ನಮ್ಮನ್ನು ಅನುಸರಿಸಿ: Facebook Twitter Instagram YouTube

ಆರೆಸ್ಸೆಸ್ ಬಗ್ಗೆ ಗಣ್ಯರು ಹೇಳಿದ್ದೇನು?

ಅಪ್‌ಲೋಡ್ ಮಾಡಿದ ದಿನಾಂಕ: 13-12-2025 09:32

ಆರೆಸ್ಸೆಸ್ ಬಗ್ಗೆ ಗಣ್ಯರು ಹೇಳಿದ್ದೇನು?
ಆರ್‌ಎಸ್‌ಎಸ್ ನನ್ನ ಹೃದಯದ ಮಿಡಿತ. – ಜನರಲ್ ಕೆ. ಸಿ. ಕಾರ್ಯಪ್ಪ ನಾನೊಬ್ಬ ಆರ್‌ಎಸ್‌ಎಸ್‌ನ ಗೌರವ ಸದಸ್ಯ. – ಆಚಾರ್ಯ ವಿನೋಬಾ ಭಾವೆ ಸಾಮಾಜಿಕ ಪರಿವರ್ತನೆ, ಜಾತಿ ನಿರ್ಮೂಲನ ಹಾಗೂ ಬಡವರ ಕಣ್ಣೀರು ತೊಡೆಯುವ ಸಾಮರ್ಥ್ಯ ಆರ್‌ಎಸ್‌ಎಸ್‌ಗೆ ಮಾತ್ರವಿದೆ. – ಶ್ರೀ ಜಯಪ್ರಕಾಶ ನಾರಾಯಣ ನಾನು ಆರ್‌ಎಸ್‌ಎಸ್ ಶಿಬಿರಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಅನುಶಾಸನ ಹಾಗೂ ಅಸ್ಪೃಶ್ಯತೆಯ ಲವಲೇಶವೂ ಇಲ್ಲದ ವಾತಾವರಣ ಕಂಡು ತುಂಬಾ ಪ್ರಭಾವಿತನಾಗಿರುವೆ. – ಮಹಾತ್ಮ ಗಾಂಧಿ, ಸೆಪ್ಟೆಂಬರ್ 16, 1947 ದೆಹಲಿ. ತನ್ನ ಜೊತೆಗಿರುವ ಸ್ವಯಂಸೇವಕನ ಜಾತಿ ಯಾವುದೆಂಬುದನ್ನು ತಿಳಿಯುವ ಆಸಕ್ತಿ ತೋರದೆ, ಪರಸ್ಪರ ಸಹೋದರರಂತೆ ಹಾಗೂ ಸಂಪೂರ್ಣ ಸಮಾನತೆಯಿಂದ ಸ್ವಯಂಸೇವಕರು ವ್ಯವಹರಿಸುವುದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿರುವೆ. – ಡಾ. ಬಿ. ಆರ್. ಅಂಬೇಡ್ಕರ್, (1939ರ ಮೇ ತಿಂಗಳಲ್ಲಿ ಪುಣೆಯಲ್ಲಿ ನಡೆದ ಆರ್‌ಎಸ್‌ಎಸ್ ಶಿಬಿರದಲ್ಲಿ) ಜಗತ್ತಿನಲ್ಲಿ ಕೇವಲ ಎಡಪಂಥೀಯೇತರ ಕ್ರಾಂತಿಕಾರಿ ಪಡೆ ಮತ್ತು ಅದರ ನೇತೃತ್ವವನ್ನು ವಹಿಸಿದ್ದ ನೂರಾರು, ಸಾವಿರಾರು ಸ್ವಯಂಸೇವಕರು ಭಾರತಕ್ಕೆ ಮತ್ತೆ ಪ್ರಜಾತಂತ್ರವನ್ನು ತಂದುಕೊಟ್ಟರು. - ದಿ ಎಕನಾಮಿಸ್ಟ್, ಲಂಡನ್, ಡಿಸೆಂಬರ್ 4, 1976. ‘ದೇಶದಲ್ಲಿ ಸಮುದಾಯಗಳ ನಡುವೆ ವಿಷಮತೆಯನ್ನು ಕಡಿಮೆ ಮಾಡಲು ನಡೆದಿರುವ ಎಲ್ಲ ಪ್ರಯತ್ನಗಳ ಪೈಕಿ ಸಂಘದ ಪ್ರಯತ್ನವೇ ಅತಿ ಪರಿಣಾಮಕಾರಿಯಾದದ್ದು. ಅಧ್ಯಾತ್ಮ, ಭಕ್ತಿ, ಸಾಮಾಜಿಕ ಎಲ್ಲದರಲ್ಲೂ ಈ ಪ್ರಯತ್ನದ ಪರಿಣಾಮ ಇದೆ. - ಪದ್ಮಶ್ರೀ ರಮೇಶ್ ಪತಂಗೆ, ಹಿರಿಯ ಚಿಂತಕ ಆರ್‌ಎಸ್‌ಎಸ್‌ನ ‘ಸೇವಾ ಉಪಕ್ರಮವು ಸೇವೆಯನ್ನು ಮಾಡುವವರು ಮತ್ತು ಅದನ್ನು ಪಡೆದುಕೊಳ್ಳುವವರು ಇಬ್ಬರನ್ನೂ 'ಇದು ನಮಗೆ ಸೇರಿದ್ದು' ಎನ್ನುವಂತಹ ಮನೋಭಾವಕ್ಕೆ ಮರುಜೀವ ನೀಡಿದೆ. - ಮಾಲಿನಿ ಭಟ್ಟಾಚಾರ್ಜಿ, ಲೇಖಕಿ ಸಂಘವು ಕೇವಲ ಒಂದಿಷ್ಟು ಚಟುವಟಿಕೆಗಳನ್ನು ಯಾಂತ್ರಿಕವಾಗಿ ಅನುಷ್ಠಾನಗೊಳಿಸಲು ಹುಟ್ಟಿರುವ ಸಂಸ್ಥೆಯಲ್ಲ. ದೇಶದ ಸಾಂಸ್ಕೃತಿಕ ಪುನರುಜ್ಜಿವನದ ತಾತ್ವಿಕ ಪರಿಕಲ್ಪನೆಗಳಿಂದ, ದೈಹಿಕ ಶಿಸ್ತು, ಮಾನಸಿಕ ಶಕ್ತಿ, ದೃಢ ಸಂಕಲ್ಪ ಮತ್ತು ಸೇವೆಗಳ ಮೂಲಕ ಸಮಾಜದ ಎಲ್ಲ ವರ್ಗಗಳ ಎಲ್ಲ ಜನರ ಹೃದಯ ಸ್ಪರ್ಶಿಸುವುದರ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನದ ದೂರದೃಷ್ಟಿಯ ಆಶಯವನ್ನು ಹೊಂದಿದೆ. - ಡಾ|| ಆರ್ ಬಾಲಸುಬ್ರಹ್ಮಣ್ಯಂ, ಸಾಮಾಜಿಕ ಕಾರ್ಯಕರ್ತ ಸಂಘಪರಿವಾರದ ತೇಜಸ್ಸು, ಶಿಸ್ತು, ಅಚ್ಚುಕಟ್ಟುತನ, ರಾಷ್ಟ್ರಭಕ್ತಿ, ನಿಃಸ್ವಾರ್ಥಸೇವಾ ಮನೋಭಾವವನ್ನು ಕಳೆದ ಕಾಲು ಶತಮಾನದಿಂದ ತುಂಬಾ ಹತ್ತಿರದಿಂದ ಕಾಣುತ್ತಿದ್ದೇನೆ. ಇಂಥ ಉನ್ನತಾದರ್ಶಗಳನ್ನು ಇಟ್ಟುಕೊಂಡ ಸಂಘಕ್ಕೆ ಈಗ ಶತಮಾನದ ಸಂಭ್ರಮ. ಇಂಥ ಸಂಸ್ಥೆಯ ಮೂಲಕ ರಾಷ್ಟçನಿರ್ಮಾಣದಲ್ಲಿ ಅದರ ಸಂಗೋಪನದಲ್ಲಿ ತೊಡಗಿಕೊಳ್ಳೋಣವೆಂಬ ಆಕಾಂಕ್ಷೆ ನಮ್ಮ ಜನರಲ್ಲಿ ಹೆಚ್ಚಲಿ, ಬೆಳೆಯಲೆಂದು ನಾನು ಆಶಿಸುತ್ತೇನೆ. - ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ಸಾಹಿತಿ. ಶಿಸ್ತು, ಅನುಶಾಸನ, ನೈತಿಕ ನಿಷ್ಠೆ, ದೈವಭಕ್ತಿ, ದೇಶಪ್ರೇಮ ಈ ಎಲ್ಲ ಸದ್ಗುಣಗಳನ್ನೂ ಜನರಲ್ಲಿ ಒಮ್ಮೆಗೇ ಉದ್ದುದ್ಧಗೊಳಿಸುವ ಜಗತ್ತಿನ ಏಕೈಕ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ನಿಮ್ಮ ಮಕ್ಕಳು ಯೋಗ್ಯವಾಗಿ, ಸರಿಯಾದ ಸಭ್ಯ ವಾತಾವರಣದಲ್ಲಿ ಬೆಳೆಯಬೇಕೆಂದು ಕಾಳಜಿಯಿದ್ದಲ್ಲಿ, ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಕಳಿಸಿ.” - ಕಂಚಿಯ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿಗಳು (1982ರ ಮೇ ತಿಂಗಳಲ್ಲಿ ಸೇಲಂನಲ್ಲಿ ನಡೆದ ರಾಜ್ಯಮಟ್ಟದ ಸಂಘಶಿಕ್ಷಾವರ್ಗದ ಸಮಾರೋಪ ಭಾಷಣದಲ್ಲಿ) ಉಜ್ವಲ ರಾಷ್ಟ್ರಭಕ್ತಿಯ ದ್ಯೋತಕವಾಗಿ ಇಂದಿಗೂ ಯುವಪೀಳಿಗೆಗೆ ಮಾರ್ಗದರ್ಶಕ ಸ್ಥಾನದಲ್ಲಿ ಸಂಘ ನಿಂತಿದೆ. ಶತಕದ ಹೊಸ್ತಿಲಲ್ಲಿ ದೇಶರಕ್ಷಣೆಯ ಭರವಸೆಯಾಗಿ ಸಂಘಕಾರ್ಯ ಬೆಳೆದು ನಿಂತಿದೆ. - ಪ್ರೊ| ಶಾಂತಿಶ್ರೀ ಧುಲಿಪುಡಿ ಪಂಡಿತ್, ಶಿಕ್ಷಣತಜ್ಞೆ ಆರ್‌ಎಸ್‌ಎಸ್ ತನ್ನ ಬೃಹತ್ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿ, ಯಾವುದೇ ಸಾರ್ವಜನಿಕ ನಿಧಿಯ ಮೇಲೆ ಅವಲಂಬಿತವಾಗದೆ. ಯಾವುದೇ ರೀತಿಯ ಫಲಾಕಾಂಕ್ಷೆ ಹೊಂದಿರದ ಜನರಿಂದ ನಡೆಯುತ್ತಿದೆ. ಕಳೆದ 100 ವರ್ಷಗಳಲ್ಲಿ ಈ ಸಂಸ್ಥೆಯನ್ನು ಸ್ವಯಂಸೇವಕರೇ ಗಟ್ಟಿಯಾಗಿ ಕಟ್ಟಿದ್ದಾರೆ. - ಡಾ. ರಾಮ್ ಮಾಧವ್, ಹಿರಿಯ ಪ್ರಚಾರಕರು, ಆರ್ ಎಸ್ ಎಸ್
⬅ ಮುಖಪುಟ