ನಮ್ಮನ್ನು ಅನುಸರಿಸಿ: Facebook Twitter Instagram YouTube

ಚಂದ್ರಯಾನ – ೧

ಅಪ್‌ಲೋಡ್ ಮಾಡಿದ ದಿನಾಂಕ: 12-06-2026 06:03

ಚಂದ್ರಯಾನ – ೧

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನ ಮಹತ್ತರದ ಸಾಧನೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸುತ್ತಿರುವ ಸಂಸ್ಥೆ. ಸುಮಾರು ೬ ದಶಕಗಳಲ್ಲಿ ಅನೇಕ ಮಹತ್ವದ ಮೈಲಿಗಲ್ಲುಗಳನ್ನು ದಾಟಿರುವ ಇಸ್ರೋ ಅಕ್ಟೋಬರ್ ೨೨, ೨೦೦೮ರಂದು ಭಾರತದ ಮೊದಲ ಚಂದ್ರಯಾನ ಯೋಜನೆಯನ್ನು ಉಡಾವಣೆ ಮಾಡುವ ಮೂಲಕ ಮತ್ತೊಂದು ಅಭೂತಪೂರ್ವ ಸಾಧನೆಗೆ ಸಾಕ್ಷಿಯಾಯಿತು. 

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನ ೧ ಯೋಜನೆಯನ್ನು ಘೋಷಿಸಿದರು. ಈ ಮಿಷನ್ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರಮುಖ ಉತ್ತೇಜನ ನೀಡಿತು. ಚಂದ್ರನಿಗೆ ಭಾರತೀಯ ವೈಜ್ಞಾನಿಕ ಕಾರ್ಯಾಚರಣೆಯ ಕಲ್ಪನೆಯನ್ನು ಮೊದಲು ೧೯೯೯ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಆಸ್ಟೊçÃನಾಟಿಕಲ್ ಸೊಸೈಟಿ ಆಫ್ ಇಂಡಿಯಾ ೨೦೦೦ರಲ್ಲಿ ಇಂತಹ ಕಲ್ಪನೆಯ ಅನುಷ್ಠಾನವನ್ನು ಯೋಜಿಸಲು ಪ್ರಾರಂಭಿಸಿತು. ಶೀಘ್ರದಲ್ಲೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನ್ಯಾಶನಲ್ ಮೂನ್ ಮಿಷನ್ ಟಾಸ್ಕ್ ಫೋರ್ಸ್ ಅನ್ನು ಸ್ಥಾಪಿಸಿತು. ಚಂದ್ರನತ್ತ ಭಾರತೀಯ ಕಾರ್ಯಾಚರಣೆಯನ್ನು ಕೈಗೊಳ್ಳಲು ಇಸ್ರೋ ತಾಂತ್ರಿಕ ಪರಿಣತಿಯನ್ನು ಹೊಂದಿದೆ ಎಂದು ಟಾಸ್ಕ್ಫೋರ್ಸ್ ತೀರ್ಮಾನಿಸಿ, ಚಂದ್ರಯಾನ-೧ನ್ನು ಕೈಗೊಳ್ಳಲಾಯಿತು.

ಅಕ್ಟೋಬರ್ ೨೨, ೨೦೦೮ ರಂದು, PSಐಗಿ ರಾಕೆಟ್ ಚಂದ್ರಯಾನ-೧ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಿತು. ಈ ನೌಕೆಯು ನವೆಂಬರ್ ೮ ರಂದು ಯಶಸ್ವಿಯಾಗಿ ಚಂದ್ರನ ಸುತ್ತಲಿನ ಕಕ್ಷೆಯನ್ನು ಪ್ರವೇಶಿಸಿತು. ಆರ್ಬಿಟರ್‌ನೊಂದಿಗಿನ ಸಂವಹನವು ಆಗಸ್ಟ್ ೨೯, ೨೦೦೯ ರಂದು ಕಳೆದುಹೋಯಿತು. ಆದರೆ ಚಂದ್ರನ ಮೇಲೆ ನೀರಿದೆಯೇ ಎನ್ನುವುದನ್ನು ಈ ಚಂದ್ರಯಾನದಲ್ಲಿ ಕಂಡುಹಿಡಿಯಲಾಯಿತು. ಇಸ್ರೋ ಚಂದ್ರಯಾನ-೧ ಅನ್ನು ಯೋಜಿಸುವಾಗಲೇ ಚಂದ್ರನ ಮೇಲೆ ನೀರನ್ನು ಹುಡುಕುವುದು ಪ್ರಾಥಮಿಕ ವೈಜ್ಞಾನಿಕ ಉದ್ದೇಶವಾಗಿತ್ತು. ಪರಿಣಾಮವಾಗಿ ಮಿನಿಯೇಚರ್ ಸಿಂಥೆಟಿಕ್ ಅಪರ್ಚರ್ ರಾಡಾರ್ (ಮಿನಿ-ಎಸ್‌ಎಆರ್) ೪೦ಕ್ಕೂ ಹೆಚ್ಚು ಧ್ರುವ ಕುಳಿಗಳಿಂದ ಪ್ರತಿಫಲಿತ ಸಂಕೇತಗಳ ಮಾದರಿಗಳನ್ನು ನೀರಿನ ಮಂಜುಗಡ್ಡೆಯೊAದಿಗೆ ಸ್ಥಿರವಾಗಿದೆ ಎಂದು ಕಂಡುಹಿಡಿಯಿತು. 

ಚಂದ್ರಯಾನದ ಯೋಜನೆಯ ಕಾರಣಕ್ಕಾಗಿ ಚಂದ್ರನ ಅಧ್ಯಯನಕ್ಕೆ ಸಹಕಾರಿಯಾಗುವ ೭೦೦೦೦ ೩ಆ ಚಿತ್ರಗಳನ್ನು ಸೆರೆ ಹಿಡಿಯುವುದಲ್ಲದೇ, ಚಂದ್ರಯಾನದ ಪೇಲೋಡ್‌ನ ಸಹಾಯದಿಂದ ಸೌರ ಮಾರುತ ಮತ್ತು ಕಾಂತೀಯ ಕ್ಷೇತ್ರವಿಲ್ಲದ ಚಂದ್ರನAತಹ ಸೌರ ಮಂಡಲದ ಇನ್ನಿತರೆ ಗ್ರಹಗಳ ನಡುವಿನ ಕ್ರಿಯೆಯ ಕುರಿತು ಅಧ್ಯಯನ ನಡೆಸಲು ಸಹಕಾರಿಯಾಯಿತು. ಚಂದ್ರಯಾನ ೧ ರ ನೌಕೆ ತನ್ನ ೧೦ ತಿಂಗಳುಗಳ ಕಾಲ ನಡೆಸಿದ ಅಧ್ಯಯನದ ಪರಿಣಾಮವಾಗಿ ಚಂದ್ರನ ಮೇಲ್ಮೆöÊನಲ್ಲಿ ಟೈಟಾನಿಯಮ್, ಕ್ಯಾಲ್ಶಿಯಮ್, ಮೆಗ್ನೇಶಿಯಮ್, ಅಲ್ಯುಮೀನಿಯಮ್ ಮತ್ತು ಕಬ್ಬಿಣದ ಅಂಶಗಳಿರುವುದನ್ನು ಪತ್ತೆ ಮಾಡಿತು.

೧೯೯೪ ರಿಂದ ೨೦೦೩ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿದ್ದ ಸಮಯದಲ್ಲಿ, ಸೂಪರ್ ಪವರ್ ಆಗುವ ಭಾರತದ ಮಹತ್ವಾಕಾಂಕ್ಷೆಯಲ್ಲಿ ಇಸ್ರೋ ಪ್ರಮುಖ ಪಾತ್ರವನ್ನು ವಹಿಸಬೇಕೆಂದು ಬಯಸಿದ್ದರು. ಅದರಂತೆ ಪ್ರಸ್ತುತ ಭಾರತದ ಜಾಗತಿಕ ಗುರುತಿಸುವಿಕೆಯಲ್ಲಿ ಇಸ್ರೋ ಗಮನಾರ್ಹ ಪಾತ್ರವಹಿಸಿದೆ. ಚಂದ್ರಯಾನ - ೧ ಮಿಷನ್ ಅನ್ನು ಕಾರ್ಯರೂಪಕ್ಕೆ ತರಲು, ಇಸ್ರೋ ಹಲವಾರು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿತು. ಭಾರತದ ಜನಪ್ರಿಯ ಮಂಗಳಯಾನ ಯೋಜನೆಗೂ ಈ ಮೂಲಸೌಕರ್ಯವನ್ನು ಬಳಸಿಕೊಳ್ಳಲಾಯಿತು. ಪ್ರಸ್ತುತ ಭಾರತ ಒಟ್ಟು ೩ ಚಂದ್ರಯಾನವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ.

⬅ ಮುಖಪುಟ