ನಮ್ಮನ್ನು ಅನುಸರಿಸಿ: Facebook Twitter Instagram YouTube

ಐ ಎನ್ ಎಸ್ ನಿಸ್ತಾರ್: ಭಾರತೀಯ ನೌಕಾಪಡೆಗೆ ಬಲ

ಅಪ್‌ಲೋಡ್ ಮಾಡಿದ ದಿನಾಂಕ: 09-12-2025 18:36

ಐ ಎನ್ ಎಸ್ ನಿಸ್ತಾರ್: ಭಾರತೀಯ ನೌಕಾಪಡೆಗೆ ಬಲ
ಭಾರತೀಯ ನೌಕಾಪಡೆಯ ಹೊಸ ಹೆಮ್ಮೆ ಐಎನ್‌ಎಸ್ ನಿಸ್ತಾರ್. ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತೀಯ ನೌಕಾಪಡೆಯ ಮೊತ್ತ ಮೊದಲ ಸ್ಥಳೀಯ ಡೈವಿಂಗ್ ಬೆಂಬಲ ಹಡಗು. ಐಎನ್‌ಎಸ್ ನಿಸ್ತಾರ್ ಎಂದು ಹೆಸರಿಸಲಾಗಿರುವ ಇದನ್ನು, ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ. ವಿಶ್ವದ ಕೆಲವೇ ನೌಕಾಪಡೆಗಳು ಮಾಡಲು ಸಾಧ್ಯವಾಗುವ ಆಳ ಸಮುದ್ರಗಳಲ್ಲಿನ ಡೈವಿಂಗ್ ಮತ್ತು ರಕ್ಷಣೆಯಂತಹ ಕಷ್ಟಕರವಾದ ಕೆಲಸಗಳನ್ನು ಮಾಡುವುದು ಇದರ ಕೆಲಸ. ಐಎನ್‌ಎಸ್ ನಿಸ್ತಾರ್ ಕೇವಲ ಒಂದು ಹಡಗು ಅಲ್ಲ, ಅದು ಒಂದು ದೊಡ್ಡ ಶಕ್ತಿ. ಈ ಹಡಗು ನಮ್ಮ ನೌಕಾಪಡೆಗೆ ಮಾತ್ರವಲ್ಲದೆ ನಮ್ಮ ನೆರೆಯ ರಾಷ್ಟçಗಳಿಗೂ ಜಲಾಂತರ್ಗಾಮಿ ನೌಕೆಗಳ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಇದು ಭಾರತವನ್ನು, ಈ ವಿಚಾರದಲ್ಲಿ ವಿಶ್ವಾಸಾರ್ಹ ಪಾಲುದಾರನನ್ನಾಗಿ ಮಾಡುತ್ತದೆ. ಈ ಹಡಗು ೧೨೦ ಮೀಟರ್ ಉದ್ದವಿದೆ. ಇದರ ತೂಕ ಸುಮಾರು ೧೦,೦೦೦ ಟನ್‌ಗಳು. ಇದು ರಿಮೋಟ್ ಕಂಟ್ರೋಲ್ಡ್ ವಾಹನಗಳು, ವಿಶೇಷವಾಗಿ ಲೈಫ್ ಬೋಟ್‌ಗಳು ಮತ್ತು ಡೈವಿಂಗ್ ಚೇಂಬರ್‌ಗಳAತಹ ಆಧುನಿಕ ಉಪಕರಣಗಳನ್ನು ಹೊಂದಿದೆ. ಇದು ೩೦೦ ಮೀಟರ್ ಆಳ ಸಮುದ್ರದಲ್ಲಿ ಚಾಲನೆ ಮತ್ತು ರಕ್ಷಣಾ ಕಾರ್ಯಗಳನ್ನು ಮಾಡಬಹುದು. ಯಾವುದೇ ಜಲಾಂತರ್ಗಾಮಿಯು ತೊಂದರೆಯಲ್ಲಿ ಸಿಲುಕಿಕೊಂಡರೆ, ರಕ್ಷಣೆಗೆ ಇದನ್ನು ಬಳಸಬಹುದು. ಸೋನಾರ್‌ಗಳು, ಕ್ಯಾಮೆರಾಗಳು ಮತ್ತು ಮ್ಯಾನಿಪ್ಯುಲೇಟರ್‌ಗಳನ್ನು ಹೊಂದಿದ ರಿಮೋಟ್ ಚಾಲಿತ ವಾಹನಗಳನ್ನು ಇದು ಹೊಂದಿದೆ. ಇವು ನೀರೊಳಗಿನ ಹಾನಿಯನ್ನು ನಿರ್ಣಯಿಸಲು, ಅವಶೇಷಗಳನ್ನು ತೆರವುಗೊಳಿಸಲು ಪೂರ್ಣ ಒಂದು ಕಿಲೋಮೀಟರ್ ಗಳಷ್ಟು ಕೆಳಗೆ ಇಳಿಯಬಹುದು.
⬅ ಮುಖಪುಟ