನಡೆಯುತ್ತಿದೆ. ಕಳೆದ 100 ವರ್ಷಗಳಲ್ಲಿ ಈ ಸಂಸ್ಥೆಯನ್ನು ಸ್ವಯಂಸೇವಕರೇ ಗಟ್ಟಿಯಾಗಿ ಕಟ್ಟಿದ್ದಾರೆ. - ಡಾ. ರಾಮ್ ಮಾಧವ್, ಹಿರಿಯ ಪ್ರಚಾರಕರು, ಆರ್ ಎಸ್ ಎಸ್
ಆಗಸ್ಟ್ 26, 27 ಮತ್ತು 28, 2025ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ|ಮೋಹನ್ ಭಾಗವತ್ ಅವರ ಮೂರು ದಿನಗಳ ವ್ಯಾಖ್ಯಾನ ಮಾಲೆಯ ಸಾರಾಂಶ ಇಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ತುಂಬಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಂಘದ ಬಗ್ಗೆ ಚರ್ಚೆಯಾದಾಗ ಅದು ಕೇವಲ ಗ್ರಹಿಕೆಯ ಆಧಾರದ ಮೇಲೆ ಇರದೆ, ಸತ್ಯಾಂಶಗಳ ಆಧಾರದ ಮೇಲೆ ಇರಬೇಕು. ಅದು ತಿಳಿದ ನಂತರ ಏನು ನಿರ್ಧಾರ ಮಾಡಬೇಕು, ಯಾವ ತೀರ್ಮಾನಕ್ಕೆ ಬರಬೇಕು ಎಂಬುದು ಕೇಳುವವರ ಸ್ವಂತ ಅಧಿಕಾರ. ಯಾರನ್ನೂ ಒಪ್ಪಿಸಬೇಕಿಲ್ಲ, ಕೇವಲ ತಿಳಿಸಬೇಕು. ಸಂಘದ ಬಗ್ಗೆ ಸತ್ಯ ತಿಳಿದ ನಂತರ, ಮನಸ್ಸಿನಲ್ಲಿ ಯಾವುದೇ ಕಾರಣವಿಲ್ಲದೆ ಇದ್ದ ತಪ್ಪು ಭಾವನೆಗಳು ದೂರವಾದವು. ಈಗ ಶತಮಾನದ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಯುವಾಗ, ಮುಂದೆ ಸಂಘದ ಕೆಲಸವನ್ನು ಸಂಘ ಹೇಗೆ ನೋಡುತ್ತೇವೆ? ನಮ್ಮ ಮನಸ್ಸಿನಲ್ಲಿ ಏನಿವೆ? ಎನ್ನುವುದನ್ನು “ನವ ಕ್ಷಿತಿಜ” ಎಂಬ ವ್ಯಾಖ್ಯಾನಮಾಲೆಯ ಮೂಲಕ ಹೇಳಲು ನಿರ್ಧರಿಸಿದ್ದೇವೆ. ಸಂಘದ 100 ವರ್ಷಗಳ ಪಯಣವಾಗುತ್ತಿದೆ. ಸಂಘಕ್ಕೆ ಒಂದು ಉದ್ದೇಶವಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಏಕೆ ಆರಂಭವಾಯಿತು? ಸ್ವಯಂಸೇವಕರು ಕಷ್ಟದ ಸಂದರ್ಭಗಳಲ್ಲಿ ದಾರಿ ಕಂಡುಕೊಂಡು ಇದನ್ನು ಏಕೆ ಮುಂದುವರೆಸಿದರು? 100 ವರ್ಷಗಳ ನಂತರವೂ ಹೊಸ ದಿಗಂತಗಳ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಇದಕ್ಕೆ ಒಂದು ವಾಕ್ಯದಲ್ಲಿ ಉತ್ತರಿಸಬೇಕಾದರೆ, ಸಂಘದ ಪ್ರಾರ್ಥನೆಯ ಕೊನೆಯಲ್ಲಿ ನಾವು ಸ್ವಯಂಸೇವಕರು ಪ್ರತಿದಿನ ಹೇಳುವ ವಾಕ್ಯ: ಭಾರತ ಮಾತಾ ಕೀ ಜಯ್! ಇದು ನಮ್ಮ ದೇಶ. ಆ ದೇಶದ ಜಯಜಯಕಾರವಾಗಬೇಕು. ವಿಶ್ವದಲ್ಲಿ ಉನ್ನತ ಸ್ಥಾನ ಪಡೆಯಬೇಕು. ಆದರೆ ಏಕೆ? ಸ್ವಾಮಿ ವಿವೇಕಾನಂದರು ಹೇಳುವಂತೆ ಪ್ರತಿ ರಾಷ್ಟ್ರಕ್ಕೆ ಒಂದು ಧ್ಯೇಯವಿದೆ, ಅದನ್ನು ಪೂರೈಸಬೇಕು. ಭಾರತಕ್ಕೂ ವಿಶ್ವಕ್ಕೆ ಕೊಡುಗೆ ನೀಡುವ ಧ್ಯೇಯವಿದೆ. ಆದ್ದರಿಂದ ಸಂಘದ ಸ್ಥಾಪನೆಯ ಉದ್ದೇಶ, ಚಾಲನೆಯ ಉದ್ದೇಶ ಭಾರತ ಮತ್ತು ಸಂಘದ ಸಾರ್ಥಕತೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದರಲ್ಲಿದೆ. ಭಾರತದ ಕೊಡುಗೆಯನ್ನು ವಿಶ್ವಕ್ಕೆ ನೀಡುವ ಸಮಯ ಬಂದಿದೆ. ನಮ್ಮ ಇತಿಹಾಸದಲ್ಲಿ ನಾವು ವೈಭವದ ಶಿಖರದಲ್ಲಿದ್ದೆವು, ಸ್ವತಂತ್ರರಾಗಿದ್ದೆವು. ನಂತರ ಆಕ್ರಮಣಗಳಾದವು, ಪರತಂತ್ರರಾದೆವು. ಪರತಂತ್ರತೆಯಿAದ ಮುಕ್ತರಾಗುವುದು ಮೊದಲ ಕೆಲಸವಾಗಿತ್ತು. ದೇಶವನ್ನು ಶ್ರೇಷ್ಠವಾಗಿಸಬೇಕಾದರೆ ಸ್ವಾತಂತ್ರ್ಯ ಅಗತ್ಯ. ಸ್ವಾತಂತ್ರ್ಯಕ್ಕಾಗಿ ಪ್ರಯತ್ನಗಳು ಆರಂಭವಾದವು. 1857ರಲ್ಲಿ ಅಖಿಲ ಭಾರತೀಯ ಯುದ್ಧವಾಯಿತು. ಆ ಯುದ್ಧ ವಿಫಲವಾಯಿತು. ಆ ವಿಫಲತೆಯಿಂದ ದೇಶದಲ್ಲಿ ಇದು ನಮ್ಮ ದೇಶ, ನಮ್ಮ ಜನಸಂಖ್ಯೆ ದೊಡ್ಡದು, ನಮ್ಮ ರಾಜ-ಮಹಾರಾಜರಿದ್ದಾರೆ, ಸಾವಿರಾರು ಮೈಲಿ ದೂರದಿಂದ ಬಂದ ಕೆಲವೇ ಜನರು ಈ ದೇಶವನ್ನು ಬಲವಂತವಾಗಿ ಆಳಿದರು. ಅವರ ಮುಂದೆ ನಾವು ಏಕೆ ಸೋತೆವು? ಕಾರಣವೇನು? ಎಂಬ ಚಿಂತನೆ ಮೂಡಿದವು. ಆದರೆ ಆಶಾವಾದಿಗಳ ಉತ್ತರ ಈ ಬಾರಿ ಸೋತರೆ ಏನಾಯಿತು? ಮತ್ತೊಮ್ಮೆ ಶಸ್ತçಸಜ್ಜಿತ ಕ್ರಾಂತಿ ಮಾಡಬೇಕು ಎಂಬುದಾಗಿತ್ತು. ಆಗ ಕ್ರಾಂತಿಕಾರಿಗಳ ಧಾರೆ ಹರಿಯಿತು. ದೇಶಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಲಕ್ಷಾಂತರ ಉದಾಹರಣೆಗಳು ಆ ಧಾರೆಯಿಂದ ಹೊರಹೊಮ್ಮಿದವು. ಅವರು ಇಂದಿಗೂ ನಮಗೆ ಪ್ರೇರಣೆಯ ಮೂಲ. ಸಂಘದ ಸಂಸ್ಥಾಪಕ ಡಾ. ಹೆಡಗೇವಾರ್ ಜನ್ಮಜಾತ ದೇಶಭಕ್ತ. ಬಾಲ್ಯದಲ್ಲೇ ಅನಾಥರಾದರು, ಬಡತನದಲ್ಲಿ ಬೆಳೆಯಬೇಕಾಯಿತು, ಆದರೆ ದೇಶಕ್ಕಾಗಿನ ಕೆಲಸಗಳಲ್ಲಿ ಭಾಗಿಯಾಗುವುದನ್ನು ಎಂದಿಗೂ ಬಿಡಲಿಲ್ಲ. ವಿದ್ಯಾರ್ಥಿಯಾಗಿ ತಮ್ಮ ಶಿಕ್ಷಣವನ್ನು ಉತ್ತಮವಾಗಿ ಪೂರೈಸಿ, ಶಾಲೆಯಲ್ಲಿ ಮೊದಲ ಹತ್ತರಲ್ಲಿ ಸ್ಥಾನ ಪಡೆಯುವ ಕರ್ತವ್ಯವನ್ನೂ ಮರೆಯಲಿಲ್ಲ. 1905-06ರ ವಂದೇ ಮಾತರಂ ಆಂದೋಲನವನ್ನು ನಾಗಪುರದ ಎಲ್ಲ ಶಾಲೆಗಳಲ್ಲಿ ಸಂಘಟಿಸಿದರು. ಇನ್ಸ್ಪೆಕ್ಟರ್ಗಳು ಶಾಲೆಯ ತಪಾಸಣೆಗೆ ಬಂದಾಗ, ಪ್ರತಿ ತರಗತಿಯಲ್ಲಿ ವಂದೇ ಮಾತರಂನಿAದ ಸ್ವಾಗತಿಸಲಾಗುತ್ತಿತ್ತು. ಕೋಪಗೊಂಡ ಅವರು ಶಾಲೆಗಳನ್ನು ನಾಲ್ಕು ತಿಂಗಳು ಮುಚ್ಚಿದರು. ಆದರೆ ಯಾರು ಇದರ ಹಿಂದೆ ಇದ್ದಾರೆಂದು ತಿಳಿಯಲಾಗಲಿಲ್ಲ. ಕೊನೆಗೆ ಸಾಮಾನ್ಯ ಕ್ಷಮಾಪಣೆಯೊಂದಿಗೆ ಶಾಲೆಗಳು ಮತ್ತೆ ತೆರೆದವು. ಆದರೆ ಇಬ್ಬರು ವಿದ್ಯಾರ್ಥಿಗಳು ಕ್ಷಮೆಯಾಚಿಸಲು ನಿರಾಕರಿಸಿದರು, "ವಂದೇ ಮಾತರಂ ಎನ್ನುವುದು ನಮ್ಮ ಹಕ್ಕು" ಎಂದು ಹೇಳಿದರು. ಅದರ ಫಲವಾಗಿ ಅವರನ್ನು ಶಾಲೆಯಿಂದ ತೆಗೆದುಹಾಕಲಾಯಿತು. ನಂತರ ರಾಷ್ಟ್ರೀಯ ಶಾಲೆಯಲ್ಲಿ ಓದಿ, ಕಷ್ಟದ ಸಂದರ್ಭದಲ್ಲಿಯೂ ಮೆಟ್ರಿಕ್ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ನಾಗಪುರದ ನಾಯಕರು ಈ ಛಲವನ್ನು ಕಂಡು, ಅವರನ್ನು ಕೋಲ್ಕತ್ತಾಕ್ಕೆ ಕಳುಹಿಸಿ ವೈದ್ಯಕೀಯ ಶಿಕ್ಷಣ ಕೊಡಿಸಲು ನಿರ್ಧರಿಸಿದರು. ಆದರೆ ಕ್ರಾಂತಿಕಾರಿಗಳ ಅನುಶೀಲನ ಸಮಿತಿಯೊಂದಿಗೆ ಸಂಪರ್ಕ ಸಾಧಿಸಿ, ಪಶ್ಚಿಮ ಭಾರತದಲ್ಲಿ ಕ್ರಾಂತಿಕಾರಿ ಕೆಲಸ ಆರಂಭಿಸುವುದು ಪ್ರಮುಖ ಗುರಿಯಾಗಿತ್ತು. ಹಣವಿಲ್ಲದಿದ್ದರೂ, ಚಂದಾದಿಂದ ಸಂಗ್ರಹವಾದ ಹಣದೊಂದಿಗೆ ಕೋಲ್ಕತ್ತಾಕ್ಕೆ ತೆರಳಿದರು. ಅಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿ, ಕ್ರಾಂತಿಕಾರಿ ಸಮಿತಿಯೊಂದಿಗೆ ಸಂಪರ್ಕವನ್ನೂ ಸ್ಥಾಪಿಸಿದರು. ಅವರ ಕ್ರಾಂತಿಕಾರಿ ಚಟುವಟಿಕೆಗಳ ಕೋಡ್ನೇಮ್ "ಕೊಕೇನ್" ಎಂದಿತ್ತು. ಡಾ. ಹೆಡಗೇವಾರ್ ತಮ್ಮ ವಿದ್ಯಾಭ್ಯಾಸದ ನಂತರ ಬರ್ಮಾದಲ್ಲಿ 3000 ರೂ. ತಿಂಗಳ ವೇತನದ ಉದ್ಯೋಗವನ್ನು ತಿರಸ್ಕರಿಸಿ, ದೇಶಕ್ಕಾಗಿ ಕೆಲಸ ಮಾಡಲು ನಾಗಪುರಕ್ಕೆ ಮರಳಿದರು. ತಮ್ಮ ಜೀವನವನ್ನು ದೇಶಕ್ಕಾಗಿ ಮೀಸಲಿಟ್ಟು, ವಿವಾಹದ ಆಲೋಚನೆಯನ್ನೂ ಬಿಟ್ಟರು. 1920ರ ಕಾಂಗ್ರೆಸ್ ಆಂದೋಲನದಲ್ಲಿ ಭಾಗವಹಿಸಿ, ಭಾಷಣಗಳಿಂದ ರಾಜದ್ರೋಹದ ಆರೋಪಕ್ಕೆ ಒಳಗಾದರು. ಕೋರ್ಟ್ನಲ್ಲಿ ತಮ್ಮ ರಕ್ಷಣೆಗಾಗಿ ಭಾಷಣ ಮಾಡಿದರು, ಅದು ಆರೋಪಕ್ಕಿಂತಲೂ ತೀಕ್ಷ÷್ಣವಾಗಿದ್ದರಿಂದ ಒಂದು ವರ್ಷ ಶಿಕ್ಷೆಗೆ ಒಳಗಾದರು. ಕ್ರಾಂತಿಕಾರಿ, ರಾಜಕೀಯ, ಸಾಮಾಜಿಕ ಸುಧಾರಣೆ, ಧಾರ್ಮಿಕ ಜಾಗೃತಿಯ ಎಲ್ಲ ಕೆಲಸಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರು. ಈ ಅನುಭವದಿಂದ ಸಮಾಜದ ಸ್ಥಿತಿ, ಕೆಲಸದ ವಿಧಾನವನ್ನು ತಿಳಿದುಕೊಂಡರು. 1930ರ ಜಂಗಲ್ ಸತ್ಯಾಗ್ರಹಕ್ಕಾಗಿ ಸಂಘದ ಸರಸಂಘಚಾಲಕ ಸ್ಥಾನವನ್ನು ತಾತ್ಕಾಲಿಕವಾಗಿ ಬಿಟ್ಟು, ಹೋರಾಟದಲ್ಲಿ ಭಾಗವಹಿಸಿ, ಮತ್ತೊಮ್ಮೆ ಒಂದು ವರ್ಷ ಶಿಕ್ಷೆಗೆ ಒಳಗಾದರು. ಸುಭಾಷ್ ಚಂದ್ರ ಬೋಸ್, ಗಾಂಧೀಜಿ, ತಿಲಕ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು ಮುಂತಾದವರೊಂದಿಗೆ ಸಂಪರ್ಕದಿಂದ, ಸಮಾಜದ ದುರ್ಗುಣಗಳನ್ನು ತೊಡೆದುಹಾಕದೆ ಯಾವ ಕಾರ್ಯವೂ ಸಂಪೂರ್ಣವಾಗದು ಎಂದು ತಿಳಿದರು. ಡಾ. ಹೆಡಗೇವಾರ್ ಯೋಚಿಸಿ ಸ್ವತಃ ತಾವೇ ಇದರ ಅನುಷ್ಠಾನಕ್ಕಿಳಿದರು. 1911-14ರಲ್ಲಿ ಕೋಲ್ಕತ್ತಾದಲ್ಲಿ ಇದನ್ನು ತ್ರೈಲೋಕ್ಯನಾಥ ಚಕ್ರವರ್ತಿಯವರಿಗೆ ತಿಳಿಸಿದ್ದರು. ನಾಗಪುರಕ್ಕೆ ಮರಳಿ, ವೈದ್ಯಕೀಯ ಶಿಕ್ಷಣ ಪೂರೈಸಿ, ಆಂದೋಲನಗಳಲ್ಲಿ ಭಾಗವಹಿಸುತ್ತಲೇ, ದೇಶವನ್ನು ಒಗ್ಗೂಡಿಸುವ, ಶ್ರೇಷ್ಠಗೊಳಿಸುವ, ವ್ಯಕ್ತಿಗಳಲ್ಲಿ ಗುಣಾತ್ಮಕತೆಯನ್ನು ಬೆಳೆಸುವ ವಿಧಾನಗಳನ್ನು ಪ್ರಯೋಗಿಸಿದರು. ಭಾರತ ಸೇವಾಶ್ರಮ ಸಂಘ ಮತ್ತು ಅನುಶೀಲನ ಸಮಿತಿಯ ಮಾನವ ನಿರ್ಮಾಣ ಕಾರ್ಯಕ್ರಮಗಳ ಅನುಭವದಿಂದ ಒಂದು ಚಿಂತನೆ, ಪರಿಹಾರವನ್ನು ಕಂಡುಕೊಂಡು ಪ್ರಯೋಗಿಸಿದರು. ಯಶಸ್ವಿಯಾದ ಈ ಪ್ರಯೋಗವನ್ನು ತಮ್ಮ ಯುವ ಜೊತೆಗಾರರೊಂದಿಗೆ ಚರ್ಚಿಸಿ, 1925ರ ವಿಜಯದಶಮಿಯಂದು ಸಂಘವನ್ನು ಆರಂಭಿಸಿದರು, ಉದ್ದೇಶ: ಸಂಪೂರ್ಣ ಹಿಂದೂ ಸಮಾಜದ ಸಂಘಟನೆ. ಇಲ್ಲಿ ಪ್ರಶ್ನೆ ಎದ್ದಿದೆ: ಇತರರನ್ನು ಏಕೆ ಬಿಟ್ಟರು? "ಹಿಂದೂ ಸಮಾಜ" ಎಂದರೆ ಈ ದೇಶಕ್ಕೆ ಜವಾಬ್ದಾರಿಯುಳ್ಳ ಸಮಾಜ. ಈ ಹೆಸರು ಪುರಾತನವಾಗಿ ದೇಶದ ಜನರಿಗೆ ಬಂದಿದೆ. ಮಹಾವೀರ್ ಪ್ರಸಾದ್ ದ್ವಿವೇದಿಯವರು ಬರೆದಂತೆ, ಜಲದೃಷ್ಟಿಯ ಕಾಲದಲ್ಲಿ ಬಾಹ್ಯ ಜನರು ಈ ಹೆಸರನ್ನು ಕೊಟ್ಟರು. ನಮಗೆ ಪ್ರತ್ಯೇಕ ಹೆಸರಿನ ಅಗತ್ಯವಿರಲಿಲ್ಲ, ನಮ್ಮ ಧರ್ಮಶಾಸ್ತçವು "ಮಾನವ ಧರ್ಮ ಶಾಸ್ತç"ವೆಂದೇ ಇತ್ತು. "ಮಾತಾ ಪಾರ್ವತೀ ದೇವೀ, ಪಿತಾ ದೇವೋ ಮಹೇಶ್ವರಃ, ಬಾಂಧವಾಃ ಶಿವಭಕ್ತಾಶ್ಚ, ಸ್ವದೇಶೋ ಭುವನತ್ರಯಂ" ಮತ್ತು "ವಸುಧೈವ ಕುಟುಂಬಕA" ಎಂಬ ಭಾವನೆಯಿಂದ, ಮಾನವರೆಲ್ಲರೂ ಒಂದೇ ಎಂದು ಭಾವಿಸುತ್ತಿದ್ದೆವು. ಮಾನವತೆ, ಸೃಷ್ಟಿ, ಎಲ್ಲವೂ ಪರಮಾತ್ಮನಿಂದ ಸಂನಾದಿಯಾಗಿದೆ. ಒಬ್ಬರ ಕಾರ್ಯವು ಇನ್ನೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ವೈಯಕ್ತಿಕ ಉನ್ನತಿಗೆ ಎಲ್ಲರ ಉನ್ನತಿಯನ್ನು ಯೋಜಿಸಬೇಕು. ಇದು ಭಾರತದ ಸ್ವಭಾವ. ಸಂಘ ಆರಂಭವಾದಾಗ, ಎಲ್ಲರೂ ತಮ್ಮನ್ನು ಹಿಂದೂ ಎಂದು ಕರೆಯುತ್ತಿರಲಿಲ್ಲ, ಇಂದಿಗೂ ಕೆಲವರು ಕರೆಯುವುದಿಲ್ಲ. ಕೆಲವರಿಗೆ ತಾವು ಹಿಂದೂ ಎಂದು ಗೌರವವಿದೆ, ಕೆಲವರಿಗೆ "ಹಿಂದೂ ಎಂದರೆ ಏನು, ವಿಶ್ವದ ಒಂದು ಭಾಗವಷ್ಟೇ" ಎಂಬ ಭಾವನೆ. ಕೆಲವರು ತಾವು ಹಿಂದೂ ಎಂದು ಒಪ್ಪಿಕೊಳ್ಳದಿದ್ದರೂ, "ಹಿಂದವೀ" ಅಥವಾ "ಭಾರತೀಯ" ಎಂದರೆ ಆಕ್ಷೇಪವಿಲ್ಲ. "ಸನಾತನ" ಎಂಬ ಪದವನ್ನೂ ಕೆಲವರು ಸ್ವೀಕರಿಸುತ್ತಾರೆ. ಈ ಪದಗಳು ಸಮಾನಾರ್ಥಕ. ನಾವು "ನೀವು ಹಿಂದೂ ಎಂದೇ ಕರೆಯಿರಿ" ಎಂದು ಹೇಳುವುದಿಲ್ಲ. "ನಾವು ಹಿಂದವೀ, ಭಾರತೀಯರು" ಎಂದರೂ ಒಪ್ಪಿಕೊಳ್ಳುತ್ತೇವೆ. ಈ ಪದಗಳ ಹಿಂದಿನ ತಾತ್ಪರ್ಯವನ್ನು ಅರ್ಥಮಾಡಿಕೊಳ್ಳಿ. ಈ ತಾತ್ಪರ್ಯವು ಭೌಗೋಳಿಕವಲ್ಲ. ಇದರಲ್ಲಿ ಭಾರತಮಾತೆಯ ಭಕ್ತಿಯಿದೆ, ಪೂರ್ವಜರ ಸಂಪ್ರದಾಯವಿದೆ. 40,000 ವರ್ಷಗಳಿಂದ ಭಾರತದ ಜನರ ಡಿಎನ್ಎ ಒಂದೇ ಆಗಿದೆ. ನಮ್ಮ ಸಂಸ್ಕೃತಿಯು ಒಗ್ಗಟ್ಟಿನದು. ವೈವಿಧ್ಯವು ನಮ್ಮಲ್ಲಿ ಒಡಕು ತರುವುದಿಲ್ಲ, ಏಕೆಂದರೆ ಏಕರೂಪತೆಯಿಂದಲೇ ಏಕತೆ ಬರುತ್ತದೆ ಎಂದು ನಾವು ಭಾವಿಸುವುದಿಲ್ಲ. ವೈವಿಧ್ಯದಲ್ಲಿಯೇ ಏಕತೆಯಿದೆ, ಏಕೆಂದರೆ ವೈವಿಧ್ಯವು ಏಕತೆಯ ಫಲಿತಾಂಶವೇ ಆಗಿದೆ. ಆದರೆ, ಮೊದಲು ಸುಲಭವಾದ ಕೆಲಸ ಆರಂಭಿಸಿ. ತಮ್ಮನ್ನು ಹಿಂದೂ ಎಂದು ಕರೆಯುವವರನ್ನು ಸಂಘಟಿಸಿ, ಅವರ ಜೀವನವನ್ನು ಉತ್ತಮಗೊಳಿಸಿ. ಆಗ, ತಮ್ಮನ್ನು ಹಿಂದೂ ಎಂದು ಒಪ್ಪದವರೂ ಒಪ್ಪಿಕೊಳ್ಳಲು ಆರಂಭಿಸುತ್ತಾರೆ, ಮರೆತವರಿಗೂ ನೆನಪಾಗುತ್ತದೆ. ಗುರಿಯೆಂದರೆ ಸಂಪೂರ್ಣ ಸಮಾಜದ ಸಂಘಟನೆ. "ಹಿಂದೂ" ಎಂಬ ಪದದ ಮೇಲೆ ಒತ್ತಾಯ ಏಕೆ? ಏಕೆಂದರೆ ಈ ತಾತ್ಪರ್ಯವನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವ ಏಕೈಕ ಪದವಿದು. ಸಂಘವು ಯಾವುದೇ ವಿರೋಧದಿಂದ ಉದ್ಭವಿಸಿಲ್ಲ, ಪ್ರತಿಕ್ರಿಯೆಯಿಂದ ಹುಟ್ಟಿಲ್ಲ. ಗುರುಜಿಯವರು ಒಂದು ಪತ್ರಿಕಾಗೋಷ್ಠಿಯಲ್ಲಿ "ಸಂಘಟನೆ ಯಾರ ವಿರುದ್ಧವೂ ಅಲ್ಲ. ನೀವು ವ್ಯಾಯಾಮ ಮಾಡುವಿರಿ, ಯಾರನ್ನು ಹೊಡೆಯಲು? ಎಂದು ಕೇಳಿದರೆ, "ವ್ಯಾಯಾಮವು ಆರೋಗ್ಯಕ್ಕಾಗಿ" ಎಂದಿರಿ. ಕೆಲವೊಮ್ಮೆ ವ್ಯಾಯಾಮದ ಶರೀರ ಕಾಳಗಕ್ಕೆ ಉಪಯೋಗವಾಗಬಹುದು, ಆದರೆ ಉದ್ದೇಶ ಆರೋಗ್ಯ. ಸಂಘಟಿತವಾಗಿರುವುದು ಸಮಾಜದ ಸ್ವಾಭಾವಿಕ ಸ್ಥಿತಿ. ಇದಿಲ್ಲದೆ ಯಾವ ಕೆಲಸವೂ ಯಶಸ್ವಿಯಾಗದು. ಆದ್ದರಿಂದ, ಸಂಘವು ಸಂಪೂರ್ಣ ಸಮಾಜವನ್ನು ಸಂಘಟಿಸುತ್ತದೆ. 100 ವರ್ಷಗಳ ಸಂಘದ ಪಯಣದ ಬಗ್ಗೆ ಏನು ಹೇಳಲಿ? ಡಾ. ಹೆಡಗೇವಾರ್ ಹೇಳಿದ್ದರು, ಸಂಘಟನೆಯ ಜೀವನದಲ್ಲಿ ಮೂರು ಸ್ಥಿತಿಗಳಿವೆ: ಮೊದಲು ಉಪೇಕ್ಷೆ, ವಿರೋಧ, ಸ್ವೀಕಾರ. ಮುಂದಿನ ಹಂತ ಏನು? ನಾವು ಸಂಘದಲ್ಲಿ ಮಾಡುತ್ತಿರುವ ಕೆಲಸವು ಸಂಪೂರ್ಣ ಸಮಾಜದಲ್ಲಿ ಆಗಬೇಕು. ಚಾರಿತ್ರ್ಯ ನಿರ್ಮಾಣ, ದೇಶಭಕ್ತಿಯನ್ನು ಜಾಗೃತಗೊಳಿಸುವ ಕೆಲಸವು ಸಮಾಜದಲ್ಲಿ ಆಗುತ್ತಿಲ್ಲವೆಂದೇನಿಲ್ಲ. ಇದನ್ನು ಮಾಡುವವರು ಇದ್ದಾರೆ, ಬೇರೆ ಬೇರೆ ರೀತಿಯಲ್ಲಿ, ವೈಯಕ್ತಿಕವಾಗಿ, ಸಂಘಟನೆಗಳ ಮೂಲಕ ಮಾಡುವವರು ಇದ್ದಾರೆ. ಉತ್ತಮ ಚಾರಿತ್ರ್ಯವುಳ್ಳ ಜೀವನವನ್ನು ತಮ್ಮ ಉದಾಹರಣೆಯಿಂದ ರೂಪಿಸುವವರು ಇದ್ದಾರೆ. ಆದರೆ ಇವರು ಮುಂಚೂಣಿಗೆ ಬರುವುದಿಲ್ಲ. ನಾವು ಕೇಳುವ, ಓದುವ, ನೋಡುವ ಸುದ್ದಿಗಳು ಯಾವುವು? "ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿಯಲ್ಲ, ಮನುಷ್ಯನು ನಾಯಿಯನ್ನು ಕಚ್ಚಿದರೆ ಸುದ್ದಿ." ಆದ್ದರಿಂದ, ಕೆಟ್ಟದ್ದೇ ಸುದ್ದಿಯಾಗುತ್ತದೆ. ಇದರಿಂದ ಎಲ್ಲವೂ ಕೆಟ್ಟದಾಗಿದೆ ಎಂದು ತೋರುತ್ತದೆ. ಕೆಟ್ಟದ್ದು ಖಂಡಿತ ಆಗುತ್ತಿದೆ, ಗಾಂಧೀಜಿ ಹೇಳಿದ ಏಳು ಸಾಮಾಜಿಕ ಪಾಪಗಳ ಸಂಕಟವು ಭಾರತವೂ ಸೇರಿದಂತೆ ಎಲ್ಲೆಡೆ ಇದೆ. ಎಲ್ಲರೂ ಚಿಂತಿಸಬೇಕು. ಆದರೆ, ಭಾರತದಲ್ಲಿ ಕೆಟ್ಟದ್ದು ತೋರುವಷ್ಟೇ 40 ಪಟ್ಟು ಒಳ್ಳೆಯದು ಸಮಾಜದಲ್ಲಿ ಇದೆ. ಮಾಧ್ಯಮ ವರದಿಗಳ ಆಧಾರದಲ್ಲಿ ಮಾತ್ರ ಭಾರತವನ್ನು ಮೌಲ್ಯಮಾಪನ ಮಾಡಿದರೆ ತಪ್ಪಾಗುತ್ತದೆ. ಇದನ್ನು ನಾವು ನೇರವಾಗಿ ತಿಳಿದಿದ್ದೇವೆ. ಲಾಭವಿಲ್ಲದೆ ಸೇವೆ ಮಾಡುವ ಜನರನ್ನು ಭೇಟಿಯಾಗಿದ್ದೇವೆ. ಬಡವರು ಕೂಡ ಸೇವೆ ಮಾಡುತ್ತಾರೆ. ನಾನು ಇಲ್ಲಿ ಧರ್ಮದ ಉಪನ್ಯಾಸ ನೀಡುತ್ತಿದ್ದೇನೆ, ಆದರೆ ಧರ್ಮವನ್ನು ಜೀವಿಸುವವರು ಗ್ರಾಮಗ್ರಾಮದಲ್ಲಿ, ನಗರದ ಗುಡಿಸಲುಗಳಲ್ಲಿ ಸಿಗುತ್ತಾರೆ. ಪೂರಕ ರಚನೆಯ ಅಗತ್ಯ ಭಾರತದ ಈ ಶಕ್ತಿಯು ಚದುರಿಕೊಂಡಿದೆ, ಆದರೆ ಸಕ್ರಿಯವಾಗಿದೆ. ಇದನ್ನು ಒಂದು ಪೂರಕ ರಚನೆಯಲ್ಲಿ ಕಟ್ಟಬೇಕು. ಅವರು ತಮ್ಮ ತಮ್ಮ ರೀತಿಯಲ್ಲಿ ಕೆಲಸ ಮಾಡಲಿ, ಸಂಘಕ್ಕೆ ಬಂದೇ ಮಾಡಬೇಕೆಂದಿಲ್ಲ. ಕೇವಲ ಜಾಲಬಂಧನ (ನೆಟ್ವರ್ಕಿಂಗ್) ಇರಲಿ, ಇತರರೂ ಇದ್ದಾರೆ ಎಂದು ತಿಳಿಯಲಿ. ಇದರಿಂದ ಉತ್ಸಾಹ ಹೆಚ್ಚಾಗುತ್ತದೆ, ಕೆಲಸಕ್ಕೆ ಪ್ರೇರಣೆ ಸಿಗುತ್ತದೆ. ಈ ಎಲ್ಲ ಕೆಲಸಗಳು ಪರಸ್ಪರ ಪೂರಕವಾಗಿರಲಿ, ಬಾಧಕವಾಗದಿರಲಿ. ಎಲ್ಲರೂ ಒಳ್ಳೆಯ ಕೆಲಸವನ್ನೇ ಮಾಡುತ್ತಾರೆ, ಆದರೆ ಇವರ ಕೆಲಸದಲ್ಲಿ ಸಮನ್ವಯ, ಪೂರಕತೆ, ಒಗ್ಗಟ್ಟು ಬರಲಿ, ಆಗ ಎಲ್ಲರೂ ಒಟ್ಟಾಗಿ ಸಮಾಜ ಪರಿವರ್ತನೆಯ ಕೆಲಸದಲ್ಲಿ ಮುನ್ನಡೆಯಬಹುದು. ಪರಸ್ಪರ ಸದ್ಭಾವನೆ ಇದು ಸಾಧ್ಯವಾಗಬೇಕಾದರೆ, ಇಷ್ಟು ದೊಡ್ಡ ಸಮಾಜ, ಇಷ್ಟೊಂದು ವೈವಿಧ್ಯಗಳಿವೆ. ಸೃಷ್ಟಿಯ ವೈವಿಧ್ಯಗಳು ಕೆಲವೊಮ್ಮೆ ಪರಸ್ಪರ ವಿರೋಧಿಯೂ ಆಗಿರುತ್ತವೆ, ಘರ್ಷಣೆಯೂ ಉಂಟಾಗುತ್ತದೆ. ಸಮಾಜದಲ್ಲಿ ಅವಿಶ್ವಾಸ, ದುರ್ಭಾವನೆ ಇದ್ದರೆ, ಒಗ್ಗಟ್ಟಿನಿಂದ ಯಾವ ಕೆಲಸವನ್ನೂ ಸಾಧಿಸಲಾಗದು. ಇಷ್ಟು ದೊಡ್ಡ ಕೆಲಸವನ್ನು ಸಮಾಜವು ಮಾಡಬೇಕಾದರೆ, ಅದಕ್ಕೆ ಸಿದ್ಧವಾಗಬೇಕು. ಇದಕ್ಕಾಗಿ ಪರಸ್ಪರ ಸದ್ಭಾವನೆಯು ಅತ್ಯಗತ್ಯ. ಆದ್ದರಿಂದ, ಸಮಾಜದ ಎಲ್ಲ ವರ್ಗಗಳನ್ನು ನಡೆಸುವ ಮುಖಂಡರು, ಅಭಿಪ್ರಾಯ ರೂಪಿಸುವವರೊಂದಿಗೆ ನಿರಂತರ ಸಂಬAಧವನ್ನು ರೂಪಿಸುವ ಪ್ರಯತ್ನ ಮಾಡುತ್ತೇವೆ. ಈ ಸಂಬAಧದಿಂದ ಅವರು ಒಗ್ಗೂಡಿ, ಮೂರು ಕೆಲಸಗಳನ್ನು ಮಾಡಬೇಕು:ವರ್ಗದ ಉನ್ನತಿ: ತಮ್ಮ ವರ್ಗದ ಭೌತಿಕ ಮತ್ತು ನೈತಿಕ ಉನ್ನತಿಗಾಗಿ, ರೂಢಿಗತ ಕುರೀತಿಗಳಿಂದ ಮುಕ್ತಿಗಾಗಿ, ಜೀವನ ಸುಧಾರಣೆಗಾಗಿ ಕೆಲಸ ಮಾಡಬೇಕು. ಜೊತೆಗೆ, ತಮ್ಮ ವರ್ಗದ ಜನರಿಗೆ "ನಾವು ಒಂದು ವರ್ಗ, ನಮಗೆ ವಿಶಿಷ್ಟತೆ ಇದೆ, ಆದರೆ ನಾವು ಸಂಪೂರ್ಣ ಸಮಾಜದ ಅವಿಭಾಜ್ಯ ಅಂಗ. ಈ ಸಮಾಜ ಇದ್ದರೆ ನಾವು ಇರುತ್ತೇವೆ, ನಮ್ಮ ಉನ್ನತಿಯು ಸಮಾಜದ ಉನ್ನತಿಗೆ ಕಾರಣವಾಗಬೇಕು" ಎಂಬ ತಿಳಿವಳಿಕೆ ಬರಬೇಕು. ಸ್ಥಳೀಯ ಸಮಸ್ಯೆಗಳ ಪರಿಹಾರ: ತಾವಿರುವ ಭೌಗೋಳಿಕ ಕಾರ್ಯಕ್ಷೇತ್ರದಲ್ಲಿ ಯಾವ ಕೊರತೆ, ಸಮಸ್ಯೆ ಇದೆಯೋ, ಅದನ್ನು ತಮ್ಮ ಬಲದಿಂದ ಎಷ್ಟು, ಹೇಗೆ ಪರಿಹರಿಸಬಹುದು ಎಂದು ತೀರ್ಮಾನಿಸಿ, ಮುಂದಿನ ಭೇಟಿಗೆ ಮೊದಲು ಅದನ್ನು ಪೂರ್ಣಗೊಳಿಸಬೇಕು. ಇದರಿಂದ "ನಾವು ಸಮಾಜದ ಅಂಗ" ಎಂಬ ಭಾವನೆ ದೃಢವಾಗುತ್ತದೆ, ಅನುಭವವಾಗುತ್ತದೆ. ದುರ್ಬಲ ವರ್ಗಗಳಿಗೆ ಸಹಾಯ: ಎಲ್ಲ ವರ್ಗಗಳು ಒಟ್ಟಿಗೆ ಭೇಟಿಯಾಗಿ, ದುರ್ಬಲ ವರ್ಗಕ್ಕೆ ಏನು ಅಗತ್ಯವಿದೆ, ಮುಂದಿನ ಭೇಟಿಗೆ ಮೊದಲು ಏನು ಮಾಡಬಹುದು, ತಮ್ಮ ಬಲದಿಂದ ಎಷ್ಟು ಸಾಧ್ಯ ಎಂದು ತೀರ್ಮಾನಿಸಿ, ಅದನ್ನು ಪೂರ್ಣಗೊಳಿಸಬೇಕು. ಈ ಗುಣವು ಸಮಾಜದ ಸ್ವಭಾವವಾಗಬೇಕು, ಸಹಜವಾದ ಪ್ರಕ್ರಿಯೆಯಾಗಬೇಕು. ಇದಕ್ಕಾಗಿ ನಾವು ಪ್ರಯತ್ನಿಸುತ್ತೇವೆ. ಸದ್ಭಾವನೆಯ ಜೊತೆಗೆ ಸಕಾರಾತ್ಮಕತೆಯೂ ಬೇಕು. ಕೆಲವೊಮ್ಮೆ ಕೆಟ್ಟ ಸುದ್ದಿಗಳಿಂದ ಸಮಾಜವೂ ನಿರಾಶೆಗೊಳಗಾಗುತ್ತದೆ, ಆದರೆ ನಿರಾಶೆ ಬರಬಾರದು. ವೈವಿಧ್ಯದಲ್ಲಿ ಒಗ್ಗಟ್ಟು: ನಮ್ಮ ದೇಶದ ಸಮಾಜದಲ್ಲಿ ಸಂಪ್ರದಾಯದಿಂದಲೇ ಹಲವು ವರ್ಗಗಳಿವೆ, ಹೊರಗಿನಿಂದಲೂ ಕೆಲವು (ವಿಶೇಷವಾಗಿ ಧಾರ್ಮಿಕ) ವರ್ಗಗಳು ಬಂದಿವೆ. ಆಕ್ರಮಣದಿಂದ, ವಿದೇಶಿ ಚಿಂತನೆಗಳು ಬಂದಿವೆ, ಆದರೆ ಅವುಗಳನ್ನು ಸ್ವೀಕರಿಸಿದವರು ಇಲ್ಲಿಯವರೇ. ಇಂದು ಇಲ್ಲಿಯವರೇ ಇದ್ದಾರೆ. ಹಿಂದೂ ಚಿಂತನೆಯು "ವಸುಧೈವ ಕುಟುಂಬಕA" ಎಂಬುದಾಗಿದೆ, ಎಲ್ಲ ಮಾರ್ಗಗಳನ್ನೂ ಒಳ್ಳೆಯದೆಂದು ಒಪ್ಪಿಕೊಳ್ಳುತ್ತದೆ. ಆದರೆ, ಇಂದು ಇರುವ ದೂರವನ್ನು ಕಡಿಮೆ ಮಾಡಲು ಎರಡೂ ಕಡೆಯಿಂದ ಪ್ರಯತ್ನ ಬೇಕು. ಸಂವಾದವಾಗಬೇಕು, ಪರಸ್ಪರರ ನೋವನ್ನು ಅರಿಯಬೇಕು, ಅವಿಶ್ವಾಸವನ್ನು ತೊಡೆದು, ಎಲ್ಲರೂ ಒಂದೇ ದೇಶ, ಒಂದೇ ಸಮಾಜ, ಒಂದೇ ರಾಷ್ಟ್ರದ ಅಂಗವಾಗಿ, ವೈವಿಧ್ಯದ ಹೊರತಾಗಿಯೂ, ಸಾಮಾನ್ಯ ಪೂರ್ವಜರ ವಂಶಜರಾಗಿ, ಸಾಮಾನ್ಯ ಸಂಸ್ಕೃತಿಯ ಉತ್ತರಾಧಿಕಾರಿಗಳಾಗಿ ಮುಂದುವರಿಯಬೇಕು. ಇದು ಸದ್ಭಾವನೆ ಮತ್ತು ಸಕಾರಾತ್ಮಕತೆಗೆ ಅತ್ಯಗತ್ಯ. ಈ ಕೆಲಸವನ್ನು ಎಚ್ಚರಿಕೆಯಿಂದ, ಚಿಂತನೆಯಿAದ ಒಂದೊAದು ಹೆಜ್ಜೆಯಾಗಿ ಮಾಡಬೇಕು.ವ್ಯಾವಹಾರಿಕ ಮಾದರಿಯ ಅಗತ್ಯ. ಭಾರತದ ಹೆಚ್ಚಿನ ನೆರೆಯ ದೇಶಗಳು ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದವು. ಜನರು, ಭೂಗೋಳ, ನದಿಗಳು, ಕಾಡುಗಳು ಎಲ್ಲವೂ ಒಂದೇ. ಕೇವಲ ಭೂಪಟದಲ್ಲಿ ಗೆರೆಗಳನ್ನು ಎಳೆಯಲಾಗಿದೆ. ಆದ್ದರಿಂದ, ಮೊದಲ ಕರ್ತವ್ಯವೆಂದರೆ ಈ ಒಡನಾಟದ ಭಾವನೆಯಿಂದ ಒಗ್ಗೂಡಿಸುವುದು. ದೇಶಗಳು ಬೇರೆಯಾಗಿರಬಹುದು, ಆದರೆ ವಿರಾಸತಿನ ಮೌಲ್ಯಗಳ ಆಧಾರದಲ್ಲಿ ಎಲ್ಲರ ಉನ್ನತಿಯಾಗಬೇಕು. ಇದಕ್ಕೆ ಭಾರತದ ಕೊಡುಗೆಯಿರಬೇಕು. ಭಾರತವು ದೊಡ್ಡ ದೇಶವಾದ್ದರಿಂದ, ಅವರನ್ನು ಒಗ್ಗೂಡಿಸಿ, ಅವರ ಶಾಂತಿ, ಸ್ಥಿರತೆ, ವಿಕಾಸ, ಪರಿಸರ, ಸಂಸ್ಕಾರಗಳಿಗೆ ಗಮನ ಕೊಡಬೇಕು. ಜಾತಿ, ಪಂಥ, ಸಂಪ್ರದಾಯಗಳು ಬೇರೆಯಾದರೂ, ಸಂಸ್ಕಾರದ ಬಗ್ಗೆ ಯಾರಿಗೆ ಭಿನ್ನಾಭಿಪ್ರಾಯವಿದೆ? ಇದಕ್ಕಾಗಿ ಎಲ್ಲರೂ ಒಪ್ಪಿಗೆಯಿಂದ ಪ್ರಯತ್ನಿಸಬೇಕು. ಇದನ್ನು ಇಂದಿನ ಭಾಷೆಯಲ್ಲಿ "ಔಟ್ರೀಚ್" ಎನ್ನುತ್ತಾರೆ, ನಾವು "ಸಂಪರ್ಕ" ಎನ್ನುತ್ತೇವೆ. ಜೀವಂತ ಸಂಪರ್ಕ, ಮನುಷ್ಯರಿಂದ ಮನುಷ್ಯರಿಗೆ, ಹೃದಯದಿಂದ ಹೃದಯಕ್ಕೆ ಮಾತು. ಇದು ಆರಂಭವಾಗಬೇಕು. ಇದರಿಂದ ಒಳ್ಳೆಯ ವಾತಾವರಣದಲ್ಲಿ ಸಂಬAಧಗಳು ರೂಪಗೊಳ್ಳುತ್ತವೆ, ವಿಶ್ವಕ್ಕೆ ಉಪಕಾರಿಯಾಗುತ್ತವೆ. ಈ ದಿಶೆಯಲ್ಲಿ ನಾವು ಏನು ಮಾಡಬಹುದು ಎಂಬ ಚಿಂತನೆ ಸಂಘಟಕರ ಮನಸ್ಸಿನಲ್ಲಿದೆ. ಆದರೆ, ಇದನ್ನು ಮಾಡಲು ಭಾರತದ ಸಮಾಜದ ಗುಣಮಟ್ಟವು ಕೆಲಸ ಮಾಡುತ್ತದೆ. ಸಮಾಜದ ಚಿತ್ರವು ತೋರಬೇಕು. ಇಲ್ಲವಾದರೆ, "ನಿಮ್ಮ ದೇಶದಲ್ಲಿ ಏನಿದೆ? ಏನಾಗುತ್ತಿದೆ?" ಎಂದು ಜನ ಕೇಳುತ್ತಾರೆ. ಆದ್ದರಿಂದ, ಮನೆಯಿಂದಲೇ ಆರಂಭವಾಗಬೇಕು. ಒಂದು ಸಂಘಟಿತ ಕಾರ್ಯಶಕ್ತಿಯನ್ನು ರೂಪಿಸಿ, ಅದರ ಆಧಾರದಲ್ಲಿ ಸಮಾಜದ ಪರಿವರ್ತನೆಯಾಗಬೇಕು. ಸಮಾಜದ ಪರಿವರ್ತನೆ ಎಂದರೆ ವ್ಯವಸ್ಥೆಯ ಬದಲಾವಣೆಯಲ್ಲ, ಸಮಾಜದ ಆಚರಣೆಯ ಬದಲಾವಣೆ, ಸಂಘಟಿತ ಸ್ಥಿತಿಯ ರಚನೆ. ಇದರ ಆಧಾರದಲ್ಲಿ ವ್ಯವಸ್ಥೆ ಬದಲಾಗುತ್ತದೆ. ವ್ಯವಸ್ಥೆಯು ತಾನಾಗಿಯೇ ಬದಲಾಗುವುದಿಲ್ಲ. ಸಮಾಜವು ಗುಣಸಂಪನ್ನವಾಗಿ, ಸಂಘಟಿತವಾಗಿ, ಸ್ಪಷ್ಟ ದೃಷ್ಟಿಯೊಂದಿಗೆ, ಆ ದೃಷ್ಟಿಗೆ ತಕ್ಕ ಆಚರಣೆಯೊಂದಿಗೆ ಮಾತ್ರ ಬದಲಾಗಬಹುದು. ಪಂಚ ಪರಿವರ್ತನ ಆಚರಣೆಯಲ್ಲಿ ಬದಲಾವಣೆ ತರುವ ಕೆಲವು ಕೆಲಸಗಳನ್ನು ನಾವು ಆರಂಭಿಸಿದ್ದೇವೆ. ಆ ಐದು ಕೆಲಸಗಳನ್ನು ಪಂಚ ಪರಿವರ್ತನ ಎಂದು ಕರೆಯುತ್ತೇವೆ. ಇವು ತುಂಬ ಸರಳ ಕೆಲಸಗಳು, ಯಾವ ಸಾಧನವೂ ಬೇಕಿಲ್ಲ, ಕೇವಲ ಇಚ್ಛೆಯಷ್ಟೇ ಬೇಕು. ಆ ಐದು ಹೆಚ್ಚೆಗಳು ಕುಟುಂಬ ಪ್ರಬೋಧನ, ಪರಿಸರಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶೀ ಜೀವನಶೈಲಿ, ನಾಗರಿಕ ಶಿಷ್ಟಾಚಾರ. ಒಂದು ಕಾಲದಲ್ಲಿ ದೇಶಕ್ಕಾಗಿ ಗಲ್ಲಿಗೇರಬೇಕಿತ್ತು, ನಮ್ಮ ಪೂರ್ವಜರು ನಗುನಗುತ್ತ ಗಲ್ಲಿಗೇರಿದರು. ಆದರೆ, ಇಂದು 24 ಘಂಟೆ ದೇಶಕ್ಕಾಗಿ ಜೀವಿಸಬೇಕು. ದೈನಂದಿನ ಜೀವನದಲ್ಲಿ ದೇಶಭಕ್ತಿಯೆಂದರೆ, ಸಮಾಜದ, ದೇಶದ ಕಾಳಜಿಯೊಂದಿಗೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ತನ್ನನ್ನು ತಾನು ರೂಪಿಸಿಕೊಳ್ಳುವುದು. ಶಿಕ್ಷಣ ಹಾಗೂ ಸಂಸ್ಕಾರ ತಂತ್ರಜ್ಷಾನ ಹಾಗೂ ಆಧುನಿಕತೆಯು ಶಿಕ್ಷಣದೊಂದಿಗೆ ವಿರೋಧವಲ್ಲ. ಮಾನವ ಬೆಳೆದಂತೆ ಹೊಸ ತಂತ್ರಜ್ಞಾನ ಬರುತ್ತದೆ, ಅದನ್ನು ತಡೆಯಲಾಗದು. ಉಪಯೋಗಿಸುವುದು ಮನುಷ್ಯನ ಕೈಯಲ್ಲಿದೆ. ಅದರ ದುಷ್ಟರಿಣಾಮಗಳಿಂದ ಬಚಾವಾಗಬೇಕು. ತಂತ್ರಜ್ಞಾನದ ಮಾಲೀಕ ಮನುಷ್ಯನಾಗಬೇಕೆ ವಿನಃ, ತಂತ್ರಜ್ಞಾನವೇ ಮನುಷ್ಯನ ಮಾಲೀಕ ಆಗಬಾರದು. ಪೊಲೀಸರು ಲಾಠಿಯನ್ನು ಚಲಾಯಿಸಬೇಕೆ ವಿನಃ ಲಾಠಿಯೇ ಪೊಲೀಸರನ್ನು ನಡೆಸುವಂತಾಗಬಾರದು. ಕೇವಲ ಸಾಕ್ಷರತೆ, ಮಾಹಿತಿ ಶಿಕ್ಷಣ ಮಾತ್ರವಲ್ಲ, ಮನುಷ್ಯ ಸುಸಂಸ್ಕೃತ, ವಾಸ್ತವಿಕವಾಗಬೇಕು ಎಂಬ ಅರಿವು ಬಂದರೆ ವಿಷವನ್ನು ಹೇಗೆ ಔಷಧ ಸಿದ್ಧಪಡಿಸಬೇಕು ಎನ್ನುವುದನ್ನು ಕಲಿತುಕೊಳ್ಳುತ್ತಾನೆ. ಹೊಸ ಶಿಕ್ಷಣ ವ್ಯವಸ್ಥೆ ಏಕೆ ತರಲಾಯಿತು? ಬ್ರಿಟಿಷರ ಗುಲಾಮರಾಗಿ ಎಂದೆAದೂ ಇರಬೇಕು ಎಂದು ಮಾಡಿದರು. ಇವರ ಮೇಲೆ ಹೇಗೆ ಆಡಳಿತ ನಡೆಸಬೇಕು ಎಂಬ ಆಲೋಚನೆಯಲ್ಲಿ ಇದನ್ನು ಮಾಡಿದರು. ಆದರೆ ಈಗ ಸ್ವತಂತ್ರವಾಗಿದ್ದೇವೆ, ಕೇವಲ ರಾಜ್ಯ ನಡೆಸುವುದು ಮಾತ್ರವಲ್ಲ, ಪ್ರಜಾ ಪಾಲನೆ ಮಾಡಬೇಕು. ಹೀಗಾಗಿ ನಮ್ಮ ಇತಿಹಾಸದ ವಿಚಾರಗಳು ಮಕ್ಕಳಿಗೆ ಸಿಗಬೇಕು. ನಾವು ಈ ಹಿಂದೆ ಸಾಧಿಸಿದ್ದೇವೆ, ಭವಿಷ್ಯದಲ್ಲೂ ಮಾಡಬಲ್ಲೆವು ಎಂಬ ವಿಶ್ವಾ ಮೂಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ವಿಚಾರವನ್ನು ತರಲಾಗಿದೆ, ಒಂದಷ್ಟು ಅನುಷ್ಠಾನ ಆಗುತ್ತಿದೆ ಎಂದು ಕೇಳಿದ್ದೇನೆ. ಭಾರತೀಯ ಜ್ಞಾನ ಪರಂಪರೆ ಸAಘಟನೆಯಾಗಿ ಏಕಾತ್ಮತಾ ಸ್ತೋತ್ರವನ್ನು ಹೇಳುತ್ತೇವೆ. ಅದರಲ್ಲಿ ಮೊದಲು ಭಗವಂತ, ಮಾತೃಭೂಮಿ, ನದಿಗಳು, ಬೆಟ್ಟಗಳ ನಂತರ ಋಷಿಪರಂಪರೆಯಿAದ ವೈಜ್ಞಾನಿಕತೆವರೆಗೆ ಎಲ್ಲರ ಹೆಸರಿದೆ. ಇಡೀ ವೈಜ್ಞಾನಿಕ ಪರಂಪರೆಯನ್ನು ಪ್ರತಿದಿನವೂ ಸ್ಮರಿಸಲಾಗುತ್ತದೆ. ವರ್ಗದಲ್ಲಿ ಪ್ರತಿ ಹೆಸರಿನ ಕುರಿತು ಮಾಹಿತಿ ನೀಡುತ್ತೇವೆ. ಹಾಗೂ ಈ ಪಟ್ಟಿಯನ್ನು ಕೆಲವು ಬದಲಾವಣೆ ಮಾಡುತ್ತೇವೆ. ಅಧ್ಯಾತ್ಮದಿಂದ ವಿಜ್ಞಾನದವರೆಗೆ ಚರ್ಚಿಸುತ್ತೇವೆ. ಶಿಕ್ಷಣದಲ್ಲಿ ಕೆಲಸ ಮಾಡುತ್ತಿರುವ ನಾಲ್ಕು ಸಂಘಟನೆಗಳ ಕಾರಣದಿಂದಾಗಿ ಸಾಕಷ್ಟು ಬದಲಾವಣೆ ಆಗಿದೆ. ಐಕೆಎಸ್ ಎಂದು ಹೇಳುವುದು ಹಿಂಜರಿಗೆ ಆಗಿತ್ತು, ಆದರೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಈ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಿದರೆ ಒಳ್ಳೆಯದು, ಆಯಾ ಸಂಘಟನೆಗಳು ನೋಡಿಕೊಳ್ಳುತ್ತವೆ. ಉದ್ಯೋಗ: ನೌಕರಿಗಾಗಿ ಶಿಕ್ಷಣ ಎನ್ನುವ ಮಾನಸಿಕತೆ ಇದಕ್ಕೆ ಕಾರಣ. ಕೃಷಿ ವಿವಿಯಲ್ಲಿ ನಾನು ಓದಿದ ಸಂಸ್ಥೆಯಲ್ಲಿ ಡಿಗ್ರಿ ಪಡೆದವರು ನೌಕರಿಗೆ ಹೋದರು. ಬ್ಯಾಂಕ್ನಲ್ಲಿ ಲೋನ್ ಅಧಿಕಾರಿಗಳಾಗಿ ಕಾಗದದ ಮೇಲೆ ಇಂಕಿನ ಕೃಷಿ ಮಾಡುತ್ತಿದ್ದಾರೆ. ಅವರ್ಯಾರೂ ವ್ಯವಸಾಯಕ್ಕೆ ಹಿಂದಿರುಗಲಿಲ್ಲ. ಸರ್ಕಾರಿ ನೌಕರಿಯೇ ಬೇಕು, ಮನೆಯ ಬಳಿಯಲ್ಲೇ ಕಚೇರಿ ಇರಬೇಕು ಎಂಬ ಮಾನಸಿಕತೆ. ವಾಸ್ತವದಲ್ಲಿ ದುಡಿಯಲು ಕೌಶಲ ಬೇಕು. ನೌಕರನಲ್ಲ, ನೌಕರಿ ನೀಡುವವರಾಗಬೇಕು ಎಂದು ಹೋರಾಟಕ್ಕೆ ಅರ್ಧ ಸಮಸ್ಯೆ ಮುಗಿಯುತ್ತದೆ. ಯಾವುದೇ ಸಮಾಜವು ಶೇ.30ಕ್ಕಿಂತ ಹೆಚ್ಚು ಉದ್ಯೋಗ ನೀಡಲಾಗದು, ಕೆಲಸದಲ್ಲಿ ಮೇಲು ಕೀಳು ಎಂಬ ಭಾವನೆ ಪ್ರಾಚೀನ ಕಾಲದಲ್ಲೇ ಬಂದುಬಿಟ್ಟಿದೆ. ಕೆಲವು ಕೆಲಸ ನೀಚ ಎನ್ನುವ ಭಾವನೆ ಆರಂಭವಾದಾಗಿನಿAದಲೇ ಕುಸಿತ ಆರಂಭವಾಗಿದೆ. ಉದ್ಯೋಗ ಗೌರವ ಹೆಚ್ಚಬೇಕಾಗಿದೆ. ಶ್ರಮದಿಂದ ದುಡಿಯುವವರಿಗೆ ಸನ್ಮಾನ ಮಾಡಬೇಕು. ರೈತರಿಗೆ ಹುಡುಗಿ ನೀಡುವುದಿಲ್ಲ. ಓದಿದ್ದರೂ, ಹಣವಿದ್ದರೂ ನೀಡುವುದಿಲ್ಲ. ನೌಕರಿಯೇ ಜೀವನ ಎನ್ನುವುದನ್ನು ತೆಗೆದುಹಾಕಬೇಕು. ತಮ್ಮ ಕಾಲಮೇಲೆ ನಿಲ್ಲಬೇಕು ಎಂಬುದನ್ನು ತಿಳಿಸಬೇಕು. ಈ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳಬೇಕು. ಡೆಮಾಗ್ರಫಿ, ಡಿಎನ್ಎ, ಅಖಂಡ ಭಾರತ: ಡೆಮಾಗ್ರಫಿ ಬದಲಾಗಿದ್ದರಿಂದ ದೇಶ ವಿಭಜನೆಯಾಯಿತು. ಇಂಡೋನೇಷ್ಯಾದಲ್ಲೂ ಆಯಿತು. ಸಂಖ್ಯೆಗಿAತಲೂ ಉದ್ದೇಶ ಏನೆಂಬುದರ ಕುರಿತು ಅನುಮಾನ ಇರುತ್ತದೆ. ಮೊದಲನೆಯದ್ದು ಸಂಖ್ಯೆಯದ್ದು. ಅಸಂತುಲನೆಗೆ ಕಾರಣವೇನು? ಮೊದಲನೆಯದ್ದು ಮತಾಂತರ, ಇದು ಭಾರತದ ಪರಂಪರೆಗೆ ಅನುಗುಣವಾಗಿಲ್ಲ. ಕ್ಯಾಥೋಲಿಕ್ಗಳು ನಾವು ಮಾಡುವುದಿಲ್ಲ ಎನ್ನುತ್ತಾರೆ. ಮದರಸಾ ಟೀಚರ್ಸ್ಗಳೊಂದಿಗೆ ಮಾತನಾಡುತ್ತಿದ್ದಾಗ, ಅವರೂ ಮತಾಂತರಕ್ಕೆ ವಿರೋಧಿಸಿದರು. ಇದು ಸರಿಯೆನ್ನಿಸಿದರೆ ಇದು ಆಗಬಾರದು. ಮತ ಅವರವರ ಆಯ್ಕೆ. ಇದನ್ನು ತಡೆಯಬೇಕು. ಡಿಎನ್ಎ ಒಂದೆ, ಆದರೆ ವ್ಯವಸ್ಥೆ ಇದೆಯಲ್ಲ? ಯುರೋಪ್ನಲ್ಲಿ ಒಂದೇ ಡಿಎನ್ಎ ಮೂಲ ಹೊಂದಿರುವ ಅನೇಕ ದೇಶಗಳಿವೆ. ಒಂದೇ ಡಿಎನ್ಎ ಇದ್ದಮೇಲೆ ಅನುಮತ ಪಡೆದು ಏಕೆ ಬರಬಾರದು? ಅನುಮತಿ ದೊರಕದಿದ್ದರೆ ಬರುವಂತಿಲ್ಲ. ನುಸುಳುವುದು ತಪ್ಪು. ಬಂದಮೇಲೆ ತೊಂದರೆ ಆಗುತ್ತದೆ ಎಂಬುದು ಅನುಭವಕ್ಕೆ ಬಂದಿದೆ. ಕೆಲವನ್ನು ಸರ್ಕಾರ ತಡೆಯಬಹುದು, ಆದರೆ ನಮ್ಮ ದೇಶದಲ್ಲಿ ಕೆಲಸವನ್ನು ನಮ್ಮ ದೇಶದ ಜನರಿಗೆ ನೀಡಬೇಕು ಎಂಬುದನ್ನು ನಾವು ತಿಳಿಯಬೇಕು. ನಮ್ಮ ದೇಶದಲ್ಲಿರುವ ಮುಸ್ಲಿಮರಿಗೇ ನೌಕರಿ ನೀಡಿ ಅನುಮತಿ ಪಡೆದು ಯಾವ ದೇಶದ್ದಾದರೂ ಇರಬಹುದಲ್ಲ? ಮೂರನೆಯದ್ದು ಜನ್ಮದಾತ ಕಾರಣ. ವಿಶ್ವದಲ್ಲಿ ಎಲ್ಲ ಶಾಸ್ತçಗಳೂ ಹೇಳುವುದು, 3ಕ್ಕಿಂತ ಕಡಿಮೆ ಟಿಎಫ್ಆರ್ ಇದ್ದರೆ ಇಲ್ಲವಾಗುತ್ತದೆ. ಎಲ್ಲ ಸಮಾಜಗಳೂ ಹೀಗೆ ಮಾಡಬೇಕು. ವೈದ್ಯರು ಹೇಳುವಂತೆ, ಮೂರು ಮಕ್ಕಳಾದರೆ ತಂದೆ ತಾಯಿ ಹಾಗೂ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಇಗೋ ಮ್ಯಾನೇಜ್ಮೆಂಟ್ ಸರಿಯಾಗಿ ಆಗುವುದರಿಂದ ಸಾಕಷ್ಟು ಸಮಸ್ಯೆ ಸರಿಯಾಗುತ್ತದೆ ಎಂದರು. ದೇಶದ ಸರಾಸರಿ 2.1 ಎಂದು ಹೇಳುತ್ತದೆ. ಅಂದರೆ ಮೂರು ಮಕ್ಕಳು ಇರಬೇಕು ಎನ್ನುವುದನ್ನು ಪ್ರತಿ ನಾಗರಿಕನೂ ನೋಡಬೇಕು. ದೇಶದ ದೃಷ್ಟಿಯಿಂದ ಇದನ್ನು ಹೇಳುತ್ತಿದ್ದೇನೆ. ಇನ್ನೊಂದೆಡೆ ಜನಸಂಖ್ಯೆ ಸಂಪನ್ಮೂಲವೇನೋ ಸರಿ, ಹೊರೆಯೂ ಆಗಬಹುದಲ್ಲ? ಎಲ್ಲರಿಗೂ ಆಹಾರ ನೀಡಬೇಕಲ್ಲ? ಅದಕ್ಕಾಗಿಯೇ ಪಾಪ್ಯುಲೇಷನ್ ನೀತಿ ಬೇಕಾಗಿದೆ. ನಿಯಂತ್ರಿತ ಹಾಗೂ ಅಗತ್ಯ ಇರಬೇಕು. 3ಕ್ಕಿಂತ ತೀರಾ ಹೆಚ್ಚು ಆಗಬಾರದು. ಇದು ಎಲ್ಲರೂ ಒಪ್ಪಬೇಕಾದ ವಿಚಾರ. ಎಲ್ಲರ ಜನಸಂಖ್ಯೆಯೂ ಕಡಿಮೆ ಆಗುತ್ತಿದೆ. ಇದಕ್ಕಾಗಿ ಹೊಸ ಪೀಳಿಗೆಯನ್ನು ಸಿದ್ಧಗೊಳಿಸಬೇಕು. ವಿಭಜನೆಯ ವಿರೋಧವನ್ನು ಸಂಘ ಮಾಡಿದೆ. ದೇಶವಿಭಜನೆಯ ದುರಂತ ಕತೆ ಪುಸ್ತಕವಿದೆ. ವಿಭಜನೆಯಲ್ಲಿ ಯಾರ ಪಾತ್ರ ಎಂಥದ್ದು, ಸಂಘದ ವಿಚಾರವೇನು ಎಂದು ಪುಸ್ತಕ ಓದಿದರೆ ತಿಳಿಯುತ್ತದೆ. ಸಂಘ ವಿರೋಧ ಮಾಡಿತ್ತು ಆದರೆ ಸಂಘದ ಶಕ್ತಿ ಏನಿತ್ತು? ಇಡೀ ದೇಶ ಗಾಂಧಿಯವರ ಹಿಂದೆ ಇತ್ತು. ಗಾಂಧೀಜಿಯೂ ಮಾನ್ಯ ಮಾಡಿರಲಿಲ್ಲ, ಆದರೆ ಅವರ ಕೈಯನ್ನೂ ಮೀರಿ ನಡೆದಾಗ ಸಂಘ ಏನೂ ಮಾಡಲಾಗಲಿಲ್ಲ. ಚಟ್ಟಾನ್ ಪೇಪರ್ ಲಾಹೀರ್ನಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್, ವಿಭಜನೆಯ ಪರಿಣಾಮವನ್ನು ಅವರು ನೀಡಿದ್ದರು, ಅದು ಇಂದು ಸತ್ಯವಾಗಿದೆ. ಅಂಥ ಜನರ ಮಾತನ್ನೂ ಯಾರೂ ಕೇಳಲಿಲ್ಲ. ಆದರೆ ಭಾರತ ಅಖಂಡ ಎನ್ನುವುದು ಸತ್ಯ. ಬೇಕೆಂದೇ ಸತ್ಯವನ್ನು ನಿರಾಕರಿಸುವವರು ಏನಾಗುತ್ತಿದ್ದಾರೆ? ಅವರೆಲ್ಲರೂ ಸುಖಿಗಳಾಗಿದ್ದಾರ? ಹಾಗಾದರೆ ಪ್ರಯತ್ನಗಳೇ ಆಗಿಲ್ಲವೇ? ಪರಿಹಾರ ಸಿಕ್ಕಿಲ್ಲ. ಸಂಸ್ಕೃತಿ, ಪೂರ್ವಜನರು, ಮಾತೃಭೂಮಿಯಿಂದ ಎಲ್ಲರೂ ಒಂದೇ ಎಂದು ವ್ಯವಹರಿಸಿದರೆ ಎಲ್ಲವೂ ಸರಿಯಾಗುತ್ತದೆ. ಅಖಂಡ ಭಾರತ ಎನ್ನುವುದು ರಾಜಕೀಯ ಮಾತ್ರವಲ್ಲ. ಅಖಂಡ ಭಾರತ ಇದ್ದಾಗಲೂ ಒಂದೇ ಆಡಳಿತ ಇರಲಿಲ್ಲ. ಆದರೆ ಎರಡೂ ದೇಶಗಳ ನಾಗರಿಕರು ಎಲ್ಲಿ ಬೇಕಾದರೂ ಹೋಗಬಹುದಾಗಿತ್ತು. ಆ ಭಾವನೆ ಮತ್ತೆ ಬಂದರೆ ಆ ಸಮಯದ ರಾಜಕೀಯ ಆಡಳಿತ ಏನೇ ಇದ್ದರೂ ಎಲ್ಲರೂ ಸುಖವಾಗಿರಬಹುದು, ಎಲ್ಲರಿಗೂ ಸ್ನೇಹಿತರು ಹೆಚ್ಚುತ್ತಾರೆ. ಸಾಮಾಜಿಕ ಸಮರಸತೆ ಮತ್ತು ಅಸ್ಮಿತೆ: ಜಾತಿವಾದ ಎನ್ನುವುದು ಅಡೆತಡೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಾತಿ-ವರ್ಣ ಎನ್ನುವುದು ಹಿಂದೊಮ್ಮೆ ವ್ಯವಸ್ಥೆ ಆಗಿತ್ತು. ಆ ವ್ಯವಸ್ಥೆ ಈಗ ಇಲ್ಲ. ಅದು ಅವ್ಯವಸ್ಥೆ ಆಗಿದೆ. ಜಾತಿ-ವರ್ಣದ ಹೆಸರಿನಲ್ಲಿ ಅವುಗಳ ಕುರಿತ ದುರಭಿಮಾನ ಆಡವಾಡುತ್ತಿದೆ. ವಾಸ್ತವದಲ್ಲಿ ಕಾಲಸುಸಂಗತ ವ್ಯವಸ್ಥೆ ಬರಬೇಕಿದೆ, ಅದು ಶೋಷಣಮುಕ್ತ ಹಾಗೂ ಸಮತಾಯುಕ್ತ ಆಗಬೇಕಿದೆ. ಕಾಲಬಾಹ್ಯವಾಗಿರುವುದು ಹೋಗುತ್ತದೆ, ಅದರ ಯೋಚನೆ ಮಾಡಬೇಕಿಲ್ಲ. ಸಲೀಸಾಗಿ ಹೋಗಲಿ ಎನ್ನುವುದು ಎಲ್ಲರುದ್ದೇಶವಾಗಿರಬೇಕು. ಮೇಳರಿಮೆ ಹಾಗೂ ಕೀಳರಿಮೆಗಳು ಮುಕ್ತಾಯವಾಗಬೇಕಿದೆ. ಮೀಸಲಾತಿ: ಮೀಸಲಾತಿ ಮುಂತಾದ ವಿಷಯಗಳನ್ನು ತಿಳಿಯಲು ಮನಸ್ಸಿನಲ್ಲಿ ಸಂವೇದನೆ ಬೇಕು. ಮೀಸಲಾತಿ ಕುರಿತು ನಮ್ಮಲ್ಲಿ ನಿರ್ಣಯ ಆಗಬೇಕಾದಾಗ ನಮ್ಮಲ್ಲಿಯೂ ಸಮಾಜದಂತೆಯೇ ವಿರೋಧ ವ್ಯಕ್ತವಾಯಿತು. ಒಂದು ಅವಧಿ ನೋಡಿದ ಬಾಳಾಸಾಹೇಬ್ ದೇವರಸ್, ಸಾವಿರಾರು ವರ್ಷಗಳಿಂದ ಈ ರೀತಿ ದೌರ್ಜನ್ಯ ಆಗಿರುವ ಕುಟುಂಬದಲ್ಲಿ ನಿಮ್ಮ ಜನನವಾಗಿದೆ ಎಂದು ಕಲ್ಪನೆ ಮಾಡಿಕೊಂಡು ಆಲೋಚಿಸಿ ಎಂದರು. ಮುಂದಿನ ಅವಧಿಯಲ್ಲಿ ಮೀಸಲಾತಿ ಕುರಿತ ನಿರ್ಣಯ ಅಂಗೀಕಾರವಾಯಿತು. ತರ್ಕ ಕುತರ್ಕದಲ್ಲಿ ಪರಿಹಾರ ಸಿಗುವುದಿಲ್ಲ. ದೀನದಯಾಳರು ಹೇಳಿದರು, ಗುಂಡಿಯಲ್ಲಿ ಬಿದ್ದವರು ಮೇಲೆ ಬರಲು, ಮೇಲಿರುವವರು ಕೆಳಗೆ ಬಗ್ಗಿದರೆ ಮಾತ್ರ ಸಾಧ್ಯವಾಗುತ್ತದೆ. ಸಾವಿರ ವರ್ಷ ಇದನ್ನು ನಮ್ಮ ಜನರು ಅನುಭವಿಸಿದ್ದಾರೆಂದರೆ ಕನಿಷ್ಟ 200 ವರ್ಷ ಸಹಿಸಲು ಏನು ಕಷ್ಟ ಎಂದು ನಾನು ಅನೇಕ ಬಾರಿ ಹೇಳಿದ್ದೇನೆ. ಸ್ವಲ್ಪ ನಷ್ಟ ಆಗಬಹುದು, ಆದರೆ ಇದನ್ನು ತಿಳಿಯದಿದ್ದರೆ ಸರಿಯಾಗದು. ಸಂವಿಧಾನ ಸಮ್ಮತ ಮೀಸಲಾತಿಗೆ ಸಂಪೂರ್ಣ ಸಹಮತಿ ಇದೆ. ಮೀಸಲಾತಿ ಪಡೆಯುವವರು ಹೇಳುವವರೆಗೂ ಅವರ ಸಮರ್ಥನೆಗೆ ಇರುತ್ತೇವೆ. ಅತ್ಯಾಚಾರಗಳು, ಅನಾಚಾರಗಳು ನಿಲ್ಲಬೇಕು. ಇಂಥದ್ದು ನಡೆದಾಗ ಸ್ವಯಂಸೇವಕರು ವಿರೋಧಿಸುತ್ತಾರೆ, ಸತ್ಯ ಹಾಗೂ ನ್ಯಾಯದ ಪಕ್ಷದಲ್ಲಿ ನಿಲ್ಲಬೇಕು. ಆದರೆ ಎಲ್ಲ ಕಡೆಯೂ ಸಂಘದ ಪ್ರಭಾವ ಒಂದೇ ರೀತಿ ಇಲ್ಲ. ಇದು ಎಲ್ಲ ಸ್ವಯಂಸೇವಕರು ಮಾಡಬೇಕೆಂದು ಅಪೇಕ್ಷೆ ಇದೆ. ಪ್ರತಿ ವರ್ಗದ ಉನ್ನತಿಗಾಗಿ ಆ ಸಮಾಜದ ನಾಯಕತ್ವ ಮುಂದೆ ಬರಬೇಕು, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ಇದರಲ್ಲಿ ನ್ಯಾಯ, ಸತ್ಯದ ಪಕ್ಷದಲ್ಲಿ ಸಂಘ ಇರುತ್ತದೆ. ಗ್ರಂಥಗಳಲ್ಲಿ ಈ ಉಲ್ಲೇಖ ಇದ್ದರೆ ನಾವು ಅದನ್ನು ಒಪ್ಪುವುದಿಲ್ಲ. ಆದರೆ ಉಡುಪಿ ಧರ್ಮಸಂಸತ್ತಿನಲ್ಲಿ ನಮ್ಮ ಸಂತರು, ಹಿಂದೂ ಧರ್ಮಶಾಸ್ತ್ರದಲ್ಲಿ ಇದಕ್ಕೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ. ಹಾಗೊಂದು ವೇಳೆ ಉಲ್ಲೇಖ ಇದ್ದರೆ ಅದನ್ನು ತಪ್ಪಾಗಿ ಅರ್ಥೈಸಿರಬಹುದು. ಏಕೆಂದರೆ ಆ ಗ್ರಂಥಗಳಿಗೆ ಅನುಗುಣವಾಗಿ ಹಿಂದೂ ಆಚರಣೆ ಮಾಡಿದ್ದಾರೆ ಎನ್ನುವುದು ಕಡಿಮೆ. ಶಾಸ್ತçದಲ್ಲಿ ಇದ್ದರೂ ಅದೇ ರೀತಿ ನಾವು ನಡೆಯುವುದಿಲ್ಲ. ಲೋಕಕ್ಕೆ ಯಾವುದು ಅನುಕೂಲವೋ ಹಾಗೆ ನಡೆಯುತ್ತೇವೆ. ಅದಕ್ಕಾಗಿ ನಮ್ಮಲ್ಲಿ ಒಂದೇ ಗ್ರಂಥ ಇಲ್ಲ. ಗ್ರಂಥಗಳ ವ್ಯಾಖ್ಯಾನವನ್ನೂ ಅನೇಕರು ವಿಭಿನ್ನವಾಗಿ ಮಾಡಿದ್ದಾರೆ. ಮನುಸ್ಮೃತಿಗೆ ಅನುಗುಣವಾಗಿ ಇಡೀ ದೇಶ ನಡೆಯಿತು ಎಂಬ ಯಾವುದೇ ಕಾಲ ಇಲ್ಲ. ಶ್ರಮ ಗೌರವದ ಭಾವನೆ ಕಡಿಮೆ ಆಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ, ಆದರೆ ಯಾವಾಗಿನಿಂದ ಗೊತ್ತಿಲ್ಲ. ಸಮಾಜದ ಎಲ್ಲರೂ ಸಮಾನ ಕೆಲಸ ಮಾಡುತ್ತಾರೆ, ಮೇಲು ಕೀಳು ಇಲ್ಲ ಎಂಬ ಭಾವನೆ ಜಾಗೃತಗೊಳಿಸಬೇಕು. ಗ್ರಂಥಗಳ ಪ್ರಭಾವ ಇದರಲ್ಲಿ ಅತ್ಯಂತ ಕಡಿಮೆ. ಸ್ಮೃತಿ ಬದಲಾಗುತ್ತದೆ. ಸ್ಮೃತಿಯ ಅವಶ್ಯಕತೆ ಇದೆಯೆಂದು ಭಾವಿಸಿದರೆ ಎಲ್ಲ ವರ್ಗ, ಪಂಥ, ಜಾತಿ ಉಪಪಂಥದ ಹೊಸ ಸಮೃತಿ ಉತ್ಪನ್ನ ಮಾಡಬೇಕೆನ್ನಿಸುತ್ತದೆ. ಜಾತಿ ಗಣತಿಯಿಂದ ಜಾತಿ ಭಾವನೆ ಗಟ್ಟಿಯಾಗುತ್ತದೆ, ಆದರೆ ಸಮಾಜದಲ್ಲಿ ವಿಭಾಜನ ಆಗಬಾರದೆಂದರೆ ಸದ್ಭಾವನಾ ಸಭೆಗಳಿವೆ. ಭಾಷೆ: ಭಾರತದ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಒಂದು ರಾಷ್ಟ್ರೀಯ ಎಂದರೆ ಉಳಿದವು ಏನು? ಒಂದು ವ್ಯವಹಾರ ಭಾಷೆ ಬೇಕು, ಇದು ಸತ್ಯ. ಅದು ವಿದೇಶಿ ಆಗಬಾರದು ಅಷ್ಟೆ. ಏಕೆಂದರೆ ನಮ್ಮ ಭಾವನೆ ವಿದೇಶಿ ಭಾಷೆಗಳಲ್ಲಿ ಪ್ರಕಟಿಸಲು ಆಗುವುದಿಲ್ಲ. ಯಾವುದು ಆಗಬೇಕು? ಎಲ್ಲರೂ ಸೇರಿ ನಿರ್ಣಯಿಸಿ. ವಿವಾದ ಮಾಡುವ ಅಗತ್ಯವಿಲ್ಲ. ಶಬ್ದ ಅನೇಕ, ಭಾವ ಒಂದೆ ತಿರುಕ್ಕುರಳ್, ಸರ್ವಜ್ಞ, ತುಕಾರಾಂ ಮಹಾರಾಜರ ಅಭಂಗ, ರಾಮಚರಿತಮಾನಸವನ್ನು ನೋಡಿದರೆ ಆಚರಣೆಯ, ಆದರ್ಶದ ಉದಾಹರಣೆಗಳೆಲ್ಲವೂ ಸಮಾನ. ನಮ್ಮ ಮಾತೃಭಾಷೆ ಚೆನ್ನಾಗಿ ಬರಬೇಕು, ಪ್ರದೇಶದ ಭಾಷೆ ಚೆನ್ನಾಗಿ ಬರಬೇಕು, ವ್ಯವಹಾರದ ಭಾಷೆ ಕಲಿಯಬೇಕು. ಇಷ್ಟವಿದ್ದರೆ ಇನ್ನೂ ಹೆಚ್ಚು ಭಾಷೆ ಕಲಿಯಬಹುದು. ಭಾರತ ಮೂಲದ ಮತಪಂಥಗಳು: ಭಾರತ ಬುದ್ಧನ ದೇಶ, ಶಾಂತಿಯೇ ಅಪೇಕ್ಷೆ. ಆದರೆ ಬೇರೆ ದೇಶಗಳು ಬುದ್ಧನ ದೇಶಗಳಲ್ಲ, ಹಾಗಾಗಿ ಶಸ್ತçಗಳ ಅಗತ್ಯವಿರುತ್ತದೆ. ಶಸ್ತçಬಲ ಹೆಚ್ಚಿಸಿಕೊಳ್ಳುವುದು ಯಾರನ್ನೋ ಹೊಡಯಲು ಅಲ್ಲ. ಹಾಗೊಂದು ವೇಳೆ ಅದು ಸತ್ಯವಾಗಿದ್ದರೆ ಇಷ್ಟರವೇಳೆಗೆ ಅದು ಕಾಣಬೇಕಾಗಿತ್ತಲ್ಲ? ನಮ್ಮ ಸಾಮರ್ಥ್ಯ ಇದ್ದಾಗಿಯೂ ಯುದ್ಧವನ್ನು ನಿಲ್ಲಿಸಿದ್ದೇವೆ. ರಕ್ಷಣೆಗಾಗಿ ಶಸ್ತçಗಳು ಬೇಕು. ಸಂಘಟನೆ ಹಿAಸೆ ಮಾಡುವ ಯಾವುದೇ ಸಂಘಟನೆ ಇಷ್ಟು ವಿಶಾಲ ವ್ಯಾಪ್ತಿಯಲ್ಲಿ ಹರಡಲು ಸಾಧ್ಯವಿಲ್ಲ. ಸಂಘದ ಮೇಲೆ ಆರೋಪ ಮಾಡುವವರು ಇದನ್ನು ನೋಡಬೇಕು. ಸಂಘದ ಮೇಲೆ ಈ ಆರೋಪವು ಸವೆದ ನಾಣ್ಯವಾಗಿದೆ, ಅದನ್ನು ಬಳಸುವುದು ಬೇಡ. ಸಾಮಾಜಿಕ ಆಂದೋಳನದಲ್ಲಿ ಸಂಘವು ಭಾಗವಹಿಸುತ್ತದಾದರೂ ಹೆಸರಿನ ಹಿಂದೆ ಹೋಗುವುದಿಲ್ಲ. ಎಲ್ಲಿಯೇ ಒಳ್ಳೆಯ ಕಾರ್ಯ ನಡೆಯುತ್ತಿದ್ದರೂ ಅವರು ಸೇರಿಕೊಂಡು ಕೆಲಸ ಮಾಡಬೇಕೆಂದು ಸ್ವಯಂಸೇವಕರಿಗೆ ಸೂಚನೆ ಇದೆ. ಆದರೆ ಅದರ ಕ್ರೆಡಿಟ್ ಸಂಘ ಪಡೆಯುವುದಿಲ್ಲ. ಸಮಾಜ ಹಾಗೂ ಆಯಾ ಸಂಘಟನೆಯೇ ಇದೆಲ್ಲದರ ಶ್ರೇಯಸ್ಸು ಸಲ್ಲುತ್ತದೆ. ಅಂತಾರಾಷ್ಟ್ರೀಯ ಭೂಮಿಕೆ: ಮತಪಂಥ ಸಂಪ್ರದಾಯಗಳ ಪ್ರಸಾರಕ್ಕೆ ವಿದೇಶಿ ಹಣ ಬರುವುದಕ್ಕೆ ಅಂಕುಶ ಹಾಕಬೇಕು. ಯಾವ ಉದ್ದೇಶಕ್ಕೆ ಆ ಹಣ ಆಗಮಿಸಿದೆಯೋ ಅದನ್ನು ಅದೇ ಕಾರ್ಯಕ್ಕೆ ವೆಚ್ಚ ಮಾಡಲಾಗುತ್ತಿದೆಯೇ ಎಂದು ಸರ್ಕಾರ ನೋಡಬೇಕು. ಇನ್ನೂ ಅನೇಕ ದೇವಾಲಯಗಳು ಖಾಸಗಿ ಒಡೆತನದಲ್ಲಿವೆ. ನಾವೇ ದೇವಾಲಯಗಳನ್ನು ನಿರ್ವಹಿಸಬಲ್ಲೆವು ಎಂಬ ವಿಶ್ವಾಸ ಭಕ್ತರಲ್ಲಿ ಮೂಡಬೇಕು. ಕೆಲವು ಸರ್ಕಾರಿ ಅಧೀನದ ದೇವಾಲಯಗಳು ಚೆನ್ನಾಗಿವೆ, ಕೆಲವು ಚೆನ್ನಾಗಿ ನಡೆಯುತ್ತಿಲ್ಲ. ಕೆಲವು ಖಾಸಗಿ ದೇವಾಲಯಗಳು ಚೆನ್ನಾಗಿ ನಡೆಯುತ್ತಿವೆ, ಕೆಲವು ನಡೆಯುತ್ತಿಲ್ಲ. ಈ ವಾತಾವರಣ ನಿರ್ಮಾಣ ಮಾಡಬೇಕು. ವ್ರತದ ದಿನ ಮಾಂಸಾಹಾರ ಸೇವಿಸಬಾರದು ಎಂದು ಜನರೇ ತೀರ್ಮಾನಿಸುತ್ತಾರೆ. ಅಂತಹ ಸಮಯದಲ್ಲಿ ಕೆಲವರ ಭಾವನೆಗಳಿಗೆ ಧಕ್ಕೆ ಆಗಬಹುದು, ಅದಕ್ಕೆ ಆಲೋಚನೆ ಮಾಡಬೇಕು. ಮಾಂಸ ಸೇವಿಸುವವರು ಪ್ರತಿನಿತ್ಯ ಸೇವಿಸುತ್ತಾರೆ ಎಂದೇನೂ ಇಲ್ಲ. ಇದರಲ್ಲಿ ತಪ್ಪೇನಿಲ್ಲ. ಆಂದೋಳನದಲ್ಲಿ ಸಂಘ ತೊಡಗಿಸಿಕೊಳ್ಳುವುದಿಲ್ಲ. ಆದರೆ ಹಿಂದೂ ಮಾನಸದಲ್ಲಿ ಕಾಶಿ, ಮಥುರಾ, ಅಯೋಧ್ಯಾ ಕುರಿತು ಶ್ರದ್ಧೆಯಿದೆ. ಹಿಂದೂ ಸಮಾಜ ಇದರ ಆಗ್ರಹ ಮಾಡುತ್ತದೆ. ಸಂಘ ತೊಡಗುವುದಿಲ್ಲ, ಸ್ವಯಂಸೇವಕರು ಹೋಗಬಹುದು. ಆದರೆ ಈ ಮೂರನ್ನು ಹೊರತುಪಡಿಸಿ ಉಳಿದೆಡೆ ಕುರಿತು ಈಗಾಗಲೇ ಹೇಳಲಾಗಿದೆ. ಎಲ್ಲ ಕಡೆ ಶಿವಲಿಂಗ ಹುಡುಕುವುದು ಬೇಡ ಎಂದು ಹೇಳಿದ್ದೆ. ಹಿಂದೂ ಸಂಘಟನೆಯ ಪ್ರಮುಖ ಈ ಮೂರನ್ನು ಮಾತ್ರ ಕೇಳುತ್ತಿದ್ದಾರಲ್ಲ, ಅಷ್ಟನ್ನು ಏಕೆ ಕೊಡಬಾರದು ಎಂದು ಏಕೆ ಆಲೋಚನೆ ಮಾಡಬಾರದು? ಸಂಘದಲ್ಲಿ ಮೂಢನಂಬಿಕೆ ಇಲ್ಲ. ಇಲ್ಲಿ ಯಾವ ಕರ್ಮಕಾಂಡವೂ ಇರುವುದಿಲ್ಲ, ಯಾರಿಗೆ ಯಾವುದರಲ್ಲಿ ವಿಶ್ವಾಸ ಇದೆಯೋ ಅದನ್ನು ಮಾಡಬಹುದು. ಇದೇ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ ಮಾಡಿದ್ದೇವೆ, ಭಾರತಮಾತೆಯ ಪೂಜೆ ಆಯಿತು. ನಾವೇನು ಮಂತ್ರ ಹೇಳಲಿಲ್ಲವಲ್ಲ? ಸಂಘದಲ್ಲಿ ನಡೆಸುವ ಸಂಸ್ಕೃತ ಪಾಠಾಂತರಗಳು ಭಾರತ ಮಾತೆ ಕುರಿತಾಗಿಯೇ ಇರುತ್ತವೆ. ಸಂಘದ ಪ್ರಾರ್ಥನೆಯಲ್ಲಿ ಮೊದಲು ಭಾರತ ಮಾತೆ, ನಂತರ ಪ್ರಭು ಎಂದಿದೆ. ಪ್ರಭು ಎನ್ನುವುದು ರಾಮ, ಕೃಷ್ಣ, ಬುದ್ಧ ಅಲ್ಲ. ನಾವು ಕರ್ಮಕಾಂಡಕ್ಕೆ ಹೋಗುವುದಿಲ್ಲ, ಆದರೆ ಅದನ್ನು ನಂಬುವವರನ್ನು ಗೌರವಿಸುತ್ತೇವೆ. ವಿಕಸಿತ ಭಾರತಕ್ಕೆ ಮಾರ್ಗ ಹಾಗೂ ಸಂಘದ ಪಾತ್ರ: ವಿಕಸಿತ ಭಾರತಕ್ಕಾಗಿ ದೇಶಕ್ಕೆ ಜೀವಿಸುವುದು, ಶ್ರಮಿಸುವುದನ್ನು ಕಲಿಯಬೇಕು. ಉದ್ಯಮಶೀಲತೆ ಹೆಚ್ಚಾಗಬೇಕು. ಇವೆರಡು ವಿಚಾರಕ್ಕೆ ಒತ್ತು ನೀಡಿದರೆ ಬಹಳ ಪರಿಣಾಮಕಾರಿ ಆಗುತ್ತದೆ. ಇದರಿಂದಲೇ ಭಾರತ ಆತ್ಮನಿರ್ಭರ ಹಾಗೂ ವಿಕಸಿತ ಆಗುತ್ತದೆ. ನಮ್ಮ ವಿಚಾರದ ಆಧಾರದಲ್ಲಿ ನಮ್ಮ ಮಾಡೆಲ್ ನಿರ್ಮಿಸಿಕೊಂಡು ಮುನ್ನಡೆಯಬೇಕು. ನಮ್ಮದೇ ವಿಕಾಸದ ಮಾದರಿ ಇರಬೇಕು. ಆದರೆ ಇನ್ನೂ ಅದು ಪೂರ್ಣ ವಿಕಸಿತವಾಗಿಲ್ಲ, ನೀತಿ ರೂಪಿಸುವವರು ಇನ್ನೂ ಅನೇಕ ಅಡೆತಡೆಗಳನ್ನು ದಾಟಿ ಸಾಗಬೇಕು. ಮಹಿಳೆಯರಿಗಾಗಿ ರಾಷ್ಟ್ರ ಸೇವಿಕಾ ಸಮಿತಿ ನಡೆಯುತ್ತಿದೆ. ನೀವು ಮಹಿಳೆಯರ ನಡುವೆ ಕೆಲಸ ಮಾಡಿ, ನಾವು ಪುರುಷರ ನಡುವೆ ಕಾರ್ಯ ಮಾಡುತ್ತೇವೆ ಎಂದಿದ್ದೇವೆ. ಅದೇ ಮಾತನ್ನು ಪಾಲನೆ ಮಾಡುತ್ತಿದ್ದೇವೆ. ಅವರಾಗಿಯೇ ನಿರ್ಧಾರ ಬದಲಿಸಲು ಕೇಳಿದರೆ ಯೋಚಿಸುತ್ತೇವೆ. ಈಗ ಸಮಿತಿಯದ್ದೂ ಸುಮಾರು 10 ಸಾವಿರ ಶಾಖೆಗಳಾಗಿವೆ. 50ಕ್ಕೂ ಹೆಚ್ಚು ಪ್ರಚಾರಿಕಾ ಇದ್ದಾರೆ. ಉಳಿದೆಲ್ಲ ಸಂಘಟನೆ, ಸಂಸ್ಥೆ, ಗತಿವಿಧಿಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸ್ವಯಂಸೇವಕರ ಮನೆಗಳಲ್ಲಿ ಮಹಿಳೆಯರ ಬೆಂಬಲದಿಂದಲೇ ಕೆಲಸಗಳು ನಡೆಯುತ್ತಿವೆ. ಮಹಿಳೆಯರು ಎಲ್ಲ ಕೆಲಸ ಮಾಡಬಲ್ಲರು ಎನ್ನುವುದರಲ್ಲಿ ನಮಗೆ ನಂಬಿಕೆ ಇದೆ.
ಸೆಪ್ಟೆಂಬರ್ 5 - ಶಿಕ್ಷಕರ ದಿನಾಚರಣೆ ವಿಶೇಷ ಲೇಖನ ಲೇಖಕರು: - ಡಾ. ಟಿ. ಎನ್. ಲೋಕೇಶ್ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ ಅಜ್ಞಾನವೆಂಬ ಕತ್ತಲಿನಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ ಅಂಜನ ಶಲಾಕೆಯಿಂದ ಬಿಡಿಸಿದ ಶ್ರೀಗುರುವಿಗೆ ನಮಸ್ಕಾರ ಎಂಬುದೇ ಈ ಶ್ಲೋಕದ ತಾತ್ಪರ್ಯವಾಗಿದೆ. ಅದು ಸಾವಿರಾರು ವರ್ಷಗಳ ಕತ್ತಲೆಯೇ ಇರಲಿ, ಚಿಕ್ಕ ಹಣತೆಯನ್ನು ಬೆಳಗಿಸಿದ ತಕ್ಷಣವೇ ಕತ್ತಲೆ ಎಲ್ಲಾ ಮಾಯವಾಗುತ್ತದೆ. ಹಾಗೆಯೇ ಸಾವಿರ ಜನ್ಮದ ಅಜ್ಞಾನದ ಅಂಧಕಾರದಿAದ ಜೀವವು ಬಂಧಿತವಾಗಿರಬಹುದು ಆದರೆ ಜೀವನದಲ್ಲಿ ಜ್ಞಾನಜ್ಯೋತಿಯಾದ ಶ್ರೀ ಗುರುವಿನ ಆಗಮನದಿಂದ ತಕ್ಷಣ ಅಜ್ಞಾನದ ಅಂಧಕಾರವೆಲ್ಲ ಕಳೆದು ಅವನು ಜೀವನ್ಮುಕ್ತನಾಗುವನು. ಮಾನವನು ಭೌತಿಕವಾಗಿ ಎರಡು ಕಣ್ಣುಗಳನ್ನು ಹೊಂದಿದ್ದರೂ ಸಹ ಅವನಿಗೆ ಜ್ಞಾನವೆಂಬ ಮೂರನೇ ಕಣ್ಣನ್ನು ನೀಡುವವನು ಶ್ರೀ ಗುರು. ಆದ್ದರಿಂದಲೇ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಉತ್ಕೃಷ್ಟವಾದ ಸ್ಥಾನ ಕಲ್ಪಿಸಲಾಗಿದೆ. ತೈತ್ತೀರಿಯ ಉಪನಿಷತ್ ‘ಆಚಾರ್ಯ ದೇವೋಭವ’ ಎಂದಿದೆ. ಅಂದರೆ ಗುರು ಶಿಕ್ಷಣದ ಮೂಲಕ ಜೀವಸಂಸ್ಕಾರ ಮತ್ತು ಆತ್ಮಜ್ಞಾನವನ್ನು ನೀಡುವುದರಿಂದ ಗುರು ಸೃಷ್ಟಿ, ಸ್ಥಿತಿ, ಲಯ ಕರ್ತರಿಗೆ ಸಮಾನವೆಂದು ಗೌರವಿಸಲಾಗಿದೆ. ಪುರಾಣ ಮಹಾಪುರುಷರಾದ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣರು ವಿಷ್ಣುವಿನ ಅವತಾರವೆಂದು ಉಲ್ಲೇಖಿಸಲಾಗಿದ್ದರೂ ಸಹ ಗುರುವಿನ ಮಾರ್ಗದರ್ಶನದಲ್ಲಿ ತಮ್ಮ ದೈವ ಜೀವನವನ್ನು ರೂಪಿಸಿಕೊಂಡರು. ಶ್ರೀ ಗುರು ಗಂಗಾ ನದಿಯಂತೆ, ಸಾಮಾನ್ಯರು ಕಸವನ್ನೆಲ್ಲಾ ಗಂಗಾ ನದಿಗೆ ಎಸೆದರೂ ಗಂಗಾ ನದಿಯ ಪಾವಿತ್ರö್ಯತೆ ಕಡಿಮೆಯಾಗುವುದಿಲ್ಲ. ಅಂತೆಯೇ ಶ್ರೀ ಗುರು ಎಲ್ಲಾ ವಿಧದ ನೀಚ, ಅಪಮಾನ ಮತ್ತು ನಿಂದನೆಗಳಿAದ ಮೇಲಿರುವವನು ಎಂದಿದ್ದಾರೆ ಶ್ರೀರಾಮಕೃಷ್ಣ ಪರಮಹಂಸರು. ಭಕ್ತಿಭಂಡಾರಿ ಬಸವಣ್ಣನವರು ತಮ್ಮ ವಚನದಲ್ಲಿ ಗುರುವಿನ ಮಹತ್ವವನ್ನು ಹೀಗೆ ವರ್ಣಿಸಿದ್ದಾರೆ. ‘ಮಡಿಕೆಯ ಮಾಡುವಡೆ ಮಣ್ಣೆ ಮೊದಲು ತೊಡುಗೆಯ ಮಾಡುವಡೆ ಹೊನ್ನೆ ಮೊದಲು ಶಿವಪಥವನರಿವಡೆ ಗುರುಪಥವೇ ಮೊದಲು’ ಚೈತನ್ಯನು, ಶಾಶ್ವತನು, ಶಾಂತನು ಆಕಾಶವನ್ನು ಮೀರಿ ನಿಂತವನು, ದೋಷವಿಲ್ಲದವನು, ಬಿಂದು - ನಾದಕಲೆಗಳಿಗೆ ಅತೀತನು ಆದ ಶ್ರೀಗುರುವನ್ನು ಕೃತಜ್ಞಾಪೂರ್ವಕವಾಗಿ ನಮಿಸುವ ಹಲವು ಸಂದರ್ಭಗಳು ನಮ್ಮ ಸಂಸ್ಕೃತಿಯಲ್ಲಿದೆ. ಅನಾದಿ ಕಾಲದಿಂದ, ಇಂದಿನವರೆಗೂ ಶ್ರೇಷ್ಠ ಗುರುಪರಂಪರೆಯನ್ನು ಭಾರತ ಕಂಡಿದೆ. ಅನೇಕ ಮಂದಿ ಗುರುಗಳು ತಮ್ಮ ಜೀವನವನ್ನೇ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ, ವ್ಯಕ್ತಿತ್ವ ವಿಕಸನಕ್ಕಾಗಿ ಮುಡಿಪಿಟ್ಟಿದ್ದಾರೆ. ಅಂತಹವರಲ್ಲಿ ಭಾರತ ಕಂಡ ಶ್ರೇಷ್ಠ ದಾರ್ಶನಿಕ, ರಾಜನೀತಿಜ್ಞ, ಶಿಕ್ಷಣ ತಜ್ಞ, ಶಿಕ್ಷಕ ಹಾಗೂ ಸ್ವಾತಂತ್ರ್ಯ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಪ್ರಮುಖರು. ಅವರ ಜನ್ಮ ದಿನಾಂಕ ಸೆಪ್ಟೆಂಬರ್ 05ನ್ನು ‘ಶಿಕ್ಷಕರ ದಿನ’ವಾಗಿ ಆಚರಿಸಲಾಗುತ್ತದೆ. ಭಾರತದಾದ್ಯಂತ ಶಿಕ್ಷಕರಿಗೆ ಗೌರವಪೂರ್ವಕವಾಗಿ ಹಬ್ಬದಂತೆ ಆಚರಿಸುವ ದಿನವೇ ಈ ಶಿಕ್ಷಕರ ದಿನಾಚರಣೆ. ಮೂಲತಃ ವೃತ್ತಿಯಿಂದ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ಶಿಕ್ಷಕವೃತ್ತಿಯ ಮೌಲ್ಯಗಳ ಪ್ರತಿರೂಪವಾಗಿದ್ದರು. ಅವರ ಅಪಾರ ಶಿಷ್ಯವರ್ಗ ಅವರನ್ನು ಭೇಟಿ ಮಾಡಿ ಸೆಪ್ಟೆಂಬರ್ 5 ರಂದು ನಿಮ್ಮ ಹುಟ್ಟುಹಬ್ಬವನ್ನು ನಾವೆಲ್ಲಾ ವಿಜೃಂಭಣೆಯಿಂದ ಆಚರಿಸುತ್ತೇವೆ ಎಂಬ ಕೋರಿಕೆಯನ್ನು ಮಾಡಿದಾಗ ಅದನ್ನು ಅತ್ಯಂತ ನಮ್ರತೆಯಿಂದ ನಿರಾಕರಿಸಿದ ರಾಧಾಕೃಷ್ಣನ್ ರವರು ತನ್ನ ಜನ್ಮದಿನವನ್ನು ಆಚರಿಸುವ ಬದಲು ರಾಷ್ಟçಕ್ಕೆ ಗುರುಪರಂಪರೆ ನೀಡಿದ ಮಹತ್ವವನ್ನು ಸ್ಮರಿಸಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಿ ಎಂದು ಶಿಷ್ಯವೃಂದಕ್ಕೆ ತಾಕೀತು ಮಾಡಿದರು. 1962ರಲ್ಲಿ ಮೊದಲ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಸೆಪ್ಟೆಂಬರ್05ನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತಾ ಬರಲಾಗಿದೆ. ಪ್ರತಿ ಮಗುವೂ ತನ್ನ ವಿದ್ಯಾರ್ಥಿ ಜೀವನದಲ್ಲಿ ತನ್ನ ತಂದೆ-ತಾಯಿಗಿAತ ಹೆಚ್ಚು ಸಮಯ ತೊಡಗಿಸಿಕೊಳ್ಳುವುದು ಶಾಲೆಯಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ. ಹಾಗಾಗಿ ರಾಷ್ಟçದ ಶಿಕ್ಷಣದ ಗುಣಮಟ್ಟ ಪ್ರತ್ಯಕ್ಷವಾಗಿ ಶಿಕ್ಷಕನ ವ್ಯಕ್ತಿತ್ವವನ್ನು ಅವಲಂಬಿಸಿದೆ. ಅದೆಷ್ಟೇ ಶ್ರೇಷ್ಠವಾದ ಪಠ್ಯಕ್ರಮವನ್ನು, ಶಿಕ್ಷಣ ವ್ಯವಸ್ಥೆಯನ್ನು ಯಾವುದೇ ದೇಶ ಹೊಂದಿದ್ದರೂ, ಅದನ್ನು ಸಮರ್ಥವಾಗಿ ವಿದ್ಯಾರ್ಥಿಗಳ ಹೃದಯಕ್ಕೆ ಇಳಿಸದೇ ಇದ್ದರೆ ಅದು ವ್ಯರ್ಥ. ಹಾಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕನ ಪಾತ್ರ ಮಹತ್ವವಾದದ್ದು. ಆದ ಕಾರಣ ಶಿಕ್ಷಕರು ಎಲ್ಲಾ ಮೌಲ್ಯಗಳ ಗಣಿಯಂತಿರಬೇಕು. ಶಿಕ್ಷಕ ವೃತ್ತಿಯನ್ನು ನಿಸ್ವಾರ್ಥ ಸೇವೆಯೆಂದು ಪರಿಭಾವಿಸಿ ಸದೃಢ ರಾಷ್ಟçನಿರ್ಮಾಣ ಮಾಡುವ ಕೈಂಕರ್ಯದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕ ರಾಷ್ಟçಶಿಲ್ಪಿ, ರಾಷ್ಟ್ರನಿರ್ಮಾಪಕನಾಗಿ ದೇಶ ಕಟ್ಟುವ ಕಾಯಕದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿರುತ್ತಾನೆ. ರಾಷ್ಟ್ರೀಯ ಶಿಕ್ಷಣ ನೀತಿ – 2020 ಸಹ ಶಿಕ್ಷಕನ ಮಹತ್ತ್ವವನ್ನು, ಔನ್ನತ್ಯವನ್ನು ಕೊಂಡಾಡಿದೆ. ಸದೃಢ ಮನಸ್ಥಿತಿ, ಮೌಲ್ಯಾಧಾರಿತ ವ್ಯಕ್ತಿತ್ವ ಹೊಂದಿರುವರು ಶಿಕ್ಷಕ ವೃತ್ತಿಗೆ ಬರುವ ಅನಿವಾರ್ಯತೆ ಇಂದು ಎದುರಾಗಿದೆ. ತಂದೆ ತಾಯಿ ಮಗುವಿಗೆ ಕೇವಲ ಭೌತಿಕ ಜನ್ಮ ನೀಡಿದರೆ, ಶ್ರೀ ಗುರು ಮಗುವಿಗೆ ಸಂಸ್ಕಾರ ನೀಡಿ ಆತನನ್ನು ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸುತ್ತಾನೆ. ಯಾವ ದೇಶದಲ್ಲಿ ಉತ್ಕೃಷ್ಟ ಶಿಕ್ಷಕರ ಕೊರತೆ ಇರುವುದೋ ಆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಶಿಕ್ಷಕ ತರಬೇತಿಯ ಅಂಕಪಟ್ಟಿ ಮಾತ್ರವೇ ಉತ್ತಮ ಶಿಕ್ಷಕನನ್ನು ಅಳೆಯುವ ಮಾನದಂಡವಲ್ಲ. ಅಂಕ ಮಾತ್ರ ಆಗಲೂ ಬಾರದು. ಆದರೆ ಆತ ಪಡೆದ ತರಬೇತಿಯ ಗುಣಮಟ್ಟ, ಪಡೆದ ಅನುಭವ, ಗಳಿಸಿದ ಜ್ಞಾನ ಎಲ್ಲವೂ ಶಿಕ್ಷಕನನ್ನು ಸಮಾಜದಲ್ಲಿ ಒಬ್ಬ ಅನುಕರಣಾಪ್ರಾಯ, ಆದರ್ಶ ವ್ಯಕ್ತಿಯನ್ನಾಗಿ ರೂಪಿಸಲು ಸಾಧ್ಯ. ಜಗತ್ತಿನಲ್ಲಿ ಭಾವನಾತ್ಮಕವಾಗಿ ಅತ್ಯಂತ ಹೆಚ್ಚು ಗೌರವಿಸಲ್ಪಡುವ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ ಮನೆಯಲ್ಲೂ ತಮ್ಮ ಮಕ್ಕಳನ್ನು ಒಬ್ಬ ಒಳ್ಳೆಯ ವೈದ್ಯ, ಇಂಜಿನಿಯರ್, ವಕೀಲ, ಉದ್ಯಮಿ, ವಿಜ್ಞಾನಿಯಾಗಬೇಕೆಂದೆಲ್ಲಾ ಬಯಸುವುದು ಸಹಜ. ಹಾಗಾಗಿ ಒಳ್ಳೆಯ ವಿದ್ಯಾಭ್ಯಾಸ ಸಿಗುವ ಶಾಲೆಗಳಿಗೆ, ಒಳ್ಳೆಯ ವ್ಯವಸ್ಥೆಗಳಿರುವ ವಿದ್ಯಾಲಯಗಳಿಗೆ ಸೇರಿಸುತ್ತಾರೆ, ಲಕ್ಷಾಂತರ ರೂಪಾಯಿಗಳನ್ನೂ ಖರ್ಚು ಮಾಡುತ್ತಾರೆ. ಮಧ್ಯಮ ವರ್ಗದವರು ಲಕ್ಷಗಟ್ಟಲೇ ಲೋನ್ ಮಾಡಿಯಾದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗುತ್ತಾರೆ. ಆದರೆ ಎಷ್ಟೇ ಹಣ ಖರ್ಚು ಮಾಡಿದರೂ, ವಿದ್ಯೆಯನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸುವ ಶಿಕ್ಷಕರಿಲ್ಲದಿದ್ದರೆ ಈ ಪ್ರಯತ್ನಗಳೆಲ್ಲ ವ್ಯರ್ಥ. ಆದ್ದರಿಂದ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧನೆ ಮಾಡುವ ಶಿಕ್ಷಕರ ಅಗತ್ಯತೆ ಪ್ರತಿಯೊಂದು ಕಾಲಕ್ಕೂ ಇದ್ದೇ ಇದೆ. ಇದರ ಅನಿವಾರ್ಯತೆಯನ್ನು ಅರಿತು ಸಮಾಜ ರೂಪಿಸುವುದಕ್ಕಾಗಿ, ಶಿಕ್ಷಕರಾಗುವುದಕ್ಕೇ ಮನಸ್ಸು ಮಾಡಬೇಕಾದ ಕರ್ತವ್ಯ ಇಂದಿನ ಪೀಳಿಗೆಯಲ್ಲಿದೆ. ತಾನು ಏನಾಗಬೇಕೆಂದು ನಿಶ್ಚಯಿಸುವ ಆಯ್ಕೆ ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಅದಕ್ಕೆ ತಕ್ಕಂತೆ ಅವರು ಲಭ್ಯವಿರುವ ಹಲವು ಕೋರ್ಸ್ಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ಮುಂದಿನ ಪೀಳಿಗೆ ಹೇಗಿರಬೇಕು, ಅವರನ್ನು ಹೇಗೆ ಸಮಾಜಕ್ಕೆ ಪೂರಕವಾಗಿ ತಯಾರು ಮಾಡಬೇಕು ಎನ್ನುವುದನ್ನು ನಿರ್ಧರಿಸುವ ಶಕ್ತಿ ಒಬ್ಬ ಸಮರ್ಥ ಶಿಕ್ಷಕನಿಗೆ ಇರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಂದಿನ ಯುವಪೀಳಿಗೆ ಶಿಕ್ಷಕ ವೃತ್ತಿಯ ಕಡೆಗೂ ಪ್ರಾಧಾನ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಶಿಕ್ಷಕ ವೃತ್ತಿಯನ್ನು ಪ್ರೀತಿಸುವವರು, ಶಿಕ್ಷಕನ ಸ್ಥಾನಕ್ಕೆ ನ್ಯಾಯವನ್ನು ಒದಗಿಸುವವರು ಶಿಕ್ಷಕ ವೃತ್ತಿಗೆ ಬರಬೇಕಾಗಿದೆ. ಶಿಕ್ಷಕರು ನಿಜಾರ್ಥದಲ್ಲಿ ಭಾರತೀಯತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ರಾಯಭಾರಿಗಳು. ಈ ನಾಡಿನ ಭವ್ಯ ಇತಿಹಾಸವನ್ನು ಗಮನಿಸಿದಾಗ ಇಲ್ಲಿನ, ಸಂಸ್ಕೃತಿ, ಆಚರಣೆಗಳು, ಶ್ರೇಷ್ಠ ಚಿಂತನೆಗಳೆಲ್ಲವೂ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಗಮನಾರ್ಹ ಕೆಲಸ ಮಾಡಿರುವುದು ಇಲ್ಲಿನ ಗುರುಪರಂಪರೆಯೇ ಆಗಿದೆ. ಇಂದು ಶಿಕ್ಷಣದಲ್ಲಿ ಭಾರತೀಯತೆಯ ಕುರಿತು ಚರ್ಚೆಯಾಗುತ್ತಿರುವ ಹೊತ್ತಿಗೆ ಶಿಕ್ಷಕರಾಗುವವರು ಭಾರತವನ್ನು ಸರಿಯಾಗಿ ಅರಿತು, ಅದನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ. ಅವರನ್ನೂ ಭಾರತದ ಮೌಲ್ಯಗಳನ್ನು ತಮ್ಮ ಮುಂದಿನ ಪೀಳಿಗೆಗೆ ಪಸರಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಾಗುವಂತೆ ಪ್ರೇರೇಪಿಸಬೇಕು. 2047ರ ವಿಕಸಿತ ಭಾರತದ ಕನಸನ್ನು ನನಸು ಮಾಡುವ ಈ ಅಮೃತ ಕಾಲಘಟ್ಟದಲ್ಲಿ ಯುವಜನತೆ ಶಿಕ್ಷಕನ ವೃತ್ತಿಯನ್ನು ಗೌರವಿಸಲಿ. ಆತ್ಮನಿರ್ಭರ ಭಾರತವಾಗುವ ಪ್ರಯತ್ನದಲ್ಲಿ ಜ್ಞಾನವನ್ನು ಬಯಸಿ ಬರುವ ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡುವ ಸಮರ್ಥ ಶಿಕ್ಷಕರನ್ನು ಒಳಗೊಳ್ಳುವುದೂ ಪ್ರಮುಖವಾದ ಅಂಶವೇ ಆಗಿದೆ. ಭಾರತ ಹಿಂದಿನಿAದಲೂ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ತನ್ನ ಜ್ಞಾನ ಪ್ರಸರಣದ ಕಾರಣಕ್ಕಾಗಿಯೇ ಎನ್ನುವುದನ್ನು ಮರೆಯುವಂತಿಲ್ಲ. ಜಗತ್ತಿನಲ್ಲಿ ಹಲವು ದೇಶಗಳು ಸುಸಂಸ್ಕೃತಗೊAಡಿದ್ದು ಇಲ್ಲಿನ ಗುರುಗಳು ಅಲ್ಲಿಗೆ ಹೋಗಿ ಜ್ಞಾನದಾನ ಮಾಡಿದ ಕಾರಣಕ್ಕಾಗಿಯೇ ಎನ್ನುವುದು ಇತಿಹಾಸ. ಇತಿಹಾಸದ ಗತವೈಭವವನ್ನು ಮರುಕಳಿಸಲು, ಹಾಗೆಯೇ ಜಗತ್ತಿಗೆ ಭಾರತೀಯ ಶಿಕ್ಷಕರ ಕೊಡುಗೆಯ ಮಹತ್ವ ಜಗಜ್ಜಾಹೀರುಗೊಳಿಸಬೇಕಿದೆ. ಯುವಜನತೆ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ರಾಷ್ಟ್ರಸೇವೆಯಲ್ಲಿ ಮತ್ತೊಮ್ಮೆ ಭಾರತ ಜಗದ್ಗುರು ಭಾರತವಾಗಿ ಇಡೀ ಮನುಕುಲಕ್ಕೆ ದಾರಿದೀಪವಾಗಬೇಕಿದೆ.
ಯಾವುದೇ ನಾಗರಿಕತೆಯ ಅಳಿವು-ಉಳಿವು ಎನ್ನುವುದು ಜನಸಂಖ್ಯೆಯ ಸಮತೋಲನದಲ್ಲಿಯೇ ನಿಂತಿದೆ. ಜನಸಂಖ್ಯೆಯೆನ್ನುವುದು ‘ಸ್ಪೋಟ’ವಾದಾಗ ಅವುಗಳಿಗೆ ನಿಯಂತ್ರಣ ತರುವ ಪ್ರಯತ್ನವನ್ನು ಜಗತ್ತು ಸಾಮೂಹಿಕವಾಗಿಯೇ ಕೈಗೊಂಡಿದೆ ಮತ್ತು ಹಲವು ದೇಶಗಳಲ್ಲಿ ಇದು ಯಶಸ್ಸನ್ನೂ ಪಡೆದಿದೆ. ಆದರೆ ಇದೇ ಹೊತ್ತಿಗೆ ನಾಗರಿಕೆತೆಯ ಉಳಿವಿಗಾಗಿ ಬೇಕಾದ ಕನಿಷ್ಠ ಜನಸಂಖ್ಯೆಯ ಪ್ರಮಾಣವನ್ನೂ ಗಮನದಲ್ಲಿಟ್ಟುಕೊಳ್ಳುವುದು ಸಾರ್ವಕಾಲಿಕ ಅನಿವಾರ್ಯವಾಗಿದೆ. ಯಾವುದೇ ದೇಶ, ಪ್ರದೇಶ, ಸಮುದಾಯದಲ್ಲಿರುವ ಒಬ್ಬ ಹೆಣ್ಣು ತನ್ನ ಜೀವಿತಾವಧಿಯಲ್ಲಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಾಳೆ ಎನ್ನುವುದನ್ನು ಟಿ ಎಫ್ ಆರ್ ಎನ್ನಲಾಗುತ್ತದೆ. ಟಿ ಎಫ್ ಆರ್ 2.1 ಎಂದರೆ ಒಂದು ಹೆಣ್ಣು ಜೀವಿತಾವಧಿಯಲ್ಲಿ 2.1 (ಸರಾಸರಿ) ಮಕ್ಕಳಿಗೆ ಜನ್ಮ ನೀಡಿದರೆ ಮುಂದಿನ ತಲೆಮಾರುಗಳ ನಂತರವೂ ಆ ಸಮುದಾಯ, ನಾಗರಿಕತೆ ಜೀವಂತವಾಗಿರುತ್ತದೆ. ಇಲ್ಲದಿದ್ದರೆ ಅಳಿವಿನ ಅಂಚಿಗೆ ಸಾಗುತ್ತದೆ. ಇಲ್ಲಿವರೆಗೂ ಟಿ ಎಫ್ ಆರ್ 2.1 ಎನ್ನುವುದರ ಹಿಂದೆಯೇ ಜಗತ್ತಿನ ಅನೇಕ ದೇಶಗಳು, ನಾಗರಿಕೆಗಳು, ಸಮುದಾಯಗಳು ಓಡುತ್ತಿದ್ದವು. ಅದನ್ನು ತಲುಪುವುದೇ ಕಷ್ಟ ಎನ್ನಿಸುತ್ತಿತ್ತು. ಆದರೆ ಇತ್ತೀಚೆಗೆ ಪ್ರಕಟಗೊಂಡ ಸಂಶೋಧನಾ ವರದಿಯೊಂದು ಹೊಸ ವಿಚಾರವನ್ನು ಸಮಾಜದ ಮುಂದಿಟ್ಟಿದೆ. ಏನಿದು ಹೊಸ ಸಂಶೋಧನೆ? 6 ಮಂದಿ ಸಂಶೋಧಕರ ತಂಡ ನಡೆಸಿದ ‘Threshold fertility for the avoidance of extinction under critical conditions’’ ಎಂಬ ಸಂಶೋಧನಾ ವರದಿ ಇತ್ತೀಚೆಗೆ PLOS One ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಇದುವರೆಗೂ ವೈಶ್ವಿಕವಾಗಿ ಗುರುತಿಸಲಾಗಿದ್ದ ಒಟ್ಟು ಫಲವತ್ತತೆಯ ದರ (Total Fertility Rate) ಪ್ರತಿ ಮಹಿಳೆಗೆ 2.1 ಎಂದು ಅಂದಾಜಿಸಲಾಗಿತ್ತು. ಆದರೆ ಒಟ್ಟು ಫಲವತ್ತತೆಯ ದರ 2.7 ಇರಬೇಕೆಂದು ಸಂಶೋಧನೆ ತಿಳಿಸಿದೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ಬಹುತೇಕ ಎಲ್ಲಾ ದೇಶಗಳು ಹಿಂದಿನ ಟಿಎಫ್ಆರ್ ದರಕ್ಕೆ(2.1) ತಕ್ಕಂತೆ ಪ್ರತಿಸ್ಥಾಪನೆ ಫಲವತ್ತತೆಯ ಮಟ್ಟವನ್ನೇ (Replacement Level Fertility) ತಲುಪಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ಖಿಈಖ 2.7 ಎನ್ನುವುದು ಮನುಕುಲಕ್ಕೇ ಎಚ್ಚರಿಕೆ ಗಂಟೆಯಂತೆ ಕಾಣುತ್ತಿದೆ. ವೈಶ್ವಿಕ ಸವಾಲು: ವಿಶ್ವದಾದ್ಯಂತ ಒಟ್ಟು ಫಲವತ್ತತೆಯ ಪ್ರಮಾಣದಲ್ಲಿ ಗಣನೀಯ ಕುಸಿತ ಆಗಿದೆ. ವಿಶ್ವದಲ್ಲಿ 1960ರಲ್ಲಿ 5.3 ಇದ್ದ ಟಿಎಫ್ಆರ್ 2023ರ ವೇಳೆಗೆ 2.3ಕ್ಕೆ ಇಳಿದಿತ್ತು. ಪ್ರಸ್ತುತ ಜಗತ್ತಿನ ಮೂರನೇ ಎರಡು ಭಾಗದ ಜನರು ಈ ರೀತಿ ಆರ್ಎಲ್ಎಫ್ ಮಟ್ಟಕ್ಕಿಂತ ಕಡಿಮೆ ಇರುವ ಭೂಭಾಗಗಳಲ್ಲೇ ನೆಲೆಸಿದ್ದಾರೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ಹಲವು ದೇಶಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಎಲ್ಲಾ ಜಿ 7 ರಾಷ್ಟçಗಳೂ (ಇಟಲಿ 1.29, ಜಪಾನ್ 1.30, ಕೆನಡಾ 1.47, ಜರ್ಮನಿ 1.53, ಯುಕೆ 1.57, ಅಮೆರಿಕ 1.66, ಫ್ರಾನ್ಸ್ 1,79) ಕಡಿಮೆ ರಿಪ್ಲೇಸ್ಮೆಂಟ್ ದರವನ್ನು ಹೊಂದಿವೆ. ಫಲಿಸಲಿಲ್ಲ ಸರ್ಕಾರಿ ಪ್ರೋತ್ಸಾಹ: ಹೆಚ್ಚು ಮಕ್ಕಳನ್ನು ಹೊಂದುವುದಕ್ಕೆ ಸರ್ಕಾರಗಳ ಪ್ರೋತ್ಸಾಹದ ನಂತರವೂ ಟಿಎಫ್ಆರ್ ದರಕ್ಕೆ ಸಮತೋಲನವಾಗಿ ಆರ್ಎಲ್ಎಫ್ ಸುಧಾರಣೆ ಕಂಡಿಲ್ಲ ಎನ್ನುವುದು ಕಳವಳಕಾರಿ ಸಂಗತಿ. 1980ರಿಂದ ಯುರೋಪ್ ಹಾಗೂ ಏಷ್ಯಾದ ಕೆಲವು ಅಭಿವೃದ್ಧಿ ಹೊಂದಿದ ದೇಶಗಳ ಟಿಆರ್ಎಫ್, ಆರ್ಎಲ್ಎಫ್ಗಿಂತ ಕಡಿಮೆಯೇ ಇದೆ. ಇಲ್ಲಿ ಆರ್ಎಲ್ಎಫ್ ಹೆಚ್ಚಿಸುವಂತಹ ಯಾವ ಯೋಜನೆಗಳನ್ನು ಸರ್ಕಾರಗಳು ಕೈಗೊಂಡಿದ್ದವು, ಅವುಗಳು ಎಷ್ಟರ ಮಟ್ಟಿಗೆ ಪರಿಣಾಮಾತ್ಮಕವಾಗಿದ್ದವು ಎನ್ನುವುದರ ಅವಲೋಕನವೂ ಆಗಬೇಕಿದೆ. ಸರ್ಕಾರದ ಪ್ರೋತ್ಸಾಹವೂ ಟಿಎಫ್ಆರ್ ಹೆಚ್ಚಳಕ್ಕೆ ಸಹಕಾರಿಯಾಗಲಿಲ್ಲ ಎಂದರೆ ಪರಿಹಾರ ಏನು ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ. ಕಾಲಾಂತರದಲ್ಲಿ ಈ ರೀತಿಯ ಬದಲಾವಣೆಯು ಜನಸಂಖ್ಯೆ ಕಡಿಮೆಯಿರುವ, ಈಗಾಗಲೇ ಕುಗ್ಗುತ್ತಿರುವ ಕುಟುಂಬಗಳ ವಂಶವೃಕ್ಷವನ್ನು ಅಳಿಸಿಹಾಕಬಹುದು. ಹೆಚ್ಚಬೇಕು ಹೆಣ್ಣು ಮಕ್ಕಳ ಜನನ: ಹೆಣ್ಣು ಮಗುವಿನ ಜನನ ಹೆಚ್ಚಾದರೆ, ಆ ಮಗು ಸಂತಾನೋತ್ಪತ್ತಿಯ ವಯಸ್ಸನ್ನು ತಲುಪುವ ಮತ್ತು ಮಕ್ಕಳನ್ನು ಪಡೆಯುವ ಸಾಧ್ಯತೆ ಸಹಜವಾಗಿ ಹೆಚ್ಚಾಗುತ್ತವೆ. ಇದು ಕಾಲಾಂತರದಲ್ಲಿ ನೈಸರ್ಗಿಕವಾಗಿ ಒಟ್ಟು ಫಲವತ್ತತೆಯ ಪ್ರಮಾಣ ದರಕ್ಕೆ ಸರಿಯಾಗಿ ಪ್ರತಿಸ್ಥಾಪನೆಯ ಫಲವತ್ತತೆಯ ಮಟ್ಟವನ್ನು ಸ್ಥಿರವಾಗಿಟ್ಟುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಅಳಿವಿನಂಚಿಗೆ ಸರಿಯಲಿದೆ ಸಾವಿರಾರು ಭಾಷೆಗಳು: ಟಿಎಫ್ಆರ್ ದರವು ನಿಗದಿತ ಆರ್ಎಲ್ಎಫ್ ದರಕ್ಕಿಂತ ಕುಸಿತ ಕಂಡರೆ ಅದು ಭಾಷೆಯ ಮೇಲೂ ಪರಿಣಾಮ ಬೀರಲಿದ್ದು, ಇರುವ 6,700ಕ್ಕೂ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಶೇ.40ರಷ್ಟು ಭಾಷೆಗಳು ಮುಂದಿನ ನೂರು ವರ್ಷಗಳಲ್ಲಿ ನಶಿಸಿಹೋಗುತ್ತವೆ. ಭಾಷೆಗಳ ನಾಶವು ಸಂಸ್ಕೃತಿ, ಕಲೆ, ಸಂಗೀತ ಮತ್ತು ಮೌಖಿಕ ಪರಂಪರೆಗಳ ಅವನತಿಗೂ ಕಾರಣವಾಗುತ್ತವೆ ಎನ್ನುವುದು ವರದಿಯಲ್ಲಿ ಉಲ್ಲೇಖಗೊಂಡಿದೆ. ಭಾರತದಲ್ಲಿ 1950ರಲ್ಲಿ 6.18 ಇದ್ದ ಫಲವತ್ತತೆಯ ದರವು 2023ರ ಹೊತ್ತಿಗೆ 1.9ಕ್ಕೆ ಇಳಿದಿತ್ತು. 2050ರಲ್ಲಿ 1.29 ಮತ್ತು 2100ರ ಹೊತ್ತಿಗೆ 1.04ಕ್ಕೆ ತಲುಪುತ್ತವೆ ಎಂದು ಅಂಕಿಅAಶಗಳು ಹೇಳುತ್ತವೆ. ಈ ಅಂಕಿಅAಶಗಳಾಧಾರಿತವಾಗಿ ಭಾರತದ ಭವಿಷ್ಯವನ್ನು ನಾವು ಗುರುತಿಸುವುದಾದರೆ ಸಂಶೋಧನೆ ತಿಳಿಸಿದ ಎಲ್ಲಾ ಸಮಸ್ಯೆಗಳೂ ಭಾರತದಲ್ಲಿ ಅತ್ಯಂತ ಆಘಾತಕಾರಿ ಪರಿಣಾಮ ಬೀರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಭಾರತದಲ್ಲಿ ಒಟ್ಟು ಫಲವತ್ತತೆಯ ಕುರಿತಾದ ಚರ್ಚೆಯಲ್ಲಿ ಪ್ರಮುಖವಾಗಿ ಎರಡು ಹೇಳಿಕೆಗಳನ್ನು ಗಮನಿಸಬಹುದು. 1. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ್ ಅವರು, "ಕುಸಿಯುತ್ತಿರುವ ಜನಸಂಖ್ಯೆಯು ಗಂಭೀರ ಕಳವಳಕಾರಿ ಸಂಗತಿ. ಒಂದು ಸಮಾಜದ ಒಟ್ಟು ಫಲವತ್ತತೆ ದರವು 2.1ಕ್ಕಿಂತ ಕಡಿಮೆಯಾದಾಗ, ಅದು ಅಳಿವಿನಂಚಿನಲ್ಲಿರುವ ಅಪಾಯವಿದೆ ಎಂದು ಜನಸಂಖ್ಯಾ ವಿಜ್ಞಾನವು ಸೂಚಿಸುತ್ತದೆ. ಇದರಿಂದಾಗಿ ಸಮಾಜದ ಕುಸಿತಕ್ಕೆ ಬಾಹ್ಯ ಸವಾಲುಗಳು ಬೇಕಾಗಿಲ್ಲ; ತನ್ನದೇ ಕಾರಣಕ್ಕೆ ಕುಸಿಯುತ್ತದೆ. ಆದ್ದರಿಂದ, 2.1ಕ್ಕಿಂತ ಹೆಚ್ಚಿನ ಫಲವತ್ತತೆ ದರವನ್ನು ನಮ್ಮ ಸಮಾಜ ಕಾಯ್ದುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಪ್ರತಿ ದಂಪತಿ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು" ಎಂದು ಹೇಳಿದ್ದರು. ಆರೆಸ್ಸೆಸ್ ಸರಸಂಘಚಾಲಕರ ಹೇಳಿಕೆಯಂತೆಯೇ 2025ರ ಜನವರಿಯಲ್ಲಿ ಉತ್ತರಪ್ರದೇಶದ ಕುಂಭಮೇಳದಲ್ಲಿ ನಡೆದ ವಿಶ್ವ ಹಿಂದು ಪರಿಷದ್ನ ಕೇಂದ್ರೀಯ ಮಾರ್ಗದರ್ಶಕ ಮಂಡಲ ಸಭೆ, ಅನೇಕ ಮಠಾಧೀಶರುಗಳು, ಜಗದ್ಗುರುಗಳು, ಸಾಧು ಸಂತರೂ ಈ ನೆಲೆಗಟ್ಟಿನಲ್ಲೇ ಹೇಳಿಕೆಗಳನ್ನು ನೀಡಿದ್ದಾರೆ. 2. ಮೂರು ಮಕ್ಕಳನ್ನು ಪ್ರೋತ್ಸಾಹಿಸಿ ಆಂಧ್ರಪ್ರದೇಶವು ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರು ಗ್ರಾಮ ಪಂಚಾಯತ್, ಮಂಡಲ ಪ್ರಜಾ ಪರಿಷತ್ ಮತ್ತು ಜಿಲ್ಲಾ ಪಂಚಾಯತ್ಗಳಲ್ಲಿ ಭಾಗವಹಿಸುವಂತಿಲ್ಲ ಎಂಬ 1994ರ ನಿಯಮವನ್ನು ತಿದ್ದುಪಡಿ ಮಾಡಿದೆ. ತೆಲಂಗಾಣವೂ 2018ರ ತನ್ನ ಪಂಚಾಯತ್ ರಾಜ್ ಕಾಯಿದೆಯ ನಿಯಮಗಳನ್ನು ತಿದ್ದುಪಡಿ ಮಾಡಿದೆ. ತಮಿಳುನಾಡಿನಲ್ಲೂ ಜನಸಂಖ್ಯಾ ಆಧಾರಿತ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ (ಡಿ-ಲಿಮಿಟೇಷನ್) ಕಾರಣವನ್ನು ನೀಡಿ ರಾಜ್ಯದ ಜನರು ಮೂರು ಮಕ್ಕಳನ್ನು ಹೊಂದಬೇಕು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರೆ ನೀಡಿದ್ದಾರೆ. ಈ ಮೇಲಿನ ಎರಡೂ ಹೇಳಿಕೆಗಳಲ್ಲೂ ಇರುವ ಉದ್ದೇಶ ಸ್ಪಷ್ಟವಾಗಿಯೇ ಇದೆ. ಆರ್ಎಸ್ಎಸ್ ಸರಸಂಘಚಾಲಕರ ಮತ್ತು ಇತರೆ ಸಾಧು ಸಂತರ ಹೇಳಿಕೆಗಳು ಸಹಸ್ರಾರು ವರ್ಷಗಳಿಂದ ಜಗತ್ತಿನ ಕಲ್ಯಾಣಕ್ಕಾಗಿಯೇ ಶ್ರಮಿಸುತ್ತಿರುವ ನಾಗರಿಕತೆಯ ಉಳಿವಿನ ದೃಷ್ಟಿಯಿಂದ ಹೇಳಿರುವುದಾದರೆ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ರಾಜಕೀಯ ನಾಯಕರು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ತಮ್ಮ ಸ್ಥಾನಮಾನ ಮತ್ತು ಕ್ಷೇತ್ರವಾರು ವಿಂಗಡಣೆಯಾದಾಗ ಯಾವುದೋ ಕೆಲವು ಕ್ಷೇತ್ರಗಳು ಧರ್ಮ, ಮತ, ಜಾತಿ ಪ್ರಾಬಲ್ಯದ ಆಧಾರದ ಮೇಲೆ ರಚನೆಯಾಗದಂತೆ ಎಚ್ಚರಿಕೆಯನ್ನು ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಜನಸಂಖ್ಯೆ ಹೆಚ್ಚಾಗಬೇಕು ಎನ್ನುವುದು ಇಂದಿನ ಏಕಕಂಠವಾಗುತ್ತಿದೆ. ಕುಸಿಯಲು ಕಾರಣಗಳು ಆರ್ಥಿಕ ಕಾರಣ: ಇಂದಿನ ದಿನಮಾನಗಳಲ್ಲಿ ಹೆಚ್ಚಿರುವ ವಿದ್ಯಾಭ್ಯಾಸದ ಖರ್ಚಿನ ಕಾರಣಕ್ಕಾಗಿ ತಮ್ಮ ಇತರೆ ಜವಾಬ್ದಾರಿಗಳನ್ನು ನಿಭಾಯಿಸುವ ಸಲುವಾಗಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಯೋಜನೆಯನ್ನೇ ಕೈಬಿಡುತ್ತಾರೆ. ಒಂದು ವೇಳೆ ಇಬ್ಬರು ಅಥವಾ ಹೆಚ್ಚು ಮಕ್ಕಳನ್ನು ಹೊಂದುವ ಇಚ್ಛೆ ಇದ್ದರೂ ಆಕಸ್ಮಿಕವಾಗಿ ಬಂದೆರಗುವ ಸಾಲಬಾಧೆ, ಮನೆಮಂದಿಯ ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಅಸ್ಥಿರತೆಯು ಇಡೀ ಮನೆಯ ಆರ್ಥಿಕ ಶಿಸ್ತನ್ನೇ ಕದಡಿಬಿಡುತ್ತವೆ. ಇವುಗಳ ಜೊತೆಗೆ ಕಾಲಕಳೆದಂತೆ ಸಹಜವಾಗಿಯೇ ಹೆಚ್ಚುತ್ತಿರುವ ದಿನನಿತ್ಯದ ಜೀವನನಿರ್ವಹಣಾ ವೆಚ್ಚವು ತಮ್ಮ ಯೋಜನೆಯಂತೆ ಕಂಡ ಕನಸುಗಳಲ್ಲಿ ಹಲವನ್ನು ಕೈಬಿಡುವಂತೆ ಮಾಡಿಬಿಡುತ್ತವೆ. ವಿಭಕ್ತ ಕುಟುಂಬಗಳು: ಇಂದು ವೈಯಕ್ತಿಕ ಕಾರಣಗಳಿಗೋ ಅಥವಾ ಅನಿವಾರ್ಯ ಕಾರಣಗಳಿಗೋ ಮದುವೆಯಾದ ನವದಂಪತಿಯು ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುವುದು ರೂಢಿಯಾಗುತ್ತಿದೆ. ವಿಭಕ್ತ ಕುಟುಂಬಗಳಲ್ಲಿ ಹೆತ್ತ ಒಂದು ಮಗುವನ್ನೇ ಸಂಭಾಳಿಸುವುದು ಕಷ್ಟ. ಹಾಗಿರುವಾಗ ಮೂವರು ಮಕ್ಕಳನ್ನು ನೋಡಿಕೊಳ್ಳುವುದು ತೀರ ಅಸಂಭವ ಎನ್ನುವ ಭಾವನೆಯಿದೆ. ಕುಟುಂಬ ಕೇವಲ ಭಾವನೆಗಳಾಧಾರಿತವಾದದ್ದಲ್ಲ, ಕೌಟುಂಬಿಕ ಆರ್ಥಿಕತೆಯನ್ನು ಸಮರ್ಥವಾಗಿಟ್ಟುಕೊಳ್ಳಲು ಸಹಕಾರಿ ಎನ್ನುವುದು ಇನ್ನೂ ಮನವರಿಕೆಯಾಗಿಲ್ಲ. ಹೆಣ್ಣು ಭ್ರೂಣ ಹತ್ಯೆ: ಹೆಣ್ಣು ಭ್ರೂಣ ಹತ್ಯೆ ಎನ್ನುವುದು ಹಿಂದಿಗಿAತ ಸಾಕಷ್ಟು ಕಡಿಮೆಯಾಗಿದೆ. ಆದರೂ ಭ್ರೂಣಹತ್ಯೆಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಟಿಎಫ್ಆರ್ ಎನ್ನುವುದು ನೇರವಾಗಿ ಮಹಿಳೆಗೇ ಸಂಬAಧಿಸಿದ ವಿಚಾರವಾದ್ದರಿಂದ, ಹೆಣ್ಣು ಭ್ರೂಣ ಹತ್ಯೆಯು ಕೇವಲ ಒಂದು ಹೆಣ್ಣು ಮಗುವಿನ ಹತ್ಯೆಯಲ್ಲದೆ, ಇಡೀ ಮನುಕುಲದ ಅಳಿವಿಗೇ ಪ್ರಮುಖ ಕಾರಣವಾಗುತ್ತಿದೆ. ‘ವೋಕಿಸಂ’ ಪ್ರಭಾವ: ಪಾಶ್ಚಾತ್ಯರ ಅನುಸರಣೆಯ ಪ್ರಭಾವದಿಂದಾಗಿ ಮದುವೆಯ ಕುರಿತು ನಿರಾಸಕ್ತಿ, ‘ಮೈ ಬಾಡಿ, ಮೈ ಚಾಯ್ಸ್’, ‘ವಿವಾಹ ಒಂದು ಕಾಂಟ್ರ್ಯಾಕ್ಟ್, ಕಮಿಟ್ಮೆಂಟ್’, ‘ತಡವಾಗಿ ಮದುವೆ ಆಗುವುದೂ ಒಂದು ಟ್ರೆಂಡ್’ ಎಂಬAತಹ ಮನೋಭಾವ ಮೂಡಿದೆ. ವಿವಾಹವಾಗದಿದ್ದರೂ ತಮ್ಮ ಏಕಾಂಗಿತನವನ್ನು ಮರೆಯಲು ಹಾಗೂ ದೈಹಿಕ ತೃಷೆಯನ್ನು ತೀರಿಸಿಕೊಳ್ಳಲು ಈ ನೆಲದ ಸಂಸ್ಕೃತಿಗೆ ವಿರುದ್ಧವಾದ ‘ಲಿವಿಂಗ್ ಟುಗೆದರ್’, ‘ಫ್ರೆಂಡ್ಸ್ ವಿಥ್ ಬೆನಿಫಿಟ್ಸ್’, ‘ಒನ್ ನೈಟ್ ಸ್ಟಾö್ಯಂಡ್’, ಮುಂತಾದ ಆಧುನಿಕ ಸಂಬAಧಗಳ ಮೊರೆ ಹೋಗುತ್ತಿದ್ದಾರೆ. ಇವುಗಳ್ಯಾವುದೂ ಮಕ್ಕಳನ್ನು ಹೊಂದುವ ಉದ್ದೇಶವನ್ನು ಒಳಗೊಂಡಿಲ್ಲ ಎನ್ನುವುದು ಜನಸಂಖ್ಯೆಯ ಮುಂದುವರಿಕೆಗೆ ತೊಡಕಾಗಿವೆ. ಪರಿಹಾರವೇನು? ವಯಸ್ಸಾದವರ ಮತ್ತು ಕುಸಿಯುತ್ತಿರುವ ಕಾರ್ಮಿಕಶಕ್ತಿಯನ್ನೂ ಒಳಗೊಂಡು ಸರ್ವರನ್ನೂ ಬೆಂಬಲಿಸುವ ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ನೀತಿಗಳ ಮೇಲೆ ಭಾರತ ಗಮನ ಹರಿಸಬೇಕು. ಪ್ರತಿ ಕುಟುಂಬಕ್ಕೂ ಅಧಿಕವಾಗಿ ಆರ್ಥಿಕ ಹೊರೆಯಾಗುವುದು ಆರೋಗ್ಯ ಮತ್ತು ಮಕ್ಕಳ ಶಿಕ್ಷಣ. ಆದ್ದರಿಂದ ಈ ಎರಡು ಕ್ಷೇತ್ರಗಳಲ್ಲಿ ಕುಟುಂಬಕ್ಕೆ ಪೂರಕವಾದ ಸರ್ಕಾರದ ನೀತಿ-ನಿಯಮಗಳು ರೂಪುಗೊಳ್ಳಬೇಕು. ಆರ್ಎಲ್ಎಫ್ಗೆ ತಕ್ಕಂತೆ ಟಿಎಫ್ಆರ್ ಅನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಜನಮಾನಸದ ಮಾನಸಿಕತೆ ಮೂರು ಮಕ್ಕಳನ್ನು ಹೊಂದುವುದಕ್ಕೆ ಸಿದ್ಧವಾಗಬೇಕು. ಅದಕ್ಕೆ ಪೂರಕವಾದ ವ್ಯವಸ್ಥೆ ರೂಪುಗೊಳ್ಳಬೇಕು. ಜನಸಂಖ್ಯೆ ವಿಪರೀತವಾದರೆ ಸೀಮಿತ ಸಂಪನ್ಮೂಲಗಳ ಹಂಚಿಕೆ ಹೇಗೆ? ಪ್ರಕೃತಿಯ ಶೋಷಣೆ ಆಗುವುದಿಲ್ಲವೇ? ಇಂತಹ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮವಹಿಸಿದ ಮಹಾನ್ ವಿಜ್ಞಾನಿ ಸತೀಶ್ ಧವನ್. ಇವರು 1920ರ ಸೆಪ್ಟೆಂಬರ್ 25ರಂದು ಶ್ರಿನಗರದಲ್ಲಿ ಜನಿಸಿದರು. ಭೌತಶಾಸ್ತ್ರ ಮತ್ತು ಗಣಿತಶಾಸ್ತçದಲ್ಲಿ ವಿಜ್ಞಾನ ಪದವಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದರು. 1947ರಲ್ಲಿ, ಅವರು ಮಿನ್ನಿಯಾಪೋಲಿಸ್‌ನ ಮಿನ್ನೇಸೋಟ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮತ್ತು ಏರೋನಾಟಿಕ್ಸ್ನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದರು. 1972ರಲ್ಲಿ ಇವರು ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ದಿಕ್ಕನ್ನು ಸೃಷ್ಟಿಸುತ್ತಾರೆ. ಇವರ ನೇತೃತ್ವದಲ್ಲಿ ಭಾಸ್ಕರ ಉಪಗ್ರಹ, ಆರ್ಯಭಟ ಉಪಗ್ರಹ ಸೇರಿದಂತೆ ಹಲವು ಯಶಸ್ವಿ ಉಪಗ್ರಹಗಳನ್ನು ಉಡಾಯಿಸಲಾಯಿತು. ಸತೀಶ್ ಧವನ್ ಅವರು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಗ್ರಾಮೀಣ ಅಭಿವೃದ್ಧಿಯೊಂದಿಗೆ ಹೊಂದಿಸಬೇಕು ಎಂಬ ದೃಷ್ಟಿಕೋನ ಹೊಂದಿದ್ದರು. ಇದರಿಂದ ದೂರದರ್ಶನದ ಮೂಲಕ ಗ್ರಾಮೀಣ ಶಿಕ್ಷಣ ಮತ್ತು ಮಾಹಿತಿ ಹಂಚಿಕೆಗೆ ಪೂರಕವಾದ ಸೈಟ್ (Satellite Instructional Television Experiment) ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರುತ್ತಾರೆ. ಹಾಗೆಯೇ ದ್ರವಗತಿಯಶಾಸ್ತ್ರ, ಗಾಳಿಯುಂಡೆಗಳ ಅಧ್ಯಯನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿರುತ್ತಾರೆ. ವೈಜ್ಞಾನಿಕ ಸಾಧನೆಗಳೊಂದಿಗೆ ಇವರು ಪ್ರಾಮಾಣಿಕತೆ, ಶಿಸ್ತು, ಮತ್ತು ಜನಮೆಚ್ಚುಗೆಯ ನಾಯಕತ್ವಕ್ಕಾಗಿ ಹೆಸರಾಗಿದ್ದರು. ತಮ್ಮ ಸೇವೆಯ ಅವಧಿಯಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟು ತಮ್ಮ ಜ್ಞಾನವನ್ನು ಜಗತ್ತಿಗೇ ಸಾರಿದ್ದಾರೆ. ಹೀಗೆ ತಮ್ಮದೇ ದೃಷ್ಟಿಕೋನದಿಂದ ಸಾಧನೆಗಳನ್ನು ಮೆರೆದ ಸತೀಶ್ ಧವನ್ ಅವರಿಗೆ ಭಾರತ ಸರ್ಕಾರವು 1971ರಲ್ಲಿ ಪದ್ಮಭೂಷಣ ಮತ್ತು 1981ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ. ಇಂದು ಇಸ್ರೋ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸತೀಶ್ ಧವನ್ ಅವರ ದೂರದೃಷ್ಟಿ ಮತ್ತು ದೃಢನಂಬಿಕೆ ಅಳವಡಿಕೆಗೊಂಡಿರುವುದು ಗಮನಾರ್ಹವಾಗಿದೆ. ಇವರನ್ನು ಭಾರತದಲ್ಲಿ ಪ್ರಾಯೋಗಿಕ ದ್ರವ ಚಲನಶಾಸ್ತç ಸಂಶೋಧನೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ತಮ್ಮ ಜ್ಞಾನದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ತಮ್ಮದೇ ನಾಯಕತ್ವವನ್ನು ಹೊಂದಿದ್ದಾರೆ. ಇವರು ಜನವರಿ 3, 2002 ರಂದು ಎಲ್ಲರನ್ನೂ ಅಗಲುತ್ತಾರೆ. ಅವರ ಸ್ಮರಣಾರ್ಥವಾಗಿ ಇಸ್ರೋದ ಶ್ರೀಹರಿಕೋಟ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ ಎಂದು 5 ಸೆಪ್ಟೆಂಬರ್ 2002ರಲ್ಲಿ ಹೆಸರಿಡಲಾಗುತ್ತದೆ. ಇವರು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಇಂದಿಗೂ ಶಾಶ್ವತವಾಗಿದೆ.
ಹಿಂದುಳಿದ ವರ್ಗಗಳ ಹರಿಕಾರ ಎಂದೇ ಖ್ಯಾತರಾಗಿರುವ ಡಿ. ದೇವರಾಜ ಅರಸ್ ಅವರು ಜನನಾಯಕ, ಬಡವರ ಧ್ವನಿಯಾಗಿ, ಸಮಾಜ ಸೇವಕರಾಗಿ ಪ್ರಸಿದ್ಧರಾದವರು. ಇವರು ರಾಜಕೀಯ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ಡಿ.ದೇವರಾಜ ಅರಸ್ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಡಿ. ದೇವರಾಜ ಅರಸ್ ಅವರು ಆಗಸ್ಟ್ ೨೦, ೧೯೧೫ ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ದೇವರಾಜ ಅರಸು ಮತ್ತು ತಾಯಿ ದೇವೀರ ಅಮ್ಮಣ್ಣಿ. ದೇವರಾಜ ಅರಸ್ ಅವರ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಮೈಸೂರಿನ ಉರ್ಸ್ ಬೋರ್ಡಿಂಗ್ ಶಾಲೆಯಲ್ಲಿ ಪಡೆದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಅಧ್ಯಯನ ಮಾಡಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಲಹಳ್ಳಿಗೆ ಹಿಂದಿರುಗಿದ ಅರಸ್ ಕೃಷಿಯಲ್ಲಿ ತೊಡಗಿದರು. ಆದರೆ ಸ್ವಭಾವತಃ ನಾಯಕತ್ವದ ಗುಣವನ್ನು ಹೊಂದಿದ್ದ ಅರಸ್ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಪಾದರ್ಪಣೆ ಮಾಡಿದರು. ರಾಜಕೀಯ ಜೀವನ: ದೇವರಾಜ ಅರಸ್ ಅವರು ೧೯೫೨ ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು. ಈ ಸಮಯದಲ್ಲಿ, ಮಹಾರಾಜರು ಇನ್ನೂ ಮೈಸೂರಿನಲ್ಲಿ ರಾಜ್ಯದ ಮುಖ್ಯಸ್ಥರಾಗಿದ್ದರು. ನಂತರ ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸ್ ಮಾರ್ಚ್ ೨೦, ೧೯೭೨ – ಡಿಸೆಂಬರ್ ೩೧, ೧೯೭೭ ಹಾಗೂ ಫೆಬ್ರವರಿ ೨೮, ೧೯೭೮ – ಜನವರಿ ೭, ೧೯೮೦ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಸಾಮಾಜಿಕ ಸುಧಾರಣೆ: ದೇವರಾಜ ಅರಸು ಸಮಾಜ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇವರಿಗೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದು ಮೊದಲ ಗುರಿಯಾಗಿತ್ತು. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿಮಂಡಲವನ್ನು ರಚಿಸಿದರು. “ಉಳುವವನಿಗೆ ಭೂಮಿ” ಅವರ ಮತ್ತೊಂದು ಮಹತ್ತರವಾದ ಯೋಜನೆಯನ್ನು ಜಾರಿಗೆ ತಂದಿದ್ದರು. ೧೯೭೩ರಲ್ಲಿ ಮೈಸೂರನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿದರು. ಅವರ ಕಾಲದಲ್ಲಿ ೧೬,೦೦೦ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲಾಯಿತು. ಇವರ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂ-ಮಾಲೀಕರಾದರು, ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು. ಇದ್ದರಿಂದ ದೇಶದಲ್ಲಿ ಸಾಮಾಜಿಕ ಅಸಮಾನತೆಯನ್ನು ಕಡಿಮೆಗೊಳಿಸಲಾಯಿತು. ರಾಜ್ಯದಲ್ಲಿ ಅಭಿವೃದ್ದಿಯ ಹೊಸ ಶಖೆಗೆ ಕಾರಣರಾಗಿದ್ದರು. ಪ್ರತಿ ಮನೆಯಲ್ಲೂ ವಿದ್ಯುತ್ ಬಲ್ಬ್ ಹೊಂದುವ ಯೋಜನೆಯನ್ನು ಜಾರಿಗೆ ತಂದವರು. ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಅಭಿವೃದ್ಧಿಪಡಿಸಲು ದೇವರಾಜ ಅರಸ್ ಅವರು ಬೆಂಬಲ ಸೂಚಿಸಿದರು. ೧೯೭೬ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಈ ಆರಂಭಿಕ ಬೀಜ ಹೂಡಿಕೆಯು ಎಲೆಕ್ಟಾçನಿಕ್ಸ್ ಸಿಟಿಗೆ ಅಡಿಪಾಯ ಹಾಕಿತು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಅನೇಕ ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದಾದ ಕಾಳಿ ಯೋಜನೆಯು ಹಲವಾರು ವಲಯಗಳ ವಿರೋಧದ ನಡುವೆ ಕಾರ್ಯಗತಗೊಂಡಿತು. ಡಿ. ದೇವರಾಜ ಅರಸ್ ಅವರು ಜೂನ್ ೬, ೧೯೮೨ ತಮ್ಮ ೬೬ ವಯಸ್ಸಿನಲ್ಲಿ ನಿಧನರಾದರು.
ಸಂಘಶತಾಬ್ದಿ ವರ್ಷದ ಸಂದರ್ಭದಲ್ಲಿ, ಪಂಚಪರಿವರ್ತನೆಯ ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶೀ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರ- ಈ ಐದು ವಿಷಯಗಳ ಕುರಿತು ಚರಿತಪಂಚಕ ನೂತನ ಕೃತಿ ಮೂಡಿಬಂದಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿರುವ ಶ್ರೀ ನಾರಾಯಣ ಶೇವಿರೆಯವರು ಈ ಕೃತಿಯ ಲೇಖಕರು. ರಾಷ್ಟ್ರೋತ್ಥಾನ ಸಾಹಿತ್ಯ ಈ ಕೃತಿಯನ್ನು ಪ್ರಕಟಿಸಿದೆ. ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಮತ್ತು ಪೋಷಣೆಯನ್ನು ಒದಗಿಸಿದ್ದ ಹಿಂದೂ ಕುಟುಂಬಪದ್ಧತಿಯ ಪುನಃಸ್ಥಾಪನೆಯ ಅವಶ್ಯಕತೆ, ಸಕಲ ಜೀವಜಾಲವನ್ನೂ ಪೊರೆಯುತ್ತಿರುವ ಪಂಚಭೂತಾತ್ಮಕವಾದ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ, ಪ್ರತಿಯೊಬ್ಬರ ಗೌರವಪೂರ್ಣ ಬದುಕಿಗೆ ದಾರಿಮಾಡುವ ಸಾಮಾಜಿಕ ಸಾಮರಸ್ಯಸಾಧನೆಯ ಮಾರ್ಗಗಳು, ಸ್ವಂತಿಕೆಯ ಮೂಲಕ ಸ್ವಾವಲಂಬನೆ ಸಾಧಿಸಲು ಕಾರಣವಾಗಬಲ್ಲ ಸ್ವದೇಶೀ ಪ್ರಸ್ಥಾನದ ಅನುಸರಣೆ, ಎಲ್ಲರ ಹಕ್ಕುಗಳನ್ನೂ ಖಾತ್ರಿಪಡಿಸುವ ನಾಗರಿಕ ಕರ್ತವ್ಯಪ್ರಜ್ಞೆಯ ಜಾಗರಣ - ಇವುಗಳನ್ನು ಕುರಿತು ಒಂದಿಷ್ಟು ಚಿಂತನ ಮಂಥನಕ್ಕೆ ಬೇಕಾದ ಆಕರ ಸಾಮಗ್ರಿಯನ್ನೊದಗಿಸುತ್ತದೆ ಚರಿತಪಂಚಕ. ಪುಸ್ತಕಕ್ಕಾಗಿ ಸಂಪರ್ಕಿಸಿ: 6360581957
ಬೇಂದ್ರೆಯವರ ಸಾಹಿತ್ಯದ ಮೇಲೆ ಅಲ್ಲಿ ಇಲ್ಲಿ ಕೆಲವು ಲೇಖನಗಳು, ಅವರ ಕಾವ್ಯದ ಮೇಲೆ ಒಂದೆರಡು ಗ್ರಂಥಗಳು ಬಂದಿದ್ದರೂ ಸಮಗ್ರವಾಗಿ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ, ಅವರ ಸಾಹಿತ್ಯ ಮೇಲೆ ಬಂದಿರುವ ಎಲ್ಲ ವಿಮರ್ಶೆಗಳನ್ನೂ ಗಮನಿಸಿ, ತಮ್ಮ ಕೃತಿಗಳ ಮೇಲೆ ಬೇಂದ್ರೆಯವರೆ ಹೇಳಿರುವ ಮಾತುಗಳನ್ನೆಲ್ಲ ಸಂಗ್ರಹಿಸಿ, ಸಮೀಕ್ಷೆ ನಡೆಸಿ, ಬೇಂದ್ರೆಯವರು ಯಾವ ಯಾವ ಕೃತಿಗಳಿಂದ, ಸಾಹಿತಿಗಳಿಂದ ಪ್ರಭಾವಿತರಾದರು. ಆ ಪ್ರಭಾವಗಳನ್ನೆಲ್ಲ ಮೀರಿ ನಿಂತು ಅವರ ಕೃತಿಗಳು ಹೇಗೆ ಸ್ವತಂತ್ರ ಕೃತಿಗಳಾಗಿ ಕನ್ನಡ ಕಾವ್ಯ ಸಂಪ್ರದಾಯದಲ್ಲೇ ಅನನ್ಯವಾಗಿವೆ ಎಂಬುದನ್ನು ಇಲ್ಲಿ ಸವಿಸ್ತಾರವಾಗಿ ಚಿತ್ರಿಸಿ ಶ್ರೀ ಅಮೂರರು ಬೇಂದ್ರೆಯವರ ಸಾಹಿತ್ಯದ ಆಳವಾದ ಅಭ್ಯಾಸಕ್ಕೆ ತುಂಬ ಸಹಕಾರಿಯಾಗುವಂತೆ ರಚಿಸಿದ ಕೃತಿ ಇಲ್ಲಿದೆ. ಕನ್ನಡ ರಸಿಕರೆಲ್ಲರೂ ಗಮನಿಸಲೇಬೇಕಾದ ಗ್ರಂಥ ಇದು ಎಂದೂ ಧಾರಾಳವಾಗಿ ಹೇಳಬಹುದು. ಹಾಗಂತ ಇಲ್ಲಿ ಹೇಳಿದ ಎಲ್ಲ ಸಂಗತಿಗಳನ್ನೂ ಎಲ್ಲರೂ ಒಪ್ಪುತ್ತಾರೆಂದಾಗಲೀ, ಒಪ್ಪಲೇಬೇಕೆಂದಾಗಲೀ ಅಲ್ಲ. ಮುಂದೆ ಚರ್ಚಿಸಿ ಒಂದು ಸಿದ್ಧಾಂತಕ್ಕೆ ಬರಬಹುದಾದ, ಹಾಗೆ ಬರಲು ತಕ್ಕ ಮೌಲಿಕ ಸಾಮಗ್ರಿ ಇಲ್ಲಿದೆ. ಅಂಥ ಕೆಲಸ ಸಾರೋದ್ಧಾರ ನಡೆಯಲಿ. ಆ ಮೂಲಕ ಈ ಕೃತಿ ಕೃತಿಕಾರ ಇಬ್ಬರೂ ಕೃತಾರ್ಥತೆ ಪಡೆಯಲಿ ಎಂಬುದು ನಮ್ಮ ಹಾರೈಕೆ.
ಆರ್ಎಸ್ಎಸ್ ನನ್ನ ಹೃದಯದ ಮಿಡಿತ. – ಜನರಲ್ ಕೆ. ಸಿ. ಕಾರ್ಯಪ್ಪ ನಾನೊಬ್ಬ ಆರ್ಎಸ್ಎಸ್ನ ಗೌರವ ಸದಸ್ಯ. – ಆಚಾರ್ಯ ವಿನೋಬಾ ಭಾವೆ ಸಾಮಾಜಿಕ ಪರಿವರ್ತನೆ, ಜಾತಿ ನಿರ್ಮೂಲನ ಹಾಗೂ ಬಡವರ ಕಣ್ಣೀರು ತೊಡೆಯುವ ಸಾಮರ್ಥ್ಯ ಆರ್ಎಸ್ಎಸ್ಗೆ ಮಾತ್ರವಿದೆ. – ಶ್ರೀ ಜಯಪ್ರಕಾಶ ನಾರಾಯಣ ನಾನು ಆರ್ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಅನುಶಾಸನ ಹಾಗೂ ಅಸ್ಪೃಶ್ಯತೆಯ ಲವಲೇಶವೂ ಇಲ್ಲದ ವಾತಾವರಣ ಕಂಡು ತುಂಬಾ ಪ್ರಭಾವಿತನಾಗಿರುವೆ. – ಮಹಾತ್ಮ ಗಾಂಧಿ, ಸೆಪ್ಟೆಂಬರ್ 16, 1947 ದೆಹಲಿ. ತನ್ನ ಜೊತೆಗಿರುವ ಸ್ವಯಂಸೇವಕನ ಜಾತಿ ಯಾವುದೆಂಬುದನ್ನು ತಿಳಿಯುವ ಆಸಕ್ತಿ ತೋರದೆ, ಪರಸ್ಪರ ಸಹೋದರರಂತೆ ಹಾಗೂ ಸಂಪೂರ್ಣ ಸಮಾನತೆಯಿಂದ ಸ್ವಯಂಸೇವಕರು ವ್ಯವಹರಿಸುವುದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿರುವೆ. – ಡಾ. ಬಿ. ಆರ್. ಅಂಬೇಡ್ಕರ್, (1939ರ ಮೇ ತಿಂಗಳಲ್ಲಿ ಪುಣೆಯಲ್ಲಿ ನಡೆದ ಆರ್ಎಸ್ಎಸ್ ಶಿಬಿರದಲ್ಲಿ) ಜಗತ್ತಿನಲ್ಲಿ ಕೇವಲ ಎಡಪಂಥೀಯೇತರ ಕ್ರಾಂತಿಕಾರಿ ಪಡೆ ಮತ್ತು ಅದರ ನೇತೃತ್ವವನ್ನು ವಹಿಸಿದ್ದ ನೂರಾರು, ಸಾವಿರಾರು ಸ್ವಯಂಸೇವಕರು ಭಾರತಕ್ಕೆ ಮತ್ತೆ ಪ್ರಜಾತಂತ್ರವನ್ನು ತಂದುಕೊಟ್ಟರು. - ದಿ ಎಕನಾಮಿಸ್ಟ್, ಲಂಡನ್, ಡಿಸೆಂಬರ್ 4, 1976. ‘ದೇಶದಲ್ಲಿ ಸಮುದಾಯಗಳ ನಡುವೆ ವಿಷಮತೆಯನ್ನು ಕಡಿಮೆ ಮಾಡಲು ನಡೆದಿರುವ ಎಲ್ಲ ಪ್ರಯತ್ನಗಳ ಪೈಕಿ ಸಂಘದ ಪ್ರಯತ್ನವೇ ಅತಿ ಪರಿಣಾಮಕಾರಿಯಾದದ್ದು. ಅಧ್ಯಾತ್ಮ, ಭಕ್ತಿ, ಸಾಮಾಜಿಕ ಎಲ್ಲದರಲ್ಲೂ ಈ ಪ್ರಯತ್ನದ ಪರಿಣಾಮ ಇದೆ. - ಪದ್ಮಶ್ರೀ ರಮೇಶ್ ಪತಂಗೆ, ಹಿರಿಯ ಚಿಂತಕ ಆರ್ಎಸ್ಎಸ್ನ ‘ಸೇವಾ ಉಪಕ್ರಮವು ಸೇವೆಯನ್ನು ಮಾಡುವವರು ಮತ್ತು ಅದನ್ನು ಪಡೆದುಕೊಳ್ಳುವವರು ಇಬ್ಬರನ್ನೂ 'ಇದು ನಮಗೆ ಸೇರಿದ್ದು' ಎನ್ನುವಂತಹ ಮನೋಭಾವಕ್ಕೆ ಮರುಜೀವ ನೀಡಿದೆ. - ಮಾಲಿನಿ ಭಟ್ಟಾಚಾರ್ಜಿ, ಲೇಖಕಿ ಸಂಘವು ಕೇವಲ ಒಂದಿಷ್ಟು ಚಟುವಟಿಕೆಗಳನ್ನು ಯಾಂತ್ರಿಕವಾಗಿ ಅನುಷ್ಠಾನಗೊಳಿಸಲು ಹುಟ್ಟಿರುವ ಸಂಸ್ಥೆಯಲ್ಲ. ದೇಶದ ಸಾಂಸ್ಕೃತಿಕ ಪುನರುಜ್ಜಿವನದ ತಾತ್ವಿಕ ಪರಿಕಲ್ಪನೆಗಳಿಂದ, ದೈಹಿಕ ಶಿಸ್ತು, ಮಾನಸಿಕ ಶಕ್ತಿ, ದೃಢ ಸಂಕಲ್ಪ ಮತ್ತು ಸೇವೆಗಳ ಮೂಲಕ ಸಮಾಜದ ಎಲ್ಲ ವರ್ಗಗಳ ಎಲ್ಲ ಜನರ ಹೃದಯ ಸ್ಪರ್ಶಿಸುವುದರ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನದ ದೂರದೃಷ್ಟಿಯ ಆಶಯವನ್ನು ಹೊಂದಿದೆ. - ಡಾ|| ಆರ್ ಬಾಲಸುಬ್ರಹ್ಮಣ್ಯಂ, ಸಾಮಾಜಿಕ ಕಾರ್ಯಕರ್ತ ಸಂಘಪರಿವಾರದ ತೇಜಸ್ಸು, ಶಿಸ್ತು, ಅಚ್ಚುಕಟ್ಟುತನ, ರಾಷ್ಟ್ರಭಕ್ತಿ, ನಿಃಸ್ವಾರ್ಥಸೇವಾ ಮನೋಭಾವವನ್ನು ಕಳೆದ ಕಾಲು ಶತಮಾನದಿಂದ ತುಂಬಾ ಹತ್ತಿರದಿಂದ ಕಾಣುತ್ತಿದ್ದೇನೆ. ಇಂಥ ಉನ್ನತಾದರ್ಶಗಳನ್ನು ಇಟ್ಟುಕೊಂಡ ಸಂಘಕ್ಕೆ ಈಗ ಶತಮಾನದ ಸಂಭ್ರಮ. ಇಂಥ ಸಂಸ್ಥೆಯ ಮೂಲಕ ರಾಷ್ಟçನಿರ್ಮಾಣದಲ್ಲಿ ಅದರ ಸಂಗೋಪನದಲ್ಲಿ ತೊಡಗಿಕೊಳ್ಳೋಣವೆಂಬ ಆಕಾಂಕ್ಷೆ ನಮ್ಮ ಜನರಲ್ಲಿ ಹೆಚ್ಚಲಿ, ಬೆಳೆಯಲೆಂದು ನಾನು ಆಶಿಸುತ್ತೇನೆ. - ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ಸಾಹಿತಿ. ಶಿಸ್ತು, ಅನುಶಾಸನ, ನೈತಿಕ ನಿಷ್ಠೆ, ದೈವಭಕ್ತಿ, ದೇಶಪ್ರೇಮ ಈ ಎಲ್ಲ ಸದ್ಗುಣಗಳನ್ನೂ ಜನರಲ್ಲಿ ಒಮ್ಮೆಗೇ ಉದ್ದುದ್ಧಗೊಳಿಸುವ ಜಗತ್ತಿನ ಏಕೈಕ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ನಿಮ್ಮ ಮಕ್ಕಳು ಯೋಗ್ಯವಾಗಿ, ಸರಿಯಾದ ಸಭ್ಯ ವಾತಾವರಣದಲ್ಲಿ ಬೆಳೆಯಬೇಕೆಂದು ಕಾಳಜಿಯಿದ್ದಲ್ಲಿ, ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಕಳಿಸಿ.” - ಕಂಚಿಯ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿಗಳು (1982ರ ಮೇ ತಿಂಗಳಲ್ಲಿ ಸೇಲಂನಲ್ಲಿ ನಡೆದ ರಾಜ್ಯಮಟ್ಟದ ಸಂಘಶಿಕ್ಷಾವರ್ಗದ ಸಮಾರೋಪ ಭಾಷಣದಲ್ಲಿ) ಉಜ್ವಲ ರಾಷ್ಟ್ರಭಕ್ತಿಯ ದ್ಯೋತಕವಾಗಿ ಇಂದಿಗೂ ಯುವಪೀಳಿಗೆಗೆ ಮಾರ್ಗದರ್ಶಕ ಸ್ಥಾನದಲ್ಲಿ ಸಂಘ ನಿಂತಿದೆ. ಶತಕದ ಹೊಸ್ತಿಲಲ್ಲಿ ದೇಶರಕ್ಷಣೆಯ ಭರವಸೆಯಾಗಿ ಸಂಘಕಾರ್ಯ ಬೆಳೆದು ನಿಂತಿದೆ. - ಪ್ರೊ| ಶಾಂತಿಶ್ರೀ ಧುಲಿಪುಡಿ ಪಂಡಿತ್, ಶಿಕ್ಷಣತಜ್ಞೆ ಆರ್ಎಸ್ಎಸ್ ತನ್ನ ಬೃಹತ್ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿ, ಯಾವುದೇ ಸಾರ್ವಜನಿಕ ನಿಧಿಯ ಮೇಲೆ ಅವಲಂಬಿತವಾಗದೆ. ಯಾವುದೇ ರೀತಿಯ ಫಲಾಕಾಂಕ್ಷೆ ಹೊಂದಿರದ ಜನರಿಂದ ನಡೆಯುತ್ತಿದೆ. ಕಳೆದ 100 ವರ್ಷಗಳಲ್ಲಿ ಈ ಸಂಸ್ಥೆಯನ್ನು ಸ್ವಯಂಸೇವಕರೇ ಗಟ್ಟಿಯಾಗಿ ಕಟ್ಟಿದ್ದಾರೆ. - ಡಾ. ರಾಮ್ ಮಾಧವ್, ಹಿರಿಯ ಪ್ರಚಾರಕರು, ಆರ್ ಎಸ್ ಎಸ್
ಜಗತ್ತಿನಲ್ಲಿ ಪ್ರಸ್ತುತ ಎಲ್ಲಾ ವೃತ್ತಿಗಳೂ ಮಹತ್ವವಾದದ್ದೇ. ಆರ್ಥಿಕ ನೆಲೆಗಟ್ಟಿನಲ್ಲಿ ಅಲ್ಲಿನ ಉದ್ಯೋಗಿಗಳಿಗೆ ಅವರವರ ಜವಾಬ್ದಾರಿಯ ಆಧಾರದ ಮೇಲೆ ಸಂಬಳ ಬರುತ್ತದೆಯಾದರೂ ವೃತ್ತಿಯ ಮಹತ್ವದಲ್ಲಿ ಯಾವುದೇ ಭಿನ್ನತೆ ಇಲ್ಲ. ಒಂದು ದೇಶಕ್ಕೆ ಅದರ ಪ್ರಧಾನಮಂತ್ರಿಯಿAದ ಅದರ ಸಾಮಾನ್ಯ ನಾಗರಿಕನವರೆಗೆ ಮಾಡುತ್ತಿರುವ ಎಲ್ಲಾ ವೃತ್ತಿಯೂ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಹಾಗಾಗಿ ಯಾವುದೇ ವೃತ್ತಿ ಮಾಡುವ ವ್ಯಕ್ತಿಯನ್ನು ಕೀಳಾಗಿ ಕಾಣಬಾರದು. ಎಲ್ಲಾ ವೃತ್ತಿಗಳಿಗೆ ವೃತ್ತಿಗೌರವ ನೀಡಬೇಕು. ವೃತ್ತಿಯಲ್ಲಿ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯ ಸಲ್ಲ. ಸಮಾಜದಲ್ಲಿ ವೃತ್ತಿಯಾಧಾರಿತವಾಗಿ ಮೇಲು, ಕೀಳೆಂಬ ಭಾವನೆ ಮೂಡಬಾರದು. ನಾವೆಲ್ಲರೂ ಒಂದೇ ಎನ್ನುವುದನ್ನು ಸಾರಬೇಕು. ಎಲ್ಲಾ ವೃತ್ತಿಯವರನ್ನೂ ಗೌರವಿಸಬೇಕು.
ನಗುವಿನಿಂದ ಪುಟಿದೇಳುತ್ತಿರುವ ಸುಂದರ ನಿಷ್ಕಲ್ಮಶ ಮುಖಗಳು, ಅನುಭವದ ಪರಿಪೂರ್ಣತೆಯಿಂದ ಹೊಳೆಯುತ್ತಿರುವ ಕಣ್ಣುಗಳು. ಇಲ್ಲಿನ ನಿವಾಸಿಗಳ ಪರಿಚಯವನ್ನು ಮಾಡಿಕೊಡುತ್ತವೆ. ಜೀವನೋತ್ಸಾಹದಿಂದ ತುಂಬಿರುವ ಇವರನ್ನು ನೋಡಿದರೆ, ವರ್ಷಾನುಗಟ್ಟಲೆಯಿಂದ ಇವರ ಕುಟುಂಬದವರು ಇವರೊಂದಿಗಿಲ್ಲ ಎಂದು ಊಹಿಸಲೂ ಆಗದಷ್ಟು ಅಚ್ಚರಿಯ ವಾತಾವರಣ. ಇದು ಕಾಣಸಿಗುವುದು ಮಧ್ಯಪ್ರದೇಶದ ರಾಜಧಾನಿ ಭೋಪಾಲದ ಮಧ್ಯದಲ್ಲಿರುವ ಆನಂದಧಾಮ ಹಿರಿಯರ ಜನಸೇವಾ ಕೇಂದ್ರದಲ್ಲಿ. ಮಧ್ಯಪ್ರದೇಶದ ಸೇವಾಭಾರತಿಯ ವತಿಯಿಂದ ನಡೆಸಲಾಗುತ್ತಿರುವ ಈ ಕೇಂದ್ರದಲ್ಲಿ ವಯೋವೃದ್ಧರು ಒಂದು ಕುಟುಂಬದವರಂತೆಯೇ ಆನಂದದಿಂದ ಇದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಸೇವಾಭಾರತಿಯ ಅಂದಿನ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ದೂರದರ್ಶಿತ್ವದಿಂದ ಈ ಕಲ್ಪನೆಯನ್ನು ಹುಟ್ಟು ಹಾಕಲಾಯಿತು. ತುಳಸೀ ರಾಮಾಯಣದಿಂದ ಸೌಖ್ಯಸುಧೆಯು ಹರಿಯುವಂತೆ, ಇಲ್ಲಿ ಶ್ರೀ ರಾಜೇಂದ್ರಪ್ರಸಾದ ಗುಪ್ತಾ ಪರಿವಾರದ ಸಾರಥ್ಯದಲ್ಲಿ ಹದಿನೈದು ವರ್ಷಗಳಿಂದ ಆನಂದದ ಹೊನಲು ಹರಿಯುತ್ತಿದೆ. ಬರಕತಉಲ್ಲಾ ವಿಶ್ವವಿದ್ಯಾಲಯದ ಡೆಪ್ಯುಟಿ ಡೈರೆಕ್ಟರ್ ಪದವಿಯಿಂದ ಸ್ವಯಂನಿವೃತ್ತರಾಗಿರುವ ಗುಪ್ತಾಜೀ ಸಭಾ ಕಾರ್ಯಕ್ರಮಗಳಲ್ಲಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಾರೆ. ಆ ಪರಿಸರದಲ್ಲಿ ಬಡವರ ಮಕ್ಕಳಿಗಾಗಿ ಮೂರು ಹೊತ್ತು ನಡೆಯುವ ತರಬೇತಿ ಸಂಸ್ಥೆಯಲ್ಲಿ ಸಾವಿರದೈನೂರಕ್ಕೂ ಹೆಚ್ಚಿನ ಮಕ್ಕಳು ಅದರ ಲಾಭವನ್ನು ಪಡೆಯುತ್ತಿದ್ದಾರೆ. ೨೦೦೫ರ ಡಿಸೆಂಬರ್ ೧೮ರಂದು ಈ ಕೇಂದ್ರದ ಸ್ಥಾಪನೆಯಾಯಿತು ಎಂದು ಸಂಸ್ಥೆಯ ಮುಖ್ಯಸ್ಥ ಶ್ರೀ ರವೀಂದ್ರ ಸುರಂಗೆ ಹೇಳುತ್ತಾರೆ. ಇಲ್ಲಿ ೧೫ ಮಹಿಳೆಯರು ಮತ್ತು ೧೩ ಪುರುಷರಿದ್ದಾರೆ. ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಯೋಗ ಕೇಂದ್ರ, ಫಿಸಿಯೋಥೆರಪಿ, ನ್ಯೂರೋಥೆರಪಿ ಕೇಂದ್ರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಉಚಿತ ಸಲಹಾ ಕೇಂದ್ರ, ಇವೆಲ್ಲವನ್ನೂ ನಡೆಸಲಾಗುತ್ತಿದೆ. ಇಲ್ಲಿ ಪ್ರತಿದಿನ ಬರುವ ಹೋಮಿಯೋಪತಿ ವೈದ್ಯರು ಆಶ್ರಮವಾಸಿಗಳನ್ನು ಪರೀಕ್ಷಿಸುವುದರ ಜೊತೆಜೊತೆಗೆ ಹೊರ ರೋಗಿಗಳನ್ನೂ ಪರೀಕ್ಷಿಸುತ್ತಾರೆ. ಇಲ್ಲಿನ ಹೊರರೋಗಿ ವಿಭಾಗದಲ್ಲಿ ಪ್ರತಿ ತಿಂಗಳೂ ೫೦೦ಕ್ಕೂ ಹೆಚ್ಚಿನ ರೋಗಿಗಳು ಬಂದು ವೈದ್ಯಕೀಯ ಸೇವೆಯ ಉಪಯೋಗ ಪಡೆಯುತ್ತಾರೆ. ಬೆಳಿಗ್ಗೆ ಯೋಗದಿಂದ ಹಿಡಿದು ಸಂಜೆಯ ಪೂಜೆಯವರೆಗೆ ಒಂದು ವ್ಯವಸ್ಥಿತ ರೀತಿಯ ದಿನಚರಿಯ ಜೊತೆಗೆ, ಇಲ್ಲಿನ ಆಶ್ರಮವಾಸಿಗಳಿಗೆ ಪ್ರತಿದಿನ ೪ರಿಂದ ೬ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಾಮಾಜಿಕ ಕಳಕಳಿ ಇರುವ ಸೇವಾ ಮನೋಭಾವದ ವ್ಯಕ್ತಿಗಳೂ ಇವರೊಂದಿಗೆ ಸಮಯವನ್ನು ಕಳೆಯುತ್ತಾರೆ. ಕೆಲವರಂತೂ ತಮ್ಮ ಮಕ್ಕಳ ಜನ್ಮದಿನವನ್ನೋ, ಅಥವಾ ಕೆಲ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನೋ, ಈ ವೃದ್ಧರೊಂದಿಗೆ ಆಚರಿಸಿಕೊಳ್ಳುತ್ತಾರೆ. ಆವರಣದಲ್ಲಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳಿವೆ. ಜೊತೆಗೆ ಚಿಕಿತ್ಸೆ, ಚಿಂತನೆ, ಸಾಂಸ್ಕೃತಿಕ ಕೊಠಡಿಗಳೂ, ಮಂದಿರ ಹಾಗೂ ಉದ್ಯಾನವನ ಮತ್ತು ಉಪಾಹಾರದ ಕೊಠಡಿಗಳಿದ್ದು, ಒಂದು ಪುಸ್ತಕಾಲಯವೂ ಇದೆ. ತುರ್ತು ಅವಶ್ಯಕತೆಗಳಿಗಾಗಿ ಇಲ್ಲಿ ಒಂದು ಆಂಬ್ಯುಲೆನ್ಸ್ ದಿನದ ೨೪ ಗಂಟೆಗಳ ಕಾಲವೂ ಲಭ್ಯವಿರುತ್ತದೆ. ಈ ಕೇಂದ್ರದ ಪ್ರಾರಂಭದಿಂದಲೂ ಜೊತೆಗಿರುವ ಮತ್ತು ಹಿಂದೆ ಕ್ಷೇತ್ರದ ಸೇವಾ ಪ್ರಮುಖರಾಗಿದ್ದ ಗೋರೆಲಾಲ್, "ಇಲ್ಲಿ ನಾವು ೬೦ ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರನ್ನೇ ಸೇರಿಸಿಕೊಳ್ಳುತ್ತೇವೆ. ಅವರ ಅರ್ಜಿ ತುಂಬಿಸುವಾಗ ನಾವು ಅವರ ಕೌಟುಂಬಿಕ ಹಿನ್ನೆಲೆಯನ್ನು, ಪ್ರಸ್ತುತ ಪರಿಸ್ಥಿತಿಯನ್ನೂ ವಿಚಾರಿಸುತ್ತೇವೆ. ನಮ್ಮೊಂದಿಗಿನ ಸಮಾಲೋಚನೆಯಿಂದ ಬಿಕ್ಕಟ್ಟು ದೂರವಾಗಿ ಅವರು ತಮ್ಮ ಮನೆಗೆ ಹಿಂತಿರುಗಲಿ ಎನ್ನುವುದು ನಮ್ಮ ಮೊದಲ ಅಪೇಕ್ಷೆಯಾಗಿರುತ್ತದೆ" ಎನ್ನುತ್ತಾರೆ. ಕೇಂದ್ರದಲ್ಲಿರುವವರನ್ನು ಅವರ ಕುಟುಂಬದ ಸದಸ್ಯರು ಬಂದು ಭೇಟಿ ಮಾಡಲು ಒಂದು ನಿಗದಿತ ಸಮಯವಿರುತ್ತದೆ. ಸೇವಾಭಾರತಿಯ ಪೂರ್ಣಾವಧಿ ಕಾರ್ಯಕರ್ತ ಶ್ರೀ ಕೈಲಾಶ್ ಕುಶಾವಹ್ ಅವರು. "ಇಲ್ಲಿನ ಸಮಾಲೋಚನಾ ಸಮಿತಿಯ ಶ್ರಮದ ಫಲವಾಗಿ ಬಹಳಷ್ಟು ಜನ ತಂತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ" ಎನ್ನುತ್ತಾರೆ. ಸ್ವರ್ಗಸ್ಥರಾದ ಮುಕ್ತಾ ಸೆಹಗಲ್ ಅವರಿಗೆ ಯಾರೂ ಇರಲಿಲ್ಲ. ಅವರು ತಮ್ಮ ಮನೆಯಲ್ಲಿ ಬಿದ್ದು ಓಡಾಡಲು ಅಸಮರ್ಥರಾದಾಗ ಸೇವಾಭಾರತಿಯ ಕಾರ್ಯಕರ್ತರು ಅವರ ಚಿಕಿತ್ಸೆ ಹಾಗೂ ಸೇವೆಯನ್ನು ಅವರಿರುವಷ್ಟು ಕಾಲವೂ ನೋಡಿಕೊಂಡರು. ಮುಕ್ತಾಜೀ ಅವರು ತಾವು ದೇಹ ತ್ಯಜಿಸುವ ಮೊದಲು ಅರೇರಾ ಕಾಲೋನಿಯಲ್ಲಿರುವ ತಮ್ಮ ಮನೆಯನ್ನು ಬಡ ಹುಡುಗಿಯರ ವಿದ್ಯಾರ್ಥಿನಿ ನಿಲಯವನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಸೇವಾಭಾರತಿಗೆ ದಾನ ನೀಡಿದರು" ಎಂದು ಹೃದಯ ತುಂಬಿದ ಮನದಿಂದ ನೆನಪಿಸಿಕೊಳ್ಳುತ್ತಾರೆ. ಮುಕ್ತಾಜೀ ಅವರಂತೆಯೇ ಇಲ್ಲಿ ಆನೇಕ ವೃದ್ಧರ ಅಂತಿಮ ವಿಧಿವಿಧಾನಗಳು ಕುಟುಂಬದವರು ಅಪೇಕ್ಷೆಪಟ್ಟಂತೆ ನಡೆಯುತ್ತವೆ. ಇಲ್ಲಿರುವ ಎಲ್ಲರಿಗೂ ಆನಂದಧಾಮವೇ ತಮ್ಮ ಮನೆ ಎನ್ನುವ ಪ್ರೀತಿಯ ಅನುಭೂತಿಯಿದೆ." ೧೫ ವರ್ಷಗಳಿಂದ ಈ ಧಾಮವು ಸರಕಾರದ ಯಾವುದೇ ಸಹಾಯವಿಲ್ಲದೆ, ಸಂಪೂರ್ಣವಾಗಿ ಸಮಾಜಮುಖಿ ಸನ್ಮನಸ್ಸಿನವರ ಬೆಂಬಲದಿAದಲೇ ಸಮರ್ಥವಾಗಿ ಸಾಗುತ್ತಿದೆ" ಎಂದು ಸೇವಾಭಾರತಿಯ ಕ್ಷೇತ್ರ ಸಂಘಟಕರಾದ ಶ್ರೀ ರಾಮೇಂದ್ರಜೀ ಹೇಳುತ್ತಾರೆ. ಸಂಪರ್ಕ - ಶ್ರೀ ರಾಮೇಂದ್ರಜೀ 9425116748
ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇತ್ತೀಚೆಗೆ ಯುಕೆ ಸಂಸತ್ತಿಗೆ ಭೇಟಿ ನೀಡಿದ್ದು, ಈ ವೇಳೆ ಹನುಮಾನ್ ಚಾಲೀಸಾದ ಶ್ಲೋಕಗಳನ್ನು ಪಠಿಸಲಾಯಿತು. ಯುಕೆ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದು ಇದೇ ಮೊದಲು. ಜನರು ಒಟ್ಟಾಗಿ ಶ್ಲೋಕಗಳನ್ನು ಹಾಡುವ ವೀಡಿಯೊವನ್ನು ಬಾಗೇಶ್ವರ ಧಾಮದ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿದೆ. ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸಮ್ಮುಖದಲ್ಲಿ ಹಲವಾರು ಜನರು, ಅಧಿಕಾರಿಗಳು ಮತ್ತು ಶಾಸಕರು ಕಣ್ಣು ಮುಚ್ಚಿ ಶ್ಲೋಕಗಳನ್ನು ಪಠಿಸುತ್ತಿರುವುದು ಕಂಡುಬಂದಿದೆ. ಸಂಸತ್ತಿನಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳು ಭಕ್ತಿಯಿಂದ ಪಠಿಸಿದರು ಎಂದು ಬಾಗೇಶ್ವರ ಧಾಮ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ವರದಿಯ ಪ್ರಕಾರ, ಬ್ರಿಟಿಷ್ ಸಂಸತ್ತಿನಲ್ಲಿ ಭಾರತೀಯ ಧಾರ್ಮಿಕ ಪಠ್ಯವನ್ನು ಪಠಿಸಿದ್ದು ಇದೇ ಮೊದಲು. ವೀಡಿಯೊದಲ್ಲಿ, ಪಂಡಿತ್ ಧೀರೇಂದ್ರ ಶಾಸ್ತ್ರಿ ಕೇಸರಿ ಉಡುಪನ್ನು ಧರಿಸಿ, ಅಲ್ಲಿದ್ದವರು ಅವರನ್ನು ಅನುಸರಿಸಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದಂತೆ ಮಂತ್ರಗಳನ್ನು ಮುನ್ನಡೆಸುತ್ತಿರುವುದು ಕಂಡುಬAದಿದೆ. ಧೀರೇಂದ್ರ ಶಾಸ್ತ್ರಿ ಅವರ ಅಂತರರಾಷ್ಟ್ರೀಯ ಸಂಪರ್ಕದ ಮಧ್ಯೆ ಈ ಭೇಟಿ ಬಂದಿದೆ. ಆಸ್ಟ್ರೇಲಿಯಾ, ಅಮೆರಿಕ ಮತ್ತು ಯುರೋಪ್ನಲ್ಲಿ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳು ಮತ್ತು ಪ್ರವಚನಗಳು ಇದರಲ್ಲಿ ಸೇರಿವೆ.

22ನೆಯ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರಟವರು ಸೂರ್ಯನಾರಾಯಣರಾವ್. 20ನೇ ಆಗಸ್ಟ್ 1924ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಸೂರೂಜೀಯವರು ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ನಿರಂತರ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂಸೇವಕರನ್ನು ಸೇವೆಯೊಂದಿಗೆ ಜೋಡಿಸಿದ್ದಲ್ಲದೆ, ಇಡೀ ದೇಶದಲ್ಲಿ ಸೇವಾ ಕಾರ್ಯಗಳ ಯೋಜನೆಗಳನ್ನು ತಯಾರಿಸಿದರು. ಸೂರೂಜೀ ಅವರಿಗೆ ಬಾಲ್ಯದಲ್ಲೇ ಸಂಘದ ದ್ವಿತೀಯ ಸರಸಂಘಚಾಲಕರಾದ ಗೋಳ್ವಲ್ಕರ್ ಗುರೂಜಿಯವರ ಸಾನ್ನಿಧ್ಯ ದೊರೆಯಿತು. ಗುರೂಜಿಯವರು ಪ್ರವಾಸದ ನಿಮಿತ್ತ ಕರ್ನಾಟಕಕ್ಕೆ ಯಾವಾಗ ಬಂದರೂ ಇವರ ಮನೆಯಲ್ಲಿ ತಂಗುವುದು ಸಾಮಾನ್ಯವಾಗಿತ್ತು. ಸೂರೂಜಿಯವರು ಗಣಿತದಲ್ಲಿ ಆನರ್ಸ್ ಓದಿ, ಪ್ರಚಾರಕರಾಗಿ ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಂಡರು. ತಮ್ಮ ಪ್ರಚಾರಕ ಜೀವನದಲ್ಲಿ ಸೂರೂಜೀಯವರು ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದರು. 1972ರಲ್ಲಿ ಸೂರೂಜೀಯವರಿಗೆ ತಮಿಳುನಾಡು ಪ್ರಾಂತ ಪ್ರಚಾರಕ್ ಜವಾಬ್ದಾರಿಯನ್ನು ವಹಿಸಲಾಯಿತು. ಆಗ ಆ ಪ್ರಾಂತದಲ್ಲಿ ಭಾಷಾ ಪ್ರತ್ಯೇಕತಾವಾದಗಳು ಉತ್ತುಂಗದಲ್ಲಿದ್ದವು. ಅವರಿಗೆ ತಮಿಳು ಬರುತ್ತಿರಲಿಲ್ಲ, ಆದರೆ ಅವರು ತಮಿಳು ಭಾಷೆಯನ್ನು ಕಲಿತು ಸಮಾಜದ ಎಲ್ಲ ವರ್ಗಗಳನ್ನೂ ಸಂಘ ಕಾರ್ಯದ ಜೊತೆ ಜೋಡಿಸಲು ಪಣತೊಟ್ಟರು. ನಿರಂತರವಾಗಿ 13 ವರ್ಷಗಳ ಕಾಲ ಅಂದರೆ 1984ರ ತನಕ ಅವರು ತಮಿಳುನಾಡಿನ ಪ್ರಾಂತ ಪ್ರಚಾರಕರಾಗಿ ಯುವಕರಲ್ಲಿ ರಾಷ್ಟ್ರಭಕ್ತಿ, ಉತ್ಸಾಹವನ್ನು ತುಂಬುವುದರ ಜೊತೆಗೆ, ಸಾಮಾಜಿಕ ಸಾಮರಸ್ಯವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದರು. ಸೂರೂಜೀ ಅವರ ಜೀವನದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳು ಬಹಳ ಗಾಢ ಪರಿಣಾಮ ಬೀರಿದ್ದವು. ವಿವೇಕಾನಂದರ ವಿಚಾರ "ನರಸೇವೆಯೇ ನಾರಾಯಣ ಸೇವೆ" ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊAಡು ಅವರು ಸ್ವಯಂಸೇವಕರಿಗೆ ಹೇಳುತ್ತಿದ್ದರು…"ಯಾರಿಗಾದರೂ ಸರಿ ಭೌತಿಕ ಮಟ್ಟದಲ್ಲಿ ಅನುಕೂಲಗಳನ್ನು ಮಾಡಿಕೊಡುವುದು ಒಂದು ಸಣ್ಣ ಮಟ್ಟದ ಸೇವೆಯೇ ಹೌದು. ಆದರೂ ಅವರಿಗೆ ಯೋಗ್ಯ ಗೌರವ ನೀಡಿ ಅವರು ಭಗವಂತನೆಂದೇ ಭಾವಿಸಿ ಸೇವೆಯನ್ನು ಮಾಡುವುದೇ ಶ್ರೇಷ್ಠ. ಪ್ರತಿಯೊಬ್ಬ ಸ್ವಯಂಸೇವಕನೂ ತಾನು ಸೇವೆಗೆಂದೇ ಮೀಸಲು ಎಂದು ಭಾವಿಸುವುದೇ ಒಂದು ನಿಜವಾದ ಸೇವೆಯಾಗಿದೆ.” ತನ್ನ ಸರಳ ಸ್ವಭಾವದಿಂದಾಗಿ ಅವರು ಪ್ರತಿಯೊಬ್ಬ ಕಾರ್ಯಕರ್ತನಿಗೂ ಇವರು ತಮ್ಮವರೇ ಎನಿಸುತ್ತಿದ್ದರು. ಹಾಗಾಗಿಯೇ ಅವರ ವಿಚಾರಗಳು ಸ್ವಯಂಸೇವಕರ ಮನಸ್ಸು, ಬುದ್ಧಿಗಳೆರಡರಲ್ಲೂ ಉಳಿಯುವಂತಾಯಿತು. 1990ರಲ್ಲಿ ಸೂರ್ಯನಾರಾಯಣರಾವ್ ಅವರು ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಾಗ ಸೇವಾ ವಿಭಾಗವು ಸಂಘದಲ್ಲಿ ಒಂದು ಹೊಸ ಪ್ರಯೋಗವಾಗಿತ್ತು. ಯಾವುದೇ ವಿಷಯವೇ ಆಗಿರಲಿ, ಪ್ರಯೋಗಶೀಲತೆಯು ಒಂದು ಸವಾಲೇ ಆಗಿತ್ತು. ಆ ಸವಾಲನ್ನು ಸ್ವೀಕರಿಸಿ ಪೂರ್ಣಗೊಳಿಸುವ ಸ್ವಭಾವ ಸೂರೂಜೀ ಅವರದಾಗಿತ್ತು. ಅವರು ಕಾರ್ಯಕರ್ತರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಸ್ವಾತಂತ್ರ್ಯವನ್ನು ಕೊಟ್ಟರು. ಬಹುಶಃ ಹಾಗಾಗಿಯೇ ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಅವರ ಕಾಲದಲ್ಲಿ ಸೇವಾ ವಿಭಾಗದ ಕಾರ್ಯಗಳಿಗೆ ಒಂದು ವಿಶೇಷವಾದ ವೇಗ ಸಿಕ್ಕಿತು. ಸಂಸ್ಕಾರ ಕೇಂದ್ರವು ಸಂಪೂರ್ಣ ಸೇವಾಬಸ್ತಿಯ ಪರಿವರ್ತನೆಯ ವಾಹಕವಾಯಿತು. 1989ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಆದ್ಯ ಸರಸಂಘಚಾಲಕ ಡಾ. ಹೆಡಗೇವಾರರ ಜನ್ಮಶತಾಬ್ದಿಯನ್ನು ಆಚರಿಸಲು ಯೋಜನೆಯನ್ನು ರೂಪಿಸಿತು. ಆಗ ಮೊಟ್ಟಮೊದಲಿಗೆ ಈ ಬೃಹತ್ ಕಾರ್ಯಕ್ಕೋಸ್ಕರ ಆರ್ಥಿಕ ವ್ಯವಸ್ಥೆಯನ್ನು ಮಾಡಬೇಕೆಂಬ ಅವಶ್ಯಕತೆಯ ಅರಿವಾಯಿತು. ಸೇವಾ ಕಾರ್ಯಗಳ ಕಾರ್ಯವಿಸ್ತಾರದ ಸಲುವಾಗಿ ಆರ್ಥಿಕ ವ್ಯವಸ್ಥೆ ಮಾಡುವುದು, ಅದನ್ನು ಕಾನೂನಿನ ಚೌಕಟ್ಟಿನಲ್ಲಿ ತರುವುದು, ಈ ಮಹತ್ಕಾರ್ಯಕ್ಕೋಸ್ಕರ ಒಂದು ಟ್ರಸ್ಟ್ ಮಾಡಬೇಕು ಎಂದು ಸೂರೂಜಿಯವರ ಮನಸ್ಸಿನಲ್ಲಿ ಬಂದ ಕೂಡಲೇ 2003 ರಲ್ಲಿ ರಾಷ್ಟ್ರೀಯ ಸೇವಾ ಭಾರತೀ ಎಂಬ ಸಂಸ್ಥೆಯು ಜನ್ಮ ತಾಳಿತು. ಇಷ್ಟೇ ಅಲ್ಲ, ಈ ಹಣದ ಉಪಯೋಗ ಎಲ್ಲಿ ಹೇಗೆ ಆಗುತ್ತಿದೆ ಮತ್ತು ಅದರ ಪರಿಣಾಮ ಏನು, ಈ ಮಾಹಿತಿಯನ್ನು ಇಡೀ ಸಮಾಜಕ್ಕೆ ನೀಡಲು ಗುರೂಜಿಯವರ ಪ್ರೇರಣೆಯಿಂದಲೇ ಸೇವಾ-ದಿಶಾ ಪತ್ರಿಕೆಯ ಪ್ರಕಾಶನವು ಆರಂಭವಾಯಿತು. ಕಾಲ ಕಳೆದಂತೆ ಸೇವಾ ವಿಭಾಗದ ಆಗುಹೋಗುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ನಂಬಿದವರು. ಸೂರೂಜೀಯವರು ತಮ್ಮ 75 ನೇ ವಯಸ್ಸಿನಲ್ಲಿ ಸ್ವತ: ಜವಾಬ್ದಾರಿಯಿಂದ ಮುಕ್ತರಾಗಲು ಬಯಸಿದರು, ಒಬ್ಬ ಮಹಾನ್ ಸಂಘಟಕ, ಒಬ್ಬ ಶಕ್ತಿಶಾಲಿ ವಿಚಾರವಂತ, ಒಬ್ಬ ಅಸಾಮಾನ್ಯ ಸಂಚಾರಿ ಮತ್ತು ಒಬ್ಬ ಪಕ್ವವಾದ ಗುಂಪಿನ ನಾಯಕ, ಹೀಗೆ ಹಲವು ರೀತಿಯ ವೈಶಿಷ್ಟö್ಯಗಳನ್ನು ಹೊಂದಿದ ಮಾನ್ಯ ಸೂರ್ಯನಾರಾಯಣರಾವ್ ಅವರು ಸಂಘದ ವಿವಿಧ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದರು. ಅವರು ತಮ್ಮ ಸಾವಿನ ಕೆಲವು ವರ್ಷಗಳ ತನಕವೂ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಟೋಳಿಯ ಸದಸ್ಯರಾಗಿದ್ದರು. ಆರೋಗ್ಯ ಸ್ಥಿರವಾಗಿರುವ ತನಕ ದಕ್ಷಿಣ ಭಾರತದ ಪ್ರತಿಯೊಂದು ಸಂಘ ಶಿಕ್ಷಾ ವರ್ಗಗಳಿಗೆ ಹೋಗಿ ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇವರು 2016ರ ನವೆಂಬರ್ 19 ರಂದು ವಿಧಿವಶರಾದರು.
ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಮುನ್ನಡೆಸಿದ ಇಂಡಿಯನ್ ನ್ಯಾಶನಲ್ ಆರ್ಮಿಯನ್ನು ಕಟ್ಟುವುದಕ್ಕೆ ಅಡಿಪಾಯವನ್ನು ಹಾಕಿದ ಮಹಾನ್ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್. ರಾಸ್ ಬಿಹಾರಿ ಬೋಸ್ ಅವರು ಮೇ 25, 1886ರಂದು ಪಶ್ಚಿಮ ಬಂಗಾಳದ ಬುರ್ದ್ವಾನಿನ ಸುಬಲ್ದಹಾ ಹಳ್ಳಿಯಲ್ಲಿ ಜನಿಸಿದರು. ಬೋಸರು ತಮ್ಮ ಸಣ್ಣ ವಯಸ್ಸಿನಲ್ಲೇ ರೆವಲ್ಯೂಷನರಿ ಪಾರ್ಟಿಯನ್ನು ಸೇರಿದರು. ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬ್ಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ ಬ್ರಿಟಿಷರ ವಿರುದ್ಧದ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜನ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕದಲ್ಲಿ ಡಿಸೆಂಬರ್ 23, 1912 ರಂದು ಬಾಂಬ್ ಎಸೆದಾಗ ರಾಸ್ ಬಿಹಾರಿ ಬೋಸರ ಹೆಸರು ಪ್ರಖ್ಯಾತಿ ಪಡೆಯಿತು. ಈ ಬಾಂಬ್ ಎಸೆದ ನಂತರದಲ್ಲಿ ಬೋಸರು ಚಾಣಾಕ್ಷತನದಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡು ವಾರಾಣಾಸಿಯಲ್ಲಿ ಅವಿತು, ಗದರ್ ಪಕ್ಷದ ಕಾರ್ಯಕರ್ತರೊಡನೆ ಏಕಕಾಲದಲ್ಲಿ ಉತ್ತರ ಭಾರತದಲ್ಲೆಲ್ಲಾ ಧ್ವನಿಸುವಂತೆ ವಿವಿಧ ಕ್ರಾಂತಿಕಾರಕ ಹೋರಾಟಗಳಿಗೆ ಸೂತ್ರಧಾರಿಯಾದರು. ರಾಸ್ ಬಿಹಾರಿ ಬೋಸರ ಈ ಎಲ್ಲಾ ಯತ್ನಗಳನ್ನೂ ಬ್ರಿಟಿಷರು ಸದೆಬಡಿದು ಗದರ್ ಕ್ರಾಂತಿಕಾರರಲ್ಲಿ ಬಹಳಷ್ಟು ಜನರನ್ನು ಶಿಕ್ಷೆಗೆ ಒಳಪಡಿಸಿದರಾದರೂ ರಾಸ್ ಬಿಹಾರಿ ಬೋಸರನ್ನು ಮಾತ್ರ ಹಿಡಿಯಲಾಗಲಿಲ್ಲ. ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜಪಾನಿಗೆ ತೆರಳಿದ್ದ ರಾಸ್ ಬಿಹಾರಿ ಬೋಸರ ಬಗ್ಗೆ ಆತಂಕಗೊAಡ ಬ್ರಿಟಿಷರು ಅಂತಾರಾಷ್ಟಿçÃಯ ಮಟ್ಟದಲ್ಲಿ ಅವರ ಬಂಧನಕ್ಕೆ ಯತ್ನಿಸಿಯೂ ವಿಫಲರಾದರು. ಇತ್ತ ಜಪಾನಿನಲ್ಲಿ ಭೂಗತನಾಗಿದ್ದುಕೊಂಡಿದ್ದ ಬೋಸರು ಬ್ರಿಟನ್ ವಿರೋಧಿ ದೇಶಗಳ ಸಖ್ಯ ಬೆಳೆಸಿಕೊಳ್ಳತೊಡಗಿದರು. ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್: ಮಾರ್ಚ್ 1942ರಲ್ಲಿ ಇಂಡಿಯನ್ ಇಂಡಿಪೆAಡೆAಟ್ಸ್ ಲೀಗ್ ಸ್ಥಾಪನೆಗಾಗಿ ಬೋಸರು ಒಂದು ಸಮಾವೇಶವನ್ನು ನಡೆಸಿದರು. ಈ ಸಂಸ್ಥೆಯ ಮೊದಲ ಅಧಿವೇಶನ ಜೂನ್ 1942ರಲ್ಲಿ ಬ್ಯಾಂಕಾಕಿನಲ್ಲಿ ಜರುಗಿತು. ಈ ಸಮಾವೇಶದಲ್ಲಿ ಅವರಿಗೆ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆಗಾಗಿನ ಅಧಿಕಾರವನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ಅವರು ಜಪಾನಿನಲ್ಲಿದ್ದ ಯುದ್ಧ ಖೈದಿಗಳನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟದ ಸೈನಿಕರನ್ನಾಗಿ ಸಂಘಟಿಸಿದರು. 1943 ರಲ್ಲಿ ಸಿಂಗಪೂರಿನಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ನಾಯಕತ್ವವನ್ನು ರಾಸ್ ಬಿಹಾರಿ ಬೋಸರು ಸುಭಾಷ್ ಚಂದ್ರ ಬೋಸರಿಗೆ ವರ್ಗಾಯಿಸಿದರು. ರಾಸ್ ಬಿಹಾರಿ ಬೋಸರ ಒಟ್ಟೂ ಕ್ರಾಂತಿಕಾರಿ ಜೀವನದಲ್ಲಿ ಅವರ ಜೊತೆಗೆ ಸುಭಾಷ್ ಚಂದ್ರ ಬೋಸರಲ್ಲದೆ ಅರವಿಂದ್ ಘೋಷ್, ಖದಿರಾಮ್ ಬೋಸ್ ಬಾಘಾ ಜತಿನ್ ಮುಂತಾದ ಪ್ರಮುಖರೂ ಇದ್ದರು. ಲೇಖಕ, ಪತ್ರಕರ್ತರೂ ಆಗಿದ್ದ ರಾಸ್ ಬಿಹಾರಿ ಬೋಸರಿಗೆ ಜಪಾನ್ ಸರ್ಕಾರ ಆರ್ಡರ್ ಆಫ್ ದಿ ರೈಸಿನ್ಗ್ ಸನ್ ಎಂಬ ಗೌರವ ನೀಡಿತ್ತು. ದೇಶಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು ಸ್ವಾರ್ಥರಹಿತ, ಕಷ್ಟಕರವಾದ ಕ್ರಾಂತಿಕಾರಕ ಮಾರ್ಗದಲ್ಲಿ ಬದುಕಿದ ರಾಸ್ ಬಿಹಾರಿ ಬೋಸರು ಜನವರಿ 21, 1945 ರಂದು ಟೋಕಿಯೋದಲ್ಲಿ ನಿಧನರಾದರು.

ಆಧುನಿಕ ಹಿಂದಿ ಕವಿಗಳಲ್ಲಿ ಪ್ರಮುಖರಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತ. ರಾಷ್ಟ್ರಕವಿ ಎಂಬ ಅಭಿದಾನಕ್ಕೆ ಅನ್ವರ್ಥವಾಗಿ ರಾಷ್ಟ್ರೀಯತೆಯ ಕುರಿತಾದ ಮತ್ತು ದೇಶಭಕ್ತಿಯನ್ನು ಮೂಡಿಸುವ ಕವನಗಳನ್ನು ಬರೆಯುತ್ತಿದ್ದರು. ಸಾಹಿತ್ಯ ಕ್ಷೇತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಛಾಪುಮೂಡಿಸಿದ ಗುಪ್ತರು ಹಿಂದಿಯ ಖಾರಿ ಬೋಲಿ ಎಂಬ ಆಡುಭಾಷೆಯಲ್ಲಿ ಕವನಗಳನ್ನು ಬರೆದ ಮೊದಲಿಗರು. ಮೈಥಿಲಿ ಶರಣ್ ಗುಪ್ತ ಅವರು ಆಗಸ್ಟ್ 3, 1886ರಂದು ಉತ್ತರ ಪ್ರದೇಶದ ಝಾನ್ಸಿಯ ಚಿರ್ಗಾಂವ್ ಗ್ರಾಮದಲ್ಲಿ ಜನಿಸಿದವರು. ಅವರ ತಂದೆ ಹೆಸರು ಸೇಥ್ ರಾಮಚರಣ್, ಅವರ ತಾಯಿ ಕಾಶಿ ಬಾಯಿ. ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಅವರು ನಂತರ ಝಾನ್ಸಿಯ ಮ್ಯಾಕ್ ಡೊನಾಲ್ಡ್ ಹೈಸ್ಕೂಲ್ನಲ್ಲಿ ಓದಿದ್ದರು. ಅವರು ರಾಮ್ ಸ್ವರೂಪ್ ಶಾಸ್ತ್ರೀ ಮತ್ತು ದುರ್ಗಾದತ್ ಪಂತ್ ಸೇರಿದಂತೆ ಹಿಂದಿ, ಬಾಂಗ್ಲಾ ಹಾಗೂ ಸಂಸ್ಕೃತ ಭಾಷೆಯಲ್ಲಿ ಅಧ್ಯಯನ ನಡೆಸಿದ್ದರು. ಅಷ್ಟೇ ಅಲ್ಲದೆ ಅವರು ಮುನ್ಸಿ ಅಜೇರಿ ಪ್ರೇಮ್ ಅವರಿಂದ ಸ್ಪೂರ್ತಿ ಪಡೆದು ಆನೇಕ ಪತ್ರಿಕೆಗಳಿಗೆ ಕವನಗಳನ್ನು ಬರೆಯುತ್ತಿದ್ದರು. ನಂತರ ಅವರು ಬಹುತೇಕ ಕಾವ್ಯಾತ್ಮಕ ಪುಸ್ತಕಗಳನ್ನು ರಚಿಸಿದ್ದರು. ಕೃತಿಗಳು: 1910ರಲ್ಲಿ ಅವರ ಮೊದಲ ಪ್ರಮುಖ ಕೃತಿ ರಂಗ್ ಮೇ ಭಂಗ್ ಇಂಡಿಯಾನ್ ಪ್ರೆಸ್ನಿಂದ ಪ್ರಕಟವಾಗಿತ್ತು. ಆಧ್ಯಾತ್ಮಿಕ ಗುರುಗಳು, ಐತಿಹಾಸಿಕ ಪಾತ್ರಗಳು, ಮಹಿಳಾ ಸಬಲೀಕರಣ, ದೇಶಭಕ್ತಿಯ ವಿಷಯಗಳ ಮೇಲೆ ಅವರ ಬರವಣಿಗೆ ಕೇಂದ್ರೀಕೃತವಾಗಿತ್ತು. ಅವರು 1910ರಲ್ಲಿ ಜಯದ್ರತ್ ವಥ್ ಮತ್ತು 1931ರಲ್ಲಿ ಸಾಕೇತ್ ಸೇರಿದಂತೆ ರಾಮಾಯಣ, ಮಹಾಭಾರತ, ಬೌದ್ಧ ಕತೆಗಳಾಧಾರಿತ ಆನೇಕ ಕವನ ಸಂಕಲನಗಳನ್ನು, ನಾಟಕಗಳನ್ನು ರಚಿಸಿದ್ದಾರೆ. 1912ರಲ್ಲಿ ಬಿಡುಗಡೆಯಾದ ಅವರ ಭಾರತ ಭಾರತಿ ಪುಸ್ತಕವು ಭಾರತೀಯ ಜನಸಾಮಾನ್ಯರಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಪ್ಲಾಸಿ ಕಾ ಯುದ್ಧ, ಭಾರತ ಭಾರತಿ, ಪಂಚವಟಿ ಸೇರಿದಂತೆ ಅನೇಕ ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದರು. ಯಶೋಧರ, ಅರ್ಜನ್ ಔರ್ ವಿಸರ್ಜನ್, ಜಯಭಾರತ್, ದ್ವಾಪರ, ವಿಶ್ವರಾಜ್ಯ, ಕಿರಣೊ ಕಾ ಕೇಲ್, ಮಾನವತಾ ಮುಂತಾದವು ಅವರ ಪ್ರಮುಖ ಕೃತಿಗಳು. ರಾಷ್ಟ್ರಕವಿ ಅಭಿದಾನ: ಏಪ್ರಿಲ್ 5 1932ರಲ್ಲಿ ಅವರು ಮಹಾತ್ಮ ಗಾಂಧಿಯವರಿAದ ಒಂದು ಪತ್ರವನ್ನು ಸ್ವೀಕರಿಸಿದ್ದು, ಅವರು ತಮ್ಮ ಸಾಕೇತ್ ಕೃತಿಗಳನ್ನು ಶ್ಲಾಘಿಸಿದರು. 1936ರಲ್ಲಿ ಕಾಶಿಯಲ್ಲಿ ನಡೆದ ಸಮಾರಂಭದಲ್ಲಿ ಮಹಾತ್ಮ ಗಾಂಧಿಯವರು ಮೈಥಿಲಿ ಶರಣ್ ಗುಪ್ತ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಿದ್ದರು. ರಾಜಕೀಯ ಜೀವನ: ಸ್ವಾತಂತ್ರ್ಯಾನAತರ 1952 ಮಾರ್ಚ 12 ರಂದು ಅವರು ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಗೊಳ್ಳುತ್ತಾರೆ. 1958ರಲ್ಲಿ ಅವರು ಎರಡನೇ ಬಾರಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಒಟ್ಟು 15 ವರ್ಷಗಳ ಕಾಲ ರಾಜ್ಯಸಭೆಯ ಗೌರವ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಶಸ್ತಿಗಳು: 1941ರಲ್ಲಿ ವಾರಣಾಸಿಯ ನಗರಿ ಪ್ರಚಾರಿಣಿ ಸಭಾದಿಂದ ಸುಧಾಕರ ಪದಕ ಪಡೆದಿದ್ದಾರೆ. 1946ರಲ್ಲಿ ಕರಾಚಿಯಲ್ಲಿ ಹಿಂದಿ ಸಾಹಿತ್ಯ ಸಂಘದಿAದ ಸಾಹಿತ್ಯ ವಾಚಸ್ಪತಿ, 1948ರಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗೆಯೇ ಅವರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ 1954ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದ ಅತ್ಯುನ್ನತ ನಾಗರರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮೈಥಿಲಿ ಶರಣ್ ಗುಪ್ತ ಅವರು ಡಿಸೆಂಬರ್ 12, 1964 ರಂದು ತಮ್ಮ 78ನೇ ವಯಸ್ಸಿನಲ್ಲಿ ಝಾನ್ಸಿಯಾ ಚಿರ್ಗಾಂವ್ ಗ್ರಾಮದ ಸ್ವಗೃಹದಲ್ಲಿ ನಿಧನರಾದರು.

ಪಶ್ಚಿಮ ಬಂಗಾಳದ ಚಿತ್ತಗಾಂವ್(ಈಗ ಬಾಂಗ್ಲಾದೇಶಕ್ಕೆ ಸೇರಿದೆ)ನಲ್ಲಿ ಓರ್ವ ಸಮಾನ್ಯ ಶಾಲಾ ಶಿಕ್ಷಕನಾಗಿದ್ದ ಸೂರ್ಯಸೇನ್ನ ನೇತೃತ್ವದಲ್ಲಿ ಹದಿಹರೆಯದ ಬಾಲಕರು-ತರುಣಿಯರು ಸಶಸ್ತç ಹೋರಾಟಕ್ಕಿಳಿದು ಬ್ರಿಟೀಷರನಿದ್ದೆಗೆಡಿಸಿದ್ದನ್ನು, ತತ್ಪರಿಣಾಮವಾಗಿ ಬಂಗಾಳದ ಹಳ್ಳಿಹಳ್ಳಿಗಳಲ್ಲೂ ಕ್ರಾಂತಿಜ್ವಾಲೆ ಹರಡಿದ್ದನ್ನೂ ಸಾಧಾರವಾಗಿ ವಿವರಿಸುವ ಅಪೂರ್ವ ಕಥನ – ‘ಮಾಡಿ ಮಡಿದವರು’. ತರುಣಿಯೊಬ್ಬಳು ಮೊತ್ತಮೊದಲ ಬಾರಿಗೆ ಕಾರ್ಯಾಚರಣೆಯ ನೇತೃತ್ವವಹಿಸಿ ಬಲಿದಾದಗೈಯುವ ಮೂಲಕ ಕ್ರಾಂತಿಕಾರೀ ಹೋರಾಟದ ರಣಕಣಕ್ಕೆ ಹೆಣ್ಣುಮಕ್ಕಳೂ ಪ್ರತ್ಯಕ್ಷವಾಗಿ ಧುಮುಕಲು ಪ್ರೇರಣೆಯಾದ ಹೋರಾಟವಿದು. ಗಾಂಧಿಯವರು ‘ಮಾಡು ಇಲ್ಲವೇ ಮಡಿ’ ಎಂದು ಘೋಷಿಸುವುದಕ್ಕೂ ಮೊದಲೇ ‘ಮಾಡು ಮತ್ತು ಮಡಿ’ ಎಂದು ರಣಹೂಂಕಾರಗೈದ ಚಿತ್ತಗಾಂವ್ನ ಕ್ರಾಂತಿಕಾರಿಗಳು ನೇತಾಜಿ ಸುಭಾಷ್ಚಂದ್ರ ಬೋಸರು ‘ಭಾರತೀಯ ರಾಷ್ಟ್ರೀಯ ಸೇನೆ’ ರಚಿಸುವದಕ್ಕೂ ಮೊದಲೇ ‘ಭಾರತೀಯ ಗಣತಂತ್ರ ಸೇನೆ’ಯನ್ನು ಕಟ್ಟಿ ಬ್ರಿಟೀಷರ ವಿರುದ್ಧ ಸಶಸ್ತç ಯುದ್ಧ ನಡೆಸಿದ್ದರ ಪ್ರೇರಣಾದಾಯೀ ಕಥನವಿದು. ಪ್ರತಿಗಳಿಗಾಗಿ ಸಂಪರ್ಕಿಸಿ: +91 6360581957
ಬಸ್/ರೈಲು/ಮೆಟ್ರೋ/ವಿಮಾನ ಇತ್ಯಾದಿ ಪ್ರಯಾಣದ ವೇಳೆ ಮೊಬೈಲ್ ಬಳಕೆ ಸೇರಿದಂತೆ ನಡವಳಿಕೆಯಲ್ಲಿ, ಸಾಮೂಹಿಕ ಶಿಸ್ತಿನ ಪಾಲನೆಗೆ ಆದ್ಯತೆ ನೀಡುವುದು ಅಗತ್ಯ. ಎಲ್ಲವೂ ಸಾರ್ವಜನಿಕ ಸ್ಥಳವಾದ್ದರಿಂದ ನಮ್ಮ ನಡವಳಿಕೆ ಇತರರಿಗೆ ಆಭಾಸವನ್ನುಂಟು ಮಾಡಬಾರದು. ಪ್ರಮುಖವಾಗಿ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವಾಗ ಗಟ್ಟಿಧ್ವನಿಯಲ್ಲಿ ಮೊಬೈಲ್ನಲ್ಲಿ ಮಾತಾಡುವುದು, ಕಿರುಚುವುದು, ಅಸಭ್ಯ ಪದಗಳನ್ನು ಬಳಸುವುದು, ಹೆಚ್ಚು ಶಬ್ದವನ್ನಿಟ್ಟು ಮೊಬೈಲ್ ಉಪಯೋಗಿಸುವುದು ಸರಿಯಲ್ಲ. ಹಾಗೆಯೇ ಸಾರ್ವಜನಿಕ ವಾಹನಗಳಲ್ಲಿ ಪಯಣಿಸುವಾಗ ನಮ್ಮ ಇತರೆ ನಡವಳಿಕೆಯೂ ಯಾರಿಗೂ ತೊಂದರೆ ನೀಡುವಂತೆ ಇರಬಾರದು. ಹೆಚ್ಚು ತಾಳ್ಮೆಯನ್ನು ಹೊಂದಿರಬೇಕು. ಹಿರಿಯರೊಂದಿಗೆ, ಮಹಿಳೆಯರೊಂದಿಗೆ ಗೌರವಯುತ ವ್ಯವಹಾರವಿರಬೇಕು. ಆಯಾ ಸಾರ್ವಜನಿಕ ವಾಹನಗಳ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡಬೇಕು.
ಪ್ರತಿಯೊಂದು ಪಯಣವು ತನ್ನ ಉದ್ದೇಶಿತ ತಾಣವನ್ನು ಸೇರುವ ಮೂಲಕ ಕೊನೆಗೊಳ್ಳಬೇಕು ಎಂಬ ನಿಯಮವೇನೂ ಇಲ್ಲ, ಕೆಲವು ಪಯಣಗಳು ಅಪೂರ್ಣವಾಗಿಯೇ ಉಳಿದು ಬಿಡುತ್ತವೆ. 12 ನವೆಂಬರ್ 1996 ರ ಸಂಜೆ ಇಂತಹ ಒಂದು ಘಟನೆ ಸಂಭವಿಸಿತು. ಹರಿಯಾಣದ ಚರಖೀ ದಾದರೀ ಜಿಲ್ಲೆಯು ಒಂದು ಭೀಕರ ಅಪಘಾತಕ್ಕೆ ಸಾಕ್ಷಿಯಾಯಿತು. ಹೃದಯವನ್ನು ನಡುಗಿಸುವ ಆ ಶಬ್ದ, ಭಯಾನಕವಾದ ಮಿಂಚಿನ ಆರ್ಭಟ ಹಾಗೂ ಭಯಂಕರವಾದ ಬೆಂಕಿಯ ಉಂಡೆಗಳ ತೀವ್ರತೆಯು ನೋಡು ನೋಡುತ್ತಿದಂತೆ ಹಳ್ಳಿಯ ಹೊಲ ಗದ್ದೆಗಳ ಮೇಲೆ ಬೀಳಲಾರಂಬಿಸಿದವು. ಅದು ದೆಹಲಿಯಿಂದ ಅರಬ್ ನತ್ತ ಪಯಣಿಸುತ್ತಿದ್ದ ಒಂದು ಯಾತ್ರಿಕರ ವಿಮಾನ ಹಾಗೂ ದೆಹಲಿಯತ್ತ ಬರುತ್ತಿದ್ದ ಕಝಕಿಸ್ತಾನ್ ನ ಸರಕು ವಿಮಾನಗಳ ಅವಶೇಷಗಳಾಗಿತ್ತು. ಈ ಎರಡು ವಿಮಾನಗಳ ಘರ್ಷಣೆಯಾದ ನಂತರ ಭೂಮಿಯ ಮೇಲೆ ಬಿದ್ದ ಇದರ ಮೊನಚಾದ ಭಾಗವು ಭೂಮಿಯಿಂದ 16 ಅಡಿ ಕೆಳಗೆ ಹೂತುಹೋಯಿತು. ಒಂದೆ ಕ್ಷಣದಲ್ಲಿ ಸೌದಿ ವಿಮಾನದಲ್ಲಿದ್ದ 312 ಜನ ಹಾಗೂ ಕಝಕಿಸ್ಥಾನ ವಿಮಾನದ 37ಜನ ಮೃತ್ಯುವಶವಾಗಿದ್ದರು. ಚರಖಿ ದಾದರೀಯ ಸುತ್ತಮುತ್ತ ನಾಲ್ಕು-ಐದು ಕಿಲೋಮೀಟರ್ ದೂರದ ಢಾಣಿ ಫೌಗಾಟ್, ಖೇಡಿ ಸೋನಾವಾಲ್ ಮತ್ತು ಮಾಲಿಯಾವಾಸ್ ಗ್ರಾಮಗಳ ಗದ್ದೆಗಳಲ್ಲಿ ಸುಟ್ಟು ಕರಕಲಾಗಿ ಚಿಂದಿಯಾಗಿ 351ಶವಗಳು ಬಿದ್ದಿದ್ದವು. ಅಪಘಾತದ ಸುದ್ದಿ ತಿಳಿದ ತಕ್ಷಣ ಸರ್ಕಾರಿ ಸಿಬ್ಬಂದಿಗಳು ಬರುವ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಸ್ಥಳಕ್ಕೆ ಆಗಮಿಸಿದ್ದರು. ಛಿದ್ರ ಛಿದ್ರವಾಗಿ ಚದುರಿಹೋಗಿದ್ದ ಶವಗಳ ನಡುವೆ ಬದುಕುಳಿದವರಿಗಾಗಿ ಹುಡುಕಾಡುತ್ತಿದ್ದ ಭಿವಾನಿ ಜಿಲ್ಲೆಯ ಅಂದಿನ ಸಂಘಚಾಲಕರಾದ ಜೀತರಾಮಜೀಯವರು ಸ್ವಯಂಸೇವಕರೊAದಿಗೆ ಅಲ್ಲಿಗೆ ಬಂದು ನೋಡಿದಾಗ ಅವರ ಜೀವವೆ ಬಾಯಿಗೆ ಬಂದಂತಾಗಿತ್ತು. ಒಂದು ಕ್ಷಣವನ್ನೂ ವ್ಯರ್ಥಮಾಡದೆ ಒಂದು ಗಂಟೆಯೊಳಗೆ ಪೆಟ್ರೊಮ್ಯಾಕ್ಸ್ ದೀಪಗಳು, ಜನರೇಟರ್, ನೀರು, ಇತ್ಯಾದಿ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಯಿತು. ಚಳಿಗಾಲದ ಆ ನಿಶ್ಶಬ್ದವಾದ ಕತ್ತಲೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಕಾಣದಂತಹ ಸಂದರ್ಭದಲ್ಲಿ ಪೆಟ್ರೊಮ್ಯಾಕ್ಸ್ ದೀಪಗಳ ಬೆಳಕಿನ ಸಹಾಯದಿಂದ ಸ್ವಯಂಸೇವಕರು ಬದುಕುಳಿದವರಿಗಾಗಿ ಹುಡುಕಾಡಲು ಪ್ರಾರಂಭಿಸಿದರು. ಆದರೆ ಕೇವಲ ಇಬ್ಬರೆ ಇಬ್ಬರು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದವರು ಸಿಕ್ಕಿದ್ದರು. ಆದರೆ ಜೀವನ್ಮರಣದ ಹೋರಾಟದಲ್ಲಿದ್ದ ಅವರನ್ನು ಸ್ಥಳದಲ್ಲಿ ಉಪಸ್ಥಿತರಿದ್ದ ಹೆಡ್ಗೇವಾರ್ ಚಿಕಿತ್ಸಾಲಯದ ತಂಡದವರಿಂದ ಉಳಿಸಿಕೊಳ್ಳಲಾಗಲಿಲ್ಲ. 24 ವರ್ಷಗಳ ಹಿಂದೆ ನೋಡಿದ ಆ ಭಯಾನಕ ದೃಶ್ಯದ ವಿಷಯ ಬಂದ ತಕ್ಷಣ ಅಂದಿನ ಸಂಘಚಾಲಕರಾದ ಶ್ರೀ ಜಿತರಾಮಜೀಯವರು ಇಂದಿಗೂ ಭಾವುಕರಾಗುತ್ತಾರೆ. ಅಲ್ಲಿನ ಸ್ಥಳೀಯ ರೈತರಾದ ಶ್ರೀ ಚಂದ್ರಭಾನ್ ಅವರ ಟ್ರ್ಯಾಕ್ಟರ್ನಲ್ಲಿ ತೀವ್ರವಾಗಿ ಸುಟ್ಟುಹೋಗಿದ್ದ ಶವಗಳನ್ನು ಸ್ವಯಂಸೇವಕರು ಸಾಗಿಸಿದರು. ಶವಗಳು ಕೊಳೆಯದಂತೆ ಕಾಪಾಡಲು ರಾತ್ರಿಯ 11ಗಂಟೆಯ ವೇಳೆಯಲ್ಲಿ ಐಸ್ ಗೆಡ್ಡೆಯ ಕಾರ್ಖಾನೆಯ ಬಾಗಿಲನ್ನು ತೆರೆಸಲಾಯಿತು ಎಂಬುದನ್ನು ಅವರು ನೆನಪಿಸುತ್ತಾರೆ. ಭಿವಾನಿ, ಝಜ್ಜರ್ ಹಾಗೂ ರೇವಾಡಿಯಂತಹ ಸುತ್ತಮುತ್ತಲಿನ ಪ್ರದೇಶಗಳಿಂದ ಐಸ್ ಸ್ಲಾಬ್ಗಳನ್ನು ತರಸಿಕೊಳ್ಳಲಾಯಿತು. ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದ ಎಸ್.ಪಿ. ಅವರ ಸಹಾಯದಿಂದ ಶವ ಸಂಸ್ಕಾರಕ್ಕೆ ಬೇಕಾಗುವ ಅವಶ್ಯ ವಸ್ತುಗಳ ಪಟ್ಟಿಯನ್ನು ಮಾಡಲಾಯಿತು. ಹಳ್ಳಿಯ ಜನರ ಸಹಾಯದಿಂದ ಶವ ಸಂಸ್ಕಾರಕ್ಕಾಗಿ ಶವ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಲಾಯಿತು. ಸಾವನ್ನಪ್ಪಿದ ಪ್ರಯಾಣಿಕರಲ್ಲಿ ಹೆಚ್ಚಿನವರು ಮುಸಲ್ಮಾನರು ಅಥವಾ ಕ್ರಿಶ್ಚಿಯನ್ನರಾಗಿದ್ದರು. ಹಾಗಾಗಿ ಭಿವಾನಿ ಜಿಲ್ಲೆಯ ಸ್ವಯಂಸೇವಕರಾದ ಸಂತರಾಮ್ ಜೀಯವರ ಫ್ಯಾಕ್ಟರಿಯಲ್ಲಿ ಗರಗಸದ ಮಿಶನ್ ನಿಂದ ಶವದ ಪೆಟ್ಟಿಗೆಯನ್ನು ತಯಾರಿಸಲಾಯಿತು. ಬೆಳಿಗ್ಗೆ 5ಗಂಟೆಯೊಳಗೆ 159 ಶವಗಳನ್ನು ಭಿವಾನಿಯ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರೊಳಗೆ ಶ್ರೀ ಜೀತಾರಾಮ ಅವರ ನೇತೃತ್ವದಲ್ಲಿ ಸ್ವಯಂಸೇವಕರು ವಿಮಾನ ಅಪಘಾತ ಸಂತ್ರಸ್ತರ ಸಹಾಯ ಸಮಿತಿಯನ್ನು ರಚಿಸಿದ್ದರು. ಇದರಲ್ಲಿ ವಿಶ್ವ ಹಿಂದೂ ಪರಿಷತ್, ಆರ್ಯ ಸಮಾಜ, ವಿದ್ಯಾರ್ಥಿ ಪರಿಷತ್ ಹಾಗೂ ಗುರುದ್ವಾರ ಸಮಿತಿಗಳು ಸೇರಿದಂತೆ ಅನೇಕ ಸಾಮಾಜಿಕ ಸಂಸ್ಥೆಗಳ ಸದಸ್ಯರನ್ನು ಸೇರಿಸಿಕೊಂಡು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದರು. ಬೆಳಗಾಗುತ್ತಿದ್ದಂತೆ ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದ್ದರಿಂದ ಮೃತರ ಸಂಬAಧಿಕರು, ಮಾಧ್ಯಮದವರು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿದ್ದರು. ಸಮಿತಿಯು ಇವರೆಲ್ಲರಿಗೂ ಪಾನೀಯ ಹಾಗೂ ಭೋಜನ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿತು. ಯಾವ ಯಾತ್ರಿಗಳ ಸಂಬAಧಿಕರು ಘಟನೆಯ ಸ್ಥಳಕ್ಕೆ ಬರಲಾಗಲಿಲ್ಲವೊ ಅಂಥಹ ಮೃತ ದೇಹಗಳನ್ನು ಹೂಳುವ ವ್ಯವಸ್ಥೆಯನ್ನು ಸ್ವಯಂಸೇವಕರೇ ಮಾಡಿದರು. ಇದಕ್ಕೆ ಸ್ಥಳಿಯ ಮೌಲ್ವಿ ಹಾಗೂ ದೆಹಲಿಯಿಂದ ಬಂದಿದ್ದ ಇಸ್ಲಾಮಿಯ ಪ್ರತಿನಿಧಿ ಮಂಡಳಿಯ ಸಹಾಯವನ್ನು ತೆಗೆದುಕೊಳ್ಳಲಾಯಿತು. ಸಮಿತಿಯ ಕಾರ್ಯಕರ್ತರು ಮೂರು ದಿನಗಳ ಕಾಲ ಕಾರ್ಯನಿರ್ವಹಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಅಂದಿನ ಕ್ಷೇತ್ರ ಪ್ರಚಾರಕರಾದ ಶ್ರೀ ಪ್ರೇಮ್ ಗೋಯಲ್ ಅವರ ಪ್ರಕಾರ, ಮೊದಲ ಬಾರಿಗೆ ಮಸೀದಿಯಲ್ಲಿ ಸ್ವಯಂಸೇವಕರನ್ನು ಚರಖಿ ದಾದರಿಯ ಸ್ಥಳಿಯ ಮುಸ್ಲಿಂ ಸಮಾಜವು ಗೌರವಿಸಿತ್ತು. ಈ ಸಂದರ್ಭದಲ್ಲಿ ಅಲ್ಲಿಯ ಮೌಲ್ವಿಯಾದ ಮೊಹಮ್ಮದ್ ಹಮೀದ್ ಅವರ ಮಾತಿನಲ್ಲಿ ಹೇಳುವುದಾದರೆ, ಅವರು ಸ್ವಯಂಸೇವಕರ ಯೋಗ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾ “ಸಂಘದ ಸ್ವಯಂಸೇವಕರು ಕೇವಲ ಮಾನವೀಯತೆಯಿಂದ ಕೆಲಸ ಮಾಡುತ್ತಾರೆ” ಎಂದು ಹೇಳಿದರು. ಅಲ್ಲದೆ, ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಅಂದಿನ ಕೇಂದ್ರೀಯ ನಾಗರಿಕ ವಿಮಾನಯಾನ ಸಚಿವ ಶ್ರೀ ಇಬ್ರಾಹಿಂ ಅವರು “ಇವರು ಎಲ್ಲ ಜಾತಿ ಧರ್ಮವನ್ನು ಮೀರಿ ನಿಂತ ಮಾನವತೆಯ ಮೂರ್ತಿಗಳು” ಎಂದು ಸ್ವಯಂಸೇವಕರನ್ನು ಶ್ಲಾಘಿಸಿದರು.
ಭಾರತೀಯ ನೌಕಾಪಡೆಯ ಹೊಸ ಹೆಮ್ಮೆ ಐಎನ್ಎಸ್ ನಿಸ್ತಾರ್. ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತೀಯ ನೌಕಾಪಡೆಯ ಮೊತ್ತ ಮೊದಲ ಸ್ಥಳೀಯ ಡೈವಿಂಗ್ ಬೆಂಬಲ ಹಡಗು. ಐಎನ್ಎಸ್ ನಿಸ್ತಾರ್ ಎಂದು ಹೆಸರಿಸಲಾಗಿರುವ ಇದನ್ನು, ಹಿಂದೂಸ್ತಾನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ. ವಿಶ್ವದ ಕೆಲವೇ ನೌಕಾಪಡೆಗಳು ಮಾಡಲು ಸಾಧ್ಯವಾಗುವ ಆಳ ಸಮುದ್ರಗಳಲ್ಲಿನ ಡೈವಿಂಗ್ ಮತ್ತು ರಕ್ಷಣೆಯಂತಹ ಕಷ್ಟಕರವಾದ ಕೆಲಸಗಳನ್ನು ಮಾಡುವುದು ಇದರ ಕೆಲಸ. ಐಎನ್ಎಸ್ ನಿಸ್ತಾರ್ ಕೇವಲ ಒಂದು ಹಡಗು ಅಲ್ಲ, ಅದು ಒಂದು ದೊಡ್ಡ ಶಕ್ತಿ. ಈ ಹಡಗು ನಮ್ಮ ನೌಕಾಪಡೆಗೆ ಮಾತ್ರವಲ್ಲದೆ ನಮ್ಮ ನೆರೆಯ ರಾಷ್ಟçಗಳಿಗೂ ಜಲಾಂತರ್ಗಾಮಿ ನೌಕೆಗಳ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಇದು ಭಾರತವನ್ನು, ಈ ವಿಚಾರದಲ್ಲಿ ವಿಶ್ವಾಸಾರ್ಹ ಪಾಲುದಾರನನ್ನಾಗಿ ಮಾಡುತ್ತದೆ. ಈ ಹಡಗು ೧೨೦ ಮೀಟರ್ ಉದ್ದವಿದೆ. ಇದರ ತೂಕ ಸುಮಾರು ೧೦,೦೦೦ ಟನ್ಗಳು. ಇದು ರಿಮೋಟ್ ಕಂಟ್ರೋಲ್ಡ್ ವಾಹನಗಳು, ವಿಶೇಷವಾಗಿ ಲೈಫ್ ಬೋಟ್ಗಳು ಮತ್ತು ಡೈವಿಂಗ್ ಚೇಂಬರ್ಗಳAತಹ ಆಧುನಿಕ ಉಪಕರಣಗಳನ್ನು ಹೊಂದಿದೆ. ಇದು ೩೦೦ ಮೀಟರ್ ಆಳ ಸಮುದ್ರದಲ್ಲಿ ಚಾಲನೆ ಮತ್ತು ರಕ್ಷಣಾ ಕಾರ್ಯಗಳನ್ನು ಮಾಡಬಹುದು. ಯಾವುದೇ ಜಲಾಂತರ್ಗಾಮಿಯು ತೊಂದರೆಯಲ್ಲಿ ಸಿಲುಕಿಕೊಂಡರೆ, ರಕ್ಷಣೆಗೆ ಇದನ್ನು ಬಳಸಬಹುದು. ಸೋನಾರ್ಗಳು, ಕ್ಯಾಮೆರಾಗಳು ಮತ್ತು ಮ್ಯಾನಿಪ್ಯುಲೇಟರ್ಗಳನ್ನು ಹೊಂದಿದ ರಿಮೋಟ್ ಚಾಲಿತ ವಾಹನಗಳನ್ನು ಇದು ಹೊಂದಿದೆ. ಇವು ನೀರೊಳಗಿನ ಹಾನಿಯನ್ನು ನಿರ್ಣಯಿಸಲು, ಅವಶೇಷಗಳನ್ನು ತೆರವುಗೊಳಿಸಲು ಪೂರ್ಣ ಒಂದು ಕಿಲೋಮೀಟರ್ ಗಳಷ್ಟು ಕೆಳಗೆ ಇಳಿಯಬಹುದು.
ಅನೇಕ ಸಂದರ್ಭಗಳಲ್ಲಿ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಕುರಿತಾಗಿ ಮಾತ್ರ ನಾವು ಗಮನವಹಿಸುತ್ತೇವೆ. ಆದರೆ ನಮ್ಮ ಮೂಲಭೂತ ಕರ್ತವ್ಯಗಳನ್ನು ನಾವು ನಿರ್ಲಕ್ಷಿಸಿದ್ದೇವೆ. ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ “ಸ್ವಾತಂತ್ರ್ಯಹೋರಾಟಕ್ಕೆ ಸ್ಪೂರ್ತಿ ನೀಡಿದ ಆದರ್ಶಗಳನ್ನು ಪಾಲಿಸುವುದು ಮತ್ತು ಅನುಸರಿಸುವುದು” ಎಂಬ ಕರ್ತವ್ಯವನ್ನೂ ತಿಳಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ಹಾಗೂ ಸೈದ್ಧಾಂತಿಕ ಕಾರಣಗಳಿಗಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ, ಅವರನ್ನು ವಾಚಾಮಗೋಚರ ನಿಂದಿಸುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅವರ ಜೀವನವನ್ನು ವಿಮರ್ಶಿಸುವುದಕ್ಕೂ, ನಿಂದಿಸುವುದಕ್ಕೂ ವ್ಯತ್ಯಾಸವಿದೆ. ಅದನ್ನು ಅರಿತು ನಾವೆಲ್ಲರೂ ನಮ್ಮ ವ್ಯವಹಾರವನ್ನು ಮಾಡಬೇಕಿದೆ. ಪ್ರತಿಯೊಬ್ಬ ಸ್ವಾತಂತ್ರö್ಯ ಹೋರಾಟಗಾರರೂ ಅವರವರ ಕಾಲಘಟ್ಟದಲ್ಲಿ ಅವರವರ ಶಕ್ತಿಗನುಗುಣವಾಗಿ ರಾಷ್ಟ್ರದ ಸ್ವಾತಂತ್ರö್ಯಕ್ಕೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ. ಅದನ್ನು ಗೌರವಿಸುತ್ತಾ, ಅವರ ಆದರ್ಶಗಳನ್ನು ಪಾಲಿಸುತ್ತಾ ರಾಷ್ಟ್ರಕ್ಕಾಗಿ ದುಡಿಯುವ ಅವಕಾಶ ಇದೀಗ ನಮ್ಮೆಲ್ಲರ ಪಾಲಿಗಿದೆ.

‘ಸಂಚಾರ - ಇದು ಒಳಗಿನ ಪಯಣ' ಪುಸ್ತಕವು ನಮ್ಮ ನಿಮ್ಮ ಜೀವನಗಳಲ್ಲಿ ದಿನನಿತ್ಯ ನಡೆಯುವ, ಆದರೆ ನಮ್ಮ ಗಮನಕ್ಕೆ ಬರದೆ ಮರೆಯಾಗುವ ಹತ್ತುಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿಟ್ಟು ಜೀವನಪಾಠ ಕಲಿಸುವ ಸುಂದರ ಹೊತ್ತಗೆ. ಜೀವನಮೌಲ್ಯಗಳ ಪಾಠವನ್ನು ಹೀಗೂ ಮಾಡಬಹುದೆಂಬ ಅತ್ಯುತ್ತಮ ಮಾದರಿ; ಪಾಠ್ಯಪುಸ್ತಕವಾಗಬೇಕಾದ ರಸಪೂರ್ಣ ಬದುಕಿನ ಬುತ್ತಿ. ಮುಖ್ಯವಾಗಿ ತ್ರಿಕರಣಗಳ ನಡುವೆ ಎಂಥವರಿಗೂ ಇದ್ದೇ ತೀರುವ ಅಂತರವನ್ನು ಹೇಗೆ ತಗ್ಗಿಸಿಕೊಳ್ಳಬೇಕೆಂಬುವುದನ್ನು ‘ಸಂಚಾರ' ಕೃತಿಯಲ್ಲಿ ಕಾಣಬಹುದು. ಇಂಥ ಪ್ರಾಮಾಣಿಕ ಶೋಧನೆಯೇ ಈ ಬಗೆಯ ಸಂಚಾರದ ಗುರಿಯನ್ನು ದಿಟ್ಟವಾಗಿಸುತ್ತದೆ, ಗಟ್ಟಿಯಾಗಿಸುತ್ತದೆ. ಈ ಕೃತಿಯು ‘Sanchara: A Philosophical Journey’ ಎಂಬ ಶೀರ್ಷಿಕೆಯಲ್ಲಿ ಇಂಗ್ಲೀಷ್ನಲ್ಲೂ ಲಭ್ಯವಿದೆ. ಪುಸ್ತಕಕ್ಕಾಗಿ ಸಂಪರ್ಕಿಸಿ: 7795827307, 6360581957

ಪ್ರಸ್ತುತ ಭಾರತ ಅಮೃತಕಾಲದಲ್ಲಿದೆ. ವಿಕಸಿತ ಭಾರತದ ಗುರಿಯನ್ನು ಹೊತ್ತು ಸ್ವಾತಂತ್ರ್ಯಪ್ರಾಪ್ತಿಯ ನೂರರ ವಸಂತದ ಸಂದರ್ಭ ಎಂದರೆ 2047ರ ಹೊತ್ತಿಗೆ ಜಾಗತಿಕ ನಾಯಕನಾಗುವುದರೆಡೆಗೆ ದಾಪುಗಾಲನ್ನಿರಿಸುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಲ್ಲಿ ಅನೇಕರು ವಿಕಸಿತ ಭಾರತದ ಕನಸು ಕಂಡಿದ್ದರು, ಮುಂದೆ ಸ್ವಾತಂತ್ರ್ಯಾನಂತರದಲ್ಲಿ ಬಂದ ಸರ್ಕಾರಗಳು ಇದರ ಸಾಕಾರಕ್ಕಾಗಿ ಅತಿಯಾಗಿ ಶ್ರಮಿಸಿವೆಯಾದರೂ ಬದ್ಧತೆಯ ಕೊರತೆಯೋ, ವೈಯಕ್ತಿಕ ಲಾಲಸೆಯೋ, ಗುರಿಯೆಡೆಗಿನ ಕಾರ್ಯ ಆಮೆಗತಿಯಲ್ಲಿ ಸಾಗಿತ್ತು. ಕಳೆದ ಒಂದು ದಶಕದಿಂದ ಇದಕ್ಕೆ ಚಿರತೆಯ ವೇಗ ದೊರೆತಿದೆ. 2047ರವರೆಗಿನ ಗುರಿಯನ್ನು ಯಾವೆಡೆಗೆ ಇಡಬೇಕಿದೆ ಎನ್ನುವುದರ ಮಾರ್ಗಸೂಚಿ ತಯಾರಿದೆಯಾದರೂ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಾಗುವ ಹಾದಿಯ ಅವಲೋಕನ ಈ ಕ್ಷಣದ ಅಗತ್ಯ. ಬಡತನ ನಿರ್ಮೂಲನೆಗೆ ಒತ್ತು: ಈ ದೇಶದ ಮೂಲಭೂತ ಸಮಸ್ಯೆ ಎಂದು ಅಮೃತಕಾಲದವರೆಗೂ ನಮ್ಮ ಪಠ್ಯದಲ್ಲಿ ಓದಿಕೊಂಡು ಬಂದ ಸಮಾನ್ಯ ಸಂಗತಿ ಬಡತನ. ಹಿಂದೆಯಿಂದಲೂ ಗರೀಬಿ ಹಠಾವೋ ಎಂದು ಪ್ರಯತ್ನಗಳಾದವಾದರೂ ಬಡತನ ನಿರ್ಮೂಲನೆ ಸಾಧ್ಯವಾಗಲಿಲ್ಲ. 2011-12ರಲ್ಲಿ ಬಡತನ ಸೂಚ್ಯಂಕ 16.2%ರಷ್ಟಿದ್ದು, 2022-23ರಲ್ಲಿ ಇದರ ಪ್ರಮಾಣ 2.3%ರಷ್ಟಕ್ಕೆ ಇಳಿಕೆ ಕಂಡಿತು. ಹಸಿವಿನ ಪ್ರಮಾಣದಲ್ಲೂ ಇಳಿಕೆ ಕಂಡಿದ್ದು 81 ಕೋಟಿ ಜನ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. 15 ಕೋಟಿ ಮನೆಗಳಿಗೆ ನಲ್ಲಿ ನೀರು, ಪಿಎಂ ಆವಾಸ್ ಯೋಜನೆಯಲ್ಲಿ 4 ಕೋಟಿಗೂ ಅಧಿಕ ಮನೆ, 12 ಕೋಟಿ ಶೌಚಾಲಯ ನಿರ್ಮಾಣ, 68 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಪರಿಶಿಷ್ಟರಿಗೆ 14,700 ಕೋಟಿಗೂ ಅಧಿಕ ಸಾಲ ಸೌಲಭ್ಯ, 10.33 ಕೋಟಿಗೂ ಅಧಿಕ ಎಲ್ಪಿಜಿ ಗ್ಯಾಸ್ ಸಂಪರ್ಕ ಒದಗಿಸುವ ಮೂಲಕ ಬಡವರನ್ನು ಮೇಲೆತ್ತುವ ಪ್ರಯತ್ನ ಮಾಡಿದೆ. ಇಡಬ್ಲ್ಯೂಎಸ್ ಮೀಸಲಾತಿ ಈ ನಿಟ್ಟಿನ ದಿಟ್ಟ ಹೆಜ್ಜೆಯಲ್ಲಿ ಒಂದು. ವೃತ್ತಿಪರರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ನೀಡಲಾಗುತ್ತಿದೆ. ಆದಾಗ್ಯೂ ಗ್ರಾಮೀಣ ಕುಶಲಿಗರಿಗೆ ಹೆಚ್ಚಿನ ಅವಕಾಶ, ಯುವ ಕೃಷಿಕರಿಗೆ ಪ್ರೋತ್ಸಾಹ, ದುಡಿಯುವ ಕೈಗಳಿಗೆ ಉದ್ಯೋಗ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಆದ್ಯತೆಯ ಅಗತ್ಯವಿದೆ. ರೈತರ ಆದಾಯ ದ್ವಿಗುಣ: ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಭಾರತ ಆಹಾರ ಧಾನ್ಯಗಳಿಗಾಗಿ ಪರದಾಡಿದ್ದು ಗೊತ್ತಿರುವ ಸಂಗತಿ. ಅದರಿಂದ ಹೊರಬರಲು ನಡೆದ ಪ್ರಯತ್ನಗಳು ಶ್ಲಾಘನೀಯವೂ ಹೌದು. ನಂತರದಲ್ಲಿ ನಡೆದ ‘ಹಸಿರು ಕ್ರಾಂತಿ' ಭಾರತದ ಕೃಷಿ ಉತ್ಪಾದನೆಯಲ್ಲಿ ಬೆಳವಣಿಗೆ ತಂದರೂ ರೈತರು ಸ್ಥಿತಿವಂತರಾಗಲು ಸಾಧ್ಯವಾಗಿರಲಿಲ್ಲ. ಆದರೆ 2013-14ಕ್ಕೆ ಹೋಲಿಸಿದರೆ 2024-25ರಲ್ಲಿ ಕೃಷಿ ಬಜೆಟ್ ಬರೋಬ್ಬರಿ ಐದು ಪಟ್ಟು ಹೆಚ್ಚಳಗೊಂಡಿದೆ. 11 ಕೋಟಿಗೂ ಅಧಿಕ ರೈತರಿಗೆ ವಾರ್ಷಿಕ ₹6000/-, ಐತಿಹಾಸಿಕ ಬೆಂಬಲ ಬೆಲೆ ಏರಿಕೆ, ಬೆಳೆ ವಿಮೆ ಸೌಲಭ್ಯ ಸೇರಿದಂತೆ ಕೃಷಿಯಲ್ಲಿ ಹೊಸ ಕ್ರಾಂತಿಯಾಗಿದೆ. ಕೃಷಿಯನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುವ ಯೋಜನೆಗಳು ಹೆಚ್ಚುತ್ತಿವೆ. ಈ ಕಾರಣಗಳಿಂದ ಆಹಾರ ಧಾನ್ಯಗಳ ಉತ್ಪಾದನೆ 265 ಮಿಲಿಯನ್ ಮೆಟ್ರಿಕ್ ಟನ್ನಿಂದ 374 ಮಿಲಿಯನ್ ಮೆಟ್ರಿಕ್ ಟನ್ (2015ರಿಂದ 2025ರವರೆಗೆ) ತಲುಪಿದೆ. ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿದೆ. ಕ್ಷೀರಕ್ರಾಂತಿಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, 146 ಮಿಲಿಯನ್ ಟನ್ನಿಂದ 239 ಮಿಲಿಯನ್ ಟನ್ (63.56%)ಗೆ ಏರಿಕೆ ಕಂಡಿದೆ. ಎಥನಾಲ್ ಪೂರೈಕೆ 441 ಕೋಟಿ ಲೀಟರ್ನಷ್ಟು ಹೆಚ್ಚಾಗಿದೆ. ಇಂದು ಭಾರತ ಸಿರಿಧಾನ್ಯಗಳನ್ನು ಬೆಳೆವ ಹಾಗೂ ಬಳಸುವ ಜಗತ್ತಿನ ಅತಿದೊಡ್ಡ ರಾಷ್ಟ್ರ. 9.03 ಬಿಲಿಯನ್ ಡಾಲರ್ನಷ್ಟು ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನು ಭಾರತ ರಫ್ತು ಮಾಡುತ್ತದೆ. 20 ಸಾವಿರ ಹೊಸ ಸಹಾಕಾರಿ ಸಂಘಗಳು, 7.1 ಸಾವಿರ ಡೈರಿಗಳು ಕಾರ್ಯಾರಂಭಗೊಂಡಿವೆ. ಮೊದಲ ರಾಷ್ಟ್ರೀಯ ಸಹಕಾರಿ ವಿವಿ ತ್ರಿಭುವನದಾಸ್ ಪಟೇಲ್ ವಿವಿಯನ್ನು ಸ್ಥಾಪಿಸಲಾಗಿದೆ. ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಯೋಜನೆಗೆ ಭಾರತ ನಾಂದಿ ಹಾಡಿದೆ. ಕೃಷಿಯನ್ನು ಲಾಭದಾಯಕ ಕ್ಷೇತ್ರವಾಗಿಸಲು ಈಗಿರುವ ಪ್ರಯತ್ನಗಳು ಸಾಕಾಗುತ್ತಿಲ್ಲ. ಮಳೆ ಜೊತೆಗಿನ ಜೂಜಾಟ ಕೃಷಿಕರನ್ನು ಹೈರಾಣಾಗಿಸಿದ್ದು, ಕೃಷಿ ಕಾರ್ಮಿಕರ ಸಂಖ್ಯೆಯೂ ಗಣನೀಯ ಇಳಿಕೆ ಕಂಡಿದೆ. ತಂತ್ರಜ್ಞಾನ ಆಧಾರಿತ ವ್ಯವಸಾಯಕ್ಕೆ ರೈತರನ್ನು ಸಜ್ಜುಗೊಳಿಸುವುದು, ಯುವಕರನ್ನು ಕೃಷಿಗೆ ಪ್ರೋತ್ಸಾಹಿಸುವುದು, ಕೃಷಿಯಲ್ಲಿ ಹೆಚ್ಚು ಸಂಶೋಧನೆಗಳು ನಡೆಯುವುದು, ರೈತರ ಬದುಕು ಸುಧಾರಿಸುವುದು, ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಮಾಡುವುದು, ರೈತರನ್ನು ಪ್ರಜ್ಞಾವಂತರನ್ನಾಗಿಸುವುದು ಅತ್ಯಂತ ಮುಖ್ಯ. ಕೃಷಿಯ ಉತ್ಪನ್ನಗಳ ಮೌಲ್ಯವರ್ಧನೆ ವಿಶೇಷ ಚಿಂತನೆಯ ಅಗತ್ಯವೂ ಇದೆ. ನಾರಿಶಕ್ತಿ: ಭಾರತದಲ್ಲಿ ಮೊದಲ ಬಾರಿಗೆ ಪ್ರತಿ ಸಾವಿರ ಪುರುಷರಿಗೆ 1,020 ಮಹಿಳೆಯರ ಲಿಂಗಾನುಪಾತ ಬಂದಿದೆ. ಹೆರಿಗೆಯ ವೇಳೆ ತಾಯಂದಿರ ಮರಣ ಕಡಿಮೆಯಾಗಿದೆ. ದೇಶದಲ್ಲಿ 90 ಲಕ್ಷಕ್ಕೂ ಅಧಿಕ ಗುಂಪುಗಳಲ್ಲಿ 10 ಕೋಟಿ ಮಹಿಳೆಯರನ್ನು ಸಂಘಟಿಸಲಾಗಿದೆ. ನಾಯಕತ್ವದಲ್ಲೂ 33% ಮಹಿಳೆಯರ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಶಸ್ತ್ರಪಡೆಗಳಲ್ಲಿ, ರಕ್ಷಣಾ ಸೇವೆಗಳಲ್ಲಿ, ಸೈನಿಕ ಶಾಲೆಗಳಲ್ಲಿ ಈಗ ಹೆಣ್ಣುಮಕ್ಕಳಿಗೂ ಪ್ರವೇಶ ದೊರೆತಿದೆ. ಆಪರೇಷನ್ ಸಿಂಧೂರದಂತಹ ಕ್ಲಿಷ್ಟಕರ ಆಪರೇಷನ್ ಅನ್ನು ಮಹಿಳೆಯರೇ ನಿಭಾಯಿಸುವ ಮಟ್ಟಿಗೆ ಬದಲಾವಣೆಯಾಗಿದೆ. ಪೈಲಟ್ಗಳಾಗಿ, ಚಂದ್ರಯಾನ ಮಿಷನ್ನ ಮುಖ್ಯಸ್ಥರಾಗಿ, ಉದ್ಯಮಿಗಳಾಗಿ ಎಲ್ಲೆಡೆಯೂ ಮಹಿಳೆ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುವ ಮಟ್ಟಿಗೆ ಭಾರತ ಬದಲಾಗಿದೆ. ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯ ತೊಡಗಿಸಿಕೊಳ್ಳುವಿಕೆ ಸಾಧ್ಯವಾಗಿಲ್ಲ. ಮಹಿಳಾ ಸಬಲೀಕರಣಕ್ಕೆ ಸರ್ಕಾರದ ಈಗಿನ ಪ್ರಯತ್ನಗಳ ಜೊತೆಗೆ, ಹೊಸ ಯೋಚನೆಗಳು ಸೇರಬೇಕಿದೆ. ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗದ ಪ್ರೋತ್ಸಾಹದ ಜೊತೆಗೆ ಜಾಗತಿಕ ಮಾರುಕಟ್ಟೆಯ ಸಂಪರ್ಕ ಅಗತ್ಯವಾಗಿದೆ. ಮಹಿಳೆಯರೇ ನಡೆಸುವ ಉದ್ಯಮಗಳಿಗೆ, ಸ್ವಾವಲಂಬಿ ಉದ್ಯೋಗಗಳಿಗೆ ವಿನೂತನತೆಯನ್ನು ನೀಡಬೇಕಿದ್ದು, ಬಲವರ್ಧನೆಯೂ ಆಗಬೇಕು. ಮಹಿಳಾ ನೇತೃತ್ವ ಕೆಳಹಂತದಲ್ಲಿ ಕೇವಲ ದಾಖಲೆಗಳಲ್ಲಿ ಮಾತ್ರ ಸಾಧ್ಯವಾಗುತ್ತಿದ್ದು, ವಾಸ್ತವದಲ್ಲಿ ತರಲು ಕಠಿಣ ನಿಯಮ ಮತ್ತು ಜಾಗೃತಿಯ ಅಗತ್ಯವಿದೆ. ವಿಜ್ಞಾನ ಮತ್ತು ತಂತ್ರಜ್ಞಾನ: ಭಾರತವು ನಡೆಸಿದ ಚಂದ್ರಯಾನ, ಮಂಗಳಯಾನ, ಒಂದೇ ರಾಕೆಟ್ನಲ್ಲಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ತನ್ನ ವೈಜ್ಞಾನಿಕ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದೆ. ಇಂದು ಇಸ್ರೋ ಭಾರತವನ್ನು ಅಂತರಿಕ್ಷದ ಅತ್ಯಂತ ಸಮರ್ಥ ರಾಷ್ಟ್ರವನ್ನಾಗಿಸುತ್ತಿದೆ. 4 ಲಕ್ಷ ಕೋಟಿ ಮೌಲ್ಯದ ಯುಪಿಐ ವಹಿವಾಟು ಭಾರತ ನಡೆಸುತ್ತಿದ್ದು, ವಿಶ್ವದ ವಹಿವಾಟುಗಳಲ್ಲಿ ಶೇ.49ರಷ್ಟು ಪಾಲು ನಮ್ಮದ್ದೇ ಇದೆ. ಇಡೀ ದೇಶದಲ್ಲಿ 116ಕೋಟಿ ಮೊಬೈಲ್ ಬಳಕೆದಾರರಿದ್ದಾರೆ. 2.14 ಲಕ್ಷ ಪಂಚಾಯಿತಿಗಳು ಆಫ್ಟಿಕಲ್ ಫೈಬರ್ ಸಂಪರ್ಕ ಹೊಂದಿವೆ. ಜಗತ್ತಿನಲ್ಲಿಯೇ ಅತೀ ಕಡಿಮೆ ದರದಲ್ಲಿ ಡೇಟಾ ಭಾರತದಲ್ಲಿ ಮಾತ್ರ ಲಭ್ಯ! ಕಳೆದ 10 ವರ್ಷಗಳಲ್ಲಿ ಭಾರತದ ಇಂಟರ್ನೆಟ್ ಬಳಕೆದಾರರ ಸಂಖ್ಯೆ 285% ಹೆಚ್ಚಳವಾಗಿದೆ. ಭಾರತದಲ್ಲಿ ಡಿಬಿಟಿ ಸುಲಭವಾಗಿದ್ದರಿಂದ ಸೋರಿಕೆ ತಡೆಯಲು ಸಾಧ್ಯವಾಗಿದೆ. ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಸಾಗಬೇಕಿರುವ ಮೈಲಿ ತುಂಬಾ ದೂರ. ಇಂದು ಮೊಬೈಲ್ನಿಂದ ಹಿಡಿದು, ಯುದ್ಧ ವಿಮಾನಗಳವರೆಗೆ ಬೇರೆ ರಾಷ್ಟ್ರಗಳನ್ನು ಭಾರತ ಅವಲಂಬಿಸಿದೆ. ಈಗ ಆತ್ಮನಿರ್ಭರತೆಯ ಹಾದಿಯಲ್ಲಿದ್ದೇವೆ. ಈ ವೇಗ ಹೆಚ್ಚಬೇಕು. ನ್ಯಾನೋ ತಂತ್ರಜ್ಞಾನ, ಮೊಬೈಲ್ ತಯಾರಿಕೆ, ಸಾಫ್ಟ್ವೇರ್ ಅಭಿವೃದ್ಧಿ, ಸೈಬರ್ ಸೆಕ್ಯೂರಿಟಿ, ಸರ್ಚ್ಇಂಜಿನ್ಗಳ ಬಗ್ಗೆ ನಮ್ಮ ಲಕ್ಷ್ಯ ಮುಖ್ಯವಾಗಿದೆ. ಬಾಹ್ಯಾಕಾಶದಲ್ಲಿ ಗುರುತಿಸಬಲ್ಲ ಸಾಧನೆ ಮಾಡುತ್ತಿದ್ದರೂ, ಮತ್ತೊಂದು ಎತ್ತರದ ಅಗತ್ಯವಿದೆ. ಆರೋಗ್ಯ ಕ್ಷೇತ್ರ: ಭಾರತವು ಆರೋಗ್ಯ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಕಂಡ ಬದಲಾವಣೆಗೆ ಜಗತ್ತೇ ನಿಬ್ಬೆರಗಾಗಿದೆ. ಕೋವಿಡ್ ಕಾಲದಲ್ಲಿ ನಾವು ಕಳಿಸಿದ ವ್ಯಾಕ್ಸಿನ್ಗೆ ಜಗತ್ತಿನಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಆಯುಷ್ಮಾನ್ ಯೋಜನೆ ಆರೋಗ್ಯ ಕ್ಷೇತ್ರದ ಕ್ರಾಂತಿಯಾಗಿದ್ದು, ಜನೌಷಧಿ ಕೇಂದ್ರಗಳ ಸ್ಥಾಪನೆ ಸಾಮಾನ್ಯರ ಪಾಲಿನ ಸಂಜೀವಿನಿ ಕೇಂದ್ರಗಳಾಗಿವೆ. ವೈದ್ಯಕೀಯ ಅಧ್ಯಯನದ ಸೀಟು ಹೆಚ್ಚಳ ಮಾಡಿದ್ದು, ಜಗತ್ತಿನಾದ್ಯಂತ ಭಾರತದ ವೈದ್ಯರಿಗೆ ವಿಶೇಷ ಬೇಡಿಕೆ ಇದೆ. ದೇಶದಲ್ಲಿ ನಡೆದ ಪ್ರಯತ್ನಗಳ ಹೊರತಾಗಿಯೂ ಆರೋಗ್ಯ ದುಬಾರಿ ಎಂಬ ಅಳಲಿದೆ. ಜನಸಮಾನ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ಒದಗಿಸುವ ಪ್ರಯತ್ನವನ್ನು ಸರ್ಕಾರ ಅವಿರತವಾಗಿ ಮಾಡುತ್ತಿದ್ದರೂ, ಆರೋಗ್ಯ ವಿಮೆ ದೊರಕಿಸಿ ಕೊಟ್ಟಿದ್ದರೂ ಬಳಸಿಕೊಳ್ಳುವವರ ಅಜ್ಞಾನದ ಕಾರಣಕ್ಕೆ ಸಾಕಾರ ಸಾಧ್ಯವಾಗಿಲ್ಲ. ಆರೋಗ್ಯ ಹಾಗೂ ಶಿಕ್ಷಣಗಳೆರಡು ಸುಲಭ ಸಾಧ್ಯವಾಗಿ, ಉಚಿತವಾಗಿ ದೊರೆಯುವಂತಾಗಬೇಕು. ರಕ್ಷಣಾ ಕ್ಷೇತ್ರ: ಭಾರತವು ರಕ್ಷಣಾ ಸ್ವದೇಶೀಕರಣಕ್ಕೆ ಮುನ್ನುಡಿ ಬರೆದಿದ್ದು, 5000ಕ್ಕೂ ಅಧಿಕ ವಸ್ತುಗಳು ಈ ಪಟ್ಟಿಯಲ್ಲಿವೆ. ಭಾರತದ ರಕ್ಷಣಾ ರಫ್ತು 23,622 ಕೋಟಿಯಷ್ಟಿದ್ದು, ಹಿಂದೆAದಿಗಿAತಲೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ವಿದೇಶಗಳಿಗೆ ಕಳಿಸುತ್ತಿದೆ. ಯುದ್ಧ ಹೆಲಿಕಾಪ್ಟರ್, ಲಘು ವಿಮಾನಗಳು, ಮಿಸೈಲ್ಗಳ ತಯಾರಿಕೆಯಲ್ಲಿ ಭಾರತ ಏರುಗತಿಯಲ್ಲಿದೆ. ರಕ್ಷಣಾ ಕ್ಷೇತ್ರದಲ್ಲಿ ಜಾಗತಿಕ ಬಲಿಷ್ಠ ರಾಷ್ಟçಗಳ ಪೈಕಿ ಭಾರತವೂ ಅಗ್ರಸ್ಥಾನದಲ್ಲಿದ್ದರೂ, ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ನಡುವೆ ಭಾರತ ಮತ್ತಷ್ಟು ಬಲಿಷ್ಠವಾಗಬೇಕಿದೆ. ಈ ದೃಷ್ಟಿಯಲ್ಲಿ ಹೆಚ್ಚು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಮಿಸೈಲ್ಗಳು, ಸೈನಿಕ ವಾಹನಗಳು, ಸೇನಾ ಸಾಮಗ್ರಿಗಳನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ಕಾರ್ಯ ತ್ವರಿತವಾಗಿ ಮತ್ತು ಅಧಿಕವಾಗಿ ಮಾಡಬೇಕಿದೆ. ಶಿಕ್ಷಣ ಕ್ಷೇತ್ರ: ಭಾರತ ಶಿಕ್ಷಣ ರಂಗದಲ್ಲೂ ತನ್ನದೇ ಪ್ರಗತಿ ಸಾಧಿಸಿದ್ದು, ಸಾಕ್ಷರತಾ ಪ್ರಮಾಣ 77.77% ಆಗಿದೆ. ಹಲವು ಕ್ಷೇತ್ರಗಳಲ್ಲಿ ದೇಶವು ಪ್ರಗತಿಯ ದಾಪುಗಾಲು ಇಟ್ಟಿದ್ದು, ವಿಶ್ವಕ್ಕೆ ಮಾದರಿಯಾಗುವತ್ತ ಸಾಗಿದೆ. ಈ ಸಂದರ್ಭದಲ್ಲಿ ಭಾರತ ಸಕಲ ಕ್ಷೇತ್ರದಲ್ಲೂ ಅಷ್ಟೇ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಜಾಗತಿಕ ಸ್ಥಿತ್ಯಂತರಕ್ಕೆ ಅನುಗುಣವಾಗಿ ತನ್ನತನವನ್ನು ಬದಲಿಸದೇ, ಸ್ವತ್ವದ ಅಡಿಯಲ್ಲಿ ಭಾರತ ಮತ್ತಷ್ಟು ಬೆಳಗಲಿ. ವಿಶೇಷವಾಗಿ ವಸಾಹತುಶಾಹಿ ಮನಸ್ಥಿತಿಯ ನಿವಾರಣೆ ದೇಶದಲ್ಲಾಗಬೇಕಿರುವ ಬಹುದೊಡ್ಡ ಪರಿವರ್ತನೆಯಾಗಿದೆ.

ಕಾಶ್ಮೀರದಲ್ಲಿ ಹಿಂದೆ ಊಹಿಸಲೂ ಸಾಧ್ಯವಿಲ್ಲ ಎಂದು ಭಾವಿಸಲಾಗಿದ್ದ ಘಟನೆಗಳು ಇಂದು ನಡೆಯುತ್ತಿವೆ. ಕಾಶ್ಮೀರದ ಹೃದಯಭಾಗವಾದ ಶ್ರೀನಗರದ ಲಾಲ್ ಚೌಕ್ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಹಿಂದೂಗಳು ಈ ಬಾರಿ ನಿರ್ಭಯವಾಗಿ ಆಚರಿಸಿದ್ದಾರೆ. ಈ ಬೆಳವಣಿಗೆ ಆಧ್ಯಾತ್ಮಿಕ ಸ್ವರೂಪದ್ದಾಗಿದ್ದರೂ, ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ವಿಶಾಲವಾದ ಪರಿವರ್ತನೆಯನ್ನು ಆಳವಾಗಿ ಸಂಕೇತಿಸುತ್ತದೆ, ಇದು ಬದಲಾಗುತ್ತಿರುವ ಕಾಶ್ಮೀರದ ವಾಸ್ತವಗಳ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ದಶಕಗಳ ಕಾಲ, ಕಾಶ್ಮೀರ ಕಣಿವೆ ಸೂಕ್ಷö್ಮ, ಸಂಘರ್ಷ ಪೀಡಿತ ವಲಯವಾಗಿ ಉಳಿದಿತ್ತು, ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಕಾರ್ಯಕ್ರಮಗಳು ಅಶಾಂತಿಯ ಭಯದಿಂದ ನಿಗ್ರಹಿಸಲ್ಪಟ್ಟಿದ್ದವು ಅಥವಾ ನಿರ್ಬಂಧಿಸಲ್ಪಟ್ಟವು. ನಿರ್ದಿಷ್ಟವಾಗಿ ಲಾಲ್ ಚೌಕ್ ರಾಜಕೀಯ ಅಸ್ಥಿರತೆಯ ಸಂಕೇತವಾಗಿ ನಿಂತಿತ್ತು, ಒಂದು ಕಾಲದಲ್ಲಿ ಪ್ರತ್ಯೇಕತಾವಾದಿ ಘೋಷಣೆಗಳು ಪ್ರತಿಧ್ವನಿಸಿದ ಸ್ಥಳವಾಗಿತ್ತು ಮತ್ತು ರಾಷ್ಟçಧ್ವಜವನ್ನು ಹಾರಿಸುವುದು ತೀವ್ರ ವಿವಾದದ ವಿಷಯವಾಗಿತ್ತು. ಆದರೆ ಈಗ ಲಾಲ್ಚೌಕ್ ಸ್ಥಳವು ಭಕ್ತಿಗೀತೆಗಳು, ಮೆರವಣಿಗೆಗಳು ಮತ್ತು ಸ್ಪಷ್ಟವಾದ ಏಕತೆಯ ಪ್ರಜ್ಞೆಯೊಂದಿಗೆ ಸಂಪೂರ್ಣವಾದ ಶಾಂತಿಯುತ ಜನ್ಮಾಷ್ಟಮಿ ಆಚರಣೆಗಳಿಗೆ ಸಾಕ್ಷಿಯಾಗಿದೆ ಎಂಬುದು ಹೊಸ ಕಾಶ್ಮೀರದತ್ತ ಪ್ರಯಾಣದಲ್ಲಿ ಒಂದು ಮೈಲಿಗಲ್ಲು. ನಿರ್ಣಾಯಕ ಆಡಳಿತ, ಭದ್ರತಾ ಸುಧಾರಣೆಗಳು ಮತ್ತು ಸಮಗ್ರ ರಾಷ್ಟ್ರೀಯತೆಯ ದೃಷ್ಟಿಕೋನದ ಮೂಲಕ ಇದು ಸಾಧ್ಯವಾಗಿದೆ.
‘ನಾವು ಯಾವುದೇ ಮತವನ್ನು ಸಹಿಸಿಕೊಳ್ಳುವುದಿಲ್ಲ, ಬದಲಾಗಿ ಒಪ್ಪಿಕೊಳ್ಳುತ್ತೇವೆ’ ಎಂಬ ಸ್ವಾಮಿ ವಿವೇಕಾನಂದರ ಮಾತು ಭಾರತದ ಅಸ್ಮಿತೆಯನ್ನು ತಿಳಿಸುತ್ತದೆ. ಸಹಿಷ್ಣುತೆಯ ಪದದಲ್ಲೇ ಸಹಿಸಿಕೊಳ್ಳುವುದು ಎಂಬ ಅರ್ಥ ಬರುತ್ತದೆ. ಆದರೆ ಭಾರತದ ಗುಣಧರ್ಮ ಎಲ್ಲಾ ಧರ್ಮ-ಮತ-ಪಂಥಗಳನ್ನು ಒಪ್ಪಿಕೊಳ್ಳುತ್ತದೆ. ನಿಮ್ಮಲ್ಲಿನ ಸತ್ಯವನ್ನೂ ನಾವು ಗೌರವಿಸುತ್ತೇವೆ ಎಂದು ಹೇಳುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಆಗಾಗ ನಾವು ಕೇಳುವ ‘ಕೋಮುವಾದ’, ‘ಅಸಹಿಷ್ಣುತೆ’, ‘ಜಾತ್ಯತೀತ’ ಇತ್ಯಾದಿ ಪದಗಳು ಸಮಾಜದಲ್ಲಿ ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಈ ಗೊಂದಲಗಳಿಗೂ ಮೂಲ ಕಾರಣ ‘ಶ್ರೇಷ್ಠತೆಯ ವ್ಯಸನ’. ನಮ್ಮದೇ ಶ್ರೇಷ್ಠ/ ನಮ್ಮದು ಮಾತ್ರ ಶ್ರೇಷ್ಠ ಎಂಬ ಭಾವ ಮೂಡಿದಾಗ ಈ ಅವಾಂತರಗಳಿಗೆ ಕಾರಣವಾಗುತ್ತದೆ. ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ – ಜಗತ್ತಿನ ಮೂಲೆಮೂಲೆಗಳಿಂದ ಶ್ರೇಷ್ಠವಾದ ಸಂಗತಿಗಳು ನಮ್ಮೆಡೆಗೆ ಹರಿದು ಬರಲಿ ಎಂಬ ಶ್ರೇಷ್ಠ ಚಿಂತನೆಯ ನಾಡಿದು. ಅಂತಹ ನಾಡಿನ ಪ್ರಜೆಗಳಾದ ನಾವು ಎಲ್ಲಾ ಜಾತಿ, ಮತ, ಪಂಥ, ಸಂಪ್ರದಾಯ, ಉಪಾಸನಾ ಪದ್ಧತಿ, ಸಮುದಾಯಗಳ ಬಗ್ಗೆ ಸಮಾನ ಗೌರವವನ್ನು ನೀಡೋಣ.
ತಿರುಪತಿ ಜಿಲ್ಲೆಯ ತಮ್ಮ ಹುಟ್ಟೂರಿನ ಚರ್ಚ್ಗೆ ಭೇಟಿ ನೀಡಿದ ಆರೋಪದ ಮೇಲೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ (ಎಇಒ) ಎ ರಾಜಶೇಖರ್ ಬಾಬು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಟಿಟಿಡಿಯಿಂದ ಅಮಾನತುಗೊಳಿಸಲಾಗಿದೆ. ಪ್ರತಿ ಭಾನುವಾರ ಚರ್ಚ್ ಪ್ರಾರ್ಥನೆಗಳಿಗೆ ಹಾಜರಾಗುತ್ತಿದ್ದರು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಬಹಿರಂಗವಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ, ಇದು ಹಿಂದೂ ಟ್ರಸ್ಟ್ ಅನ್ನು ಪ್ರತಿನಿಧಿಸುವ ನೌಕರರ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಟಿಟಿಡಿ ಹೇಳಿಕೊಂಡಿದೆ. “ರಾಜಶೇಖರ್ ಬಾಬು ಅವರು ತಮ್ಮ ಹುಟ್ಟೂರಾದ ತಿರುಪತಿ ಜಿಲ್ಲೆಯ ಪುತ್ತೂರಿನಲ್ಲಿ ಪ್ರತಿ ಭಾನುವಾರ ಸ್ಥಳೀಯ ಚರ್ಚ್ ಪ್ರಾರ್ಥನೆಗಳಿಗೆ ಹಾಜರಾಗುತ್ತಾರೆ ಎಂಬುದು ಟಿಟಿಡಿಯ ಗಮನಕ್ಕೆ ಬಂದಿದೆ” ಎಂದು ದೇವಾಲಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ನೌಕರರ ವಿರುದ್ಧ ವ್ಯಾಪಕವಾದ ಕ್ರಮದ ಭಾಗವಾಗಿ ಟಿಟಿಡಿಯ ನಿರ್ಧಾರ ಬಂದಿದೆ. ಇದಕ್ಕೂ ಮೊದಲು, ಶಿಕ್ಷಕರು, ತಾಂತ್ರಿಕ ಅಧಿಕಾರಿಗಳು, ದಾದಿಯರು ಮತ್ತು ಇತರ ಅಧಿಕಾರಿಗಳು ಸೇರಿದಂತೆ ಕನಿಷ್ಠ 18 ಉದ್ಯೋಗಿಗಳನ್ನು ಇದೇ ರೀತಿಯ ಕಾರಣಗಳಿಗಾಗಿ ಟಿಟಿಡಿ ವರ್ಗಾಯಿಸಿತ್ತು.
ವಾಸ್ತವವಾಗಿ ಭಾರತದ ಅಸ್ತಿತ್ವ ಹಳ್ಳಿಗಳಲ್ಲಿದೆ ಎಂಬುದು ಸತ್ಯವಾದ ಮಾತು. ಒಂದು ವೇಳೆ ನೀವು ಯಾವುದಾದರೂ ಆದರ್ಶ ಗ್ರಾಮವನ್ನು ನೋಡಲು ಬಯಸಿದ್ದರೆ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ಬಘುವಾರ್ ಹಳ್ಳಿಗೆ ಬನ್ನಿ. ಇಲ್ಲಿ ಸ್ವಚ್ಛವಾದ ರಸ್ತೆಗಳು, ಒಳ ಚರಂಡಿಗಳು, ಪ್ರತೀ ಮನೆಯಲ್ಲೂ ಶೌಚಾಲಯಗಳು, ಆಟವಾಡಲು ಒಳಾಂಗಣ ಕ್ರೀಡಾಂಗಣ ಹಾಗೂ ಅಡುಗೆಗಾಗಿ ಜೈವಿಕ ಅನಿಲ ಸ್ಥಾವರವನ್ನು ನೀವು ಇಲ್ಲಿ ನೋಡಬಹುದು. ಹಲವು ವರ್ಷಗಳಿಂದ ಹಳ್ಳಿಯ ಯಾವುದೇ ವಿವಾದವು ಪೊಲೀಸ್ ಠಾಣೆಯವರೆಗೂ ಬಂದಿಲ್ಲ. ಶಾಲೆ ಹಾಗೂ ಸಮುದಾಯ ಭವನಕ್ಕಾಗಿ ಸರ್ಕಾರ ನೀಡಿದ ಹಣವು ಕಮ್ಮಿಯಾದಾಗ ಬಘುವಾರ್ ಹಳ್ಳಿಯ ಜನರೆ ಹಣವನ್ನು ನೀಡಿದ್ದಲ್ಲದೆ ಶ್ರಮಸೇವೆಯನ್ನೂ ಮಾಡಿದ್ದಾರೆ. ಇವೆಲ್ಲವೂ 50 ವರ್ಷಗಳಿಂದ ನಡೆಯುತ್ತಿರುವ ಸಂಘದ ಶಾಖೆ ಹಾಗೂ ಸ್ವಯಂಸೇವಕರಿಂದ ನಡೆಯುತ್ತಿರುವ ಗ್ರಾಮ ವಿಕಾಸದ ಪ್ರಯತ್ನದ ಪರಿಣಾಮವಾಗಿದೆ. ಸುಮಾರು 25 ವರ್ಷಗಳಿಂದ ಅವಿರೋಧವಾಗಿ ಗ್ರಾಮದ ಸರಪಂಚರಾಗಿರುವ ಠಾಕೂರ್ ಸುರೇಂದ್ರ ಸಿಂಹ, ಠಾಕೂರ್ ಸಂಗ್ರಾಮ್ ಸಿಂಹ ಹಾಗೂ ಹರಿಶಂಕರಲಾಲರAತಹ ಸ್ವಯಂಸೇವಕರು ಅಂದಿನ ಸರಕಾರ್ಯವಾಹರಾದ ಭಾವುರಾವ್ ದೇವರಸರ ಪ್ರೇರಣೆಯಿಂದ ತಮ್ಮ ಹಳ್ಳಿಯನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ನಿರ್ಧರಿಸಿದರು. 50 ವರ್ಷಗಳಿಂದ ನಿಯಮಿತವಾಗಿ ನಡೆಯುತ್ತಿರುವ ಪ್ರಭಾತ ಫೇರಿ, ಪ್ರತಿ ಮನೆಯ ಗೋಡೆಗಳ ಮೇಲೆ ಬರೆದ ಒಳ್ಳೆಯ ವಿಚಾರಗಳು ಹಾಗೂ ಮಳೆಯ ನೀರನ್ನು ಸಂಗ್ರಹಿಸುವ ಅಭ್ಯಾಸ, ಇವು ಬಘುವಾರನ್ನು ಬೇರೆ ಎಲ್ಲಾ ಹಳ್ಳಿಗಳಿಗಿಂತ ಭಿನ್ನವಾಗಿಸಿದೆ. 1950ರಿಂದ ಬಘುವಾರ್ನ ಗ್ರಾಮ ವಿಕಾಸ ಸಮಿತಿಯು ಸಮಗ್ರ ಗ್ರಾಮ ವಿಕಾಸಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಯನ್ನು ತಲುಪುವ 3ಕಿ.ಮೀ. ಉದ್ದದ ರಸ್ತೆಯನ್ನು ಇಲ್ಲಿನ ಯುವಕರು ಸೇರಿ ನಿರ್ಮಿಸಿದ್ದಾರೆ. ಕೃಷಿತಜ್ಞ ಹಾಗೂ ಸಂಘದ ತೃತಿಯ ವರ್ಷ ಶಿಕ್ಷಣ ಮುಗಿಸಿರುವ ಸ್ವಯಂಸೇವಕರಾದ ಬಘುವಾರ್ ವಾಸಿಯಾದ ಎಮ್.ಪಿ. ನರೋಲಿಯಾಜೀ ಹೇಳುವಂತೆ ಹಳ್ಳಿಯ ಜನರು ಎಂದಿಗೂ ಅಭಿವೃದ್ಧಿಗಾಗಿ ಸರ್ಕಾರವನ್ನು ಅವಲಂಬಿಸಿಲ್ಲ. ಸರ್ಕಾರದಿಂದ ಪಡೆದ ಹಣಕ್ಕೆ ಹಳ್ಳಿಯವರು 1.5ಲಕ್ಷದಷ್ಟು ಹಣವನ್ನು ಸೇರಿಸಿ ಶಾಲೆಯ ಕಟ್ಟಡವನ್ನು ನಿರ್ಮಿಸಿದರು. ಹಾಗೆಯೆ ಭ್ರಾಮರಿ ನದಿಗೆ ಅಣೆಕಟ್ಟನ್ನು ನಿರ್ಮಿಸಲು 2.5ಲಕ್ಷ ಹಣವನ್ನು ನೀಡಿ ನೀರಿನ ಕೊರತೆಯಿಂದ ಕೃಷಿಗೆ ಆಗುತ್ತಿದ್ದ ತೊಂದರೆಯನ್ನು ಪರಿಹರಿಸಿಕೊಂಡರು. ನಿಯಮಿತವಾದ ಸ್ವಚ್ಛತೆ, ಮನೆಗಳ ಮುಂದೆ ಇಂಗು ಗುಂಡಿ, ಒಳಚರಂಡಿಗಳ ನಿರ್ಮಾಣ, ಮರಗಳನ್ನು ನೆಡುವುದು, ಹಾಗೂ ಇಂದ್ರ ದೇವರ ಕೃಪೆಯಿಂದ ಸುರಿಯುವ ಮಳೆಯ ಪ್ರತಿ ಹನಿಯನ್ನು ಕಾಪಾಡಿ ನೀರಾವರಿಗಾಗಿ ಬಳಸುವುದು ಹಳ್ಳಿಯ ಪ್ರತಿಯೊಬ್ಬರ ಅಭ್ಯಾಸವಾಗಿದೆ. ನೂರಕ್ಕೆ ನೂರಷ್ಟು ಸಾಕ್ಷರತೆ, ಮನೆಗಳ ಗೋಡೆಯ ಮೇಲೆ ಬರೆದ ಪ್ರೇರಣಾದಾಯಕ, ಜ್ಞಾನವರ್ಧಕ ಹಾಗೂ ಸಂಸ್ಕಾರಪೂರ್ಣ ವಾಕ್ಯಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ. ಶೇಕಡ 40ರಷ್ಟು ಮನೆಗಳ ಊಟವನ್ನು ಗೋಬರ್ ಗ್ಯಾಸ್ ಬಳಸಿ ತಯಾರಿಸಲಾಗುತ್ತದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲು, ಮಕ್ಕಳು ಹಾಗೂ ಶಿಕ್ಷಕರ ಹಾಜರಾತಿ ಸರಿಯಾಗಿ ಇರುವಂತೆ ನೋಡಿಕೊಳ್ಳಲು, ಸಮಿತಿಯ ಸದಸ್ಯರು ಎಲ್ಲಾ ಪ್ರಯತ್ನವನ್ನು ಮಾಡುತ್ತಾರೆ. ಇದೇ ಸರ್ಕಾರಿ ಶಾಲೆಯಲ್ಲಿ ಓದು ಮುಗಿಸಿದ ನರೊಲಿಯಾಜೀ ಕೃಷಿ ಸಂಚಾಲಕರಾದರೆ, ಅವಧೇಶ್ ಶರ್ಮ ಲೆಫ್ಟಿನೆಂಟ್ ಆಗಿದ್ದಾರೆ. ಇಷ್ಟೆ ಅಲ್ಲ ಕೆಲವರು ಡಾಕ್ಟರ್ಗಳಾದರೆ, ಮೂವರು ಪಿ ಎಚ್ ಡಿ ಕೂಡಾ ಮಾಡಿದ್ದಾರೆ. ಐಎಎಸ್ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಮೊದಲು ಈ ಹಳ್ಳಿಯನ್ನು ಒಮ್ಮೆ ನೋಡಬೇಕು ಎಂದು ನರಸಿಂಹಪುರದ ಕಲೆಕ್ಟರ್ ಮನೀಶ್ ಸಿಂಹರ ಸಲಹೆಯಂತೆ ವಿದ್ಯಾರ್ಥಿಗಳ ಹಲವು ತಂಡಗಳು ಈ ಹಳ್ಳಿಯನ್ನು ನೋಡಲು ಬಂದಿವೆ. ಸಂಪರ್ಕಿಸಿ: ಶ್ರೀ ಸುಭಾಶ್. ಮೊಬೈಲ್ ನಂ:7697335610