ಆಗಸ್ಟ್ 26, 27 ಮತ್ತು 28, 2025ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ|ಮೋಹನ್ ಭಾಗವತ್ ಅವರ ಮೂರು ದಿನಗಳ ವ್ಯಾಖ್ಯಾನ ಮಾಲೆಯ ಸಾರಾಂಶ ಇಲ್ಲಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ತುಂಬಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಂಘದ ಬಗ್ಗೆ ಚರ್ಚೆಯಾದಾಗ ಅದು ಕೇವಲ ಗ್ರಹಿಕೆಯ ಆಧಾರದ ಮೇಲೆ ಇರದೆ, ಸತ್ಯಾಂಶಗಳ ಆಧಾರದ ಮೇಲೆ ಇರಬೇಕು. ಅದು ತಿಳಿದ ನಂತರ ಏನು ನಿರ್ಧಾರ ಮಾಡಬೇಕು, ಯಾವ ತೀರ್ಮಾನಕ್ಕೆ ಬರಬೇಕು ಎಂಬುದು ಕೇಳುವವರ ಸ್ವಂತ ಅಧಿಕಾರ. ಯಾರನ್ನೂ ಒಪ್ಪಿಸಬೇಕಿಲ್ಲ, ಕೇವಲ ತಿಳಿಸಬೇಕು. ಸಂಘದ ಬಗ್ಗೆ ಸತ್ಯ ತಿಳಿದ ನಂತರ, ಮನಸ್ಸಿನಲ್ಲಿ ಯಾವುದೇ ಕಾರಣವಿಲ್ಲದೆ ಇದ್ದ ತಪ್ಪು ಭಾವನೆಗಳು ದೂರವಾದವು. ಈಗ ಶತಮಾನದ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಯುವಾಗ, ಮುಂದೆ ಸಂಘದ ಕೆಲಸವನ್ನು ಸಂಘ ಹೇಗೆ ನೋಡುತ್ತೇವೆ? ನಮ್ಮ ಮನಸ್ಸಿನಲ್ಲಿ ಏನಿವೆ? ಎನ್ನುವುದನ್ನು “ನವ ಕ್ಷಿತಿಜ” ಎಂಬ ವ್ಯಾಖ್ಯಾನಮಾಲೆಯ ಮೂಲಕ ಹೇಳಲು ನಿರ್ಧರಿಸಿದ್ದೇವೆ.
ಸಂಘದ 100 ವರ್ಷಗಳ ಪಯಣವಾಗುತ್ತಿದೆ. ಸಂಘಕ್ಕೆ ಒಂದು ಉದ್ದೇಶವಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಏಕೆ ಆರಂಭವಾಯಿತು? ಸ್ವಯಂಸೇವಕರು ಕಷ್ಟದ ಸಂದರ್ಭಗಳಲ್ಲಿ ದಾರಿ ಕಂಡುಕೊಂಡು ಇದನ್ನು ಏಕೆ ಮುಂದುವರೆಸಿದರು? 100 ವರ್ಷಗಳ ನಂತರವೂ ಹೊಸ ದಿಗಂತಗಳ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಇದಕ್ಕೆ ಒಂದು ವಾಕ್ಯದಲ್ಲಿ ಉತ್ತರಿಸಬೇಕಾದರೆ, ಸಂಘದ ಪ್ರಾರ್ಥನೆಯ ಕೊನೆಯಲ್ಲಿ ನಾವು ಸ್ವಯಂಸೇವಕರು ಪ್ರತಿದಿನ ಹೇಳುವ ವಾಕ್ಯ: ಭಾರತ ಮಾತಾ ಕೀ ಜಯ್! ಇದು ನಮ್ಮ ದೇಶ. ಆ ದೇಶದ ಜಯಜಯಕಾರವಾಗಬೇಕು. ವಿಶ್ವದಲ್ಲಿ ಉನ್ನತ ಸ್ಥಾನ ಪಡೆಯಬೇಕು. ಆದರೆ ಏಕೆ? ಸ್ವಾಮಿ ವಿವೇಕಾನಂದರು ಹೇಳುವಂತೆ ಪ್ರತಿ ರಾಷ್ಟ್ರಕ್ಕೆ ಒಂದು ಧ್ಯೇಯವಿದೆ, ಅದನ್ನು ಪೂರೈಸಬೇಕು. ಭಾರತಕ್ಕೂ ವಿಶ್ವಕ್ಕೆ ಕೊಡುಗೆ ನೀಡುವ ಧ್ಯೇಯವಿದೆ. ಆದ್ದರಿಂದ ಸಂಘದ ಸ್ಥಾಪನೆಯ ಉದ್ದೇಶ, ಚಾಲನೆಯ ಉದ್ದೇಶ ಭಾರತ ಮತ್ತು ಸಂಘದ ಸಾರ್ಥಕತೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದರಲ್ಲಿದೆ. ಭಾರತದ ಕೊಡುಗೆಯನ್ನು ವಿಶ್ವಕ್ಕೆ ನೀಡುವ ಸಮಯ ಬಂದಿದೆ.
ನಮ್ಮ ಇತಿಹಾಸದಲ್ಲಿ ನಾವು ವೈಭವದ ಶಿಖರದಲ್ಲಿದ್ದೆವು, ಸ್ವತಂತ್ರರಾಗಿದ್ದೆವು. ನಂತರ ಆಕ್ರಮಣಗಳಾದವು, ಪರತಂತ್ರರಾದೆವು. ಪರತಂತ್ರತೆಯಿAದ ಮುಕ್ತರಾಗುವುದು ಮೊದಲ ಕೆಲಸವಾಗಿತ್ತು. ದೇಶವನ್ನು ಶ್ರೇಷ್ಠವಾಗಿಸಬೇಕಾದರೆ ಸ್ವಾತಂತ್ರ‍್ಯ ಅಗತ್ಯ. ಸ್ವಾತಂತ್ರ‍್ಯಕ್ಕಾಗಿ ಪ್ರಯತ್ನಗಳು ಆರಂಭವಾದವು. 1857ರಲ್ಲಿ ಅಖಿಲ ಭಾರತೀಯ ಯುದ್ಧವಾಯಿತು. ಆ ಯುದ್ಧ ವಿಫಲವಾಯಿತು. ಆ ವಿಫಲತೆಯಿಂದ ದೇಶದಲ್ಲಿ ಇದು ನಮ್ಮ ದೇಶ, ನಮ್ಮ ಜನಸಂಖ್ಯೆ ದೊಡ್ಡದು, ನಮ್ಮ ರಾಜ-ಮಹಾರಾಜರಿದ್ದಾರೆ, ಸಾವಿರಾರು ಮೈಲಿ ದೂರದಿಂದ ಬಂದ ಕೆಲವೇ ಜನರು ಈ ದೇಶವನ್ನು ಬಲವಂತವಾಗಿ ಆಳಿದರು. ಅವರ ಮುಂದೆ ನಾವು ಏಕೆ ಸೋತೆವು? ಕಾರಣವೇನು? ಎಂಬ ಚಿಂತನೆ ಮೂಡಿದವು. ಆದರೆ ಆಶಾವಾದಿಗಳ ಉತ್ತರ ಈ ಬಾರಿ ಸೋತರೆ ಏನಾಯಿತು? ಮತ್ತೊಮ್ಮೆ ಶಸ್ತçಸಜ್ಜಿತ ಕ್ರಾಂತಿ ಮಾಡಬೇಕು ಎಂಬುದಾಗಿತ್ತು. ಆಗ ಕ್ರಾಂತಿಕಾರಿಗಳ ಧಾರೆ ಹರಿಯಿತು. ದೇಶಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಲಕ್ಷಾಂತರ ಉದಾಹರಣೆಗಳು ಆ ಧಾರೆಯಿಂದ ಹೊರಹೊಮ್ಮಿದವು. ಅವರು ಇಂದಿಗೂ ನಮಗೆ ಪ್ರೇರಣೆಯ ಮೂಲ.
ಸಂಘದ ಸಂಸ್ಥಾಪಕ ಡಾ. ಹೆಡಗೇವಾರ್ ಜನ್ಮಜಾತ ದೇಶಭಕ್ತ. ಬಾಲ್ಯದಲ್ಲೇ ಅನಾಥರಾದರು, ಬಡತನದಲ್ಲಿ ಬೆಳೆಯಬೇಕಾಯಿತು, ಆದರೆ ದೇಶಕ್ಕಾಗಿನ ಕೆಲಸಗಳಲ್ಲಿ ಭಾಗಿಯಾಗುವುದನ್ನು ಎಂದಿಗೂ ಬಿಡಲಿಲ್ಲ. ವಿದ್ಯಾರ್ಥಿಯಾಗಿ ತಮ್ಮ ಶಿಕ್ಷಣವನ್ನು ಉತ್ತಮವಾಗಿ ಪೂರೈಸಿ, ಶಾಲೆಯಲ್ಲಿ ಮೊದಲ ಹತ್ತರಲ್ಲಿ ಸ್ಥಾನ ಪಡೆಯುವ ಕರ್ತವ್ಯವನ್ನೂ ಮರೆಯಲಿಲ್ಲ. 1905-06ರ ವಂದೇ ಮಾತರಂ ಆಂದೋಲನವನ್ನು ನಾಗಪುರದ ಎಲ್ಲ ಶಾಲೆಗಳಲ್ಲಿ ಸಂಘಟಿಸಿದರು. ಇನ್‌ಸ್ಪೆಕ್ಟರ್‌ಗಳು ಶಾಲೆಯ ತಪಾಸಣೆಗೆ ಬಂದಾಗ, ಪ್ರತಿ ತರಗತಿಯಲ್ಲಿ ವಂದೇ ಮಾತರಂನಿAದ ಸ್ವಾಗತಿಸಲಾಗುತ್ತಿತ್ತು. ಕೋಪಗೊಂಡ ಅವರು ಶಾಲೆಗಳನ್ನು ನಾಲ್ಕು ತಿಂಗಳು ಮುಚ್ಚಿದರು. ಆದರೆ ಯಾರು ಇದರ ಹಿಂದೆ ಇದ್ದಾರೆಂದು ತಿಳಿಯಲಾಗಲಿಲ್ಲ. ಕೊನೆಗೆ ಸಾಮಾನ್ಯ ಕ್ಷಮಾಪಣೆಯೊಂದಿಗೆ ಶಾಲೆಗಳು ಮತ್ತೆ ತೆರೆದವು. ಆದರೆ ಇಬ್ಬರು ವಿದ್ಯಾರ್ಥಿಗಳು ಕ್ಷಮೆಯಾಚಿಸಲು ನಿರಾಕರಿಸಿದರು, "ವಂದೇ ಮಾತರಂ ಎನ್ನುವುದು ನಮ್ಮ ಹಕ್ಕು" ಎಂದು ಹೇಳಿದರು. ಅದರ ಫಲವಾಗಿ ಅವರನ್ನು ಶಾಲೆಯಿಂದ ತೆಗೆದುಹಾಕಲಾಯಿತು. ನಂತರ ರಾಷ್ಟ್ರೀಯ ಶಾಲೆಯಲ್ಲಿ ಓದಿ, ಕಷ್ಟದ ಸಂದರ್ಭದಲ್ಲಿಯೂ ಮೆಟ್ರಿಕ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ನಾಗಪುರದ ನಾಯಕರು ಈ ಛಲವನ್ನು ಕಂಡು, ಅವರನ್ನು ಕೋಲ್ಕತ್ತಾಕ್ಕೆ ಕಳುಹಿಸಿ ವೈದ್ಯಕೀಯ ಶಿಕ್ಷಣ ಕೊಡಿಸಲು ನಿರ್ಧರಿಸಿದರು. ಆದರೆ ಕ್ರಾಂತಿಕಾರಿಗಳ ಅನುಶೀಲನ ಸಮಿತಿಯೊಂದಿಗೆ ಸಂಪರ್ಕ ಸಾಧಿಸಿ, ಪಶ್ಚಿಮ ಭಾರತದಲ್ಲಿ ಕ್ರಾಂತಿಕಾರಿ ಕೆಲಸ ಆರಂಭಿಸುವುದು ಪ್ರಮುಖ ಗುರಿಯಾಗಿತ್ತು. ಹಣವಿಲ್ಲದಿದ್ದರೂ, ಚಂದಾದಿಂದ ಸಂಗ್ರಹವಾದ ಹಣದೊಂದಿಗೆ ಕೋಲ್ಕತ್ತಾಕ್ಕೆ ತೆರಳಿದರು. ಅಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿ, ಕ್ರಾಂತಿಕಾರಿ ಸಮಿತಿಯೊಂದಿಗೆ ಸಂಪರ್ಕವನ್ನೂ ಸ್ಥಾಪಿಸಿದರು. ಅವರ ಕ್ರಾಂತಿಕಾರಿ ಚಟುವಟಿಕೆಗಳ ಕೋಡ್‌ನೇಮ್ "ಕೊಕೇನ್" ಎಂದಿತ್ತು.
ಡಾ. ಹೆಡಗೇವಾರ್ ತಮ್ಮ ವಿದ್ಯಾಭ್ಯಾಸದ ನಂತರ ಬರ್ಮಾದಲ್ಲಿ 3000 ರೂ. ತಿಂಗಳ ವೇತನದ ಉದ್ಯೋಗವನ್ನು ತಿರಸ್ಕರಿಸಿ, ದೇಶಕ್ಕಾಗಿ ಕೆಲಸ ಮಾಡಲು ನಾಗಪುರಕ್ಕೆ ಮರಳಿದರು. ತಮ್ಮ ಜೀವನವನ್ನು ದೇಶಕ್ಕಾಗಿ ಮೀಸಲಿಟ್ಟು, ವಿವಾಹದ ಆಲೋಚನೆಯನ್ನೂ ಬಿಟ್ಟರು. 1920ರ ಕಾಂಗ್ರೆಸ್ ಆಂದೋಲನದಲ್ಲಿ ಭಾಗವಹಿಸಿ, ಭಾಷಣಗಳಿಂದ ರಾಜದ್ರೋಹದ ಆರೋಪಕ್ಕೆ ಒಳಗಾದರು. ಕೋರ್ಟ್ನಲ್ಲಿ ತಮ್ಮ ರಕ್ಷಣೆಗಾಗಿ ಭಾಷಣ ಮಾಡಿದರು, ಅದು ಆರೋಪಕ್ಕಿಂತಲೂ ತೀಕ್ಷ÷್ಣವಾಗಿದ್ದರಿಂದ ಒಂದು ವರ್ಷ ಶಿಕ್ಷೆಗೆ ಒಳಗಾದರು. ಕ್ರಾಂತಿಕಾರಿ, ರಾಜಕೀಯ, ಸಾಮಾಜಿಕ ಸುಧಾರಣೆ, ಧಾರ್ಮಿಕ ಜಾಗೃತಿಯ ಎಲ್ಲ ಕೆಲಸಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರು. ಈ ಅನುಭವದಿಂದ ಸಮಾಜದ ಸ್ಥಿತಿ, ಕೆಲಸದ ವಿಧಾನವನ್ನು ತಿಳಿದುಕೊಂಡರು. 1930ರ ಜಂಗಲ್ ಸತ್ಯಾಗ್ರಹಕ್ಕಾಗಿ ಸಂಘದ ಸರಸಂಘಚಾಲಕ ಸ್ಥಾನವನ್ನು ತಾತ್ಕಾಲಿಕವಾಗಿ ಬಿಟ್ಟು, ಹೋರಾಟದಲ್ಲಿ ಭಾಗವಹಿಸಿ, ಮತ್ತೊಮ್ಮೆ ಒಂದು ವರ್ಷ ಶಿಕ್ಷೆಗೆ ಒಳಗಾದರು. ಸುಭಾಷ್ ಚಂದ್ರ ಬೋಸ್, ಗಾಂಧೀಜಿ, ತಿಲಕ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು ಮುಂತಾದವರೊಂದಿಗೆ ಸಂಪರ್ಕದಿಂದ, ಸಮಾಜದ ದುರ್ಗುಣಗಳನ್ನು ತೊಡೆದುಹಾಕದೆ ಯಾವ ಕಾರ್ಯವೂ ಸಂಪೂರ್ಣವಾಗದು ಎಂದು ತಿಳಿದರು.
ಡಾ. ಹೆಡಗೇವಾರ್ ಯೋಚಿಸಿ ಸ್ವತಃ ತಾವೇ ಇದರ ಅನುಷ್ಠಾನಕ್ಕಿಳಿದರು. 1911-14ರಲ್ಲಿ ಕೋಲ್ಕತ್ತಾದಲ್ಲಿ ಇದನ್ನು ತ್ರೈಲೋಕ್ಯನಾಥ ಚಕ್ರವರ್ತಿಯವರಿಗೆ ತಿಳಿಸಿದ್ದರು. ನಾಗಪುರಕ್ಕೆ ಮರಳಿ, ವೈದ್ಯಕೀಯ ಶಿಕ್ಷಣ ಪೂರೈಸಿ, ಆಂದೋಲನಗಳಲ್ಲಿ ಭಾಗವಹಿಸುತ್ತಲೇ, ದೇಶವನ್ನು ಒಗ್ಗೂಡಿಸುವ, ಶ್ರೇಷ್ಠಗೊಳಿಸುವ, ವ್ಯಕ್ತಿಗಳಲ್ಲಿ ಗುಣಾತ್ಮಕತೆಯನ್ನು ಬೆಳೆಸುವ ವಿಧಾನಗಳನ್ನು ಪ್ರಯೋಗಿಸಿದರು. ಭಾರತ ಸೇವಾಶ್ರಮ ಸಂಘ ಮತ್ತು ಅನುಶೀಲನ ಸಮಿತಿಯ ಮಾನವ ನಿರ್ಮಾಣ ಕಾರ್ಯಕ್ರಮಗಳ ಅನುಭವದಿಂದ ಒಂದು ಚಿಂತನೆ, ಪರಿಹಾರವನ್ನು ಕಂಡುಕೊಂಡು ಪ್ರಯೋಗಿಸಿದರು. ಯಶಸ್ವಿಯಾದ ಈ ಪ್ರಯೋಗವನ್ನು ತಮ್ಮ ಯುವ ಜೊತೆಗಾರರೊಂದಿಗೆ ಚರ್ಚಿಸಿ, 1925ರ ವಿಜಯದಶಮಿಯಂದು ಸಂಘವನ್ನು ಆರಂಭಿಸಿದರು, ಉದ್ದೇಶ: ಸಂಪೂರ್ಣ ಹಿಂದೂ ಸಮಾಜದ ಸಂಘಟನೆ. ಇಲ್ಲಿ ಪ್ರಶ್ನೆ ಎದ್ದಿದೆ: ಇತರರನ್ನು ಏಕೆ ಬಿಟ್ಟರು? "ಹಿಂದೂ ಸಮಾಜ" ಎಂದರೆ ಈ ದೇಶಕ್ಕೆ ಜವಾಬ್ದಾರಿಯುಳ್ಳ ಸಮಾಜ. ಈ ಹೆಸರು ಪುರಾತನವಾಗಿ ದೇಶದ ಜನರಿಗೆ ಬಂದಿದೆ. ಮಹಾವೀರ್ ಪ್ರಸಾದ್ ದ್ವಿವೇದಿಯವರು ಬರೆದಂತೆ, ಜಲದೃಷ್ಟಿಯ ಕಾಲದಲ್ಲಿ ಬಾಹ್ಯ ಜನರು ಈ ಹೆಸರನ್ನು ಕೊಟ್ಟರು. ನಮಗೆ ಪ್ರತ್ಯೇಕ ಹೆಸರಿನ ಅಗತ್ಯವಿರಲಿಲ್ಲ, ನಮ್ಮ ಧರ್ಮಶಾಸ್ತçವು "ಮಾನವ ಧರ್ಮ ಶಾಸ್ತç"ವೆಂದೇ ಇತ್ತು. "ಮಾತಾ ಪಾರ್ವತೀ ದೇವೀ, ಪಿತಾ ದೇವೋ ಮಹೇಶ್ವರಃ, ಬಾಂಧವಾಃ ಶಿವಭಕ್ತಾಶ್ಚ, ಸ್ವದೇಶೋ ಭುವನತ್ರಯಂ" ಮತ್ತು "ವಸುಧೈವ ಕುಟುಂಬಕA" ಎಂಬ ಭಾವನೆಯಿಂದ, ಮಾನವರೆಲ್ಲರೂ ಒಂದೇ ಎಂದು ಭಾವಿಸುತ್ತಿದ್ದೆವು. ಮಾನವತೆ, ಸೃಷ್ಟಿ, ಎಲ್ಲವೂ ಪರಮಾತ್ಮನಿಂದ ಸಂನಾದಿಯಾಗಿದೆ. ಒಬ್ಬರ ಕಾರ್ಯವು ಇನ್ನೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ವೈಯಕ್ತಿಕ ಉನ್ನತಿಗೆ ಎಲ್ಲರ ಉನ್ನತಿಯನ್ನು ಯೋಜಿಸಬೇಕು. ಇದು ಭಾರತದ ಸ್ವಭಾವ.
ಸಂಘ ಆರಂಭವಾದಾಗ, ಎಲ್ಲರೂ ತಮ್ಮನ್ನು ಹಿಂದೂ ಎಂದು ಕರೆಯುತ್ತಿರಲಿಲ್ಲ, ಇಂದಿಗೂ ಕೆಲವರು ಕರೆಯುವುದಿಲ್ಲ. ಕೆಲವರಿಗೆ ತಾವು ಹಿಂದೂ ಎಂದು ಗೌರವವಿದೆ, ಕೆಲವರಿಗೆ "ಹಿಂದೂ ಎಂದರೆ ಏನು, ವಿಶ್ವದ ಒಂದು ಭಾಗವಷ್ಟೇ" ಎಂಬ ಭಾವನೆ. ಕೆಲವರು ತಾವು ಹಿಂದೂ ಎಂದು ಒಪ್ಪಿಕೊಳ್ಳದಿದ್ದರೂ, "ಹಿಂದವೀ" ಅಥವಾ "ಭಾರತೀಯ" ಎಂದರೆ ಆಕ್ಷೇಪವಿಲ್ಲ. "ಸನಾತನ" ಎಂಬ ಪದವನ್ನೂ ಕೆಲವರು ಸ್ವೀಕರಿಸುತ್ತಾರೆ. ಈ ಪದಗಳು ಸಮಾನಾರ್ಥಕ. ನಾವು "ನೀವು ಹಿಂದೂ ಎಂದೇ ಕರೆಯಿರಿ" ಎಂದು ಹೇಳುವುದಿಲ್ಲ. "ನಾವು ಹಿಂದವೀ, ಭಾರತೀಯರು" ಎಂದರೂ ಒಪ್ಪಿಕೊಳ್ಳುತ್ತೇವೆ. ಈ ಪದಗಳ ಹಿಂದಿನ ತಾತ್ಪರ್ಯವನ್ನು ಅರ್ಥಮಾಡಿಕೊಳ್ಳಿ. ಈ ತಾತ್ಪರ್ಯವು ಭೌಗೋಳಿಕವಲ್ಲ. ಇದರಲ್ಲಿ ಭಾರತಮಾತೆಯ ಭಕ್ತಿಯಿದೆ, ಪೂರ್ವಜರ ಸಂಪ್ರದಾಯವಿದೆ. 40,000 ವರ್ಷಗಳಿಂದ ಭಾರತದ ಜನರ ಡಿಎನ್‌ಎ ಒಂದೇ ಆಗಿದೆ. ನಮ್ಮ ಸಂಸ್ಕೃತಿಯು ಒಗ್ಗಟ್ಟಿನದು. ವೈವಿಧ್ಯವು ನಮ್ಮಲ್ಲಿ ಒಡಕು ತರುವುದಿಲ್ಲ, ಏಕೆಂದರೆ ಏಕರೂಪತೆಯಿಂದಲೇ ಏಕತೆ ಬರುತ್ತದೆ ಎಂದು ನಾವು ಭಾವಿಸುವುದಿಲ್ಲ. ವೈವಿಧ್ಯದಲ್ಲಿಯೇ ಏಕತೆಯಿದೆ, ಏಕೆಂದರೆ ವೈವಿಧ್ಯವು ಏಕತೆಯ ಫಲಿತಾಂಶವೇ ಆಗಿದೆ.
ಆದರೆ, ಮೊದಲು ಸುಲಭವಾದ ಕೆಲಸ ಆರಂಭಿಸಿ. ತಮ್ಮನ್ನು ಹಿಂದೂ ಎಂದು ಕರೆಯುವವರನ್ನು ಸಂಘಟಿಸಿ, ಅವರ ಜೀವನವನ್ನು ಉತ್ತಮಗೊಳಿಸಿ. ಆಗ, ತಮ್ಮನ್ನು ಹಿಂದೂ ಎಂದು ಒಪ್ಪದವರೂ ಒಪ್ಪಿಕೊಳ್ಳಲು ಆರಂಭಿಸುತ್ತಾರೆ, ಮರೆತವರಿಗೂ ನೆನಪಾಗುತ್ತದೆ. ಗುರಿಯೆಂದರೆ ಸಂಪೂರ್ಣ ಸಮಾಜದ ಸಂಘಟನೆ. "ಹಿಂದೂ" ಎಂಬ ಪದದ ಮೇಲೆ ಒತ್ತಾಯ ಏಕೆ? ಏಕೆಂದರೆ ಈ ತಾತ್ಪರ್ಯವನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವ ಏಕೈಕ ಪದವಿದು.
ಸಂಘವು ಯಾವುದೇ ವಿರೋಧದಿಂದ ಉದ್ಭವಿಸಿಲ್ಲ, ಪ್ರತಿಕ್ರಿಯೆಯಿಂದ ಹುಟ್ಟಿಲ್ಲ. ಗುರುಜಿಯವರು ಒಂದು ಪತ್ರಿಕಾಗೋಷ್ಠಿಯಲ್ಲಿ "ಸಂಘಟನೆ ಯಾರ ವಿರುದ್ಧವೂ ಅಲ್ಲ. ನೀವು ವ್ಯಾಯಾಮ ಮಾಡುವಿರಿ, ಯಾರನ್ನು ಹೊಡೆಯಲು? ಎಂದು ಕೇಳಿದರೆ, "ವ್ಯಾಯಾಮವು ಆರೋಗ್ಯಕ್ಕಾಗಿ" ಎಂದಿರಿ. ಕೆಲವೊಮ್ಮೆ ವ್ಯಾಯಾಮದ ಶರೀರ ಕಾಳಗಕ್ಕೆ ಉಪಯೋಗವಾಗಬಹುದು, ಆದರೆ ಉದ್ದೇಶ ಆರೋಗ್ಯ. ಸಂಘಟಿತವಾಗಿರುವುದು ಸಮಾಜದ ಸ್ವಾಭಾವಿಕ ಸ್ಥಿತಿ. ಇದಿಲ್ಲದೆ ಯಾವ ಕೆಲಸವೂ ಯಶಸ್ವಿಯಾಗದು. ಆದ್ದರಿಂದ, ಸಂಘವು ಸಂಪೂರ್ಣ ಸಮಾಜವನ್ನು ಸಂಘಟಿಸುತ್ತದೆ. 100 ವರ್ಷಗಳ ಸಂಘದ ಪಯಣದ ಬಗ್ಗೆ ಏನು ಹೇಳಲಿ? ಡಾ. ಹೆಡಗೇವಾರ್ ಹೇಳಿದ್ದರು, ಸಂಘಟನೆಯ ಜೀವನದಲ್ಲಿ ಮೂರು ಸ್ಥಿತಿಗಳಿವೆ: ಮೊದಲು ಉಪೇಕ್ಷೆ, ವಿರೋಧ, ಸ್ವೀಕಾರ.
ಮುಂದಿನ ಹಂತ ಏನು?
ನಾವು ಸಂಘದಲ್ಲಿ ಮಾಡುತ್ತಿರುವ ಕೆಲಸವು ಸಂಪೂರ್ಣ ಸಮಾಜದಲ್ಲಿ ಆಗಬೇಕು. ಚಾರಿತ್ರ‍್ಯ ನಿರ್ಮಾಣ, ದೇಶಭಕ್ತಿಯನ್ನು ಜಾಗೃತಗೊಳಿಸುವ ಕೆಲಸವು ಸಮಾಜದಲ್ಲಿ ಆಗುತ್ತಿಲ್ಲವೆಂದೇನಿಲ್ಲ. ಇದನ್ನು ಮಾಡುವವರು ಇದ್ದಾರೆ, ಬೇರೆ ಬೇರೆ ರೀತಿಯಲ್ಲಿ, ವೈಯಕ್ತಿಕವಾಗಿ, ಸಂಘಟನೆಗಳ ಮೂಲಕ ಮಾಡುವವರು ಇದ್ದಾರೆ. ಉತ್ತಮ ಚಾರಿತ್ರ‍್ಯವುಳ್ಳ ಜೀವನವನ್ನು ತಮ್ಮ ಉದಾಹರಣೆಯಿಂದ ರೂಪಿಸುವವರು ಇದ್ದಾರೆ. ಆದರೆ ಇವರು ಮುಂಚೂಣಿಗೆ ಬರುವುದಿಲ್ಲ. ನಾವು ಕೇಳುವ, ಓದುವ, ನೋಡುವ ಸುದ್ದಿಗಳು ಯಾವುವು? "ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿಯಲ್ಲ, ಮನುಷ್ಯನು ನಾಯಿಯನ್ನು ಕಚ್ಚಿದರೆ ಸುದ್ದಿ." ಆದ್ದರಿಂದ, ಕೆಟ್ಟದ್ದೇ ಸುದ್ದಿಯಾಗುತ್ತದೆ. ಇದರಿಂದ ಎಲ್ಲವೂ ಕೆಟ್ಟದಾಗಿದೆ ಎಂದು ತೋರುತ್ತದೆ. ಕೆಟ್ಟದ್ದು ಖಂಡಿತ ಆಗುತ್ತಿದೆ, ಗಾಂಧೀಜಿ ಹೇಳಿದ ಏಳು ಸಾಮಾಜಿಕ ಪಾಪಗಳ ಸಂಕಟವು ಭಾರತವೂ ಸೇರಿದಂತೆ ಎಲ್ಲೆಡೆ ಇದೆ. ಎಲ್ಲರೂ ಚಿಂತಿಸಬೇಕು. ಆದರೆ, ಭಾರತದಲ್ಲಿ ಕೆಟ್ಟದ್ದು ತೋರುವಷ್ಟೇ 40 ಪಟ್ಟು ಒಳ್ಳೆಯದು ಸಮಾಜದಲ್ಲಿ ಇದೆ. ಮಾಧ್ಯಮ ವರದಿಗಳ ಆಧಾರದಲ್ಲಿ ಮಾತ್ರ ಭಾರತವನ್ನು ಮೌಲ್ಯಮಾಪನ ಮಾಡಿದರೆ ತಪ್ಪಾಗುತ್ತದೆ. ಇದನ್ನು ನಾವು ನೇರವಾಗಿ ತಿಳಿದಿದ್ದೇವೆ. ಲಾಭವಿಲ್ಲದೆ ಸೇವೆ ಮಾಡುವ ಜನರನ್ನು ಭೇಟಿಯಾಗಿದ್ದೇವೆ. ಬಡವರು ಕೂಡ ಸೇವೆ ಮಾಡುತ್ತಾರೆ. ನಾನು ಇಲ್ಲಿ ಧರ್ಮದ ಉಪನ್ಯಾಸ ನೀಡುತ್ತಿದ್ದೇನೆ, ಆದರೆ ಧರ್ಮವನ್ನು ಜೀವಿಸುವವರು ಗ್ರಾಮಗ್ರಾಮದಲ್ಲಿ, ನಗರದ ಗುಡಿಸಲುಗಳಲ್ಲಿ ಸಿಗುತ್ತಾರೆ. ಪೂರಕ ರಚನೆಯ ಅಗತ್ಯ
ಭಾರತದ ಈ ಶಕ್ತಿಯು ಚದುರಿಕೊಂಡಿದೆ, ಆದರೆ ಸಕ್ರಿಯವಾಗಿದೆ. ಇದನ್ನು ಒಂದು ಪೂರಕ ರಚನೆಯಲ್ಲಿ ಕಟ್ಟಬೇಕು. ಅವರು ತಮ್ಮ ತಮ್ಮ ರೀತಿಯಲ್ಲಿ ಕೆಲಸ ಮಾಡಲಿ, ಸಂಘಕ್ಕೆ ಬಂದೇ ಮಾಡಬೇಕೆಂದಿಲ್ಲ. ಕೇವಲ ಜಾಲಬಂಧನ (ನೆಟ್‌ವರ್ಕಿಂಗ್) ಇರಲಿ, ಇತರರೂ ಇದ್ದಾರೆ ಎಂದು ತಿಳಿಯಲಿ. ಇದರಿಂದ ಉತ್ಸಾಹ ಹೆಚ್ಚಾಗುತ್ತದೆ, ಕೆಲಸಕ್ಕೆ ಪ್ರೇರಣೆ ಸಿಗುತ್ತದೆ. ಈ ಎಲ್ಲ ಕೆಲಸಗಳು ಪರಸ್ಪರ ಪೂರಕವಾಗಿರಲಿ, ಬಾಧಕವಾಗದಿರಲಿ. ಎಲ್ಲರೂ ಒಳ್ಳೆಯ ಕೆಲಸವನ್ನೇ ಮಾಡುತ್ತಾರೆ, ಆದರೆ ಇವರ ಕೆಲಸದಲ್ಲಿ ಸಮನ್ವಯ, ಪೂರಕತೆ, ಒಗ್ಗಟ್ಟು ಬರಲಿ, ಆಗ ಎಲ್ಲರೂ ಒಟ್ಟಾಗಿ ಸಮಾಜ ಪರಿವರ್ತನೆಯ ಕೆಲಸದಲ್ಲಿ ಮುನ್ನಡೆಯಬಹುದು.
ಪರಸ್ಪರ ಸದ್ಭಾವನೆ
ಇದು ಸಾಧ್ಯವಾಗಬೇಕಾದರೆ, ಇಷ್ಟು ದೊಡ್ಡ ಸಮಾಜ, ಇಷ್ಟೊಂದು ವೈವಿಧ್ಯಗಳಿವೆ. ಸೃಷ್ಟಿಯ ವೈವಿಧ್ಯಗಳು ಕೆಲವೊಮ್ಮೆ ಪರಸ್ಪರ ವಿರೋಧಿಯೂ ಆಗಿರುತ್ತವೆ, ಘರ್ಷಣೆಯೂ ಉಂಟಾಗುತ್ತದೆ. ಸಮಾಜದಲ್ಲಿ ಅವಿಶ್ವಾಸ, ದುರ್ಭಾವನೆ ಇದ್ದರೆ, ಒಗ್ಗಟ್ಟಿನಿಂದ ಯಾವ ಕೆಲಸವನ್ನೂ ಸಾಧಿಸಲಾಗದು. ಇಷ್ಟು ದೊಡ್ಡ ಕೆಲಸವನ್ನು ಸಮಾಜವು ಮಾಡಬೇಕಾದರೆ, ಅದಕ್ಕೆ ಸಿದ್ಧವಾಗಬೇಕು. ಇದಕ್ಕಾಗಿ ಪರಸ್ಪರ ಸದ್ಭಾವನೆಯು ಅತ್ಯಗತ್ಯ. ಆದ್ದರಿಂದ, ಸಮಾಜದ ಎಲ್ಲ ವರ್ಗಗಳನ್ನು ನಡೆಸುವ ಮುಖಂಡರು, ಅಭಿಪ್ರಾಯ ರೂಪಿಸುವವರೊಂದಿಗೆ ನಿರಂತರ ಸಂಬAಧವನ್ನು ರೂಪಿಸುವ ಪ್ರಯತ್ನ ಮಾಡುತ್ತೇವೆ. ಈ ಸಂಬAಧದಿಂದ ಅವರು ಒಗ್ಗೂಡಿ, ಮೂರು ಕೆಲಸಗಳನ್ನು ಮಾಡಬೇಕು:ವರ್ಗದ ಉನ್ನತಿ: ತಮ್ಮ ವರ್ಗದ ಭೌತಿಕ ಮತ್ತು ನೈತಿಕ ಉನ್ನತಿಗಾಗಿ, ರೂಢಿಗತ ಕುರೀತಿಗಳಿಂದ ಮುಕ್ತಿಗಾಗಿ, ಜೀವನ ಸುಧಾರಣೆಗಾಗಿ ಕೆಲಸ ಮಾಡಬೇಕು. ಜೊತೆಗೆ, ತಮ್ಮ ವರ್ಗದ ಜನರಿಗೆ "ನಾವು ಒಂದು ವರ್ಗ, ನಮಗೆ ವಿಶಿಷ್ಟತೆ ಇದೆ, ಆದರೆ ನಾವು ಸಂಪೂರ್ಣ ಸಮಾಜದ ಅವಿಭಾಜ್ಯ ಅಂಗ. ಈ ಸಮಾಜ ಇದ್ದರೆ ನಾವು ಇರುತ್ತೇವೆ, ನಮ್ಮ ಉನ್ನತಿಯು ಸಮಾಜದ ಉನ್ನತಿಗೆ ಕಾರಣವಾಗಬೇಕು" ಎಂಬ ತಿಳಿವಳಿಕೆ ಬರಬೇಕು.
ಸ್ಥಳೀಯ ಸಮಸ್ಯೆಗಳ ಪರಿಹಾರ: ತಾವಿರುವ ಭೌಗೋಳಿಕ ಕಾರ್ಯಕ್ಷೇತ್ರದಲ್ಲಿ ಯಾವ ಕೊರತೆ, ಸಮಸ್ಯೆ ಇದೆಯೋ, ಅದನ್ನು ತಮ್ಮ ಬಲದಿಂದ ಎಷ್ಟು, ಹೇಗೆ ಪರಿಹರಿಸಬಹುದು ಎಂದು ತೀರ್ಮಾನಿಸಿ, ಮುಂದಿನ ಭೇಟಿಗೆ ಮೊದಲು ಅದನ್ನು ಪೂರ್ಣಗೊಳಿಸಬೇಕು. ಇದರಿಂದ "ನಾವು ಸಮಾಜದ ಅಂಗ" ಎಂಬ ಭಾವನೆ ದೃಢವಾಗುತ್ತದೆ, ಅನುಭವವಾಗುತ್ತದೆ.
ದುರ್ಬಲ ವರ್ಗಗಳಿಗೆ ಸಹಾಯ: ಎಲ್ಲ ವರ್ಗಗಳು ಒಟ್ಟಿಗೆ ಭೇಟಿಯಾಗಿ, ದುರ್ಬಲ ವರ್ಗಕ್ಕೆ ಏನು ಅಗತ್ಯವಿದೆ, ಮುಂದಿನ ಭೇಟಿಗೆ ಮೊದಲು ಏನು ಮಾಡಬಹುದು, ತಮ್ಮ ಬಲದಿಂದ ಎಷ್ಟು ಸಾಧ್ಯ ಎಂದು ತೀರ್ಮಾನಿಸಿ, ಅದನ್ನು ಪೂರ್ಣಗೊಳಿಸಬೇಕು. ಈ ಗುಣವು ಸಮಾಜದ ಸ್ವಭಾವವಾಗಬೇಕು, ಸಹಜವಾದ ಪ್ರಕ್ರಿಯೆಯಾಗಬೇಕು. ಇದಕ್ಕಾಗಿ ನಾವು ಪ್ರಯತ್ನಿಸುತ್ತೇವೆ. ಸದ್ಭಾವನೆಯ ಜೊತೆಗೆ ಸಕಾರಾತ್ಮಕತೆಯೂ ಬೇಕು. ಕೆಲವೊಮ್ಮೆ ಕೆಟ್ಟ ಸುದ್ದಿಗಳಿಂದ ಸಮಾಜವೂ ನಿರಾಶೆಗೊಳಗಾಗುತ್ತದೆ, ಆದರೆ ನಿರಾಶೆ ಬರಬಾರದು. ವೈವಿಧ್ಯದಲ್ಲಿ ಒಗ್ಗಟ್ಟು: ನಮ್ಮ ದೇಶದ ಸಮಾಜದಲ್ಲಿ ಸಂಪ್ರದಾಯದಿಂದಲೇ ಹಲವು ವರ್ಗಗಳಿವೆ, ಹೊರಗಿನಿಂದಲೂ ಕೆಲವು (ವಿಶೇಷವಾಗಿ ಧಾರ್ಮಿಕ) ವರ್ಗಗಳು ಬಂದಿವೆ. ಆಕ್ರಮಣದಿಂದ, ವಿದೇಶಿ ಚಿಂತನೆಗಳು ಬಂದಿವೆ, ಆದರೆ ಅವುಗಳನ್ನು ಸ್ವೀಕರಿಸಿದವರು ಇಲ್ಲಿಯವರೇ. ಇಂದು ಇಲ್ಲಿಯವರೇ ಇದ್ದಾರೆ. ಹಿಂದೂ ಚಿಂತನೆಯು "ವಸುಧೈವ ಕುಟುಂಬಕA" ಎಂಬುದಾಗಿದೆ, ಎಲ್ಲ ಮಾರ್ಗಗಳನ್ನೂ ಒಳ್ಳೆಯದೆಂದು ಒಪ್ಪಿಕೊಳ್ಳುತ್ತದೆ. ಆದರೆ, ಇಂದು ಇರುವ ದೂರವನ್ನು ಕಡಿಮೆ ಮಾಡಲು ಎರಡೂ ಕಡೆಯಿಂದ ಪ್ರಯತ್ನ ಬೇಕು. ಸಂವಾದವಾಗಬೇಕು, ಪರಸ್ಪರರ ನೋವನ್ನು ಅರಿಯಬೇಕು, ಅವಿಶ್ವಾಸವನ್ನು ತೊಡೆದು, ಎಲ್ಲರೂ ಒಂದೇ ದೇಶ, ಒಂದೇ ಸಮಾಜ, ಒಂದೇ ರಾಷ್ಟ್ರದ ಅಂಗವಾಗಿ, ವೈವಿಧ್ಯದ ಹೊರತಾಗಿಯೂ, ಸಾಮಾನ್ಯ ಪೂರ್ವಜರ ವಂಶಜರಾಗಿ, ಸಾಮಾನ್ಯ ಸಂಸ್ಕೃತಿಯ ಉತ್ತರಾಧಿಕಾರಿಗಳಾಗಿ ಮುಂದುವರಿಯಬೇಕು. ಇದು ಸದ್ಭಾವನೆ ಮತ್ತು ಸಕಾರಾತ್ಮಕತೆಗೆ ಅತ್ಯಗತ್ಯ. ಈ ಕೆಲಸವನ್ನು ಎಚ್ಚರಿಕೆಯಿಂದ, ಚಿಂತನೆಯಿAದ ಒಂದೊAದು ಹೆಜ್ಜೆಯಾಗಿ ಮಾಡಬೇಕು.ವ್ಯಾವಹಾರಿಕ ಮಾದರಿಯ ಅಗತ್ಯ.
ಭಾರತದ ಹೆಚ್ಚಿನ ನೆರೆಯ ದೇಶಗಳು ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದವು. ಜನರು, ಭೂಗೋಳ, ನದಿಗಳು, ಕಾಡುಗಳು ಎಲ್ಲವೂ ಒಂದೇ. ಕೇವಲ ಭೂಪಟದಲ್ಲಿ ಗೆರೆಗಳನ್ನು ಎಳೆಯಲಾಗಿದೆ. ಆದ್ದರಿಂದ, ಮೊದಲ ಕರ್ತವ್ಯವೆಂದರೆ ಈ ಒಡನಾಟದ ಭಾವನೆಯಿಂದ ಒಗ್ಗೂಡಿಸುವುದು. ದೇಶಗಳು ಬೇರೆಯಾಗಿರಬಹುದು, ಆದರೆ ವಿರಾಸತಿನ ಮೌಲ್ಯಗಳ ಆಧಾರದಲ್ಲಿ ಎಲ್ಲರ ಉನ್ನತಿಯಾಗಬೇಕು. ಇದಕ್ಕೆ ಭಾರತದ ಕೊಡುಗೆಯಿರಬೇಕು. ಭಾರತವು ದೊಡ್ಡ ದೇಶವಾದ್ದರಿಂದ, ಅವರನ್ನು ಒಗ್ಗೂಡಿಸಿ, ಅವರ ಶಾಂತಿ, ಸ್ಥಿರತೆ, ವಿಕಾಸ, ಪರಿಸರ, ಸಂಸ್ಕಾರಗಳಿಗೆ ಗಮನ ಕೊಡಬೇಕು. ಜಾತಿ, ಪಂಥ, ಸಂಪ್ರದಾಯಗಳು ಬೇರೆಯಾದರೂ, ಸಂಸ್ಕಾರದ ಬಗ್ಗೆ ಯಾರಿಗೆ ಭಿನ್ನಾಭಿಪ್ರಾಯವಿದೆ? ಇದಕ್ಕಾಗಿ ಎಲ್ಲರೂ ಒಪ್ಪಿಗೆಯಿಂದ ಪ್ರಯತ್ನಿಸಬೇಕು. ಇದನ್ನು ಇಂದಿನ ಭಾಷೆಯಲ್ಲಿ "ಔಟ್‌ರೀಚ್" ಎನ್ನುತ್ತಾರೆ, ನಾವು "ಸಂಪರ್ಕ" ಎನ್ನುತ್ತೇವೆ. ಜೀವಂತ ಸಂಪರ್ಕ, ಮನುಷ್ಯರಿಂದ ಮನುಷ್ಯರಿಗೆ, ಹೃದಯದಿಂದ ಹೃದಯಕ್ಕೆ ಮಾತು. ಇದು ಆರಂಭವಾಗಬೇಕು. ಇದರಿಂದ ಒಳ್ಳೆಯ ವಾತಾವರಣದಲ್ಲಿ ಸಂಬAಧಗಳು ರೂಪಗೊಳ್ಳುತ್ತವೆ, ವಿಶ್ವಕ್ಕೆ ಉಪಕಾರಿಯಾಗುತ್ತವೆ. ಈ ದಿಶೆಯಲ್ಲಿ ನಾವು ಏನು ಮಾಡಬಹುದು ಎಂಬ ಚಿಂತನೆ ಸಂಘಟಕರ ಮನಸ್ಸಿನಲ್ಲಿದೆ. ಆದರೆ, ಇದನ್ನು ಮಾಡಲು ಭಾರತದ ಸಮಾಜದ ಗುಣಮಟ್ಟವು ಕೆಲಸ ಮಾಡುತ್ತದೆ. ಸಮಾಜದ ಚಿತ್ರವು ತೋರಬೇಕು. ಇಲ್ಲವಾದರೆ, "ನಿಮ್ಮ ದೇಶದಲ್ಲಿ ಏನಿದೆ? ಏನಾಗುತ್ತಿದೆ?" ಎಂದು ಜನ ಕೇಳುತ್ತಾರೆ. ಆದ್ದರಿಂದ, ಮನೆಯಿಂದಲೇ ಆರಂಭವಾಗಬೇಕು. ಒಂದು ಸಂಘಟಿತ ಕಾರ್ಯಶಕ್ತಿಯನ್ನು ರೂಪಿಸಿ, ಅದರ ಆಧಾರದಲ್ಲಿ ಸಮಾಜದ ಪರಿವರ್ತನೆಯಾಗಬೇಕು. ಸಮಾಜದ ಪರಿವರ್ತನೆ ಎಂದರೆ ವ್ಯವಸ್ಥೆಯ ಬದಲಾವಣೆಯಲ್ಲ, ಸಮಾಜದ ಆಚರಣೆಯ ಬದಲಾವಣೆ, ಸಂಘಟಿತ ಸ್ಥಿತಿಯ ರಚನೆ. ಇದರ ಆಧಾರದಲ್ಲಿ ವ್ಯವಸ್ಥೆ ಬದಲಾಗುತ್ತದೆ. ವ್ಯವಸ್ಥೆಯು ತಾನಾಗಿಯೇ ಬದಲಾಗುವುದಿಲ್ಲ. ಸಮಾಜವು ಗುಣಸಂಪನ್ನವಾಗಿ, ಸಂಘಟಿತವಾಗಿ, ಸ್ಪಷ್ಟ ದೃಷ್ಟಿಯೊಂದಿಗೆ, ಆ ದೃಷ್ಟಿಗೆ ತಕ್ಕ ಆಚರಣೆಯೊಂದಿಗೆ ಮಾತ್ರ ಬದಲಾಗಬಹುದು.
ಪಂಚ ಪರಿವರ್ತನ
ಆಚರಣೆಯಲ್ಲಿ ಬದಲಾವಣೆ ತರುವ ಕೆಲವು ಕೆಲಸಗಳನ್ನು ನಾವು ಆರಂಭಿಸಿದ್ದೇವೆ. ಆ ಐದು ಕೆಲಸಗಳನ್ನು ಪಂಚ ಪರಿವರ್ತನ ಎಂದು ಕರೆಯುತ್ತೇವೆ. ಇವು ತುಂಬ ಸರಳ ಕೆಲಸಗಳು, ಯಾವ ಸಾಧನವೂ ಬೇಕಿಲ್ಲ, ಕೇವಲ ಇಚ್ಛೆಯಷ್ಟೇ ಬೇಕು. ಆ ಐದು ಹೆಚ್ಚೆಗಳು ಕುಟುಂಬ ಪ್ರಬೋಧನ, ಪರಿಸರಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶೀ ಜೀವನಶೈಲಿ, ನಾಗರಿಕ ಶಿಷ್ಟಾಚಾರ.
ಒಂದು ಕಾಲದಲ್ಲಿ ದೇಶಕ್ಕಾಗಿ ಗಲ್ಲಿಗೇರಬೇಕಿತ್ತು, ನಮ್ಮ ಪೂರ್ವಜರು ನಗುನಗುತ್ತ ಗಲ್ಲಿಗೇರಿದರು. ಆದರೆ, ಇಂದು 24 ಘಂಟೆ ದೇಶಕ್ಕಾಗಿ ಜೀವಿಸಬೇಕು. ದೈನಂದಿನ ಜೀವನದಲ್ಲಿ ದೇಶಭಕ್ತಿಯೆಂದರೆ, ಸಮಾಜದ, ದೇಶದ ಕಾಳಜಿಯೊಂದಿಗೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ತನ್ನನ್ನು ತಾನು ರೂಪಿಸಿಕೊಳ್ಳುವುದು.
ಶಿಕ್ಷಣ ಹಾಗೂ ಸಂಸ್ಕಾರ
ತಂತ್ರಜ್ಷಾನ ಹಾಗೂ ಆಧುನಿಕತೆಯು ಶಿಕ್ಷಣದೊಂದಿಗೆ ವಿರೋಧವಲ್ಲ. ಮಾನವ ಬೆಳೆದಂತೆ ಹೊಸ ತಂತ್ರಜ್ಞಾನ ಬರುತ್ತದೆ, ಅದನ್ನು ತಡೆಯಲಾಗದು. ಉಪಯೋಗಿಸುವುದು ಮನುಷ್ಯನ ಕೈಯಲ್ಲಿದೆ. ಅದರ ದುಷ್ಟರಿಣಾಮಗಳಿಂದ ಬಚಾವಾಗಬೇಕು. ತಂತ್ರಜ್ಞಾನದ ಮಾಲೀಕ ಮನುಷ್ಯನಾಗಬೇಕೆ ವಿನಃ, ತಂತ್ರಜ್ಞಾನವೇ ಮನುಷ್ಯನ ಮಾಲೀಕ ಆಗಬಾರದು. ಪೊಲೀಸರು ಲಾಠಿಯನ್ನು ಚಲಾಯಿಸಬೇಕೆ ವಿನಃ ಲಾಠಿಯೇ ಪೊಲೀಸರನ್ನು ನಡೆಸುವಂತಾಗಬಾರದು. ಕೇವಲ ಸಾಕ್ಷರತೆ, ಮಾಹಿತಿ ಶಿಕ್ಷಣ ಮಾತ್ರವಲ್ಲ, ಮನುಷ್ಯ ಸುಸಂಸ್ಕೃತ, ವಾಸ್ತವಿಕವಾಗಬೇಕು ಎಂಬ ಅರಿವು ಬಂದರೆ ವಿಷವನ್ನು ಹೇಗೆ ಔಷಧ ಸಿದ್ಧಪಡಿಸಬೇಕು ಎನ್ನುವುದನ್ನು ಕಲಿತುಕೊಳ್ಳುತ್ತಾನೆ. ಹೊಸ ಶಿಕ್ಷಣ ವ್ಯವಸ್ಥೆ ಏಕೆ ತರಲಾಯಿತು? ಬ್ರಿಟಿಷರ ಗುಲಾಮರಾಗಿ ಎಂದೆAದೂ ಇರಬೇಕು ಎಂದು ಮಾಡಿದರು. ಇವರ ಮೇಲೆ ಹೇಗೆ ಆಡಳಿತ ನಡೆಸಬೇಕು ಎಂಬ ಆಲೋಚನೆಯಲ್ಲಿ ಇದನ್ನು ಮಾಡಿದರು. ಆದರೆ ಈಗ ಸ್ವತಂತ್ರವಾಗಿದ್ದೇವೆ, ಕೇವಲ ರಾಜ್ಯ ನಡೆಸುವುದು ಮಾತ್ರವಲ್ಲ, ಪ್ರಜಾ ಪಾಲನೆ ಮಾಡಬೇಕು. ಹೀಗಾಗಿ ನಮ್ಮ ಇತಿಹಾಸದ ವಿಚಾರಗಳು ಮಕ್ಕಳಿಗೆ ಸಿಗಬೇಕು. ನಾವು ಈ ಹಿಂದೆ ಸಾಧಿಸಿದ್ದೇವೆ, ಭವಿಷ್ಯದಲ್ಲೂ ಮಾಡಬಲ್ಲೆವು ಎಂಬ ವಿಶ್ವಾ ಮೂಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ವಿಚಾರವನ್ನು ತರಲಾಗಿದೆ, ಒಂದಷ್ಟು ಅನುಷ್ಠಾನ ಆಗುತ್ತಿದೆ ಎಂದು ಕೇಳಿದ್ದೇನೆ.
ಭಾರತೀಯ ಜ್ಞಾನ ಪರಂಪರೆ
ಸAಘಟನೆಯಾಗಿ ಏಕಾತ್ಮತಾ ಸ್ತೋತ್ರವನ್ನು ಹೇಳುತ್ತೇವೆ. ಅದರಲ್ಲಿ ಮೊದಲು ಭಗವಂತ, ಮಾತೃಭೂಮಿ, ನದಿಗಳು, ಬೆಟ್ಟಗಳ ನಂತರ ಋಷಿಪರಂಪರೆಯಿAದ ವೈಜ್ಞಾನಿಕತೆವರೆಗೆ ಎಲ್ಲರ ಹೆಸರಿದೆ. ಇಡೀ ವೈಜ್ಞಾನಿಕ ಪರಂಪರೆಯನ್ನು ಪ್ರತಿದಿನವೂ ಸ್ಮರಿಸಲಾಗುತ್ತದೆ. ವರ್ಗದಲ್ಲಿ ಪ್ರತಿ ಹೆಸರಿನ ಕುರಿತು ಮಾಹಿತಿ ನೀಡುತ್ತೇವೆ. ಹಾಗೂ ಈ ಪಟ್ಟಿಯನ್ನು ಕೆಲವು ಬದಲಾವಣೆ ಮಾಡುತ್ತೇವೆ. ಅಧ್ಯಾತ್ಮದಿಂದ ವಿಜ್ಞಾನದವರೆಗೆ ಚರ್ಚಿಸುತ್ತೇವೆ. ಶಿಕ್ಷಣದಲ್ಲಿ ಕೆಲಸ ಮಾಡುತ್ತಿರುವ ನಾಲ್ಕು ಸಂಘಟನೆಗಳ ಕಾರಣದಿಂದಾಗಿ ಸಾಕಷ್ಟು ಬದಲಾವಣೆ ಆಗಿದೆ. ಐಕೆಎಸ್ ಎಂದು ಹೇಳುವುದು ಹಿಂಜರಿಗೆ ಆಗಿತ್ತು, ಆದರೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಈ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಿದರೆ ಒಳ್ಳೆಯದು, ಆಯಾ ಸಂಘಟನೆಗಳು ನೋಡಿಕೊಳ್ಳುತ್ತವೆ.
ಉದ್ಯೋಗ: ನೌಕರಿಗಾಗಿ ಶಿಕ್ಷಣ ಎನ್ನುವ ಮಾನಸಿಕತೆ ಇದಕ್ಕೆ ಕಾರಣ. ಕೃಷಿ ವಿವಿಯಲ್ಲಿ ನಾನು ಓದಿದ ಸಂಸ್ಥೆಯಲ್ಲಿ ಡಿಗ್ರಿ ಪಡೆದವರು ನೌಕರಿಗೆ ಹೋದರು. ಬ್ಯಾಂಕ್‌ನಲ್ಲಿ ಲೋನ್ ಅಧಿಕಾರಿಗಳಾಗಿ ಕಾಗದದ ಮೇಲೆ ಇಂಕಿನ ಕೃಷಿ ಮಾಡುತ್ತಿದ್ದಾರೆ. ಅವರ್ಯಾರೂ ವ್ಯವಸಾಯಕ್ಕೆ ಹಿಂದಿರುಗಲಿಲ್ಲ. ಸರ್ಕಾರಿ ನೌಕರಿಯೇ ಬೇಕು, ಮನೆಯ ಬಳಿಯಲ್ಲೇ ಕಚೇರಿ ಇರಬೇಕು ಎಂಬ ಮಾನಸಿಕತೆ. ವಾಸ್ತವದಲ್ಲಿ ದುಡಿಯಲು ಕೌಶಲ ಬೇಕು. ನೌಕರನಲ್ಲ, ನೌಕರಿ ನೀಡುವವರಾಗಬೇಕು ಎಂದು ಹೋರಾಟಕ್ಕೆ ಅರ್ಧ ಸಮಸ್ಯೆ ಮುಗಿಯುತ್ತದೆ. ಯಾವುದೇ ಸಮಾಜವು ಶೇ.30ಕ್ಕಿಂತ ಹೆಚ್ಚು ಉದ್ಯೋಗ ನೀಡಲಾಗದು, ಕೆಲಸದಲ್ಲಿ ಮೇಲು ಕೀಳು ಎಂಬ ಭಾವನೆ ಪ್ರಾಚೀನ ಕಾಲದಲ್ಲೇ ಬಂದುಬಿಟ್ಟಿದೆ. ಕೆಲವು ಕೆಲಸ ನೀಚ ಎನ್ನುವ ಭಾವನೆ ಆರಂಭವಾದಾಗಿನಿAದಲೇ ಕುಸಿತ ಆರಂಭವಾಗಿದೆ. ಉದ್ಯೋಗ ಗೌರವ ಹೆಚ್ಚಬೇಕಾಗಿದೆ. ಶ್ರಮದಿಂದ ದುಡಿಯುವವರಿಗೆ ಸನ್ಮಾನ ಮಾಡಬೇಕು. ರೈತರಿಗೆ ಹುಡುಗಿ ನೀಡುವುದಿಲ್ಲ. ಓದಿದ್ದರೂ, ಹಣವಿದ್ದರೂ ನೀಡುವುದಿಲ್ಲ. ನೌಕರಿಯೇ ಜೀವನ ಎನ್ನುವುದನ್ನು ತೆಗೆದುಹಾಕಬೇಕು. ತಮ್ಮ ಕಾಲಮೇಲೆ ನಿಲ್ಲಬೇಕು ಎಂಬುದನ್ನು ತಿಳಿಸಬೇಕು. ಈ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳಬೇಕು.
ಡೆಮಾಗ್ರಫಿ, ಡಿಎನ್‌ಎ, ಅಖಂಡ ಭಾರತ: ಡೆಮಾಗ್ರಫಿ ಬದಲಾಗಿದ್ದರಿಂದ ದೇಶ ವಿಭಜನೆಯಾಯಿತು. ಇಂಡೋನೇಷ್ಯಾದಲ್ಲೂ ಆಯಿತು. ಸಂಖ್ಯೆಗಿAತಲೂ ಉದ್ದೇಶ ಏನೆಂಬುದರ ಕುರಿತು ಅನುಮಾನ ಇರುತ್ತದೆ. ಮೊದಲನೆಯದ್ದು ಸಂಖ್ಯೆಯದ್ದು. ಅಸಂತುಲನೆಗೆ ಕಾರಣವೇನು? ಮೊದಲನೆಯದ್ದು ಮತಾಂತರ, ಇದು ಭಾರತದ ಪರಂಪರೆಗೆ ಅನುಗುಣವಾಗಿಲ್ಲ. ಕ್ಯಾಥೋಲಿಕ್‌ಗಳು ನಾವು ಮಾಡುವುದಿಲ್ಲ ಎನ್ನುತ್ತಾರೆ. ಮದರಸಾ ಟೀಚರ್ಸ್ಗಳೊಂದಿಗೆ ಮಾತನಾಡುತ್ತಿದ್ದಾಗ, ಅವರೂ ಮತಾಂತರಕ್ಕೆ ವಿರೋಧಿಸಿದರು. ಇದು ಸರಿಯೆನ್ನಿಸಿದರೆ ಇದು ಆಗಬಾರದು. ಮತ ಅವರವರ ಆಯ್ಕೆ. ಇದನ್ನು ತಡೆಯಬೇಕು.
ಡಿಎನ್‌ಎ ಒಂದೆ, ಆದರೆ ವ್ಯವಸ್ಥೆ ಇದೆಯಲ್ಲ? ಯುರೋಪ್‌ನಲ್ಲಿ ಒಂದೇ ಡಿಎನ್‌ಎ ಮೂಲ ಹೊಂದಿರುವ ಅನೇಕ ದೇಶಗಳಿವೆ. ಒಂದೇ ಡಿಎನ್‌ಎ ಇದ್ದಮೇಲೆ ಅನುಮತ ಪಡೆದು ಏಕೆ ಬರಬಾರದು? ಅನುಮತಿ ದೊರಕದಿದ್ದರೆ ಬರುವಂತಿಲ್ಲ. ನುಸುಳುವುದು ತಪ್ಪು. ಬಂದಮೇಲೆ ತೊಂದರೆ ಆಗುತ್ತದೆ ಎಂಬುದು ಅನುಭವಕ್ಕೆ ಬಂದಿದೆ. ಕೆಲವನ್ನು ಸರ್ಕಾರ ತಡೆಯಬಹುದು, ಆದರೆ ನಮ್ಮ ದೇಶದಲ್ಲಿ ಕೆಲಸವನ್ನು ನಮ್ಮ ದೇಶದ ಜನರಿಗೆ ನೀಡಬೇಕು ಎಂಬುದನ್ನು ನಾವು ತಿಳಿಯಬೇಕು. ನಮ್ಮ ದೇಶದಲ್ಲಿರುವ ಮುಸ್ಲಿಮರಿಗೇ ನೌಕರಿ ನೀಡಿ ಅನುಮತಿ ಪಡೆದು ಯಾವ ದೇಶದ್ದಾದರೂ ಇರಬಹುದಲ್ಲ?
ಮೂರನೆಯದ್ದು ಜನ್ಮದಾತ ಕಾರಣ. ವಿಶ್ವದಲ್ಲಿ ಎಲ್ಲ ಶಾಸ್ತçಗಳೂ ಹೇಳುವುದು, 3ಕ್ಕಿಂತ ಕಡಿಮೆ ಟಿಎಫ್‌ಆರ್ ಇದ್ದರೆ ಇಲ್ಲವಾಗುತ್ತದೆ. ಎಲ್ಲ ಸಮಾಜಗಳೂ ಹೀಗೆ ಮಾಡಬೇಕು. ವೈದ್ಯರು ಹೇಳುವಂತೆ, ಮೂರು ಮಕ್ಕಳಾದರೆ ತಂದೆ ತಾಯಿ ಹಾಗೂ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಇಗೋ ಮ್ಯಾನೇಜ್‌ಮೆಂಟ್ ಸರಿಯಾಗಿ ಆಗುವುದರಿಂದ ಸಾಕಷ್ಟು ಸಮಸ್ಯೆ ಸರಿಯಾಗುತ್ತದೆ ಎಂದರು.
ದೇಶದ ಸರಾಸರಿ 2.1 ಎಂದು ಹೇಳುತ್ತದೆ. ಅಂದರೆ ಮೂರು ಮಕ್ಕಳು ಇರಬೇಕು ಎನ್ನುವುದನ್ನು ಪ್ರತಿ ನಾಗರಿಕನೂ ನೋಡಬೇಕು. ದೇಶದ ದೃಷ್ಟಿಯಿಂದ ಇದನ್ನು ಹೇಳುತ್ತಿದ್ದೇನೆ. ಇನ್ನೊಂದೆಡೆ ಜನಸಂಖ್ಯೆ ಸಂಪನ್ಮೂಲವೇನೋ ಸರಿ, ಹೊರೆಯೂ ಆಗಬಹುದಲ್ಲ? ಎಲ್ಲರಿಗೂ ಆಹಾರ ನೀಡಬೇಕಲ್ಲ? ಅದಕ್ಕಾಗಿಯೇ ಪಾಪ್ಯುಲೇಷನ್ ನೀತಿ ಬೇಕಾಗಿದೆ. ನಿಯಂತ್ರಿತ ಹಾಗೂ ಅಗತ್ಯ ಇರಬೇಕು. 3ಕ್ಕಿಂತ ತೀರಾ ಹೆಚ್ಚು ಆಗಬಾರದು. ಇದು ಎಲ್ಲರೂ ಒಪ್ಪಬೇಕಾದ ವಿಚಾರ. ಎಲ್ಲರ ಜನಸಂಖ್ಯೆಯೂ ಕಡಿಮೆ ಆಗುತ್ತಿದೆ. ಇದಕ್ಕಾಗಿ ಹೊಸ ಪೀಳಿಗೆಯನ್ನು ಸಿದ್ಧಗೊಳಿಸಬೇಕು.
ವಿಭಜನೆಯ ವಿರೋಧವನ್ನು ಸಂಘ ಮಾಡಿದೆ. ದೇಶವಿಭಜನೆಯ ದುರಂತ ಕತೆ ಪುಸ್ತಕವಿದೆ. ವಿಭಜನೆಯಲ್ಲಿ ಯಾರ ಪಾತ್ರ ಎಂಥದ್ದು, ಸಂಘದ ವಿಚಾರವೇನು ಎಂದು ಪುಸ್ತಕ ಓದಿದರೆ ತಿಳಿಯುತ್ತದೆ. ಸಂಘ ವಿರೋಧ ಮಾಡಿತ್ತು ಆದರೆ ಸಂಘದ ಶಕ್ತಿ ಏನಿತ್ತು? ಇಡೀ ದೇಶ ಗಾಂಧಿಯವರ ಹಿಂದೆ ಇತ್ತು. ಗಾಂಧೀಜಿಯೂ ಮಾನ್ಯ ಮಾಡಿರಲಿಲ್ಲ, ಆದರೆ ಅವರ ಕೈಯನ್ನೂ ಮೀರಿ ನಡೆದಾಗ ಸಂಘ ಏನೂ ಮಾಡಲಾಗಲಿಲ್ಲ. ಚಟ್ಟಾನ್ ಪೇಪರ್ ಲಾಹೀರ್‌ನಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್, ವಿಭಜನೆಯ ಪರಿಣಾಮವನ್ನು ಅವರು ನೀಡಿದ್ದರು, ಅದು ಇಂದು ಸತ್ಯವಾಗಿದೆ. ಅಂಥ ಜನರ ಮಾತನ್ನೂ ಯಾರೂ ಕೇಳಲಿಲ್ಲ. ಆದರೆ ಭಾರತ ಅಖಂಡ ಎನ್ನುವುದು ಸತ್ಯ. ಬೇಕೆಂದೇ ಸತ್ಯವನ್ನು ನಿರಾಕರಿಸುವವರು ಏನಾಗುತ್ತಿದ್ದಾರೆ? ಅವರೆಲ್ಲರೂ ಸುಖಿಗಳಾಗಿದ್ದಾರ? ಹಾಗಾದರೆ ಪ್ರಯತ್ನಗಳೇ ಆಗಿಲ್ಲವೇ? ಪರಿಹಾರ ಸಿಕ್ಕಿಲ್ಲ. ಸಂಸ್ಕೃತಿ, ಪೂರ್ವಜನರು, ಮಾತೃಭೂಮಿಯಿಂದ ಎಲ್ಲರೂ ಒಂದೇ ಎಂದು ವ್ಯವಹರಿಸಿದರೆ ಎಲ್ಲವೂ ಸರಿಯಾಗುತ್ತದೆ. ಅಖಂಡ ಭಾರತ ಎನ್ನುವುದು ರಾಜಕೀಯ ಮಾತ್ರವಲ್ಲ. ಅಖಂಡ ಭಾರತ ಇದ್ದಾಗಲೂ ಒಂದೇ ಆಡಳಿತ ಇರಲಿಲ್ಲ. ಆದರೆ ಎರಡೂ ದೇಶಗಳ ನಾಗರಿಕರು ಎಲ್ಲಿ ಬೇಕಾದರೂ ಹೋಗಬಹುದಾಗಿತ್ತು. ಆ ಭಾವನೆ ಮತ್ತೆ ಬಂದರೆ ಆ ಸಮಯದ ರಾಜಕೀಯ ಆಡಳಿತ ಏನೇ ಇದ್ದರೂ ಎಲ್ಲರೂ ಸುಖವಾಗಿರಬಹುದು, ಎಲ್ಲರಿಗೂ ಸ್ನೇಹಿತರು ಹೆಚ್ಚುತ್ತಾರೆ.
ಸಾಮಾಜಿಕ ಸಮರಸತೆ ಮತ್ತು ಅಸ್ಮಿತೆ: ಜಾತಿವಾದ ಎನ್ನುವುದು ಅಡೆತಡೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಾತಿ-ವರ್ಣ ಎನ್ನುವುದು ಹಿಂದೊಮ್ಮೆ ವ್ಯವಸ್ಥೆ ಆಗಿತ್ತು. ಆ ವ್ಯವಸ್ಥೆ ಈಗ ಇಲ್ಲ. ಅದು ಅವ್ಯವಸ್ಥೆ ಆಗಿದೆ. ಜಾತಿ-ವರ್ಣದ ಹೆಸರಿನಲ್ಲಿ ಅವುಗಳ ಕುರಿತ ದುರಭಿಮಾನ ಆಡವಾಡುತ್ತಿದೆ. ವಾಸ್ತವದಲ್ಲಿ ಕಾಲಸುಸಂಗತ ವ್ಯವಸ್ಥೆ ಬರಬೇಕಿದೆ, ಅದು ಶೋಷಣಮುಕ್ತ ಹಾಗೂ ಸಮತಾಯುಕ್ತ ಆಗಬೇಕಿದೆ. ಕಾಲಬಾಹ್ಯವಾಗಿರುವುದು ಹೋಗುತ್ತದೆ, ಅದರ ಯೋಚನೆ ಮಾಡಬೇಕಿಲ್ಲ. ಸಲೀಸಾಗಿ ಹೋಗಲಿ ಎನ್ನುವುದು ಎಲ್ಲರುದ್ದೇಶವಾಗಿರಬೇಕು. ಮೇಳರಿಮೆ ಹಾಗೂ ಕೀಳರಿಮೆಗಳು ಮುಕ್ತಾಯವಾಗಬೇಕಿದೆ.
ಮೀಸಲಾತಿ: ಮೀಸಲಾತಿ ಮುಂತಾದ ವಿಷಯಗಳನ್ನು ತಿಳಿಯಲು ಮನಸ್ಸಿನಲ್ಲಿ ಸಂವೇದನೆ ಬೇಕು. ಮೀಸಲಾತಿ ಕುರಿತು ನಮ್ಮಲ್ಲಿ ನಿರ್ಣಯ ಆಗಬೇಕಾದಾಗ ನಮ್ಮಲ್ಲಿಯೂ ಸಮಾಜದಂತೆಯೇ ವಿರೋಧ ವ್ಯಕ್ತವಾಯಿತು. ಒಂದು ಅವಧಿ ನೋಡಿದ ಬಾಳಾಸಾಹೇಬ್ ದೇವರಸ್, ಸಾವಿರಾರು ವರ್ಷಗಳಿಂದ ಈ ರೀತಿ ದೌರ್ಜನ್ಯ ಆಗಿರುವ ಕುಟುಂಬದಲ್ಲಿ ನಿಮ್ಮ ಜನನವಾಗಿದೆ ಎಂದು ಕಲ್ಪನೆ ಮಾಡಿಕೊಂಡು ಆಲೋಚಿಸಿ ಎಂದರು. ಮುಂದಿನ ಅವಧಿಯಲ್ಲಿ ಮೀಸಲಾತಿ ಕುರಿತ ನಿರ್ಣಯ ಅಂಗೀಕಾರವಾಯಿತು. ತರ್ಕ ಕುತರ್ಕದಲ್ಲಿ ಪರಿಹಾರ ಸಿಗುವುದಿಲ್ಲ. ದೀನದಯಾಳರು ಹೇಳಿದರು, ಗುಂಡಿಯಲ್ಲಿ ಬಿದ್ದವರು ಮೇಲೆ ಬರಲು, ಮೇಲಿರುವವರು ಕೆಳಗೆ ಬಗ್ಗಿದರೆ ಮಾತ್ರ ಸಾಧ್ಯವಾಗುತ್ತದೆ. ಸಾವಿರ ವರ್ಷ ಇದನ್ನು ನಮ್ಮ ಜನರು ಅನುಭವಿಸಿದ್ದಾರೆಂದರೆ ಕನಿಷ್ಟ 200 ವರ್ಷ ಸಹಿಸಲು ಏನು ಕಷ್ಟ ಎಂದು ನಾನು ಅನೇಕ ಬಾರಿ ಹೇಳಿದ್ದೇನೆ. ಸ್ವಲ್ಪ ನಷ್ಟ ಆಗಬಹುದು, ಆದರೆ ಇದನ್ನು ತಿಳಿಯದಿದ್ದರೆ ಸರಿಯಾಗದು.
ಸಂವಿಧಾನ ಸಮ್ಮತ ಮೀಸಲಾತಿಗೆ ಸಂಪೂರ್ಣ ಸಹಮತಿ ಇದೆ. ಮೀಸಲಾತಿ ಪಡೆಯುವವರು ಹೇಳುವವರೆಗೂ ಅವರ ಸಮರ್ಥನೆಗೆ ಇರುತ್ತೇವೆ. ಅತ್ಯಾಚಾರಗಳು, ಅನಾಚಾರಗಳು ನಿಲ್ಲಬೇಕು. ಇಂಥದ್ದು ನಡೆದಾಗ ಸ್ವಯಂಸೇವಕರು ವಿರೋಧಿಸುತ್ತಾರೆ, ಸತ್ಯ ಹಾಗೂ ನ್ಯಾಯದ ಪಕ್ಷದಲ್ಲಿ ನಿಲ್ಲಬೇಕು. ಆದರೆ ಎಲ್ಲ ಕಡೆಯೂ ಸಂಘದ ಪ್ರಭಾವ ಒಂದೇ ರೀತಿ ಇಲ್ಲ. ಇದು ಎಲ್ಲ ಸ್ವಯಂಸೇವಕರು ಮಾಡಬೇಕೆಂದು ಅಪೇಕ್ಷೆ ಇದೆ. ಪ್ರತಿ ವರ್ಗದ ಉನ್ನತಿಗಾಗಿ ಆ ಸಮಾಜದ ನಾಯಕತ್ವ ಮುಂದೆ ಬರಬೇಕು, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ಇದರಲ್ಲಿ ನ್ಯಾಯ, ಸತ್ಯದ ಪಕ್ಷದಲ್ಲಿ ಸಂಘ ಇರುತ್ತದೆ.
ಗ್ರಂಥಗಳಲ್ಲಿ ಈ ಉಲ್ಲೇಖ ಇದ್ದರೆ ನಾವು ಅದನ್ನು ಒಪ್ಪುವುದಿಲ್ಲ. ಆದರೆ ಉಡುಪಿ ಧರ್ಮಸಂಸತ್ತಿನಲ್ಲಿ ನಮ್ಮ ಸಂತರು, ಹಿಂದೂ ಧರ್ಮಶಾಸ್ತ್ರದಲ್ಲಿ ಇದಕ್ಕೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ. ಹಾಗೊಂದು ವೇಳೆ ಉಲ್ಲೇಖ ಇದ್ದರೆ ಅದನ್ನು ತಪ್ಪಾಗಿ ಅರ್ಥೈಸಿರಬಹುದು. ಏಕೆಂದರೆ ಆ ಗ್ರಂಥಗಳಿಗೆ ಅನುಗುಣವಾಗಿ ಹಿಂದೂ ಆಚರಣೆ ಮಾಡಿದ್ದಾರೆ ಎನ್ನುವುದು ಕಡಿಮೆ. ಶಾಸ್ತçದಲ್ಲಿ ಇದ್ದರೂ ಅದೇ ರೀತಿ ನಾವು ನಡೆಯುವುದಿಲ್ಲ. ಲೋಕಕ್ಕೆ ಯಾವುದು ಅನುಕೂಲವೋ ಹಾಗೆ ನಡೆಯುತ್ತೇವೆ. ಅದಕ್ಕಾಗಿ ನಮ್ಮಲ್ಲಿ ಒಂದೇ ಗ್ರಂಥ ಇಲ್ಲ. ಗ್ರಂಥಗಳ ವ್ಯಾಖ್ಯಾನವನ್ನೂ ಅನೇಕರು ವಿಭಿನ್ನವಾಗಿ ಮಾಡಿದ್ದಾರೆ. ಮನುಸ್ಮೃತಿಗೆ ಅನುಗುಣವಾಗಿ ಇಡೀ ದೇಶ ನಡೆಯಿತು ಎಂಬ ಯಾವುದೇ ಕಾಲ ಇಲ್ಲ. ಶ್ರಮ ಗೌರವದ ಭಾವನೆ ಕಡಿಮೆ ಆಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ, ಆದರೆ ಯಾವಾಗಿನಿಂದ ಗೊತ್ತಿಲ್ಲ. ಸಮಾಜದ ಎಲ್ಲರೂ ಸಮಾನ ಕೆಲಸ ಮಾಡುತ್ತಾರೆ, ಮೇಲು ಕೀಳು ಇಲ್ಲ ಎಂಬ ಭಾವನೆ ಜಾಗೃತಗೊಳಿಸಬೇಕು. ಗ್ರಂಥಗಳ ಪ್ರಭಾವ ಇದರಲ್ಲಿ ಅತ್ಯಂತ ಕಡಿಮೆ. ಸ್ಮೃತಿ ಬದಲಾಗುತ್ತದೆ. ಸ್ಮೃತಿಯ ಅವಶ್ಯಕತೆ ಇದೆಯೆಂದು ಭಾವಿಸಿದರೆ ಎಲ್ಲ ವರ್ಗ, ಪಂಥ, ಜಾತಿ ಉಪಪಂಥದ ಹೊಸ ಸಮೃತಿ ಉತ್ಪನ್ನ ಮಾಡಬೇಕೆನ್ನಿಸುತ್ತದೆ.
ಜಾತಿ ಗಣತಿಯಿಂದ ಜಾತಿ ಭಾವನೆ ಗಟ್ಟಿಯಾಗುತ್ತದೆ, ಆದರೆ ಸಮಾಜದಲ್ಲಿ ವಿಭಾಜನ ಆಗಬಾರದೆಂದರೆ ಸದ್ಭಾವನಾ ಸಭೆಗಳಿವೆ.
ಭಾಷೆ: ಭಾರತದ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಒಂದು ರಾಷ್ಟ್ರೀಯ ಎಂದರೆ ಉಳಿದವು ಏನು? ಒಂದು ವ್ಯವಹಾರ ಭಾಷೆ ಬೇಕು, ಇದು ಸತ್ಯ. ಅದು ವಿದೇಶಿ ಆಗಬಾರದು ಅಷ್ಟೆ. ಏಕೆಂದರೆ ನಮ್ಮ ಭಾವನೆ ವಿದೇಶಿ ಭಾಷೆಗಳಲ್ಲಿ ಪ್ರಕಟಿಸಲು ಆಗುವುದಿಲ್ಲ. ಯಾವುದು ಆಗಬೇಕು? ಎಲ್ಲರೂ ಸೇರಿ ನಿರ್ಣಯಿಸಿ. ವಿವಾದ ಮಾಡುವ ಅಗತ್ಯವಿಲ್ಲ. ಶಬ್ದ ಅನೇಕ, ಭಾವ ಒಂದೆ ತಿರುಕ್ಕುರಳ್, ಸರ್ವಜ್ಞ, ತುಕಾರಾಂ ಮಹಾರಾಜರ ಅಭಂಗ, ರಾಮಚರಿತಮಾನಸವನ್ನು ನೋಡಿದರೆ ಆಚರಣೆಯ, ಆದರ್ಶದ ಉದಾಹರಣೆಗಳೆಲ್ಲವೂ ಸಮಾನ. ನಮ್ಮ ಮಾತೃಭಾಷೆ ಚೆನ್ನಾಗಿ ಬರಬೇಕು, ಪ್ರದೇಶದ ಭಾಷೆ ಚೆನ್ನಾಗಿ ಬರಬೇಕು, ವ್ಯವಹಾರದ ಭಾಷೆ ಕಲಿಯಬೇಕು. ಇಷ್ಟವಿದ್ದರೆ ಇನ್ನೂ ಹೆಚ್ಚು ಭಾಷೆ ಕಲಿಯಬಹುದು.
ಭಾರತ ಮೂಲದ ಮತಪಂಥಗಳು: ಭಾರತ ಬುದ್ಧನ ದೇಶ, ಶಾಂತಿಯೇ ಅಪೇಕ್ಷೆ. ಆದರೆ ಬೇರೆ ದೇಶಗಳು ಬುದ್ಧನ ದೇಶಗಳಲ್ಲ, ಹಾಗಾಗಿ ಶಸ್ತçಗಳ ಅಗತ್ಯವಿರುತ್ತದೆ. ಶಸ್ತçಬಲ ಹೆಚ್ಚಿಸಿಕೊಳ್ಳುವುದು ಯಾರನ್ನೋ ಹೊಡಯಲು ಅಲ್ಲ. ಹಾಗೊಂದು ವೇಳೆ ಅದು ಸತ್ಯವಾಗಿದ್ದರೆ ಇಷ್ಟರವೇಳೆಗೆ ಅದು ಕಾಣಬೇಕಾಗಿತ್ತಲ್ಲ? ನಮ್ಮ ಸಾಮರ್ಥ್ಯ ಇದ್ದಾಗಿಯೂ ಯುದ್ಧವನ್ನು ನಿಲ್ಲಿಸಿದ್ದೇವೆ. ರಕ್ಷಣೆಗಾಗಿ ಶಸ್ತçಗಳು ಬೇಕು.
ಸಂಘಟನೆ
ಹಿAಸೆ ಮಾಡುವ ಯಾವುದೇ ಸಂಘಟನೆ ಇಷ್ಟು ವಿಶಾಲ ವ್ಯಾಪ್ತಿಯಲ್ಲಿ ಹರಡಲು ಸಾಧ್ಯವಿಲ್ಲ. ಸಂಘದ ಮೇಲೆ ಆರೋಪ ಮಾಡುವವರು ಇದನ್ನು ನೋಡಬೇಕು. ಸಂಘದ ಮೇಲೆ ಈ ಆರೋಪವು ಸವೆದ ನಾಣ್ಯವಾಗಿದೆ, ಅದನ್ನು ಬಳಸುವುದು ಬೇಡ. ಸಾಮಾಜಿಕ ಆಂದೋಳನದಲ್ಲಿ ಸಂಘವು ಭಾಗವಹಿಸುತ್ತದಾದರೂ ಹೆಸರಿನ ಹಿಂದೆ ಹೋಗುವುದಿಲ್ಲ. ಎಲ್ಲಿಯೇ ಒಳ್ಳೆಯ ಕಾರ್ಯ ನಡೆಯುತ್ತಿದ್ದರೂ ಅವರು ಸೇರಿಕೊಂಡು ಕೆಲಸ ಮಾಡಬೇಕೆಂದು ಸ್ವಯಂಸೇವಕರಿಗೆ ಸೂಚನೆ ಇದೆ. ಆದರೆ ಅದರ ಕ್ರೆಡಿಟ್ ಸಂಘ ಪಡೆಯುವುದಿಲ್ಲ. ಸಮಾಜ ಹಾಗೂ ಆಯಾ ಸಂಘಟನೆಯೇ ಇದೆಲ್ಲದರ ಶ್ರೇಯಸ್ಸು ಸಲ್ಲುತ್ತದೆ.
ಅಂತಾರಾಷ್ಟ್ರೀಯ ಭೂಮಿಕೆ:
ಮತಪಂಥ ಸಂಪ್ರದಾಯಗಳ ಪ್ರಸಾರಕ್ಕೆ ವಿದೇಶಿ ಹಣ ಬರುವುದಕ್ಕೆ ಅಂಕುಶ ಹಾಕಬೇಕು. ಯಾವ ಉದ್ದೇಶಕ್ಕೆ ಆ ಹಣ ಆಗಮಿಸಿದೆಯೋ ಅದನ್ನು ಅದೇ ಕಾರ್ಯಕ್ಕೆ ವೆಚ್ಚ ಮಾಡಲಾಗುತ್ತಿದೆಯೇ ಎಂದು ಸರ್ಕಾರ ನೋಡಬೇಕು. ಇನ್ನೂ ಅನೇಕ ದೇವಾಲಯಗಳು ಖಾಸಗಿ ಒಡೆತನದಲ್ಲಿವೆ. ನಾವೇ ದೇವಾಲಯಗಳನ್ನು ನಿರ್ವಹಿಸಬಲ್ಲೆವು ಎಂಬ ವಿಶ್ವಾಸ ಭಕ್ತರಲ್ಲಿ ಮೂಡಬೇಕು. ಕೆಲವು ಸರ್ಕಾರಿ ಅಧೀನದ ದೇವಾಲಯಗಳು ಚೆನ್ನಾಗಿವೆ, ಕೆಲವು ಚೆನ್ನಾಗಿ ನಡೆಯುತ್ತಿಲ್ಲ. ಕೆಲವು ಖಾಸಗಿ ದೇವಾಲಯಗಳು ಚೆನ್ನಾಗಿ ನಡೆಯುತ್ತಿವೆ, ಕೆಲವು ನಡೆಯುತ್ತಿಲ್ಲ. ಈ ವಾತಾವರಣ ನಿರ್ಮಾಣ ಮಾಡಬೇಕು. ವ್ರತದ ದಿನ ಮಾಂಸಾಹಾರ ಸೇವಿಸಬಾರದು ಎಂದು ಜನರೇ ತೀರ್ಮಾನಿಸುತ್ತಾರೆ. ಅಂತಹ ಸಮಯದಲ್ಲಿ ಕೆಲವರ ಭಾವನೆಗಳಿಗೆ ಧಕ್ಕೆ ಆಗಬಹುದು, ಅದಕ್ಕೆ ಆಲೋಚನೆ ಮಾಡಬೇಕು. ಮಾಂಸ ಸೇವಿಸುವವರು ಪ್ರತಿನಿತ್ಯ ಸೇವಿಸುತ್ತಾರೆ ಎಂದೇನೂ ಇಲ್ಲ. ಇದರಲ್ಲಿ ತಪ್ಪೇನಿಲ್ಲ. ಆಂದೋಳನದಲ್ಲಿ ಸಂಘ ತೊಡಗಿಸಿಕೊಳ್ಳುವುದಿಲ್ಲ. ಆದರೆ ಹಿಂದೂ ಮಾನಸದಲ್ಲಿ ಕಾಶಿ, ಮಥುರಾ, ಅಯೋಧ್ಯಾ ಕುರಿತು ಶ್ರದ್ಧೆಯಿದೆ. ಹಿಂದೂ ಸಮಾಜ ಇದರ ಆಗ್ರಹ ಮಾಡುತ್ತದೆ. ಸಂಘ ತೊಡಗುವುದಿಲ್ಲ, ಸ್ವಯಂಸೇವಕರು ಹೋಗಬಹುದು. ಆದರೆ ಈ ಮೂರನ್ನು ಹೊರತುಪಡಿಸಿ ಉಳಿದೆಡೆ ಕುರಿತು ಈಗಾಗಲೇ ಹೇಳಲಾಗಿದೆ. ಎಲ್ಲ ಕಡೆ ಶಿವಲಿಂಗ ಹುಡುಕುವುದು ಬೇಡ ಎಂದು ಹೇಳಿದ್ದೆ. ಹಿಂದೂ ಸಂಘಟನೆಯ ಪ್ರಮುಖ ಈ ಮೂರನ್ನು ಮಾತ್ರ ಕೇಳುತ್ತಿದ್ದಾರಲ್ಲ, ಅಷ್ಟನ್ನು ಏಕೆ ಕೊಡಬಾರದು ಎಂದು ಏಕೆ ಆಲೋಚನೆ ಮಾಡಬಾರದು? ಸಂಘದಲ್ಲಿ ಮೂಢನಂಬಿಕೆ ಇಲ್ಲ. ಇಲ್ಲಿ ಯಾವ ಕರ್ಮಕಾಂಡವೂ ಇರುವುದಿಲ್ಲ, ಯಾರಿಗೆ ಯಾವುದರಲ್ಲಿ ವಿಶ್ವಾಸ ಇದೆಯೋ ಅದನ್ನು ಮಾಡಬಹುದು. ಇದೇ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ ಮಾಡಿದ್ದೇವೆ, ಭಾರತಮಾತೆಯ ಪೂಜೆ ಆಯಿತು. ನಾವೇನು ಮಂತ್ರ ಹೇಳಲಿಲ್ಲವಲ್ಲ? ಸಂಘದಲ್ಲಿ ನಡೆಸುವ ಸಂಸ್ಕೃತ ಪಾಠಾಂತರಗಳು ಭಾರತ ಮಾತೆ ಕುರಿತಾಗಿಯೇ ಇರುತ್ತವೆ. ಸಂಘದ ಪ್ರಾರ್ಥನೆಯಲ್ಲಿ ಮೊದಲು ಭಾರತ ಮಾತೆ, ನಂತರ ಪ್ರಭು ಎಂದಿದೆ. ಪ್ರಭು ಎನ್ನುವುದು ರಾಮ, ಕೃಷ್ಣ, ಬುದ್ಧ ಅಲ್ಲ. ನಾವು ಕರ್ಮಕಾಂಡಕ್ಕೆ ಹೋಗುವುದಿಲ್ಲ, ಆದರೆ ಅದನ್ನು ನಂಬುವವರನ್ನು ಗೌರವಿಸುತ್ತೇವೆ.
ವಿಕಸಿತ ಭಾರತಕ್ಕೆ ಮಾರ್ಗ ಹಾಗೂ ಸಂಘದ ಪಾತ್ರ: ವಿಕಸಿತ ಭಾರತಕ್ಕಾಗಿ ದೇಶಕ್ಕೆ ಜೀವಿಸುವುದು, ಶ್ರಮಿಸುವುದನ್ನು ಕಲಿಯಬೇಕು. ಉದ್ಯಮಶೀಲತೆ ಹೆಚ್ಚಾಗಬೇಕು. ಇವೆರಡು ವಿಚಾರಕ್ಕೆ ಒತ್ತು ನೀಡಿದರೆ ಬಹಳ ಪರಿಣಾಮಕಾರಿ ಆಗುತ್ತದೆ. ಇದರಿಂದಲೇ ಭಾರತ ಆತ್ಮನಿರ್ಭರ ಹಾಗೂ ವಿಕಸಿತ ಆಗುತ್ತದೆ. ನಮ್ಮ ವಿಚಾರದ ಆಧಾರದಲ್ಲಿ ನಮ್ಮ ಮಾಡೆಲ್ ನಿರ್ಮಿಸಿಕೊಂಡು ಮುನ್ನಡೆಯಬೇಕು. ನಮ್ಮದೇ ವಿಕಾಸದ ಮಾದರಿ ಇರಬೇಕು. ಆದರೆ ಇನ್ನೂ ಅದು ಪೂರ್ಣ ವಿಕಸಿತವಾಗಿಲ್ಲ, ನೀತಿ ರೂಪಿಸುವವರು ಇನ್ನೂ ಅನೇಕ ಅಡೆತಡೆಗಳನ್ನು ದಾಟಿ ಸಾಗಬೇಕು.
ಮಹಿಳೆಯರಿಗಾಗಿ ರಾಷ್ಟ್ರ ಸೇವಿಕಾ ಸಮಿತಿ ನಡೆಯುತ್ತಿದೆ. ನೀವು ಮಹಿಳೆಯರ ನಡುವೆ ಕೆಲಸ ಮಾಡಿ, ನಾವು ಪುರುಷರ ನಡುವೆ ಕಾರ್ಯ ಮಾಡುತ್ತೇವೆ ಎಂದಿದ್ದೇವೆ. ಅದೇ ಮಾತನ್ನು ಪಾಲನೆ ಮಾಡುತ್ತಿದ್ದೇವೆ. ಅವರಾಗಿಯೇ ನಿರ್ಧಾರ ಬದಲಿಸಲು ಕೇಳಿದರೆ ಯೋಚಿಸುತ್ತೇವೆ. ಈಗ ಸಮಿತಿಯದ್ದೂ ಸುಮಾರು 10 ಸಾವಿರ ಶಾಖೆಗಳಾಗಿವೆ. 50ಕ್ಕೂ ಹೆಚ್ಚು ಪ್ರಚಾರಿಕಾ ಇದ್ದಾರೆ. ಉಳಿದೆಲ್ಲ ಸಂಘಟನೆ, ಸಂಸ್ಥೆ, ಗತಿವಿಧಿಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸ್ವಯಂಸೇವಕರ ಮನೆಗಳಲ್ಲಿ ಮಹಿಳೆಯರ ಬೆಂಬಲದಿಂದಲೇ ಕೆಲಸಗಳು ನಡೆಯುತ್ತಿವೆ. ಮಹಿಳೆಯರು ಎಲ್ಲ ಕೆಲಸ ಮಾಡಬಲ್ಲರು ಎನ್ನುವುದರಲ್ಲಿ ನಮಗೆ ನಂಬಿಕೆ ಇದೆ.



