ನಮ್ಮನ್ನು ಅನುಸರಿಸಿ: Facebook Twitter Instagram YouTube

ಸಂಚಾರ

ಅಪ್‌ಲೋಡ್ ಮಾಡಿದ ದಿನಾಂಕ: 09-12-2025 18:58

ಸಂಚಾರ

ಲೇಖಕರು: ವೃಷಾಂಕ ಭಟ್

ಪ್ರಕಾಶಕರು: ಅಯೋಧ್ಯಾ ಪ್ರಕಾಶನ

ಬೆಲೆ: ₹200.00

‘ಸಂಚಾರ - ಇದು ಒಳಗಿನ ಪಯಣ' ಪುಸ್ತಕವು ನಮ್ಮ ನಿಮ್ಮ ಜೀವನಗಳಲ್ಲಿ ದಿನನಿತ್ಯ ನಡೆಯುವ, ಆದರೆ ನಮ್ಮ ಗಮನಕ್ಕೆ ಬರದೆ ಮರೆಯಾಗುವ ಹತ್ತುಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿಟ್ಟು ಜೀವನಪಾಠ ಕಲಿಸುವ ಸುಂದರ ಹೊತ್ತಗೆ. ಜೀವನಮೌಲ್ಯಗಳ ಪಾಠವನ್ನು ಹೀಗೂ ಮಾಡಬಹುದೆಂಬ ಅತ್ಯುತ್ತಮ ಮಾದರಿ; ಪಾಠ್ಯಪುಸ್ತಕವಾಗಬೇಕಾದ ರಸಪೂರ್ಣ ಬದುಕಿನ ಬುತ್ತಿ. ಮುಖ್ಯವಾಗಿ ತ್ರಿಕರಣಗಳ ನಡುವೆ ಎಂಥವರಿಗೂ ಇದ್ದೇ ತೀರುವ ಅಂತರವನ್ನು ಹೇಗೆ ತಗ್ಗಿಸಿಕೊಳ್ಳಬೇಕೆಂಬುವುದನ್ನು ‘ಸಂಚಾರ' ಕೃತಿಯಲ್ಲಿ ಕಾಣಬಹುದು. ಇಂಥ ಪ್ರಾಮಾಣಿಕ ಶೋಧನೆಯೇ ಈ ಬಗೆಯ ಸಂಚಾರದ ಗುರಿಯನ್ನು ದಿಟ್ಟವಾಗಿಸುತ್ತದೆ, ಗಟ್ಟಿಯಾಗಿಸುತ್ತದೆ. ಈ ಕೃತಿಯು ‘Sanchara: A Philosophical Journey’ ಎಂಬ ಶೀರ್ಷಿಕೆಯಲ್ಲಿ ಇಂಗ್ಲೀಷ್‌ನಲ್ಲೂ ಲಭ್ಯವಿದೆ. ಪುಸ್ತಕಕ್ಕಾಗಿ ಸಂಪರ್ಕಿಸಿ: 7795827307, 6360581957
⬅ ಮುಖಪುಟ