ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬೆಲೆ: ₹300.00
ಸಂಘಶತಾಬ್ದಿ ವರ್ಷದ ಸಂದರ್ಭದಲ್ಲಿ, ಪಂಚಪರಿವರ್ತನೆಯ ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶೀ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರ- ಈ ಐದು ವಿಷಯಗಳ ಕುರಿತು ಚರಿತಪಂಚಕ ನೂತನ ಕೃತಿ ಮೂಡಿಬಂದಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿರುವ ಶ್ರೀ ನಾರಾಯಣ ಶೇವಿರೆಯವರು ಈ ಕೃತಿಯ ಲೇಖಕರು. ರಾಷ್ಟ್ರೋತ್ಥಾನ ಸಾಹಿತ್ಯ ಈ ಕೃತಿಯನ್ನು ಪ್ರಕಟಿಸಿದೆ.
ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಮತ್ತು ಪೋಷಣೆಯನ್ನು ಒದಗಿಸಿದ್ದ ಹಿಂದೂ ಕುಟುಂಬಪದ್ಧತಿಯ ಪುನಃಸ್ಥಾಪನೆಯ ಅವಶ್ಯಕತೆ, ಸಕಲ ಜೀವಜಾಲವನ್ನೂ ಪೊರೆಯುತ್ತಿರುವ ಪಂಚಭೂತಾತ್ಮಕವಾದ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ, ಪ್ರತಿಯೊಬ್ಬರ ಗೌರವಪೂರ್ಣ ಬದುಕಿಗೆ ದಾರಿಮಾಡುವ ಸಾಮಾಜಿಕ ಸಾಮರಸ್ಯಸಾಧನೆಯ ಮಾರ್ಗಗಳು, ಸ್ವಂತಿಕೆಯ ಮೂಲಕ ಸ್ವಾವಲಂಬನೆ ಸಾಧಿಸಲು ಕಾರಣವಾಗಬಲ್ಲ ಸ್ವದೇಶೀ ಪ್ರಸ್ಥಾನದ ಅನುಸರಣೆ, ಎಲ್ಲರ ಹಕ್ಕುಗಳನ್ನೂ ಖಾತ್ರಿಪಡಿಸುವ ನಾಗರಿಕ ಕರ್ತವ್ಯಪ್ರಜ್ಞೆಯ ಜಾಗರಣ - ಇವುಗಳನ್ನು ಕುರಿತು ಒಂದಿಷ್ಟು ಚಿಂತನ ಮಂಥನಕ್ಕೆ ಬೇಕಾದ ಆಕರ ಸಾಮಗ್ರಿಯನ್ನೊದಗಿಸುತ್ತದೆ ಚರಿತಪಂಚಕ.
ಪುಸ್ತಕಕ್ಕಾಗಿ ಸಂಪರ್ಕಿಸಿ: 6360581957