ಕೆಲವೊಂದು ವ್ಯಕ್ತಿಗಳ ವ್ಯಕ್ತಿತ್ವ ಎಂತಹವರನ್ನು ಸೆಳೆದುಬಿಡುತ್ತದೆ. ಅಂತಹ ವ್ಯಕ್ತಿಗಳಲ್ಲಿಯೊಬ್ಬರು ವೇದಾಂತ ಕೇಸರಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರು. ಒಡಿಶಾದ ಫುಲ್ಬಾನಿ (ಕಂಧಮಾಲ್) ಜಿಲ್ಲೆಯ ಗುರ್ಜಂಗ್ ಗ್ರಾಮದಲ್ಲಿ ೧೯೨೪ ರಲ್ಲಿ ಜನಿಸಿದ ಅವರು ಬಾಲ್ಯದಿಂದಲೇ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ತಮ್ಮ ಸಂಕಲ್ಪವನ್ನು ಪೂರೈಸುವ ಗುರಿಯೊಂದಿಗೆ ಆಧ್ಯಾತ್ಮಿಕ ಅಭ್ಯಾಸಗಳಿಗಾಗಿ ಹಿಮಾಲಯದ ಹಾದಿಯನ್ನು ಹಿಡಿದರು. ತದನಂತರ ೧೯೬೫ರಲ್ಲಿ, ಅವರು ಗೋರಕ್ಷಾ (ಗೋಸಂರಕ್ಷಣೆ) ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸ್ವಾಮಿ ಲಕ್ಷö್ಮಣಾನಂದ ಸರಸ್ವತಿ ಅವರು ವೇದಾಂತ, ತತ್ತ÷್ವಶಾಸ್ತç, ಸಂಸ್ಕೃತ, ವ್ಯಾಕರಣದಲ್ಲಿ ಪಾರಂಗತರಾಗಿದ್ದರು. ತಮ್ಮ ಪಾಂಡಿತ್ಯದ ಕಾರಣಕ್ಕಾಗಿ ಅವರನ್ನು "ವೇದಾಂತ ಕೇಸರಿ" ಎಂದೇ ಜನರು ಗುರುತಿಸುತ್ತಿದ್ದರು.
ಸ್ವಾಮೀಜಿ ಅವರು ಬುಡಕಟ್ಟು ಜನರ ಸಾಮಾಜಿಕ ಮತ್ತು ಧಾರ್ಮಿಕವಾಗಿ ಸಬಲೀಕರಣಗೊಳಿಸಲು ಶ್ರಮಿಸಿದರು. ಸಮಾಜ ಸುಧಾರಣೆಗೊಳ್ಳಬೇಕಾದರೆ ಶಿಕ್ಷಣ ಅಗತ್ಯವೆಂದು ಬಲವಾಗಿ ನಂಬಿದ್ದರು. ಹಾಗಾಗಿ ವಯಸ್ಕರ ಶಿಕ್ಷಣಕ್ಕಾಗಿ ರಾತ್ರಿ ಶಾಲೆ ಆರಂಭಿಸಿದ್ದರು. ಅವರು ೧೯೬೯ರಲ್ಲಿ ‘ಕಲ್ಯಾಣ್ ಆಶ್ರಮ್’ ಎಂಬ ಸಂಸ್ಕೃತ ಶಾಲೆಯನ್ನು ಪ್ರಾರಂಭಿಸಿದರು. ಬಾಲಕಿಯರ ಶಿಕ್ಷಣಕ್ಕಾಗಿ, ಅವರು ಕಂಧಮಾಲ್‌ನ ಜಲೇಸ್‌ಪಟದಲ್ಲಿ ‘ಶಂಕರಾಚಾರ್ಯ ಕನ್ಯಾಶ್ರಮ' ಸಂಪೂರ್ಣ ವಸತಿ ಶಾಲೆಯನ್ನು ಸ್ಥಾಪಿಸಿದರು. ಎಲ್ಲಾ ಶಿಕ್ಷಣ ಕೇಂದ್ರಗಳಲ್ಲಿ ಶಿಕ್ಷಣದ ಜೊತೆಜೊತೆಗೆ ಕೃಷಿ ಕ್ಷೇತ್ರದ ಶಿಕ್ಷಣವನ್ನೂ ನೀಡತೊಡಗಿದರು. ಇದರಿಂದಾಗಿ ಸಮಾಜದ ಆರ್ಥಿಕ ವ್ಯವಸ್ಥೆಯು ಸುಧಾರಣೆಗೊಳ್ಳುವಂತಾಯಿತು.
ಸ್ವಾಮೀಜಿಯವರಿಗೆ ಪರಿಸರದ ಬಗೆಗೆ ಉತ್ಕಟ ಕಾಳಜಿಯಿತ್ತು. ಹಾಗಾಗಿ ಅವರು ಸ್ವತಃ ಗಿಡಗಳನ್ನು ನೆಟ್ಟು ರಕ್ಷಿಸುವುದರ ಮೂಲಕ ಇತರರಿಗೂ ಪ್ರೇರಣೆ ನೀಡುತ್ತಿದ್ದರು. ಹಾಗಾಗಿ ನಾವಿಂದು ಕಂಡ್ಮಾಲ್‌ನಲ್ಲಿ ಎಲ್ಲೆಡೆ ಹಸಿರನ್ನು ನೋಡಬಹುದು. ಈ ಜಿಲ್ಲೆಯು ಇತರ ಜಿಲ್ಲೆಗಳಿಗಿಂತ ಹೆಚ್ಚು ಅರಣ್ಯವನ್ನು ಹೊಂದಿದೆ. ಇದಕ್ಕೆಲ್ಲ ಸ್ವಾಮೀಜಿಯವರ ಪ್ರಯತ್ನವೇ ಕಾರಣ. ಜನರನ್ನು, ನಾಡನ್ನು ಸಂಪೂರ್ಣವಾಗಿ ರಕ್ಷಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ಸ್ವಾಮೀಜಿಯವರು ನಿರ್ವಹಿಸಿದ್ದರು.
ಸ್ವಾಮೀಜಿಯವರ ಹಿಂದೂ ಧರ್ಮ ಪರವಾದ ಹೋರಾಟವನ್ನು ಖಂಡಿಸಿ ಮತಾಂಧರು ೧೯೭೦ರಿಂದ ಡಿಸೆಂಬರ್ ೨೦೦೭ ರವರೆಗೆ ಸ್ವಾಮೀಜಿ ಅವರ ಮೇಲೆ ೮ ಬಾರಿ ದಾಳಿ ನಡೆಸಿದರು. ಈ ಪ್ರಯತ್ನಗಳು ಸಫಲವಾಗಲಿಲ್ಲ. ಆದರೆ ಆಗಸ್ಟ್ ೨೩, ೨೦೦೮ ರಂದು ರಾತ್ರಿ ವೇದಾಂತ ಕೇಸರಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಕ್ರೂರವಾಗಿ ಕೊಲ್ಲಲಾಯಿತು.
ರಾಷ್ಟಿçÃಯ ಅಸ್ಮಿತೆಗಳಿಗೆ, ಸಮಾಜ ಸುಧಾರಣೆಗಾಗಿ ಪ್ರಾಣವನ್ನು ಮುಡಿಪಾಗಿಟ್ಟ ಸ್ವಾಮಿ ಲಕ್ಷö್ಮಣಾನಂದ ಸರಸ್ವತಿಯವರ ಕಾರ್ಯಗಳು ಹಲವರಿಗೆ ಮಾದರಿಯಾಗಿ, ಅವರ ಸಮಾಜಮುಖಿ ಕಾರ್ಯಗಳು ಅಜರಾಮರವಾಗಿ ಸಮಾಜದಲ್ಲಿ ಉಳಿದುಕೊಂಡಿವೆ.