ಸುಭದ್ರ ಭಾರತಕ್ಕಾಗಿ ಟೊಂಕಕಟ್ಟಿ ನಿಂತವರಲ್ಲಿ ಸೇನೆ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಭೌಗೋಳಿಕವಾಗಿ ಮೂರು ಕಡೆಗಳಲ್ಲಿ ಸಮುದ್ರವನ್ನು ಹೊಂದಿರುವ ಭಾರತವನ್ನು ಜಲಗಡಿಗಳಿಂದ ಎದುರಾಗಬಹುದಾದ ಸಮಸ್ಯೆಗಳನ್ನು, ಸವಾಲುಗಳನ್ನು ನಿವಾರಿಸುವಲ್ಲಿ ತನ್ನನ್ನೇ ಸಮರ್ಪಿಸಿಕೊಂಡಿರುವುದು ನೌಕಾ ಸೇನೆ.
ಭಾರತೀಯ ನೌಕಾಪಡೆಯು ಭಾರತೀಯ ರಕ್ಷಣೆ ಪಡೆಗಳ ಒಂದು ಅಂಗವಾಗಿದೆ. ಅದರಲ್ಲೂ ನಮ್ಮ ನೌಕಾಪಡೆ ಜಗತ್ತಿನ ಐದನೆಯ ಅತಿದೊಡ್ಡ ನೌಕಾಪಡೆಯಾಗಿದೆ. ಭಾರತೀಯ ನೌಕಾಪಡೆ ೧೫೫ ನೌಕೆಗಳನ್ನು ಹೊಂದಿದ್ದು, ಬಲಿಷ್ಠವಾದ ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು. ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ನೌಕಾ ಕಮಾಂಡೋಗಳಿದ್ದಾರೆ. ಪ್ರಪಂಚದ ವಿವಿಧ ದೇಶಗಳು ಭಾರತದ ನೌಕಾಪಡೆಯ ಶಕ್ತಿ ಪ್ರದರ್ಶನವನ್ನು ನೋಡಿ ಕೈ ಮೇಲೆ ಬೆರಳಿಟ್ಟು ಕುಳಿತುಕೊಳ್ಳುತ್ತವೆ.
ಬಹುತೇಕರಿಗೆ ನೆನಪಿರುವಂತೆ ಸರಿಯಾಗಿ ೫೨ ವರ್ಷಗಳ ಹಿಂದೆ ಇಂಡೋ- ಪಾಕ್ ಯುದ್ಧದ ಸಂದರ್ಭದಲ್ಲಿ ಕೊನೆಕೊನೆಗೆ ಪಾಕಿಸ್ತಾನವು ಸೋಲಿನ ಭೀತಿ ಅನುಭವಿಸಿತು. ಸೋಲಿನಿಂದ ಹತಾಶರಾಗಿದ್ದ ಪಾಕಿಗಳು ಭಾರತದ ಮೇಲೆ ಹೇಗಾದರೂ ಹಿಮ್ಮೆಟ್ಟಿಸಬೇಕು ಎಂದು ನಿರ್ಧರಿಸಿ ತನ್ನ ಕೆಟ್ಟ ಚಾಳಿಯಿಂದ ಒಂದು ಕಳ್ಳ ದಾರಿಯನ್ನು ಹಿಡಿಯಿತು. ಅದೇನೆಂದರೆ ೧೯೭೧ರ ಡಿಸೆಂಬರ್ ಮೂರರ ಸಂಜೆ ಇದ್ದಕ್ಕಿದ್ದಂತೆ ಭಾರತೀಯ ವಾಯು ನೆಲೆಗಳ ಮೇಲೆ ಆಕ್ರಮಣ ಪ್ರಾರಂಭಿಸಿತು. ಅದಕ್ಕೆಲ್ಲ ಕ್ಯಾರೆ ಎನ್ನದ ಭಾರತವು ಸ್ವಲ್ಪವೂ ವಿಚಲಿತವಾಗದೆ ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರವಾಗಿ ನಿರ್ಘಾಟ್, ವೀರ್ ಮತ್ತು ನಿಪತ್ ಎನ್ನುವ ಮೂರು ಕ್ಷಿಪಣಿ ದೋಣಿಗಳನ್ನು ಕರಾಚಿ ಕಡೆಗೆ ರವಾನಿಸಿತು. ಅಷ್ಟೇ ಅಲ್ಲದೆ ಆಪರೇಷನ್ ಟ್ರೆöÊಡೆಂಟ್ ಸಮಯದಲ್ಲಿ ಭಾರತೀಯ ನೌಕಾಪಡೆಯು PಓS ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಹಿಂದು ಮುಂದು ನೋಡದೆ ಮುಳುಗಿಸಿ ಗಹಗಹಿಸಿತು. ಜತೆಗೆ ನೂರಾರು ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿಗಳನ್ನು ಕೊಂದು ಹಾಕಲಾಯಿತು. ಅಲ್ಲಿಗೆ ಪಾಕಿಗಳ ಸೊಕ್ಕು ನೆಲ ಕಚ್ಚಿತು. ಭಾರತದ ನೌಕಾಪಡೆಯ ಅಂದಿನ ಮಹತ್ವದ ಸಾಧನೆಯನ್ನು ಭಾರತೀಯರು ನೆನಪಿಸಿಕೊಳ್ಳಬೇಕು ಎಂಬ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ ನಾಲ್ಕರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತಿದೆ. ೧೯೭೧ರ ಆಪರೇಷನ್ ಟ್ರೆöÊಡೆಂಟ್ ಸಾಹಸವು ಈ ಕ್ಷಣಕ್ಕೂ ರೋಮಾಂಚನವನ್ನು ಉಂಟು ಮಾಡುತ್ತದೆ.
ಭಾರತೀಯ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ
ಈ ನೆಲದ ಸಾಹಸಿ ಮಹಾರಾಜ ಶಿವಾಜಿ ಭಾರತೀಯ ನೌಕಾಪಡೆಯ ಪಿತಾಮಹ. ಇತ್ತೀಚಿಗಷ್ಟೇ ನೌಕಾಪಡೆಯ ಧ್ವಜದಲ್ಲಿ ಶಿವಾಜಿ ಮಹಾರಾಜರ ರಾಜ ಮುದ್ರೆಯನ್ನು ಹಾಕಲಾಗಿದೆ. ಅಷ್ಟಕ್ಕೂ ದೇಶಕ್ಕೆ ಸ್ವಾತಂತ್ರö್ಯ ಲಭಿಸುವವರೆಗೂ ಸೇಂಟ್ ಜಾರ್ಜ್ ಕ್ರಾಸ್ ಎನ್ನಲಾಗುವ ಕೆಂಪು ಬಣ್ಣದ ಪ್ಲಸ್ ಆಕಾರದ ಒಂದು ಮೂಲೆಯಲ್ಲಿ ಬ್ರಿಟನ್ ಧ್ವಜವನ್ನು ಅಳವಡಿಸಲಾಗಿತ್ತು. ೧೯೫೦ರಲ್ಲಿ ಯೂನಿಯನ್ ಜಾಕ್ ಸ್ಥಳದಲ್ಲಿ ಭಾರತದ ರಾಷ್ಟçಧ್ವಜವನ್ನು ನೌಕಾಪಡೆಗೆ ಅಳವಡಿಸಿದರು. ಮತ್ತೆ ೨೦೦೧ರಲ್ಲಿ ತ್ರಿವರ್ಣ ಧ್ವಜವನ್ನು ಉಳಿಸಿಕೊಂಡು ಸೇಂಟ್ ಜಾರ್ಜ್ ಕ್ರಾಸ್ ತೆಗೆಯಲಾಯಿತು. ಒಂದು ಕಡೆಗೆ ನೌಕಾದಳದ ಲಾಂಛನವನ್ನು ಅಳವಡಿಸಲಾಯಿತು. ೨೦೦೪ರಲ್ಲಿ ಮತ್ತೆ ಹಿಂದಿನ ಸ್ಥಿತಿಗೆ ಧ್ವಜದ ಸ್ವರೂಪ ಬದಲಾಯಿತು. ಆದರೆ ಇದೀಗ ಮತ್ತೆ ನೌಕಾದಳದ ಲಾಂಛನವನ್ನು ಸೇರ್ಪಡೆ ಮಾಡಿ ಸೇಂಟ್ ಜಾರ್ಜ್ ಕ್ರಾಸ್ ಅನ್ನು ತೆಗೆದುಹಾಕಲಾಗಿದೆ. ಈಗ ಹೊಸ ಧ್ವಜದಲ್ಲಿ ಒಂದು ಮೂಲೆಯಲ್ಲಿ ತ್ರಿವರ್ಣ ಧ್ವಜವಿದ್ದರೆ ಮತ್ತೊಂದು ಮೂಲೆಯಲ್ಲಿ ನೌಕಾದಳದ ಲಾಂಛನವಿದೆ. ಇದರಲ್ಲೂ ಬದಲಾವಣೆ ಮಾಡಲಾಗಿದ್ದು, ಹಿನ್ನೆಲೆ ಬಣ್ಣವಾಗಿ ನೆವಿ ಬ್ಲೂ ಬಳಸಲಾಗಿದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಈ ಭಾಗದ ಆಕಾರವನ್ನು ಅಷ್ಟಕೋನವಾಗಿ ರೂಪಿಸಲಾಗಿದೆ. ಅಷ್ಟಕೋನ ಎನ್ನುವುದು, ಅಷ್ಟ ದಿಕ್ಕುಗಳಲ್ಲೂ ಸಮುದ್ರವನ್ನು ಕಾಯುವ ಸಂಕಲ್ಪವನ್ನು ಮೂಡಿಸುತ್ತದೆ. ವಿಶೇಷವೆಂದರೆ ಛತ್ರಪತಿ ಶಿವಾಜಿ ಮಹಾರಾಜದ ರಾಜಮುದ್ರೆಯೂ ಇದೇ ಅಷ್ಟಕೋನಾಕಾರವನ್ನು ಹೊಂದಿತ್ತು. ಶಿವಾಜಿ ಮಹಾರಾಜರ ಶೌರ್ಯ ಮತ್ತು ಸಾಧನೆಗಳನ್ನು ನೆನಪು ಮಾಡಿಕೊಂಡು ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಧ್ವಜದಲ್ಲಿ ಶಿವಾಜಿ ಮಹಾರಾಜರ ರಾಜ ಮುದ್ರೆಯನ್ನು ಸೇರಿಸಲಾಗಿದೆ. ಅಂದು ಭಾರತದ ನೌಕಾಪಡೆಯ ಆತ್ಮಬಲವನ್ನು ಹೆಚ್ಚಿಸಿದ್ದ ಶಿವಾಜಿ ಮಹಾರಾಜರು, ಇಂದು ಮತ್ತೊಮ್ಮೆ ಪ್ರೇರಣಾ ಸ್ರೋತವಾಗಿ ಆತ್ಮನಿರ್ಭರ ನೌಕೆಯನ್ನು ರೂಪಿಸುವುದಕ್ಕೆ ಸ್ಪೂರ್ತಿಯಾಗಿ ನಿಲ್ಲುವರು.