ನಮ್ಮನ್ನು ಅನುಸರಿಸಿ: Facebook Twitter Instagram YouTube

ಡಾ. ಎ.ಪಿ.ಜೆ.ಅಬ್ದುಲ್ ಕಲಾಂ

ಅಪ್‌ಲೋಡ್ ಮಾಡಿದ ದಿನಾಂಕ: 13-06-2026 08:52

ಡಾ. ಎ.ಪಿ.ಜೆ.ಅಬ್ದುಲ್ ಕಲಾಂ
ಡಾ. ಎಪಿಜೆ ಅಬ್ದುಲ್ ಕಲಾಂ ಭಾರತದ ವಿಜ್ಞಾನಿ, ರಾಜಕಾರಣಿಯಾಗಿ ಪ್ರಸಿದ್ಧಿ ಪಡೆದವರು.ಇವರು ಭಾರತದ ಕ್ಷಿಪಣಿ ಮತ್ತು ಪರಮಾಣು ಶಸ್ತಾçಸ್ತçಗಳ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಲಾಂ ಅವರು ರಾಷ್ಟçಪತಿಯಾಗಿ ನೀಡಿರುವ ಕೊಡುಗೆ ಅಪಾರ. ಭಾರತದ ೧೧ನೇಯ ರಾಷ್ಟçಪತಿಯಾಗಿ ಸೇವೆ ಸಲ್ಲಿಸಿದರು. 

ಪರಿಚಯ
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅಕ್ಟೋಬರ್ ೧೫, ೧೯೩೧ ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರ ತಂದೆ ಜೈನುಲಾಬ್ದೀನ್, ತಾಯಿ ಆಶಿಯಮ್ಮ. ಅವರ ಕುಟುಂಬ ಬಡತನದಿಂದ ಕೂಡಿದ್ದರಿಂದ ಅಬ್ದುಲ್ ಕಲಾಂ ಅವರು ತಮ್ಮ ತಂದೆಗೆ ಆರ್ಥಿಕ ಸಹಾಯ ಮಾಡುವ ಸಲುವಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಪ್ರಾರಂಭಿಸಿದರು. ಅವರು ಶಾಲೆಯ ನಂತರ ತಮ್ಮ ಸಂಶುದ್ದೀನ್ ಕಲಾಂ ಜೊತೆಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು.

ಅಬ್ದುಲ್ ಕಲಾಂ ಅವರು ಆರಂಭಿಕ ಶಿಕ್ಷಣವನ್ನು ರಾಮನಾಥಪುರಂನ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಮುಗಿಸಿದರು. ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಓದಿದ್ದರು. ೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತçದಲ್ಲಿ ಪದವಿಯನ್ನು ಪಡೆದರು. ಅವರಿಗೆ ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಇತ್ತು. ಹೀಗಾಗಿ ಅವರು ಗಣಿತವನ್ನೇ ಅತೀ ಹೆಚ್ಚು ಸಮಯ ಅಧ್ಯಯನ ಮಾಡುತ್ತಿದ್ದರು.

ವೃತ್ತಿ ಜೀವನ
೧೯೬೦ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)ಯ ವಾಯುಯಾನವಿಜ್ಞಾನ ಅಭಿವೃದ್ಧಿ ವಿಭಾಗದಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್‌ಗಳನ್ನು ವಿನ್ಯಾಸ ಮಾಡುತ್ತಿದ್ದರು.  ನಂತರ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಅಡಿಯಲ್ಲಿದ್ದ ಇನ್ಕೋಸ್ಪಾರ್ ಸಮಿತಿ ಕೆಲಸಕ್ಕೆ ಸೇರಿಕೊಂಡರು. ೧೯೬೯ರಲ್ಲಿ ಕಲಾಂ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ವರ್ಗಾಯಿಸಲಾಯಿತು. ಅಲ್ಲಿ ಅವರು ರೋಹಿಣಿ ಉಪಗ್ರಹವನ್ನು ೧೯೮೦ರಲ್ಲಿ ಭೂಮಿಯ ಕಕ್ಷೆಯನ್ನು ಸೇರಿಸಿದರು. ನಂತರ ಅವರು ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ (ಎಸ್.ಎಲ್.ವಿ-III)ರ ಯೋಜನಾ ನಿರ್ದೇಶಕರಾದರು. ೧೯೮೦ರಲ್ಲಿ ಕಲಾಂ ಅವರು ಪೋಲಾರ್ ಉಪಗ್ರಹ ವಾಹನ (ಪಿ.ಎಸ್.ಎಲ್.ವಿ) ಮತ್ತು ಎಸ್.ಎಲ್.ವಿ-III ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಿದರು. ಕಲಾಂ ಅವರು ಜುಲೈ ೧೯೯೨ರಿಂದ ಡಿಸೆಂಬರ್ ೧೯೯೯ರವರೆಗೆ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಯಾಗಿ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಜುಲೈ೨೫, ೨೦೦೨ ರಂದು ಭಾರತದ ೧೧ನೇ ರಾಷ್ಟçಪತಿಯಾಗಿ ಸೇವೆ ಸಲ್ಲಿಸಿದರು.

ಸಾಹಿತ್ಯ ಕೊಡುಗೆ
ಎಪಿಜಿ ಅಬ್ದುಲ್ ಕಲಾಂ ಅವರು ಸಾಹಿತ್ಯದ ಕಡೆ ಹೆಚ್ಚು ಒಲವು ತೋರಿದ್ದರು. ಇವರು ತಮ್ಮ ಕ್ಷೇತ್ರಕ್ಕೆ ಸಂಬAಧಿಸಿದAತೆ, ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್ ಆಫ್ ಫೈರ್’ ಎಂಬ ಆತ್ಮಕಥೆಯನ್ನು ಬರೆದಿದ್ದಾರೆ. ‘ಇಂಡಿಯಾ ಮೈ ಡ್ರೀಮ್’, ‘ಮೈ ಜರ್ನಿ’, ‘ಟಾರ್ಗೆಟ್ ೩ ಬಿಲಿಯನ್’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಪ್ರಶಸ್ತಿ
೧೯೮೧ರಲ್ಲಿ ಭಾರತ ಸರ್ಕಾರದಿಂದ ಕಲಾಂ ಅವರಿಗೆ ಪದ್ಮಭೂಷಣ ಹಾಗೂ ೧೯೯೦ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ೧೯೯೭ರಲ್ಲಿ ಕಲಾಂ ಅವರಿಗೆ ಭಾರತ ಸರ್ಕಾರದಿಂದ ಭಾರತರತ್ನ ಪ್ರಶಸ್ತಿ ನೀಡಲಾಯಿತು. ೧೯೯೮ರಲ್ಲಿ ಭಾರತ ಸರ್ಕಾರದಿಂದ ವೀರ್ ಸಾವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೪ರಲ್ಲಿ ಎಡಿನ್‌ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಎಂಬ ಗೌರವ ಪ್ರಶಸ್ತಿ ನೀಡಲಾಗಿದೆ.
ಎಪಿಜೆ ಅಬ್ದುಲ್ ಕಲಾಂ ಅವರು ಜುಲೈ ೨೭, ೨೦೧೫ ರಂದು ನಿಧನರಾದರು.

⬅ ಮುಖಪುಟ