ನಮ್ಮನ್ನು ಅನುಸರಿಸಿ: Facebook Twitter Instagram YouTube

ಶ್ರೀ ರತನ್ ಟಾಟಾ (೨೮ ಡಿಸೆಂಬರ್ ೧೯೩೭ – ೯ ಅಕ್ಟೋಬರ್ ೨೦೨೪)

ಅಪ್‌ಲೋಡ್ ಮಾಡಿದ ದಿನಾಂಕ: 12-06-2026 06:04

ಶ್ರೀ ರತನ್ ಟಾಟಾ (೨೮ ಡಿಸೆಂಬರ್ ೧೯೩೭ – ೯ ಅಕ್ಟೋಬರ್ ೨೦೨೪)
ರತನ್ ಟಾಟಾ ಅವರು, ೧೯೩೭ರ ಡಿಸೆಂಬರ್ ೨೮ರಂದು ಮುಂಬೈಯಲ್ಲಿ ಜನಿಸಿದರು. ತಂದೆ, ನಾವಲ್ ಟಾಟಾ ಹಾಗೂ ತಾಯಿ ಸೂನಿ ಟಾಟಾ. ರತನ್ ಟಾಟಾ ಅವರು ಹತ್ತು ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆ - ತಾಯಿ ವಿಚ್ಛೇದನ ಪಡೆದುಕೊಂಡ ಮೇಲೆ ಅವರನ್ನು ಟಾಟಾ ಫ್ಯಾಮಿಲಿಯದ್ದೇ ಆದ ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟಿದ್ದರು. ಆದರೆ ನಂತರ ರತನ್ ಅವರ ಅಜ್ಜಿ, ನವಾಜ್ ಬಾಯಿ ಟಾಟಾ ಅವರು ರತನ್ ಟಾಟಾ ಅವರನ್ನು ಕಾನೂನಾತ್ಮಕವಾಗಿ ದತ್ತು ಪಡೆದರು. ಹಾಗಾಗಿ, ಅನಾಥಾಲಯದಿಂದ ತನ್ನ ತಂದೆ, ತಾತ ಇದ್ದ ಮನೆಗೆ ಹಿಂದಿರುಗಿದ ರತನ್ ಟಾಟಾ ತಮ್ಮ ಮಲಸಹೋದರ ನೋಯೆಲ್ ಟಾಟಾ ಅವರೊಂದಿಗೆ ಬೆಳೆಯುತ್ತಾರೆ. ನೋಯೆಲ್ ಟಾಟಾ ರತನ್ ಅವರ ಮಲತಾಯಿ ಮಗ.
ಬಾಂಬೆಯ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ನಂತರ, ಟಾಟಾ ೧೯೫೫ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಪ್ರೌಢಶಾಲೆಯನ್ನು ಮುಗಿಸಿದರು. ನಂತರ ಅವರು ನ್ಯೂಯಾರ್ಕ್ನ ಇಥಾಕಾದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನದಲ್ಲಿ ತೊಡಗಿದರು.
ನಂತರ ಹಲವಾರು ಟಾಟಾ ಗ್ರೂಪ್ ವ್ಯವಹಾರಗಳಲ್ಲಿ ಅನುಭವವನ್ನು ಪಡೆದರು, ೧೯೭೧ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಯ ಪ್ರಭಾರ ನಿರ್ದೇಶಕರಾಗಿ ಹೆಸರಿಸಲ್ಪಟ್ಟರು. ಸರಿಸುಮಾರು ಒಂದು ದಶಕದ ನಂತರ ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾದರು. ೧೯೯೧ರಲ್ಲಿ ಅವರು ಟಾಟಾ ಗ್ರೂಪ್‌ನ ಮೂಲ ಕಂಪನಿಯಾದ ಟಾಟಾ ಸನ್ಸ್ನ ಅಧ್ಯಕ್ಷರಾಗಿ ಕೆಲಸ ಆರಂಭಿಸಿದರು.
ನAತರದ ದಿನಗಳಲ್ಲಿ ಟಾಟಾ ಸಮೂಹವು ಜಾಗತಿಕ ಮಟ್ಟದಲ್ಲಿ ಉದ್ಯಮಿಗಳ ಕಣ್ಣು ಕುಕ್ಕುವಷ್ಟು ವೇಗವಾಗಿ ಬೆಳೆಯುತ್ತದೆ. ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಹೆಸರು ಮಾಡಿದ್ದ ಟೆಟ್ಲಿ, ಕೋರಸ್, ಜಾಗ್ವಾರ್, ಲ್ಯಾಂಡ್ ರೋವರ್ ಹೀಗೆ ಅನೇಕ ಕಂಪನಿಗಳು ಟಾಟಾ ಸಮೂಹದ ತೆಕ್ಕೆಗೆ ಸೇರುತ್ತವೆ.
ಟಾಟಾ ಸನ್ಸ್ ಅದೆಷ್ಟೇ ಲಾಭ ಪಡೆದರೂ, ಶ್ರೀಮಂತರ ಪಟ್ಟಿಯ ಆರಂಭದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಟಾಟಾ ಸಮೂಹದ ಸಂಸ್ಥಾಪಕರಾದ ಜಂಶದ್ ಜೀ ಟಾಟಾ ನೈತಿಕ ಮೌಲ್ಯಗಳ ಅಡಿಪಾಯವನ್ನು ಹಾಕಿ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಿದವರು. ರತನ್ ಈ ಉದಾತ್ತ ಮೌಲ್ಯಗಳನ್ನು ಮುಂದುವರೆಸುತ್ತಾರೆ. ಟಾಟಾ ಸಮೂಹದ ಸುಮಾರು ೬೦%ರಷ್ಟು ಲಾಭಾಂಶ ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸಲ್ಪಡುತ್ತದೆ. ರತನ್ ಟಾಟಾ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಆರೋಗ್ಯ, ಗ್ರಾಮ ವಿಕಾಸ, ಶುಚಿತ್ವ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ಕೊಟ್ಟಿದ್ದಾರೆ. 
೨೦೦೮ರಲ್ಲಿ ಟಾಟಾ ನ್ಯಾನೋವನ್ನು ಪ್ರಾರಂಭಿಸಿದರು. ಬಡ ಅಥವಾ ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಕಾರು ಮಾರುಕಟ್ಟೆಗೆ ತಂದ ರತನ್ ಅವರು ಸಮಾಜ ಸೇವೆಗೆ ಹೆಚ್ಚು ಮಹತ್ವ ಕೊಟ್ಟ ಕಾರಣ ಟಾಟಾ ಬ್ರಾö್ಯಂಡ್ ನ ಉತ್ಪನ್ನಗಳನ್ನು ಬಹುಬೇಗ ಜನಮನ ಗೆದ್ದವು. ಅದೇ ವರ್ಷ ಭಾರತ ಸರ್ಕಾರದಿಂದ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಲಾಯಿತು.
ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ, ಕಡಿಮೆ ಖರ್ಚಿನಲ್ಲಿ ಜನಸಾಮಾನ್ಯರಿಗೆ ಹಲವು ಗಂಭೀರ ಕಾಯಿಲೆಗಳ ಚಿಕಿತ್ಸೆ ಸಿಗುವಂತೆ ಮಾಡಿದ್ದಾರೆ. ಇಲ್ಲಿವರೆಗೆ ಟಾಟಾ ಎಜುಕೇಷನ್ ಹಾಗೂ ಡೆವಲಪ್ ಮೆಂಟ್ ಟ್ರಸ್ಟ್ ವತಿಯಿಂದ ೨೩೫ ಕೋಟಿ ರೂಪಾಯಿ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ರೂಪವಾಗಿ ನೀಡಲಾಗಿದೆ.  ತಾಂತ್ರಿಕ ಶಿಕ್ಷಣವನ್ನು ನೀಡುವ ಟಾಟಾ ಸೆಂಟರ್ ಫಾರ್ ಟೆಕ್ನಾಲಜಿ ಆ್ಯಂಡ್ ಡಿಸೈನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು. 
೯ ಅಕ್ಟೋಬರ್ ೨೦೨೪ರಂದು ರತನ್ ಟಾಟಾ ಅವರು ೮೬ನೇ ವಯಸ್ಸಿನಲ್ಲಿ ನಿಧನರಾದರು. ಲಾಭ ಗಳಿಸುವುದರ ಹೊರತು ಸಮಾಜದ ಕಳಕಳಿಯನ್ನು ಹೊಂದಿದ್ದ ರತನ್ ಟಾಟಾ ದೂರದೃಷ್ಟಿ ಇದ್ದ ಉದ್ಯಮಿ. ಸಹಾನುಭೂತಿಗೆ ಇನ್ನೊಂದು ಮುಖವಾದ ಅವರ ವ್ಯಕ್ತಿತ್ವ ಅನುಕರಣೀಯ.

⬅ ಮುಖಪುಟ