೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕ್ ವಾಯುದಾಳಿಯ ವಿರುದ್ಧ ಏಕಾಂಗಿಯಾಗಿ ಹೋರಾಡಿ ಭಾರತೀಯ ವಾಯುನೆಲೆಯ ರಕ್ಷಿಸಿದ ಸಾಹಸಿಗ ನಿರ್ಮಲ್ ಜಿತ್ ಸಿಂಗ್ ಸೆಖೋನ್. ‘ಫ್ಲೆöÊಯಿಂಗ್ ಆಫೀಸರ್' ಎಂದು ತಮ್ಮ ರ‍್ಯಾಂಕ್‌ನಿAದಲೇ ಕರೆಸಿಕೊಂಡಿದ್ದ ನಿರ್ಮಲ್ ಜಿತ್ ಸಿಂಗ್ ರಾಷ್ಟçಸೇವೆಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಸೇನಾ ಪದಕ ಪರಮವೀರ ಚಕ್ರವನ್ನು ಪಡೆದವರು. ಶತ್ರುವನ್ನು ಮಟ್ಟ ಹಾಕಿ, ಭಾರತೀಯ ವಾಯು ನೆಲೆಯನ್ನು ರಕ್ಷಿಸಿದ ಅವರ ಸಾಹಸಗಾಥೆ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣಾದಾಯಕ.
ನಿರ್ಮಲ್ ಜಿತ್ ಸಿಂಗ್ ಸೆಖೋನ್ ಅವರು ೧೯೪೩ ಜುಲೈ ೧೭ರಂದು ಪಂಜಾಬ್‌ನ ಲುಧಿಯಾನಾ ಜಿಲ್ಲೆಯಲ್ಲಿ ಜನಿಸಿದರು. ನಿರ್ಮಲ್ ಜಿತ್ ತಂದೆ ಫ್ಲೆöÊಟ್ ಲೆಫ್ಟಿನೆಂಟ್ ತರ್ಲೋಚನ್ ಸಿಂಗ್ ಸೆಖೋನ್. ತಂದೆಯAತೆ ತಾನೂ ಸಹ ವಾಯುಪಡೆಗೆ ಸೇರಿ ದೇಶಸೇವೆ ಮಾಡಬೇಕೆಂಬ ಕನಸು ಕಂಡಿದ್ದರು. ಹಾಗಾಗಿ ೧೯೬೭ ಜೂನ್ ೪ರಂದು ಭಾರತೀಯ ವಾಯುಪಡೆಯ ನಂ. ೧೮ ಸ್ಕಾ÷್ವಡ್ರನ್ ಘಟಕದ ಫ್ಲೆöÊಯಿಂಗ್ ಆಫೀಸರ್ ಆಗಿ ನೇಮಕಗೊಂಡರು.
೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಇವರಿಗೆ ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸುವ ಅವಕಾಶ ದೊರೆಯುತ್ತದೆ. ಯುದ್ಧದ ಸಂದರ್ಭದಲ್ಲಿ ನಿರ್ಮಲ್ ಜಿತ್ ಶ್ರೀನಗರ ಮೂಲದ ಫೋಲ್ಯಾಂಡ್ ಗ್ನಾಟ್ ಯುದ್ಧ ವಿಮಾನವನ್ನು ಹಾರಿಸುತ್ತಿದ್ದರು. ೧೯೭೧ ಡಿಸೆಂಬರ್ ೧೪ರಂದು, ಪಾಕಿಸ್ತಾನಿ ವಾಯುನೆಲೆ ಪೇಶಾವರ್‌ನಿಂದ ೨೬ ಚದರ ಮೀಟರ್‌ನ ಆರು ಪಾಕಿಸ್ತಾನದ ವಾಯುಪಡೆಯ ಈ-೮೬ ಜೆಟ್‌ಗಳಿಂದ ಶ್ರೀನಗರ ವಾಯುನೆಲೆ ಮೇಲೆ ದಾಳಿ ನಡೆಸಿತು. ಆ ಸಮಯದಲ್ಲಿ ಫ್ಲೆöÊಯಿಂಗ್ ಆಫೀಸರ್ ಸೆಖೋನ್ ಕರ್ತವ್ಯದಲ್ಲಿದ್ದರು. ಆದರೆ, ಆಗಷ್ಟೇ ಟೇಕಾಫ್ ಆಗಿದ್ದ ಮತ್ತೊಂದು ವಿಮಾನ ಎಬ್ಬಿಸಿದ ಧೂಳಿನ ಮೋಡಗಳಿಂದಾಗಿ ನಿರ್ಮಲ್ ಜಿತರಿಗೆ ವಿಮಾನ ಹಾರಾಟ ಮಾಡಲು ಕಷ್ಟವಾಗುತ್ತದೆ. ಯಾವಾಗ ವಿಮಾನ ಟೇಕ್-ಆಫ್ ಆಗುತ್ತದೋ ಆ ಹೊತ್ತಿಗೆ, ಆರು ಶತ್ರು ವಿಮಾನಗಳಿಂದ ದಾಳಿ ಶುರುವಾಗಿತ್ತು. ನಂತರದ ವೈಮಾನಿಕ ಯುದ್ಧದಲ್ಲಿ, ಸೆಖೋನ್ ಒಂದು ಸಾಬರ್ ವಿಮಾನವನ್ನು ಹೊಡೆದುರುಳಿಸಿದರೆ, ಇನ್ನೊಂದನ್ನು ಸುಟ್ಟುಹಾಕಿದರು. ಇನ್ನುಳಿದ ವಿಮಾನಗಳನ್ನು ಹಿಮ್ಮೆಟ್ಟಿಸಿ ನಿರ್ಮಲ್ ಜಿತ್ ಪಾಕಿಸ್ತಾನಿ ವಾಯುದಾಳಿಗೆ ಸರಿಯಾಗಿ ತಿರುಗುತ್ತರ ಕೊಡುತ್ತಾರೆ. ಆದರೆ ತಮ್ಮ ವಿಮಾನದ ತಾಂತ್ರಿಕ ದೋಷಗಳು ಕಂಡು ಬಂದ ಕಾರಣ ನಿರ್ಮಲ್ ಜಿತ್ ಅವರನ್ನು ವಾಯುನೆಲೆಗೆ ಹಿಂತಿರುಗಲು ಸಲಹೆ ನೀಡಲಾಯಿತು. ವಿಮಾನದ ನಿಯಂತ್ರಣ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡದ ಕಾರಣ ವಿಮಾನವನ್ನು ಇಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಶ್ರೀನಗರದಿಂದ ಬೇಸ್‌ಗೆ ಬರುವ ರಸ್ತೆಯ ಬಳಿ, ಕೆಲವು ಮೈಲುಗಳಷ್ಟು ದೂರದಲ್ಲಿರುವ ಕಮರಿಯಲ್ಲಿ ಗ್ನಾಟ್ ವಿಮಾನದ ಅವಶೇಷಗಳು ಕಂಡುಬAದವು. ಆದರೆ ಸೈನ್ಯ ಮತ್ತು ವಾಯುಪಡೆಯ ಹುಡುಕಾಟದ ನಂತರವೂ ನಿರ್ಮಲ್ ಜಿತ್ ಅವರ ದೇಹ ಸಿಗಲಿಲ್ಲ.
ಪಾಕ್ ವೈಮಾನಿಕ ದಾಳಿಯ ವಿರುದ್ಧ ಏಕಾಂಗಿಯಾಗಿ ಶ್ರೀನಗರ ವಾಯುನೆಲೆಯ ರಕ್ಷಣೆಯನ್ನು ಮಾಡಿದ ಇವರ ಸಾಧನೆಯನ್ನು ಗುರುತಿಸಿ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಮಿಲಿಟರಿ ಅಲಂಕಾರವಾದ ಪರಮವೀರ ಚಕ್ರವನ್ನು ನೀಡಲಾಯಿತು. ಪರಮವೀರ ಚಕ್ರ ಗೌರವಕ್ಕೆ ಪಾತ್ರರಾದ ಭಾರತೀಯ ವಾಯುಪಡೆಯ ಏಕೈಕ ಸದಸ್ಯರು ಅಂದರೆ ನಿರ್ಮಲ್ ಜಿತ್ ಸಿಂಗ್ ಸೆಖೋನ್!
ನಿರ್ಮಲ್ ಜಿತ್ ಸಿಂಗ್ ಸೆಖೋನ್ ಅವರ ಗೌರವಾರ್ಥವಾಗಿ ಲುಧಿಯಾನಾದ ಜಿಲ್ಲಾ ನ್ಯಾಯಾಲಯದಲ್ಲಿ ಧ್ವಜಸ್ತಂಭದ ಪಕ್ಕದಲ್ಲಿ ಪಂಜಾಬ್‌ನ ಅನೇಕ ನಗರಗಳಲ್ಲಿ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಪಾಲಮ್‌ನ ಭಾರತೀಯ ವಾಯುಪಡೆಯ ವಸ್ತುಸಂಗ್ರಹಾಲಯದಲ್ಲಿ ಅವನ ಪ್ರತಿಮೆಯನ್ನು ಫೋಲ್ಯಾಂಡ್ ಗ್ನಾಟ್ ಯುದ್ಧವಿಮಾನದೊಂದಿಗೆ ಇರಿಸಲಾಗಿದೆ.