ನಮ್ಮನ್ನು ಅನುಸರಿಸಿ: Facebook Twitter Instagram YouTube

ಸುಬ್ರಹ್ಮಣ್ಯ ಭಾರತಿ ( ೧೧ ಡಿಸೆಂಬರ್, ೧೮೮೨ – ೧೧ ಸೆಪ್ಟಂಬರ್, ೧೯೨೧)

ಅಪ್‌ಲೋಡ್ ಮಾಡಿದ ದಿನಾಂಕ: 12-06-2026 05:53

ಸುಬ್ರಹ್ಮಣ್ಯ ಭಾರತಿ ( ೧೧ ಡಿಸೆಂಬರ್, ೧೮೮೨ – ೧೧ ಸೆಪ್ಟಂಬರ್, ೧೯೨೧)
ಸುಬ್ರಹ್ಮಣ್ಯ ಭಾರತಿ ಕೇವಲ ಮೂವತ್ತೊಂಬತ್ತು ವರ್ಷಗಳ ಕಾಲ ಬದುಕಿದ್ದ ಮಹಾಕವಿ. ರಾಷ್ಟಿçÃಯತೆಯ ಪ್ರಜ್ಞೆ ಇದ್ದ ವ್ಯಕ್ತಿ. ಅವರು ತಮ್ಮ ಅಲ್ಪಾವಧಿಯ ಬದುಕಿನಲ್ಲಿಯೇ ತಮಿಳು ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರು. ಸಾಹಿತ್ಯಕ್ಕೆ ಮಾನವೀಯತೆಯ ಸ್ಪರ್ಶ ನೀಡಿ ವಿಶ್ವಮಾನ್ಯ ಎನಿಸಿಕೊಂಡವರು. ತಮ್ಮ ಬರಹ ಮತ್ತು ಮಾತಿನ ಮೂಲಕವೇ ಕ್ರಾಂತಿಯನ್ನು ಹುಟ್ಟು ಹಾಕಿದವರು. ಅಂದಿನ ಇಡೀ ಸಮಾಜವನ್ನು ಭಾರತದ ಸ್ವಾತಂತ್ರö್ಯ ಹೋರಾಟಕ್ಕೆ ಪ್ರೇರೇಪಿಸಿ ಸ್ವಾತಂತ್ರö್ಯದ ಕಿಚ್ಚನ್ನು ಹೊತ್ತಿಸಿದವರು. ನ್ಯಾಯ, ಸಮಾನತೆ, ಸಾಮಾಜಿಕ ಕಾಳಜಿ ಮತ್ತು ದೇಶಭಕ್ತಿ ಭಾರತಿಯಾರ್ ಬರಹಗಳ ಮೂಲಧಾತುವಾಗಿತ್ತು. ಬರಹದಿಂದ ಮಾತ್ರ ದೇಶ ಮತ್ತು ಸಮಾಜವನ್ನು ಒಗ್ಗೂಡಿಸಲು ಸಾಧ್ಯ ಎಂದು ಅವರು ನಂಬಿದ್ದರು.

ಕವಿ, ಸ್ವಾತಂತ್ರö್ಯ ಹೋರಾಟಗಾರ ಮತ್ತು ಸಮಾಜ ಸುಧಾರಕ ಎನಿಸಿಕೊಂಡಿದ್ದ ಸುಬ್ರಹ್ಮಣ್ಯ ಭಾರತಿ  ಡಿಸೆಂಬರ್ ೧೧, ೧೮೮೨ರಲ್ಲಿ ಜನಿಸಿದವರು. ಚಿನ್ನಸಾಮಿ ಸುಬ್ರಮಣ್ಯ ಐಯ್ಯರ್ ಮತ್ತು ಎಲಕ್ಕುಮಿ ಅಮ್ಮಾಳ್ ಭಾರತಿಯಾರ್ ಅವರ ತಂದೆ-ತಾಯಿ. ದುರಾದೃಷ್ಟವಶಾತ್ ಸುಬ್ರಹ್ಮಣ್ಯ ಭಾರತಿ ತಮ್ಮ ಐದನೇ ವಯಸ್ಸಿನಲ್ಲಿ ತಾಯಿಯನ್ನು ಮತ್ತು ಹದಿನಾರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಸಂಕಟದ ವಾತಾವರಣದ ನಡುವೆಯೂ ಭಾರತಿಯಾರ್ ಭರವಸೆಯ ಬದುಕನ್ನು ಕಟ್ಟಿಕೊಳ್ಳಲು ಮುಂದಾದರು. ಬದುಕು ಬಂದAತೆ ಸ್ವೀಕರಿಸುತ್ತಾ ಕಲಿಕೆಗೆ ತಮ್ಮನ್ನು ಒಡ್ಡಿಕೊಂಡರು. ಇಂಗ್ಲಿಷ್, ಹಿಂದಿ, ತೆಲುಗು, ಬೆಂಗಾಲಿ ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತರು. ಪರಿಣಿತರಾದರು. ಅಷ್ಟರೊಳಗಾಗಲೇ ಭಾರತಿಯಾರ್ ಅಧ್ಯಾತ್ಮ ಮತ್ತು ರಾಷ್ಟಿçÃಯತೆಯ ಪ್ರಭಾವಕ್ಕೆ ಒಳಗಾಗಿದ್ದರು. ದೇಶಭಕ್ತಿಯ ಬೀಜವನ್ನು ತಮ್ಮ ಎದೆಯೊಳಗೆ ಬಿತ್ತಿಕೊಂಡಿದ್ದರು. ಈ ನಡುವೆ ಸಮಾಜದ ಒಂದಿಷ್ಟು ಅನಿಷ್ಠ ಪದ್ಧತಿಗಳನ್ನು ವಿರೋಧಿಸುತ್ತಾ, ಮಹಿಳೆಯರ ರಕ್ಷಣೆಗಾಗಿಯೂ ಹೋರಾಟ ನಡೆಸುತ್ತಾ ಭಾರತಿಯಾರ್ ಒಬ್ಬ ಸಮರ್ಥ ಹೋರಾಟಗಾರನಾಗಿಯೂ ಗುರುತಿಸಿಕೊಂಡಿದ್ದರು. ಜಾತಿ ವ್ಯವಸ್ಥೆಯ ವಿರುದ್ಧದ ಅವರ ಹೋರಾಟ ಮತ್ತು ಕ್ರಾಂತಿಕಾರಿ ನಡೆಯಿಂದಾಗಿ ಅಂದಿನ ಸಮಾಜದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಿತ್ತು.

ಬಹುಮುಖ್ಯವಾಗಿ ಸುಬ್ರಹ್ಮಣ್ಯ ಅವರ ಕವಿತೆಗಳು, ರಾಷ್ಟçಗೀತೆ, ದೇಶಭಕ್ತಿಗೀತೆ ಮತ್ತು ಕ್ರಾಂತಿಕಾರಿ ಗೀತೆಗಳು ಸಮಾಜವನ್ನು ಒಗ್ಗೂಡಿಸಲು ಸಹಕರಿಸಿದವು. ಕವಿತೆ ರಚನೆಯನ್ನು ತೀರಾ ಗಂಭೀರವಾಗಿ ಪರಿಗಣಿಸಿದ್ದ ಸುಬ್ರಹ್ಮಣ್ಯ ತಮ್ಮ ಕವಿತ್ವದ ಶಕ್ತಿಯಿಂದಾಗಿ ರಾಷ್ಟçಕವಿಯಾದರು.

ಮುಂದೆ ಅವರು ಧಾರ್ಮಿಕ ಮತ್ತು ದಾರ್ಶನಿಕ ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು. ಶಾಸ್ತಿçÃಯ ಸಂಗೀತ ರಚನೆಗಳು ಸುಬ್ರಹ್ಮಣ್ಯ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಅನುವಾದದಲ್ಲೂ ಸಿದ್ಧ ಹಸ್ತರಾದರು. ಭಾಷೆಗಳ ಸಂಸರ್ಗಕ್ಕೆ ಶ್ರಮಿಸಿದರು. ಇಡೀ ದೇಶ ಅವರನ್ನು ರಾಷ್ಟಿçÃಯತಾವಾದಿ ಮತ್ತು ಮಹಾನ್ ಕವಿ ಎಂದು ಪರಿಗಣಿಸಿತು. ಸುಬ್ರಹ್ಮಣ್ಯ ಭಾರತಿ ಅವರ ಮೇಲೆ ಸ್ವಾಮಿ ವಿವೇಕಾನಂದ ಮತ್ತು  ಸೋದರಿ ನಿವೇದಿತಾ ಅವರ ಪ್ರಭಾವವಿತ್ತು. ಮುಂದೆ ಸುಬ್ರಮಣ್ಯ ಅವರಿಂದ ಸಾಕಷ್ಟು ಮಂದಿ ಪ್ರಭಾವಕ್ಕೆ ಒಳಗಾದರು.
ಜನತೆಯ ಕವಿ ಎನಿಸಿಕೊಂಡಿದ್ದ ಬಹುಶ್ರುತ ಪ್ರತಿಭೆಯ, ದೇಶಭಕ್ತಿ ಮತ್ತು ಹೋರಾಟವನ್ನು ಬದುಕಾಗಿಸಿಕೊಂಡಿದ್ದ ಸುಬ್ರಹ್ಮಣ್ಯ ಭಾರತಿ ಅವರು ಸೆಪ್ಟಂಬರ್ ೧೧, ೧೯೨೧ ರಂದು  ತಮ್ಮ ಅತೀ ಕಡಿಮೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ದೇಶ ಕಂಡ ಸಾಹಿತ್ಯ ದಿಗ್ಗಜ ಮತ್ತು ಅಪ್ಪಟ ದೇಶಭಕ್ತ ತಮ್ಮ ಸಾಹಿತ್ಯ ಮತ್ತು ವಿಚಾರಧಾರೆಗಳಿಂದ ಈಗಲೂ ಜೀವಂತವಾಗಿ ಉಳಿದಿದ್ದಾರೆ.

⬅ ಮುಖಪುಟ