ಲೇಖಕರು: ಬಿ ಪಿ ಪ್ರೇಮಕುಮಾರ್
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬೆಲೆ: ₹325.00
ಪಶ್ಚಿಮ ಬಂಗಾಳದ ಚಿತ್ತಗಾಂವ್(ಈಗ ಬಾಂಗ್ಲಾದೇಶಕ್ಕೆ ಸೇರಿದೆ)ನಲ್ಲಿ ಓರ್ವ ಸಮಾನ್ಯ ಶಾಲಾ ಶಿಕ್ಷಕನಾಗಿದ್ದ ಸೂರ್ಯಸೇನ್‍ನ ನೇತೃತ್ವದಲ್ಲಿ ಹದಿಹರೆಯದ ಬಾಲಕರು-ತರುಣಿಯರು ಸಶಸ್ತç ಹೋರಾಟಕ್ಕಿಳಿದು ಬ್ರಿಟೀಷರನಿದ್ದೆಗೆಡಿಸಿದ್ದನ್ನು, ತತ್ಪರಿಣಾಮವಾಗಿ ಬಂಗಾಳದ ಹಳ್ಳಿಹಳ್ಳಿಗಳಲ್ಲೂ ಕ್ರಾಂತಿಜ್ವಾಲೆ ಹರಡಿದ್ದನ್ನೂ ಸಾಧಾರವಾಗಿ ವಿವರಿಸುವ ಅಪೂರ್ವ ಕಥನ – ‘ಮಾಡಿ ಮಡಿದವರು’. ತರುಣಿಯೊಬ್ಬಳು ಮೊತ್ತಮೊದಲ ಬಾರಿಗೆ ಕಾರ್ಯಾಚರಣೆಯ ನೇತೃತ್ವವಹಿಸಿ ಬಲಿದಾದಗೈಯುವ ಮೂಲಕ ಕ್ರಾಂತಿಕಾರೀ ಹೋರಾಟದ ರಣಕಣಕ್ಕೆ ಹೆಣ್ಣುಮಕ್ಕಳೂ ಪ್ರತ್ಯಕ್ಷವಾಗಿ ಧುಮುಕಲು ಪ್ರೇರಣೆಯಾದ ಹೋರಾಟವಿದು.
ಗಾಂಧಿಯವರು ‘ಮಾಡು ಇಲ್ಲವೇ ಮಡಿ’ ಎಂದು ಘೋಷಿಸುವುದಕ್ಕೂ ಮೊದಲೇ ‘ಮಾಡು ಮತ್ತು ಮಡಿ’ ಎಂದು ರಣಹೂಂಕಾರಗೈದ ಚಿತ್ತಗಾಂವ್‌ನ ಕ್ರಾಂತಿಕಾರಿಗಳು ನೇತಾಜಿ ಸುಭಾಷ್‌ಚಂದ್ರ ಬೋಸರು ‘ಭಾರತೀಯ ರಾಷ್ಟ್ರೀಯ ಸೇನೆ’ ರಚಿಸುವದಕ್ಕೂ ಮೊದಲೇ ‘ಭಾರತೀಯ ಗಣತಂತ್ರ ಸೇನೆ’ಯನ್ನು ಕಟ್ಟಿ ಬ್ರಿಟೀಷರ ವಿರುದ್ಧ ಸಶಸ್ತç ಯುದ್ಧ ನಡೆಸಿದ್ದರ ಪ್ರೇರಣಾದಾಯೀ ಕಥನವಿದು.
ಪ್ರತಿಗಳಿಗಾಗಿ ಸಂಪರ್ಕಿಸಿ: +91 6360581957