ನಮ್ಮನ್ನು ಅನುಸರಿಸಿ: Facebook Twitter Instagram YouTube

ಜೆಮ್ಶೆಡ್ ಜೀ ಟಾಟಾ

ಅಪ್‌ಲೋಡ್ ಮಾಡಿದ ದಿನಾಂಕ: 13-06-2026 08:01

ಜೆಮ್ಶೆಡ್ ಜೀ ಟಾಟಾ

೩ನೇ ಮಾರ್ಚ್ ೧೮೩೯ರಂದು ನವಸಾರಿ ಎಂಬ ಗುಜರಾತಿನ ಪುಟ್ಟ ಗ್ರಾಮದ ಪಾರಸೀ ಪುರೋಹಿತರ ಕುಟುಂಬದಲ್ಲಿ ಜನಿಸಿದ ಮಗು ಜೆಮ್ಶೆಡ್ ಜೀ. ಶಾಲೆಗೆ ಹೋಗಿಯೇ ಕಲಿಯಬೇಕೆಂಬ ಕ್ರಮ ಆಗೆಲ್ಲ ಇರಲಿಲ್ಲ. ಆದರೆ ಅವರ ಹದಿಮೂರನೆ ವಯಸ್ಸಿನಲ್ಲೇ ತಂದೆ ನಸ್ಸೆರ್‌ವಾನ್ಜೀ ಅವರನ್ನು ಮುಂಬೈಗೆ ಕರೆತಂದು ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಶಿಕ್ಷಣಕ್ಕೆ ಏರ್ಪಾಡು ಮಾಡಿದರು. ತೀಕ್ಷ÷್ಣಬುದ್ಧಿಮತ್ತೆಯ ಜೆಮ್ಶೆಡ್ ಜೀ ೧೮೫೮ರಲ್ಲಿಯೇ ಪದವೀಧರರಾದರು.

೧೮೫೯ರ ಹೊತ್ತಿಗೆ ತಂದೆಯವರ ಟ್ರೇಡಿಂಗ್ ಕಂಪನಿಯಲ್ಲಿಯೇ ಕೆಲಸಕ್ಕೆ ಸೇರಿದರು. ಉತ್ತಮ ವಿದ್ಯಾಭ್ಯಾಸದ ತಳಹದಿ, ತೀಕ್ಷ÷್ಣ ಬುಧ್ಧಿ ಮತ್ತು ತಂದೆಯವರ ಮಾರ್ಗದರ್ಶನದಿಂದ ಜೆಮ್ಶೆಡ್ ಜೀ ಬಹುಬೇಗ ವ್ಯಾಪಾರ ಮತ್ತು ಬ್ಯಾಂಕಿAಗ್ ವ್ಯವಹಾರಗಳಲ್ಲಿ ನುರಿತವರಾದರು. ೧೮೬೪ರಲ್ಲಿ ಇಪ್ಪತ್ತೆöÊದರ ಯುವಕ ಜೆಮ್‌ಶೆಡ್ಜಿ ಮೊದಲ ಬಾರಿಗೆ ತಮ್ಮ ಕಂಪನಿಯ ವತಿಯಿಂದಲೇ ಇಂಗ್ಲೆAಡಿನ ಪ್ರವಾಸ ಕೈಗೊಂಡರು. ಅವರ ಸಂಸ್ಥೆ ಅದಾಗಲೇ ಭಾರತದಿಂದ ಹೇರಳ ಪ್ರಮಾಣದಲ್ಲಿ ಹತ್ತಿಯನ್ನು ಇಂಗ್ಲೆAಡಿನ ಲಿವರ್‌ಪೂಲ್‌ನ ಜವಳಿ ಮಿಲ್‌ಗಳಿಗೆ ನಿರ್ಯಾತ ಮಾಡುತ್ತಿತ್ತು. ಈ ಪ್ರವಾಸದಲ್ಲಿ ಮ್ಯಾನ್‌ಚೆಸ್ಟರ್ ಮತ್ತು ಲ್ಯಾಂಕಶೈರ್ ನಗರಗಳಲ್ಲಿನ ಹತ್ತಿ ಮಿಲ್ಲುಗಳ ಅಧ್ಯಯನ ಮಾಡುವ ಅವಕಾಶ ದೊರಕಿತು. ಸುಮಾರು ಹತ್ತು ವರ್ಷಗಳ ಕಾಲ ಆ ಉದ್ಯಮದ ಎಲ್ಲ ಮುಖಗಳನ್ನು ಪರಿಚಯಿಸಿಕೊಂಡ ಜೆಮ್‌ಶೆಡ್ಜಿ ಭಾರತಕ್ಕೆ ಹಿಂತಿರುಗಿದರು. ಅದುವರೆಗೂ ಕೇವಲ ಬ್ರಿಟಿಷರ ಹತೋಟಿಯಲ್ಲಿದ್ದ ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡ ಮೊದಲ ಭಾರತೀಯರಾದರು. ಆದರೆ ಹೊಸ ಕಾರ್ಖಾನೆಯನ್ನು ಮುಂಬೈನಲ್ಲಿ ಸ್ಥಾಪಿಸದೆ, ಮಹಾರಾಷ್ಟçದ ಹತ್ತಿ ಬೆಳೆಯ ಕೇಂದ್ರವಾದ ನಾಗಪುರದಲ್ಲೇ ಸ್ಥಾಪಿಸಿದರು. ೧೮೭೪ರಲ್ಲಿ ಒಂದೂವರೆ ಲಕ್ಷ ರೂಪಾಯಿನ ಬಂಡವಾಳದಿAದ ಸೆಂಟ್ರಲ್ ಇಂಡಿಯಾ ಸ್ಪಿನ್ನಿಂಗ್ ವೀವಿಂಗ್ ಅಂಡ್ ಮ್ಯಾನುಫಾಕ್ಚರಿಂಗ್ ಕಂಪನಿ ಅಸ್ತಿತ್ವಕ್ಕೆ ಬಂದಿತು. ಬ್ರಿಟಿಷ್ ಆಡಳಿತದ ಭಾರತ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಯಾವ ರೀತಿಯ ಕಾನೂನು ನಿಯಮ ನಿರ್ಬಂಧಗಳನ್ನು ವಿಧಿಸದಿದ್ದಾಗಲೂ ಜೆಮ್‌ಶೆಡ್ಜಿ ತಮ್ಮ ಮಿಲ್‌ನಲ್ಲಿ ಸ್ವಪ್ರೇರಣೆಯಿಂದ ಕಾರ್ಮಿಕರ ಪರವಾದ ಅನೇಕ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು.
ಅಪ್ರತಿಮ ದೇಶಭಕ್ತರಾದ ಜೆಮ್‌ಶೆಡ್ಜಿಗೆ ದಾದಾಭಾಯ್ ನವರೋಜಿ, ಫಿರೋಜ್‌ಶಾ ಮೆಹ್ತಾರಂತಹ ಸ್ವತಂತ್ರ ಸೇನಾನಿಗಳ ನಿಕಟ ಸಂಪರ್ಕವಿತ್ತು. ಇದರ ಜೊತೆಗೇ ಅವರಿಗೆ ಭಾರತದ ಪ್ರಜೆಗಳು ನಿಜವಾಗಿಯೂ ಸ್ವತಂತ್ರರಾಗಬೇಕಾದರೆ ರಾಜಕೀಯ ಸ್ವಾತಂತ್ರದೊಡನೆಯೇ ಅರ್ಥಿಕ ಸ್ವಾಯತ್ತತೆ ಬಹಳ ಮುಖ್ಯ ಎಂಬ ಸ್ಪಷ್ಟ ಅರಿವಿತ್ತು. ಆದ್ದರಿಂದ ಅವರು ಎಲ್ಲೇ ಪ್ರಯಾಣ ಮಾಡಲಿ ಯಾರನ್ನೇ ಭೇಟಿಯಾಗಲಿ ಸದಾಕಾಲ ಆಧುನಿಕ ಭಾರತದ ಕನಸು ಕಾಣುವುದೇ ಪರಿಪಾಠವಾಗಿತ್ತು. 

ಭಾರತಕ್ಕಾಗಿ ಅವರು ಕಂಡ ಕೆಲ ಮಹತ್ತರ ಕನಸುಗಳು:
•ಭಾರತ ಉನ್ನತ ಶ್ರೇಣಿಯ ರಾಷ್ಟçವೆನಿಸಿಕೊಳ್ಳಬೇಕಾದರೆ ಅಧುನಿಕ ಉಕ್ಕಿನ ಉದ್ಯಮ ಸ್ಥಾಪಿಸಬೇಕು. ಉಕ್ಕು ರಾಷ್ಟ್ರದ ಬೆನ್ನೆಲುಬಾಗಬೇಕು. 
•ವಿಜ್ಞಾನ ಮತ್ತು ತಂತ್ರಜ್ಞಾನಗಳ ಕ್ಷೇತ್ರದ ಮೂಲಭೂತ ಸಂಶೋಧನೆಯನ್ನು ಮುಕ್ತ ವಾತಾವರಣದಲ್ಲಿ ನಡೆಸಲು ಸಾಧ್ಯವಾಗುವಂತಹ ವಿಶ್ವಸ್ತರದ ಸಂಸ್ಥೆಯನ್ನು ಭಾರತದಲ್ಲಿ ಸ್ಥಾಪಿಸಬೇಕು. 
•ಭಾರತದಲ್ಲಿ ಒಂದು ಹೈಡ್ರೋ ಎಲೆಕ್ಟಿçಕ್ ವಿದ್ಯುತ್ ಸ್ಥಾವರ ಸ್ಥಾಪಿಸಬೇಕು.

ತಮ್ಮ ಹತ್ತಿ ವ್ಯಾಪಾರದ ನಿಮಿತ್ತ ಪ್ರಯಾಣ ಮಾಡುತ್ತಿದ್ದ ಜೆಮ್‌ಶೆಡ್ಜಿ ಒಮ್ಮೆ ಮ್ಯಾನ್‌ಚೆಸ್ಟರ್‌ಗೆ ಭೇಟಿಯಿತ್ತಾಗ ಅಲ್ಲಿ ಸ್ಕಾಟ್ಲೆಂಡಿನ ಪ್ರಖ್ಯಾತ ಲೇಖಕ ಥಾಮಸ್ ಕಾರ್ಲೈಲ್‌ನ ಭಾಷಣ ಕೇಳುವ ಅವಕಾಶ ದೊರಕಿತು. ಭಾಷಣದಲ್ಲಿ ಒಂದು ವಾಕ್ಯ “the nation which gains control of iron soon acquires the control of gold”  ಅವರ ಮನಸ್ಸಿಗೆ ನಾಟಿತು. ಭಾರತದಲ್ಲಿ ಒಂದು ಆಧುನಿಕ ಉಕ್ಕು ಉತ್ಪಾದನಾ ಸ್ಥಾವರ ಸ್ಥಾಪಿಸಬೇಕು ಎನ್ನುವ ಆಸೆ ಅವರ ಮನದಲ್ಲಿ ಮೊಳೆಯತೊಡಗಿತು. ಈ ಆಸೆ ಮುಂದಿನ ಇಪ್ಪತ್ತೊಂದು ವರ್ಷಗಳ ಕಾಲ ಮತ್ತಷ್ಟು ಪ್ರಬಲವಾಗಿ ಮುಂದೆ ಭಾರತದ ಸರ್ವ ಪ್ರಥಮ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮೂಲವಾಯಿತು.

೧೮೯೮ರಲ್ಲಿ ಜಪಾನಿನಿಂದ ಅಮೇರಿಕಕ್ಕೆ ಹೋಗುತ್ತಿದ್ದ ಹಡಗಿನಲ್ಲಿ ಜಮ್ಶೆಡ್ಜಿಯವರಿಗೆ ಅದೇ ಹಡಗಿನಲ್ಲಿ ಶಿಕಾಗೋ ಸರ್ವಧರ್ಮ ಸಮ್ಮೇಳನಕ್ಕಾಗಿ ಹೋಗುತ್ತಿದ್ದ ಸ್ವಾಮಿ ವಿವೇಕಾನಂದರ ಪರಿಚಯವಾಯಿತು. ಜಮ್ಶೆಡ್ಜಿಯವರು ಭಾರತದಲ್ಲಿ ತಮ್ಮ ಉಕ್ಕಿನ ಕಾರ್ಖಾನೆಯ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರದ ಕನಸುಗಳ ಬುತ್ತಿ ಬಿಚ್ಚಿಟ್ಟರು. ಸ್ವಾಮಿ ವಿವೇಕಾನಂದರು ಅವರ ಪ್ರಯತ್ನವನ್ನು ಹರಸಿ ಅವರ ಪ್ರಯತ್ನಕ್ಕಾಗಿ ಶುಭ ಕೋರಿದರು. ಆಮೇಲೆ ೧೮೯೮ರಲ್ಲಿ ಜೆಮ್‌ಶೆಡ್ಜಿ ತಮ್ಮ ಸ್ವಂತ ಆಸ್ತಿಯಿಂದ ೩೦ ಲಕ್ಷ ರೂಪಾಯಿಗಳನ್ನು ಇಂತಹ ಸಂಸ್ಥೆಗಾಗಿ ಮುಡಿಪಾಗಿಟ್ಟರು. ಜಮ್ಶೆಡ್ಜಿಯವರು ಮೈಸೂರು ಸಿಲ್ಕ್ ಉದ್ಯಮದ ಬೆಳವಣಿಗೆಗಾಗಿ ಶ್ರಮಿಸಿ ೧೯೦೨ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಟಾಟಾ ಸಿಲ್ಕ್ ಫಾರ್ಮ್ ಸ್ಥಾಪಿಸಿ ಎಂಟು ವರ್ಷಗಳ ಕಾಲ ನಡೆಸಿ ಮೈಸೂರು ಸಂಸ್ಥಾನಕ್ಕೆ ಬಿಟ್ಟುಕೊಟ್ಟದ್ದು ಇಂದಿನ ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮುನ್ನವೇ ಜೆಮ್‌ಶೆಡ್ಜಿಯವರು ತಮ್ಮ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಬೇರೆಡೆಗಿಂತ ಕಡಿಮೆ ಕಾರ್ಯದ ಸಮಯ, ಗಾಳಿ ಬೆಳಕಿರುವ ಆರೋಗ್ಯಕರ ಕಾರ್ಯ ಪರಿಸರ, ಕಾರ್ಮಿಕರಿಗಾಗಿ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚುಟಿಯಂತಹ ಸವಲತ್ತುಗಳನ್ನು ತಮ್ಮ ಕಾರ್ಖಾನೆಯ ಕಾರ್ಮಿಕರಿಗೆ ಆಗಿನ ಕಾಲದಲ್ಲಿಯೇ ಕೊಡುವ ವ್ಯವಸ್ಥೆ ಮಾಡಿದ್ದರು. 

ಜೆ.ಆರ್.ಡಿ ಟಾಟಾ ರವರ ಕಾಲದಲ್ಲಿ ಜಮ್ಷೆಡ್ಜಿಯವರ ಇಚ್ಛೆಯಂತೆ ಜಮ್ಷೆಡ್ಪುರ್ ಒಂದು ಸುಂದರ ಔದ್ಯೋಗಿಕ ನಗರವಾಗಿ ರೂಪುಗೊಂಡಿದೆ.
೧೯೦೦ರಲ್ಲಿ ಜರ್ಮನಿಯಲ್ಲಿ ವ್ಯಾಪಾರ ಪ್ರವಾಸದ ಸಂದರ್ಭದಲ್ಲಿ, ಟಾಟಾ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾದರು. ೧೯೦೪ರ ಮೇ ೧೯ ರಂದು ಜರ್ಮನಿಯಲ್ಲೇ ದಿವಂಗತರಾದರು. ತಾವು ಸಂಪಾದಿಸಿದ ಅಪಾರ ಸಂಪತ್ತನ್ನು ಭಾರತದ ನಾಗರಿಕರ ಕಲ್ಯಾಣಕ್ಕಾಗಿ ನೀರಿನಂತೆ ಖರ್ಚು ಮಾಡಿದ ತ್ಯಾಗಜೀವಿ ಜೆಮ್‌ಶೆಡ್ಜಿ ಟಾಟಾ. ಅವರ ಪ್ರತಿಯೊಂದು ಕೆಲಸದಲ್ಲೂ ಭಾರತೀಯರ ಸ್ವಾಭಿಮಾನದ ಕಿಡಿಯನ್ನು ಗುರುತಿಸಿದ ಬ್ರಿಟಿಷರು ಅವರಿಗೆ ಯಾವ ಬಿರುದುಗಳನ್ನೂ ಕೊಡಲಿಲ್ಲವೆಂಬ ಸಂಗತಿಯೇ ಜೆಮ್‌ಶೆಡ್ಜಿ ಯವರ ಸಾಧನೆಗೆ ಹಿಡಿದ ಕನ್ನಡಿ. 

ದೇಶ ಸ್ವಾತಂತ್ರ‍್ಯ ಹೋರಾಟದಲ್ಲಿ ತಲ್ಲೀನವಾಗಿದ್ದ ಕಾಲದಲ್ಲಿ ಸ್ವಾತಂತ್ರ‍್ಯ ಗಳಿಸುವುದಷ್ಟೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದನ್ನು ಮೌನವಾಗಿಯೇ ಚಿಂತಿಸಿ ಭವಿಷ್ಯದ ಭಾರತದ ಅಗತ್ಯಗಳನ್ನು ಅಂದೇ ಮನಗಂಡ ದ್ರಷ್ಟಾರರಾಗಿ ಅವುಗಳ ಪೂರೈಕೆಗೆ ಮೊದಲುಮಾಡಿದರು.  ವ್ಯಾಪಾರ ಎಂಬುದು ಅವರ ಪಾಲಿಗೆ ಸ್ವಾವಲಂಬನೆಯ ಒಂದು ಹಾದಿ ಮತ್ತು ಜನಸೇವೆಯ ಒಂದು ಮಾರ್ಗವಾಗಿತ್ತು.

⬅ ಮುಖಪುಟ