ಮಹಾ ಯೋಗಿ ಅರವಿಂದ (ಅರಬಿಂದೊ) ಘೋಷರು ಭಾರತದ ತತ್ತ÷್ವಜ್ಞಾನಿ, ಕವಿ, ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಅಪ್ಪಟ ರಾಷ್ಟಿçÃಯವಾದಿ. ಅವರು ಆಗಸ್ಟ್ ೧೫, ೧೮೭೨ ರಂದು ಜನಿಸಿದರು. ತಂದೆ ಕೃಷ್ಣಧನ ಘೋಷ್. ತಾಯಿ ಸ್ವರ್ಣಲತಾದೇವಿ. ಬಾಲ್ಯದಿಂದಲೂ ಬಹುಶೃತ ಪ್ರತಿಭೆಯಾಗಿದ್ದ ಅರವಿಂದರು ಮುಂದೆ ಮಹಾನ್ ಯೋಗಿ ಎನಿಸಿಕೊಂಡವರು. ಭಾರತದ ಸಂಸ್ಕೃತಿ ಮತ್ತು ಪರಂಪರೆಗೆ ಹೊಸ ಬಾಷ್ಯ ಬರೆದವರು. ವೇದಾನುಸಂಧಾನ ಮಾಡಿದವರು. ಬದುಕಿನ ನಶ್ವರತೆ ಬಗ್ಗೆ ತಿಳಿದುಕೊಂಡಿದ್ದ ಅರವಿಂದರು ದಿವ್ಯ ಜೀವನವನ್ನು ತಮ್ಮ ಆಧ್ಯಾತ್ಮ ಚಿಂತನೆ ಮತ್ತು ಸಾಧನೆಯಿಂದ ಕಂಡುಕೊAಡರು. ಅರವಿಂದರು ಸಮಷ್ಠಿಯ ಉದ್ಧಾರಕ್ಕಾಗಿ ಯೋಗ ಸಾಧನೆ ಮಾಡಿದವರು. ತಮ್ಮ ಪೂರ್ಣಯೋಗ ಮಾರ್ಗದಿಂದಲೇ ಭಾರತಕ್ಕೆ ಹೊಸ ಹೊಳಹನ್ನು ಕೊಟ್ಟವರು. ಅರವಿಂದರು ದಾರ್ಶನಿಕರಾಗಿ ಮತ್ತು ಆಧ್ಯಾತ್ಮದ ಮಾರ್ಗದರ್ಶಕರಾಗಿ ಹತ್ತು ಹಲವು ಕೃತಿಗಳನ್ನು ಬರೆದರು. ಅವರ ಬಹುತೇಕ ಕೃತಿಗಳು ಭಾರತದ ಸಮಗ್ರ ಸಂಸ್ಕೃತಿ ಆಚಾರ - ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಸಾವಿತ್ರಿ, ಕಾಳಿದಾಸ, ಯೋಗ ಸಮನ್ವಯ ಅರವಿಂದರ ಮಹತ್ವದ ಕೃತಿಗಳು. ಅರವಿಂದರ ಕೃತಿಗಳು ಜೀವನ ಪಥವನ್ನು ತೋರಿಸುತ್ತವೆ.
ಅರವಿಂದರ ಬದುಕು ಮತ್ತು ಬರಹ ಹಲವರನ್ನು ಪ್ರಭಾವಿಸಿದೆ. ಮದನ ಮೋಹನ ಮಾಳವೀಯ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟಾಗೋರ್ ಅರವಿಂದರ ಪ್ರಭಾವಕ್ಕೆ ಒಳಗಾಗಿ ಅವರನ್ನು ತಮ್ಮ ಮಾನಸ ಗುರುವಾಗಿ ಸ್ವೀಕರಿಸಿದವರು. ಕನ್ನಡದ ಕುವೆಂಪು, ಬೇಂದ್ರೆ, ಮಧುರ ಚೆನ್ನರಂಥ ಕವಿಗಳ ಮೇಲೂ ಅರವಿಂದರ ಪ್ರಭಾವವಿತ್ತು. ಇನ್ನು ಅವರ ಚಿಂತನೆಗಳು ಪೀಳಿಗೆಗಳಿಗೆ ಬೇಕಾಗಿವೆ.
ಭಾರತದ ಸಂಸ್ಕೃತಿಯ ಮಹತ್ವ ಸಾರುವ ' The foundations of Indian culture' ಅರವಿಂದರು ತಮ್ಮ ಮಹತ್ವದ ಕೃತಿಯಾದ ‘ದಿ ಫೌಂಡೇಶನ್ಸ್ ಆಫ್ ಇಂಡಿಯನ್ ಕಲ್ಚರ್' ನಲ್ಲಿ ಭಾರತೀಯ ಸಂಸ್ಕೃತಿಯ ಮೂಲ ತತ್ವವನ್ನು ವಿವಿಧ ಹಂತಗಳಲ್ಲಿ ತೆರೆದಿಟ್ಟಿದ್ದಾರೆ. ತಮ್ಮ ಆಳವಾದ ಒಳನೋಟದಿಂದ ಭಾರತೀಯ ಸಂಸ್ಕೃತದ ಅಡಿಪಾಯವನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಇಡೀ ಕೃತಿಯಲ್ಲಿ ಭಾರತದ ಅವಿಚ್ಛಿನ್ನ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಜನಾದರ್ಶದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಕೃತಿಯಲ್ಲಿನ ಅರವಿಂದರ ದೃಷ್ಟಿಕೋನವು ದಾರ್ಶನಿಕವಾಗಿದೆ. ಹಾಗಾಗಿ ಕೃತಿಯು ಭಾರತದ ಶ್ರೀಮಂತ ಸಂಸ್ಕೃತಿಯ ಬಗ್ಗೆ ಆಳವಾದ ತಿಳಿವಳಿಕೆಯನ್ನು ನೀಡುತ್ತದೆ. ದೇಶದ ಭವಿಷ್ಯವನ್ನು ರೂಪಿಸುವುದಕ್ಕೆ ಬೇಕಾದ ಅಗತ್ಯ ಅಂಶಗಳನ್ನು ಅರವಿಂದರು ನಾನಾ ತೆರನಾದ ನೆಲೆಗಟ್ಟಿನಲ್ಲಿ ತೋರಿಸಿಕೊಟ್ಟಿದ್ದಾರೆ. ವೇದ, ಉಪನಿಷತ್ತು, ಭಗವದ್ಗೀತೆ ಸೇರಿದಂತೆ ಭಾರತದ ಹಲವಾರು ಗ್ರಂಥವನ್ನು ಅವಲೋಕಿಸಿ ಸಂಸ್ಕೃತಿಯ ಮೂಲ ಬೇರನ್ನು ಹುಡುಕಿ ಸೂಕ್ಷö್ಮವಾಗಿ ವಿಶ್ಲೇಷಣೆ ನೀಡಿದ್ದಾರೆ. ಭಾರತದ ಸಂಸ್ಕೃತಿಯ ಪ್ರಾಮುಖ್ಯತೆ ಮತ್ತು ಅದರ ಶ್ರೀಮಂತಿಕೆ ಕುರಿತು ತಿಳಿದುಕೊಳ್ಳಲು ಬಯಸುವವರು ಅರವಿಂದರ ಈ ಕೃತಿಯನ್ನು ಅಗತ್ಯವಾಗಿ ಓದಬೇಕಿದೆ.
‘ಭಾರತ ಸಂಸ್ಕೃತಿಯ ಆತ್ಮ' ಎಂಬುದನ್ನು ಅರವಿಂದರು ತಮ್ಮ ಪಾಂಡಿತ್ಯಪೂರ್ಣ ಬರಹದ ಮೂಲಕ ಹೇಳಿದ್ದಾರೆ. ಅವರ ಆಧ್ಯಾತ್ಮ ಮತ್ತು ತತ್ತ÷್ವಜ್ಞಾನದ ಹರಹು ಕೃತಿಯನ್ನು ಗಂಭೀರ ದಿಕ್ಕಿನತ್ತ ಕೊಂಡೊಯ್ದಿದೆ. ‘ದಿ ಫೌಂಡೇಶನ್ಸ್ ಆಫ್ ಇಂಡಿಯನ್ ಕಲ್ಚರ್' ಕೃತಿಯು ಸಂಸ್ಕೃತಿಯ ತೊಟ್ಟಿಲಾದ ಭಾರತಕ್ಕೆ ಯಾವಾಗಲೂ ಪ್ರಸ್ತುತ. ಅರವಿಂದರು ಪ್ರಸ್ತುತತೆಗೆ ಮತ್ತು ಭಾರತದ ಭವಿಷ್ಯಕ್ಕಾಗಿ ಈ ಕೃತಿಯನ್ನು ಬರೆದಿದ್ದಾರೆ. ನಿಜವಾದ ಭಾರತೀಯತೆಯನ್ನು ತಾವು ಇರುವ ಕಾಲಕ್ಕೂ ತೋರಿಸಿಕೊಟ್ಟ ಅರವಿಂದರು ಸರ್ವ ಕಾಲಕ್ಕೂ ಪ್ರಸ್ತುತ. ಪ್ರಸಿದ್ಧ ದಾರ್ಶನಿಕ ಮತ್ತು ಯೋಗ ಸಮನ್ವಯದ ಗುರುಗಳಾದ ಅರವಿಂದರು ೧೯೫೦ರ ಡಿಸೆಂಬರ್ ೫ರಂದು ನಿಧನರಾದರು.