ನಮ್ಮನ್ನು ಅನುಸರಿಸಿ: Facebook Twitter Instagram YouTube

ಪುಟ್ಟಣ್ಣ ಕಣಗಾಲ್

ಅಪ್‌ಲೋಡ್ ಮಾಡಿದ ದಿನಾಂಕ: 13-06-2026 10:05

ಪುಟ್ಟಣ್ಣ ಕಣಗಾಲ್
ಡಿಸೆಂಬರ್ 1, 1933 ರಂದು ಜನಿಸಿದ ಪುಟ್ಟಣ್ಣ ಕಣಗಾಲ್ ಭಾರತೀಯ ಚಿತ್ರರಂಗ ಕಂಡ ಸಾರ್ವಕಾಲಿಕ ಅಗ್ರಗಣ್ಯ ನಿರ್ದೇಶಕರ ಸಾಲಿನಲ್ಲಿರುವವರು. ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಸರುವಾಸಿಯಾದ ಕಣಗಾಲರದ್ದು ಅಲ್ಲಗಳೆಯಲಾಗದ ಅಳಿಸಲಾಗದ ಚಿತ್ರಾಭಿವ್ಯಕ್ತಿ.  ಬರಿಯ ಕನ್ನಡವಷ್ಟೇ ಅಲ್ಲ ಭಾರತೀಯ ಚಿತ್ರಜಗತ್ತೇ ಮಹಿಳಾಕೇಂದ್ರಿತ ಚಲನಚಿತ್ರಗಳೆಡೆಗೆ ಇನ್ನೂ ತೆರೆದುಕೊಳ್ಳದ ಹೊತ್ತಿಗೆಲ್ಲ ಪುಟ್ಟಣ್ಣ ಸಾಮಾನ್ಯ ಪ್ರೇಕ್ಷಕರಾದಿಯಾಗಿ, ಸಿನೆಮಾಪಂಡಿತರೂ ಒಂದೇಸಮನಾಗಿ ಆಸ್ವಾದಿಸಿ ಮೆಚ್ಚುವಂತಹ ಶ್ರೇಷ್ಠ ಚಿತ್ರಗಳನ್ನು ತಯಾರಿಸಿ ಉಣಬಡಿಸಿದವರು. 
ಗೆಜ್ಜೆ ಪೂಜೆ, ಬೆಳ್ಳಿಮೋಡ, ಶರಪಂಜರ, ಉಪಾಸನೆಯಂತಹ ಜಾಗತಿಕ ಶ್ರೇಷ್ಠಚಿತ್ರಗಳ ಮೂಲಕ ನಾಯಕಿ ಪ್ರಧಾನ ಚಿತ್ರಗಳು ಮುನ್ನೆಲೆಗೆ ಬರುವಂತೆ ಮಾಡಿದ್ದಲ್ಲದೆ ಒಂದು ತಲೆಮಾರಿನ ಪ್ರೇಕ್ಷಕರ ಚಿತ್ರ ರಸಾನುಭವವನ್ನೂ ಉನ್ನತಿಗೇರಿಸಿದವರು ಪುಟ್ಟಣ್ಣ. ಮಾನವೀಯ ಸಂಬAಧಗಳು, ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ, ಮಾನಸಿಕ ಅಸ್ವಸ್ಥತೆಯಂತಹ ಸೂಕ್ಷö್ಮವಿಷಯಗಳನ್ನು ಬೆಳ್ಳಿಪರದೆಗೆ  ತರುವಲ್ಲಿ ಘಟಾನುಘಟಿ ಎಂಟೆದೆಯ ನಿರ್ದೇಶಕರೂ ಹಿಂದೇಟು ಹಾಕುವ ಇಂದಿನ ಸಮಯದಲ್ಲೂ ಶರಪಂಜರ, ಧರ್ಮಸೆರೆ, ಧರಣಿ ಮಂಡಲ ಮಧ್ಯದೊಳಗೆ ಯಂತಹ ಗಂಭೀರ ಕಥಾನಕಗಳ ಮೂಲಕ ಸಾಮಾನ್ಯ ವೀಕ್ಷಕನಿಗೆ ತಲುಪಿದ್ದಲ್ಲದೆ ಸಿನೆಮಾ ಮಾಧ್ಯಮದ ಅನನ್ಯ ಶಕ್ತಿ ಪ್ರಭಾವಗಳನ್ನು ವಿಸ್ತರಿಸಿ ಹೊಸವ್ಯಾಖ್ಯಾನವನ್ನೇ ಬರೆದರು.

ಪುಟ್ಟಣ್ಣರ ಚಲನಚಿತ್ರಗಳು ಪ್ರಯೋಗಾತ್ಮತೆಗೂ ವಿಮರ್ಶಾ ಮನೋಭಾವಕ್ಕೂ ಪಂಥಾಹ್ವಾನ ನೀಡುವಂಥವು. ‘ನಾಗರಹಾವು’ (೧೯೭೨) ಮತ್ತು ‘ರಂಗನಾಯಕಿ’ (೧೯೮೧), ‘ಎಡಕಲ್ಲು ಗುಡ್ಡದ ಮೇಲೆ’ ಯಂತಹ ಚಲನಚಿತ್ರಗಳು ಸಂಕೀರ್ಣ ಸಾಮಾಜಿಕ ಹಾಗು ವ್ಯಕ್ತಿಕೇಂದ್ರಿತ ವಿಷಯವಸ್ತುಗಳನ್ನು ಮುಖ್ಯಧಾರೆಯಲ್ಲಿ ನಿರ್ಭಿಡೆಯಾಗಿ ಸಂವಾದಕ್ಕೆ ಒದಗುವಂತೆ ಮಾಡಿದವು. ಹಾಗೆಂದು ಅವುಗಳ ಪ್ರಸ್ತುತಿಯಲ್ಲಾಗಲಿ ಬಳಕೆಯ ತಂತ್ರಗಾAಭೀರ್ಯದಲ್ಲಾಗಲಿ ಕುಂದಾಗದAತೆಯೂ ಚಿತ್ರಸಿದವು.  ಈ ವಿಷಯಗಳನ್ನು ಪಾತ್ರಗಳ ಮೂಲಕ ಮೂರ್ತವಾಗಿಸಿದ ಕಲಾವಿದರೆಲ್ಲರಿಗೂ ಅಚ್ಚಳಿಯದ ಖ್ಯಾತಿಯನ್ನೂ ಗಳಿಸಿಕೊಟ್ಟವು. 

ಕಣಗಾಲರ ಚಿತ್ರಶೈಲಿಗೆ ನಿರೂಪಣೆಯ ಸಂವಿಧಾನಗಳಿಗೆ ಸಮಾನಾಂತರ ಚಿತ್ರಜಗತ್ತಿನ ಜಾಗತಿಕ ದಿಗ್ಗಜರ ಜತೆ ಉಲ್ಲೇಖಗಳು ಬಂದಿರುವಲ್ಲಿ ಅಚ್ಚರಿಯೇನೂ ಇಲ್ಲ. ಅವರ ಶೈಲಿಯನ್ನು ಇಂಗ್ಮರ್ ಬರ್ಗ್ಮನ್ ಮತ್ತು ಫೆಡೆರಿಕೊ ಫೆಲಿನಿ ಅವರಂತಹ ನಿರ್ದೇಶಕರ ಚಿತ್ರಗಳಿಗೆ ಹೋಲಿಸಲಾಗಿದೆ. ಅವರ ಸಿನಿಮಾ ವಿಧಾನ ಭಾರತದ ಕಲಾತ್ಮಕ ಸಿನಿಮಾ ಚಳವಳಿಯೊಡನೆಯೂ ಹೋಲಿಕೆಯನ್ನು ಗಳಿಸಿದೆ. 

ಕಣಗಾಲರ ಚಿತ್ರಪರಂಪರೆ ಕಥನಾ ವಿನ್ಯಾಸಗಳ ಸಾಮರ್ಥ್ಯ ಮತ್ತು ಪಾತ್ರಗಳ ಸಶಕ್ತ ಸಾಕಾರಕ್ಕೆ ಅವರು ಬಳಸಿದ ಕಾರ್ಯಪದ್ಧತಿ ಅವುಗಳ ಪೋಷಣಾ ನಾವಿನ್ಯತೆಗಳಿಗಾಗಿ ಪ್ರಪಂಚದಾದ್ಯAತದ ಚಲನಚಿತ್ರ ವೀಕ್ಷಕರು ಹಾಗು ನಿರ್ದೇಶಕರನ್ನು ಆಕರ್ಷಿಸುತ್ತವೆ. ಪುಟ್ಟಣ್ಣ ತಮ್ಮ ಕಲೆ - ಪ್ರತಿಭೆಗಳಿಗೆ ತೋರಿದ ಬದ್ಧತೆಯನ್ನೇ ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಗೂ ತೋರುತ್ತಿದ್ದರು. ರಾಷ್ಟಿçÃಯ ಸ್ವಯಂಸೇವಕ ಸಂಘದ ಉಜ್ವಲ ರಾಷ್ಟçಭಕ್ತಿಗೆ ಮಾರುಹೋಗಿದ್ದ ಅವರು ಸ್ವತ: ಸಂಘದ ನಿಕ್ಕರ್ ತೊಟ್ಟು ಕೈಯಲ್ಲಿ ಲಾಠಿ ಹಿಡಿದು  ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದನ್ನು ಅವರನ್ನು ಹತ್ತಿರದಿಂದ ಬಲ್ಲವರು ಇಂದಿಗೂ ನೆನೆಸುತ್ತಾರೆ.

⬅ ಮುಖಪುಟ