ಭಾರತ ಧೀಮಂತ ಮಹಾನ್ ಪುರುಷರನ್ನು ಕಂಡAತಹ ರಾಷ್ಟç. ಇಂತಹ ರಾಷ್ಟçದಲ್ಲಿ ಜಗತ್ತನ್ನು ನಿಬ್ಬೆರಗಾಗುವಂತೆ ಆಡಳಿತ ನಡೆಸಿದ ಅದೆಷ್ಟೋ ವೀರವನಿತೆಯರು ಆಗಿ ಹೋಗಿದ್ದಾರೆ. ಅಂತಹವರಲ್ಲಿ ರಾಣಿ ದುರ್ಗಾವತಿ ದೇವಿಯೂ ಒಬ್ಬರು. ಅವರ ಸಾಹಸದ ಜೀವನ ಇಂದಿಗೂ ಮಾರ್ಗದರ್ಶಕವಾಗಿದೆ.
ದುರ್ಗಾವತಿ ದೇವಿಯು ಮಹೋಬ ಸಾಮ್ರಾಜ್ಯವನ್ನು ಆಳುತ್ತಿದ್ದ ಚಂದೇಲ ರಜಪೂತ ರಾಜ ಶಾಲ್ಬಹಮ್ನ ಮಗಳಾಗಿ ೧೫೨೪ರ ಅಕ್ಟೋಬರ್ ೫ ರಂದು ಜನಿಸಿದರು. ೧೫೪೨ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ಹಿರಿಯ ಮಗ ದಲ್ಪತ್ ಷಾ ಅವರನ್ನು ವಿವಾಹವಾದರು. ದುರಾದೃಷ್ಟವಶಾತ್ ರಾಜ ದಲ್ಪತ್ ಷಾ ೧೫೫೦ರಲ್ಲಿ ನಿಧನರಾದರು. ಅವರ ಉತ್ತರಾಧಿಕಾರಿ ಕ್ರೌನ್ ಪ್ರಿನ್ಸ್ ವೀರ ನಾರಾಯಣ ಅವರು ಕೇವಲ ೫ ವರ್ಷ ವಯಸ್ಸಿನವರಾಗಿದ್ದರು. ಹಾಗಾಗಿ ಪತ್ನಿ, ರಾಣಿ ದುರ್ಗಾವತಿ ರಾಜಪ್ರತಿನಿಧಿಯಾಗಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತದ ಪೀಠಕ್ಕೇರಿದರು. ದಿವಾನ್ ಅಧರ್ ಕಾಯಸ್ಥ ಮತ್ತು ಮಂತ್ರಿ ಮಾನ್ ಠಾಕೂರ್ ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ಒಗ್ಗಟ್ಟನ್ನು ಕಾಪಾಡಿದರು. ಮಾತ್ರವಲ್ಲದೆ ವ್ಯಾಪಾರವನ್ನು ಉತ್ತೇಜಿಸಿದರು. ರಾಣಿ ದುರ್ಗಾವತಿ ತನ್ನ ರಾಜಧಾನಿಯನ್ನು ಸಿಂಗೋರ್‌ಗಢ ಕೋಟೆಯಿಂದ ಚೌರಗಢ ಕೋಟೆಗೆ ಸ್ಥಳಾಂತರಿಸಿದಳು. ಹೀಗೆ ರಾಜಕೀಯ ಬದಲಾವಣೆಗಳನ್ನೂ ತಂದರು.
೧೫೬೨ರಲ್ಲಿ, ಅಕ್ಬರನು ಮಾಲ್ವಾ ದೊರೆ ಬಾಜ್ ಬಹದ್ದೂರ್ ಅನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡನು. ಅದನ್ನು ಮೊಘಲ್ ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು ಮೊಘಲ್ ಸಾಮ್ರಾಜ್ಯವನ್ನು ಮುಟ್ಟಿತು. ಮೊಘಲರು ರಾಣಿ ದುರ್ಗಾವತಿ ಮತ್ತು ಗೊಂಡ್ವಾನ ಸಂಪತ್ತನ್ನು ಬಯಸಿದರು. ಮೊಘಲ್ ಚಕ್ರವರ್ತಿ ಅಕ್ಬರನಿಂದ ಅನುಮತಿಯನ್ನು ಪಡೆದ ನಂತರ ಅವರು ರಾಣಿಯ ಸಾಮ್ರಾಜ್ಯದ ಮೇಲೆ ಮೊಘಲ್ ಆಕ್ರಮಣವನ್ನು ಮುನ್ನಡೆಸಿದರು.
ಆಕ್ರಮಣಕಾರಿ ಮೊಘಲ್ ಸೇನೆಯಲ್ಲಿ ಬಹುಸಂಖ್ಯೆಯಲ್ಲಿ ತರಬೇತಿ ಪಡೆದ ಸೈನಿಕರು ಆಧುನಿಕ ಆಯುಧಗಳೊಂದಿಗಿದ್ದರೆ, ರಾಣಿ ದುರ್ಗಾವತಿಯ ಬದಿಯಲ್ಲಿ ಪಾರಂಪರಿಕ ಆಯುಧಗಳೊಂದಿಗೆ ಕೆಲವರು ತರಬೇತಿ ಪಡೆಯದಿದ್ದರೂ ನಾಡ ರಕ್ಷಣೆಗಾಗಿ ಹೋರಾಡಲು ಸಿದ್ಧರಾದರು. ಕೊನೆಗೆ ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದಳು. ಆಕೆಯ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದನು. ಅವರು ಆಕ್ರಮಣಕಾರಿ ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಪ್ರಯತ್ನಿಸಿದರೂ ಸೈನ್ಯ ಮುಂದಿಟ್ಟ ಕಾಲನ್ನು ಹಿಂದೆಯಿಡಲಿಲ್ಲ. ಕೊನೆಗೆ ರಾಣಿಯ ಸೈನ್ಯ ಗಾಯಗೊಂಡು ಜರ್ಜರಿತವಾಯಿತು. ಯುದ್ಧದ ಸಮಯದಲ್ಲಿ, ರಾಣಿಯ ಕಿವಿಗೆ ಬಾಣ ತೀವ್ರವಾಗಿ ಚುಚ್ಚಿ ಗಾಯವಾಯಿತು. ಮತ್ತೊಂದು ಬಾಣ ಅವಳ ಕುತ್ತಿಗೆಯನ್ನು ಚುಚ್ಚಿತು. ಹೀಗಾಗಿ ಆಕೆ ಪ್ರಜ್ಞೆಯನ್ನು ಕಳೆದುಕೊಳ್ಳಬೇಕಾಯಿತು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದಳು. ಅವಳ ಮಾವುತ ಅವಳನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಆಕೆ ನಿರಾಕರಿಸಿದಳು. ೨೪ ಜೂನ್ ೧೫೬೪ರಂದು ವಿದೇಶಿಗರ ವಶವಾಗುವುದನ್ನು ಒಲ್ಲದ ಆಕೆ ತನ್ನ ಕಠಾರಿ ತೆಗೆದುಕೊಂಡು ಪ್ರಾಣವನ್ನು ಅರ್ಪಿಸಿದಳು. ಅಪ್ರತಿಮ ಸಾಹಸ ತೋರಿಸಿದ ರಾಣಿಯ ಗುಣಗಳು ಸಾರ್ವಕಾಲಿಕ ಶ್ಲಾಘನೀಯ.