ಬಸ್/ರೈಲು/ಮೆಟ್ರೋ/ವಿಮಾನ ಇತ್ಯಾದಿ ಪ್ರಯಾಣದ ವೇಳೆ ಮೊಬೈಲ್ ಬಳಕೆ ಸೇರಿದಂತೆ ನಡವಳಿಕೆಯಲ್ಲಿ, ಸಾಮೂಹಿಕ ಶಿಸ್ತಿನ ಪಾಲನೆಗೆ ಆದ್ಯತೆ ನೀಡುವುದು ಅಗತ್ಯ. ಎಲ್ಲವೂ ಸಾರ್ವಜನಿಕ ಸ್ಥಳವಾದ್ದರಿಂದ ನಮ್ಮ ನಡವಳಿಕೆ ಇತರರಿಗೆ ಆಭಾಸವನ್ನುಂಟು ಮಾಡಬಾರದು. ಪ್ರಮುಖವಾಗಿ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವಾಗ ಗಟ್ಟಿಧ್ವನಿಯಲ್ಲಿ ಮೊಬೈಲ್‌ನಲ್ಲಿ ಮಾತಾಡುವುದು, ಕಿರುಚುವುದು, ಅಸಭ್ಯ ಪದಗಳನ್ನು ಬಳಸುವುದು, ಹೆಚ್ಚು ಶಬ್ದವನ್ನಿಟ್ಟು ಮೊಬೈಲ್ ಉಪಯೋಗಿಸುವುದು ಸರಿಯಲ್ಲ.
ಹಾಗೆಯೇ ಸಾರ್ವಜನಿಕ ವಾಹನಗಳಲ್ಲಿ ಪಯಣಿಸುವಾಗ ನಮ್ಮ ಇತರೆ ನಡವಳಿಕೆಯೂ ಯಾರಿಗೂ ತೊಂದರೆ ನೀಡುವಂತೆ ಇರಬಾರದು. ಹೆಚ್ಚು ತಾಳ್ಮೆಯನ್ನು ಹೊಂದಿರಬೇಕು. ಹಿರಿಯರೊಂದಿಗೆ, ಮಹಿಳೆಯರೊಂದಿಗೆ ಗೌರವಯುತ ವ್ಯವಹಾರವಿರಬೇಕು. ಆಯಾ ಸಾರ್ವಜನಿಕ ವಾಹನಗಳ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡಬೇಕು.