ಸೇವೆಯೇ ಸರ್ವೋಚ್ಚ ಜೀವನ ಧರ್ಮ, ರಾಷ್ಟçಸೇವೆಗಿಂತ ದೊಡ್ಡ ಕಾರ್ಯವಿಲ್ಲ. ತನಗೆ ರಾಷ್ಟçವೇ ಮೊದಲು ರಾಷ್ಟçವೇ ಕೊನೆ ಎನ್ನುತ್ತಾ ಸಂಪೂರ್ಣ ಬದುಕನ್ನು ರಾಷ್ಟçದ ಹಿತಕ್ಕಾಗಿ ಸವೆಸಿದ ವ್ಯಕ್ತಿ ಮಧುಕರ ದತ್ತಾತ್ರೇಯ ದೇವರಸ್. ಮಧುಕರ ದತ್ತಾತ್ರೇಯ ದೇವಸ್ ಅವರು ೧೧ ಡಿಸೆಂಬರ್ ೧೯೧೫ರಲ್ಲಿ ದತ್ತಾತ್ರೇಯ ಕೃಷ್ಣರಾವ್ ದೇವರಸ್ ಹಾಗೂ ಪಾರ್ವತಿ ಬಾಯಿಯ ಮಗನಾಗಿ ಜನಿಸಿದರು. ತಮ್ಮ ಪ್ರೌಢ ಶಿಕ್ಷಣವನ್ನು ನ್ಯೂ ಇಂಗ್ಲೀಷ್ ಹೈಸ್ಕೂಲಿನಲ್ಲಿ, ಮೆಟ್ರಿಕ್ಯುಲೇಶನ್ ಶಿಕ್ಷಣವನ್ನು ಬೇರರ್ ಬೋರ್ಡ್ ಸೆಕೆಂಡರಿ ಎಜುಕೇಶನ್ ಆಫ್ ಸೆಂಟ್ರಲ್ ಪ್ರೋವಿನ್ಸ್ ಇಲ್ಲಿ ಪೂರೈಸಿದರು. ನಂತರ ೧೯೩೫ರಲ್ಲಿ ಮೋರಿಸ್ ಕಾಲೇಜಿನಲ್ಲಿ ಪದವಿ ಪೂರೈಸಿ ಕಾನೂನು ಶಿಕ್ಷಣವನ್ನು ನಾಗಪುರ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾಲಯದಿಂದ ಪಡೆದರು. ಇವರು ನಾಗಪುರದಲ್ಲಿ ನೆಲೆಸಿದ್ದರಿಂದ ಬಾಲ್ಯದಿಂದಲೂ ರಾಷ್ಟಿçÃಯ ಸ್ವಯಂಸೇವಕ ಸಂಘದ ಬಗ್ಗೆ ಅಪಾರ ಗೌರವ. ಡಾ. ಕೇಶವ ಬಲಿರಾಮ್ ಹೆಡಗೆವಾರರ ಜೀವನದಿಂದ ಪ್ರೇರಣೆ ಪಡೆದು ತಾವು ತಮ್ಮ ಸಂಪೂರ್ಣ ಜೀವನವನ್ನು ಸಂಘಕ್ಕೆ ಅರ್ಪಿಸಬೇಕೆಂದು ನಿರ್ಧರಿಸಿದರು. ಅದಾಗಲೇ ಇವರ ಸಹೋದರ ರಾಷ್ಟಿçÃಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ತೊಡಗಿಸಿಕೊಂಡಿದ್ದರು. ಈ ಎಲ್ಲಾ ವಾತಾವರಣದಿಂದ ಕಾನೂನು ಪದವಿ ಪಡೆದಿದ್ದರೂ ವೃತ್ತಿ ಜೀವನದತ್ತ ಮುಖ ಮಾಡದೆ ದಾಂಪತ್ಯ ಜೀವನವನ್ನೂ ತ್ಯಜಿಸಿ ತಮ್ಮನ್ನು ತಾವು ಸಂಪೂರ್ಣವಾಗಿ ರಾಷ್ಟçಕ್ಕೆ ಮೀಸಲಿಡಲು ನಿರ್ಧರಿಸಿದರು.
ಮೊದಲಿಗೆ ಬಂಗಾಲದಲ್ಲಿ ಪ್ರಚಾರಕರಾಗಿ ಸಂಘಕಾರ್ಯ ಆರಂಭಿಸಿದ ಇವರು ೧೯೪೬ರಲ್ಲಿ ಸಹಸರಕಾರ್ಯವಾಹರಾಗಿ, ೧೯೬೫ರಲ್ಲಿ ಸರಕಾರ್ಯವಾಹರಾಗಿ ಜವಾಬ್ದಾರಿಯನ್ನು ನಿಭಾಯಿಸಿದರು. ಮುಂದೆ ೫ ಜೂನ್ ೧೯೭೩ರಂದು ಜಗತ್ತಿನ ಅತಿ ದೊಡ್ಡ ಸಂಘಟನೆ ರಾಷ್ಟಿçÃಯ ಸ್ವಯಂಸೇವಕ ಸಂಘದ ಮೂರನೇ ಸರಸಂಘಚಾಲಕರಾಗಿ ಜವಾಬ್ದಾರಿ ಪಡೆದರು.
ದೇಶದ ಕರಾಳ ಕಾಲಘಟ್ಟದಲ್ಲಿ ಸಂಘದ ನೇತೃತ್ವ
ಬಾಳಾಸಾಹೇಬ್ ದೇವರಸ್ ಸಂಘದ ನೇತೃತ್ವ ವಹಿಸಿದ ಕಾಲಘಟ್ಟದಲ್ಲಿ ಈ ರಾಷ್ಟç ಕರಾಳ ದಿನಗಳನ್ನು ಎದುರಿಸಿತು. ಭಾರತದ ಆಗಿನ ಪ್ರಧಾನಿಯಾಗಿದ್ದ ಇಂದಿರಾಗಾAಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಅದೆಷ್ಟೋ ದೇಶಭಕ್ತರ ಬಂಧನವೂ ಆಯಿತು. ಸಂಘದ ಮೇಲಂತೂ ನಿಷೇಧಾಜ್ಞೆ ಹೇರಲಾಯಿತು. ಬಾಳ ಸಾಹೇಬರನ್ನು ಸೇರಿದಂತೆ, ಸಂಘದ ಅಸಂಖ್ಯ ಸ್ವಯಂಸೇವಕರ ಬಂಧನವಾಯಿತು. ಎರಡು ವರ್ಷಗಳ ಕಾಲ ಇದನ್ನು ಸಮರ್ಥವಾಗಿ ಎದುರಿಸಿ ನಿಷೇಧಾಜ್ಞೆಯ ಸಮಯದಲ್ಲೂ ಸಂಘ ಸಕ್ರಿಯವಾಗಿ ಮುಂದುವರೆಯುವAತೆ ಮಾಡಿದವರು ಬಾಳಾಸಾಹೇಬರು.
ಸಂಘವಿನ್ನು ಮತ್ತೆ ಉಚ್ರಾಯ ಸ್ಥಿತಿಯನ್ನೇರಲು ಸಾಧ್ಯವಿಲ್ಲ ಎಂದು ಅನೇಕರು ಹೇಳುತ್ತಿದ್ದಾಗ ಅವುಗಳಿಗೆ ಕಿಗೊಡದೆ ಸಂಘವನ್ನು ಮತ್ತೆ ಭದ್ರಗೊಳಿಸಿದರು. ಹಿಂದೂ ಸಮಾಜದ ಬಗ್ಗೆ ಅಪಾರ ಕನಸನ್ನು ಹೊಂದಿದ್ದ ಇವರು ಹಿಂದೂ ಸಮಾಜದಲ್ಲಿ ಕಾಲಾಂತರದಲ್ಲಿ ಬೆಳೆದು ಬಂದ ಅನಿಷ್ಟ ಪದ್ಧತಿಗಳನ್ನು ಘಂಟಾಘೋಷವಾಗಿ ವಿರೋಧಿಸುತ್ತಿದ್ದರು. ಅಸ್ಪೃಶ್ಯರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಇವರು ‘ಅಸ್ಪೃಶ್ಯತೆ ತಪ್ಪಲ್ಲದಿದ್ದರೇ, ಮತ್ಯಾವುದೂ ತಪ್ಪಲ್ಲ’ ಎಂದು ಹೇಳಿದ್ದರು. ಹಿಂದೂ ಪುರಾಣ, ವೇದಗಳು, ತತ್ವಾದರ್ಶಗಳ ಬಗ್ಗೆ ಅಪಾರಜ್ಞಾನ ಹೊಂದಿದ್ದ ಇವರು ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಹಲವು ಪುಸ್ತಕಗಳನ್ನು ಬರೆದರು. ಪಂಜಾಬ್ ಪ್ರಾಬ್ಲಮ್ ಅಂಡ್ ಇಟ್ಸ್ ಸಲ್ಯೂಷನ್, ಸೋಶಿಯಲ್ ಈಕ್ವಾಲಿಟಿ, ಹಿಂದೂ ಕನ್ಸೋಲೋಡೇಷನ್, ಹಿಂದೂ ಸಂಘಟನೆ ಔರ್ ಸತ್ತಾವಧಿ ರಾಜನೀತಿ ಇದು ಇವರು ಬರೆದ ಕೆಲವು ಪುಸ್ತಕಗಳು.
೧೯೯೪ ರವರೆಗೆ ಸಂಘದ ಸರಸಂಘಚಾಲಕರಾಗಿ ನೇತೃತ್ವ ವಹಿಸಿ ನಂತರ ಆರೋಗ್ಯ ಕಾರಣದಿಂದಾಗಿ ಜವಾಬ್ದಾರಿಯನ್ನು ತ್ಯಜಿಸಿದರು. ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ೧೭ ಜೂನ್ ೧೯೯೬ರಲ್ಲಿ ಇವರ ದೇಹಂತ್ಯವಾಯಿತು. ದೇಶ ಸೇವೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬಾಳ ಸಾಹೇಬರ ಜೀವನ ಇಂದಿನ ಯುವಕರಿಗೆ ನಿಜಕ್ಕೂ ಆದರ್ಶನೀಯ.