ನಮ್ಮನ್ನು ಅನುಸರಿಸಿ: Facebook Twitter Instagram YouTube

ಗೋವಾ ವಿಮೋಚನಾ ದಿನ – ಡಿಸೆಂಬರ್ ೧೯

ಅಪ್‌ಲೋಡ್ ಮಾಡಿದ ದಿನಾಂಕ: 12-06-2026 07:39

ಗೋವಾ ವಿಮೋಚನಾ ದಿನ – ಡಿಸೆಂಬರ್ ೧೯
ಗೋವಾ ವಿಮೋಚನೆಯು ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು. ಪೋರ್ಚುಗೀಸರ ಪ್ರಭುತ್ವದಲ್ಲಿದ್ದ ಗೋವಾವನ್ನು ಭಾರತೀಯ ನೌಕಾಪಡೆಯ ಸಾಹಸದೊಂದಿಗೆ ಬಿಡುಗಡೆಗೊಳಿಸಿದ ದಿನ. ಹೀಗಾಗಿ ಪ್ರತಿ ವರ್ಷ ಈ ಶೌರ್ಯ ಮೆರೆದ ದಿನದ ಸ್ಮರಣೆಗಾಗಿ ಡಿಸೆಂಬರ್ ೧೯ ರಂದು ಗೋವಾ ವಿಮೋಚನೆ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತವು ಪೋರ್ಚುಗೀಸ್ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆದ ನಂತರ ಗೋವಾ ಸ್ವತಂತ್ರವಾಗಲು ೧೪ ವರ್ಷಗಳನ್ನು ತೆಗೆದುಕೊಂಡಿತು. ೧೯೪೬ರ ಜೂನ್ ೧೮ರಂದು ಡಾ.ರಾಮ್ ಮನೋಹರ್ ಲೋಹಿಯಾ ಅವರು ಗೋವಾ ವಿಮೋಚನಾ ಚಳುವಳಿಯ ನೇತೃತ್ವವಹಿಸಿದರು. ಸ್ವಾತಂತ್ರ‍್ಯ ನಂತರವೂ ವಿದೇಶಿಗರ ಕಪಿಮುಷ್ಟಿಯಲ್ಲಿದ್ದ ಗೋವಾವನ್ನು ಹಲವು ಹಂತದ ಸಂಧಿ ಮಾತುಕತೆಗಳ ಮೂಲಕ, ಪ್ರತಿಭಟನೆ, ಹೋರಾಟಗಳ ಮೂಲಕ ಸ್ವದೇಶಕ್ಕೆ ಮರಳಿ ಸೇರಿಸಿಕೊಳ್ಳುವ ಪ್ರಯತ್ನಗಳು ನಡೆದವು. ಡಿಸೆಂಬರ್ ೧೯, ೧೯೬೧ರಂದು ಸಶಸ್ತç ಪಡೆಗಳ ಶೌರ್ಯದ ಕಾರಣ ಪೋರ್ಚುಗೀಸರು ಶರಣಾಗಿದ್ದು, ರಾಜ್ಯವನ್ನು ಮುಕ್ತಗೊಳಿಸಲಾಯಿತು. ಇದರ ಪರಿಣಾಮವಾಗಿ, ಗೋವಾ, ದಮನ್ ಮತ್ತು ದಿಯು ಭಾರತದ ಕೇಂದ್ರಾಡಳಿತ ಪ್ರದೇಶಗಳಾದವು. ಗೋವಾ ೧೯೮೭ ರವರೆಗೆ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯಿತು. ನಂತರ ಭಾರತದ ೨೫ನೇ ರಾಜ್ಯವಾಗುವ ಮೂಲಕ ಗೋವಾಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡಲಾಯಿತು.
ಗೋವಾ ಸ್ವಾತಂತ್ರ‍್ಯ ಹೋರಾಟ: ಬ್ರಿಟಿಷರು ಭಾರತ ಬಿಟ್ಟು ಹೋದರೂ ಪೋರ್ಚುಗೀಸರು ಭಾರತ ಬಿಡಲಿಲ್ಲ. ಗೋವಾದಿಂದ ಪೋರ್ಚುಗೀಸರನ್ನು ಅವರ ಮಾತೃ ದೇಶಕ್ಕೆ ಕಳುಹಿಸಲು ಸಾಕಷ್ಟು ಹೋರಾಟಗಳು ನಡೆದಿದ್ದವು. ದಮನ್ ದಿಯು, ಅಂಜದೀಪ್ ಪ್ರದೇಶಗಳೂ ಇವರ ವಶದಲ್ಲಿತ್ತು. ಭಾರತಕ್ಕೆ ಸ್ವಾತಂತ್ರ‍್ಯ ದೊರಕಿದ ಬಳಿಕ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರು ಪೋರ್ಚುಗಲ್ ಜತೆ ಹಲವು ಸಂಧಾನ ಸಭೆಗಳನ್ನು ನಡೆಸಿದ್ದರು. ಆದರೆ, ಪೋರ್ಚುಗೀಸರು ಇಂತಹ ಸಭೆಗಳಿಗೆ ಮಣಿಯಲಿಲ್ಲ. ಅಂತಿಮವಾಗಿ ಮಿಲಿಟರಿ ಕಾರ್ಯಾಚರಣೆ ಮೂಲಕ ಗೋವಾವನ್ನು ವಶಪಡಿಸಿಕೊಳ್ಳಲು ಭಾರತ ಮುಂದಾಯಿತು.
ಆಪರೇಷನ್ ವಿಜಯ್: ಗೋವಾದಲ್ಲಿ ಪೋರ್ಚುಗೀಸರ ಸೇನೆಯಲ್ಲಿ ೩,೩೦೦ ಸೈನಿಕರಿದ್ದರು. ಪೋರ್ಚುಗೀಸರ ವಿರುದ್ಧ ಭಾರತ ಆಪರೇಷನ್ ವಿಜಯ್ ನಡೆಸಿತ್ತು. ಭೂಸೇನೆ, ನೌಕಾಪಡೆ, ವಾಯುಪಡೆ ಒಟ್ಟಾಗಿ ಗೋವಾದಲ್ಲಿದ್ದ ಪೋರ್ಚುಗೀಸರ ವಿರುದ್ಧ ಯುದ್ಧ ಸಾರಿತ್ತು. ಭಾರತದ ಸೇನೆಯನ್ನು ಎದುರಿಸುವ ಸೇನಾ ಶಕ್ತಿ ಅವರಿಗೆ ಇರಲಿಲ್ಲ. ನಂತರ ಗವರ್ನರ್ ಜನರಲ್ ಮ್ಯಾನುಯಲ್ ಆಂಟೋನಿಯೋ ವಾಸಲೋ-ಇ-ಸಿಲ್ವಾ ಅವರು ಭಾರತಕ್ಕೆ ಶರಣಾದರು. ಡಿಸೆಂಬರ್ ೧೮ರಂದು ಪೋರ್ಚುಗೀಸ್ ಧ್ವಜವನ್ನು ಇಳಿಸಿ ಶಾಂತಿಯ ಕುರುಹಾಗಿ ಬಿಳಿ ಬಾವುಟ ಹಾರಿಸಲಾಯಿತು. ಮರುದಿನ ಅಂದರೆ, ಡಿಸೆಂಬರ್ ೧೯ರಂದು ಭಾರತದ ರಾಧ್ವಜವನ್ನು ಹಾರಿಸಿ ಗೋವಾವನ್ನು ಅಧಿಕೃತವಾಗಿ ಭಾರತಕ್ಕೆ ಸೇರಿಸಲಾಯಿತು.
ಗೋವಾ ವಿಮೋಚನೆಯಲ್ಲಿ ಆರ್ ಎಸ್ ಎಸ್ ಪಾತ್ರ: ಜೂನ್ ೧೩, ೧೯೫೫ ರಂದು, ಕರ್ನಾಟಕದ ಆರ್‌ಎಸ್‌ಎಸ್ ಸ್ವಯಂಸೇವಕರೊAದಿಗೆ ಭಾರತೀಯ ಜನಸಂಘದ ನಾಯಕ ಜಗನ್ನಾಥ ರಾವ್ ಜೋಶಿ ಗೋವಾ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಜೋಶಿ ಅವರೊಂದಿಗೆ ಮಹಿಳೆಯರು ಸೇರಿದಂತೆ ಸುಮಾರು ೩,೦೦೦ ಕಾರ್ಮಿಕರ ತಂಡವಿತ್ತು. ಆಗಸ್ಟ್ ೧೫, ೧೯೫೫ ರಂದು, ಗೋವಾದಲ್ಲಿ ನಿಯೋಜಿಸಲಾಗಿದ್ದ ಪೋರ್ಚುಗೀಸ್ ಸೇನೆಯು ೫,೦೦೦ ಕ್ಕೂ ಹೆಚ್ಚು ಸತ್ಯಾಗ್ರಹಿಗಳ ಮೇಲೆ ಗುಂಡಿನ ದಾಳಿ ನಡೆಸಿತು, ಸುಮಾರು ೫೧ ಜನರನ್ನು ಕೊಂದಿತು. ಇಂತಹ ಅನೇಕ ಚಳುವಳಿಗಳು ೧೯೬೧ ರವರೆಗೆ ಮುಂದುವರೆಯಿತು. ಸಂಗೀತಗಾರ ಮತ್ತು ಗೋವಾ ಚಳವಳಿಯ ಸ್ವಯಂಸೇವಕ ಸುಧೀರ್ ಫಡೈ 'ಬಾಬೂಜಿ' ಸಾಂಸ್ಕೃತಿಕ ನೆಲೆಯಲ್ಲಿ ಸಹಾಯ ಮಾಡಿದರು. ರಾಷ್ಟç ಸೇವಿಕಾ ಸಮಿತಿಯು ಸರಸ್ವತಿ ಆಷ್ಟೆ 'ತಾಯಿ' ನೇತೃತ್ವದ ತಂಡ ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿತು ಮತ್ತು ಪುಣೆಯಲ್ಲಿ ಒಟ್ಟುಗೂಡಿದ ಎಲ್ಲಾ ಸತ್ಯಾಗ್ರಹಿ ಗುಂಪುಗಳಿಗೆ ಆಹಾರ ಇತ್ಯಾದಿಗಳನ್ನು ಏರ್ಪಡಿಸಿತು. ಜನಸಂಘದ ಸತ್ಯಾಗ್ರಹಿಗಳ ಸಂಖ್ಯೆಯು ಇತರ ಎಲ್ಲಾ ಪಕ್ಷಗಳ ಸಂಯೋಜಿತ ಪ್ರತಿಭಟನಾಕಾರರ ಸಂಖ್ಯೆಗಿAತ ಸುಮಾರು ನಾಲ್ಕು ಪಟ್ಟು ಹೆಚ್ಚು ಪಾಲ್ಗೊಂಡಿತ್ತು ಎನ್ನುವುದನ್ನು ಹಲವು ದಾಖಲೆಗಳು ತಿಳಿಸುತ್ತವೆ.
ಯುದ್ಧ ಸ್ಮಾರಕ: ಕಾರ್ಯಾಚರಣೆ ಪ್ರಾರಂಭವಾಗಿ ಮೂರು ದಿನಗಳ ನಂತರ ಗೋವಾ ಭಾರತದ ವಶವಾಯಿತು. ಕೇವಲ ೩೬ ಗಂಟೆಗಳ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ಭಾರತದ ಸುಮಾರು ೨೨ ಸೈನಿಕರು ಹುತಾತ್ಮರಾಗಿದ್ದರು. ಕೆಲವು ಸಿಬ್ಬಂದಿಗಳೂ ಬಲಿದಾನ ಗೈದಿದ್ದಾರೆ. ಇವರ ಸ್ಮರಣೆಗಾಗಿ ಗೋವಾದಲ್ಲಿ ಯುದ್ಧ ಸ್ಮಾರಕ ರಚಿಸಲಾಗಿದೆ. ಇಂದು ಗೋವಾ ವಿಮೋಚನೆಗಾಗಿ ಬಲಿದಾನಗೈದ ಎಲ್ಲರಿಗೂ ಇಲ್ಲಿ ಗೌರವ ನಮನ ಸಲ್ಲಿಸಲಾಗುತ್ತದೆ.

⬅ ಮುಖಪುಟ