ನಮ್ಮನ್ನು ಅನುಸರಿಸಿ: Facebook Twitter Instagram YouTube

ಬಿಪಿನ್ ಚಂದ್ರಪಾಲ್ (೭ ನವೆಂಬರ್ ೧೮೫೮ - ೨೦ ಮೇ ೧೯೩೨)

ಅಪ್‌ಲೋಡ್ ಮಾಡಿದ ದಿನಾಂಕ: 10-06-2026 12:05

ಬಿಪಿನ್ ಚಂದ್ರಪಾಲ್ (೭ ನವೆಂಬರ್ ೧೮೫೮ - ೨೦ ಮೇ ೧೯೩೨)
"ಸರ್ಕಾರವೇನಾದರೂ ಬಂದು ಸ್ವರಾಜ್ಯ ತೆಗೆದುಕೊಳ್ಳಿ ಎಂದು ಹೇಳಿದರೆ ಧನ್ಯವಾದ ನಿಮಗೆ ಎನ್ನುವೆ. ಆದರೆ, ಸ್ವೀಕರಿಸುವುದಿಲ್ಲ. ಸ್ವರಾಜ್ಯ ಪಡೆಯುವುದು ನಮ್ಮ ಸಾಮರ್ಥ್ಯದಿಂದಲೇ ಹೊರತು ಬೇಡುವುದರಿಂದಲ್ಲ. ಬೇಡಿ ಸಾಧಿಸಬಹುದಾದರೂ ಏನು? ಅಸಹಕಾರ ಮಾಡಿ ಬ್ರಿಟಿಷ್ ಸರ್ಕಾರದ ಯಂತ್ರ ನಡೆಸಲು ಜನ ಸಿಗದಂತೆ ಮಾಡುವುದೇ ನಮ್ಮ ಮುಂದಿನ ಗುರಿ" ಎಂದು ಗುಡುಗಿದ್ದರು ಬಿಪಿನ್ ಚಂದ್ರಪಾಲ್.

ಪಾಲ್ ಹೆಸರು ಕೇಳಿದರೆ ಬ್ರಿಟಿಷರು ನಡುಗುತ್ತಿದ್ದರು. ದೇಶಭಕ್ತರು ರೋಮಾಂಚಿತರಾಗುತ್ತಿದ್ದರು. ಪಾಲ್ ದೇಶಕ್ಕಾಗಿ ಮತ್ತು ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮದೆಲ್ಲವನ್ನೂ ಅರ್ಪಿಸಲು ಸಿದ್ಧರಿದ್ದವರು. ಅವರು ಕೈಯಲ್ಲಿದ್ದ ಸರ್ಕಾರಿ ಶಿಕ್ಷಕ ಮತ್ತು ಗ್ರಂಥಪಾಲಕ ಹುದ್ದೆಯನ್ನು ತ್ಯಜಿಸಿ ಹೋರಾಟದತ್ತ ಹೊರಳಿಕೊಂಡವರು. ಹೋರಾಟ ಅವರಿಗೆ ಜನ್ಮೇಪಿಯಾಗಿತ್ತು. ಕಿಚ್ಚು ರಕ್ತಗತವಾಗಿ ಬಂದಿತ್ತು. ಅವರು ಬದುಕಿನುದ್ದಕ್ಕೂ ಕೇವಲ ದೇಶಕ್ಕಾಗಿ ತುಡಿದವರು ಮತ್ತು ಮಿಡಿದವರು. ಪಾಲ್ ದೇಶಕ್ಕೆ ದೊರೆತ ಅನರ್ಘ್ಯ ರತ್ನ ಎಂದರೂ ಅತಿಶಯೋಕ್ತಿ ಆಗಲಾರದು.

ಪರಿಚಯ
ಬಿಪಿನ್ ಚಂದ್ರಪಾಲ್ ಅಪ್ಪಟ ಸ್ವಾತಂತ್ರ‍್ಯ ಸೇನಾನಿ. ನವೆಂಬರ್ ೭ ೧೮೫೮ ಅವರ ಜನನ. ಬಾಲ್ಯದಿಂದಲೇ ರಾಷ್ಟಿçÃಯತೆಯನ್ನು ಮೈಗೂಡಿಸಿಕೊಂಡಿದ್ದ ಪಾಲ್ ದೇಶದೆಡೆಗೆ ಅಪಾರ ಭಕ್ತಿ ಹೊಂದಿದ್ದರು. ದೇಶ-ಧರ್ಮದ ವಿಚಾರ ಬಂದಾಗ ತ್ಯಾಗದ ಮಾತುಗಳನ್ನು ಆಡುತ್ತಿದ್ದರು. ಕ್ರಾಂತಿಯಿAದ ಮಾತ್ರ ಸ್ವಾತಂತ್ರ‍್ಯ ಸಾಧ್ಯ ಮತ್ತು ಅಂತಹ ಸ್ವಾತಂತ್ರ‍್ಯಕ್ಕೆ ಮಾತ್ರ ಬೆಲೆ ಎಂದು ಅವರು ಅರಿತಿದ್ದರು. ಪಾಲ್ ಪ್ರಖರ ವಾಗ್ಮಿ, ಅದ್ಭುತ ಲೇಖಕ ಮತ್ತು ಪತ್ರಕರ್ತರಾಗಿದ್ದರಿಂದ ತಮ್ಮ ವಿಚಾರಗಳನ್ನು ದೇಶ ಬಾಂಧವರಿಗೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸುತ್ತಿದ್ದರು. ಮೊದಲು ಕಾಂಗ್ರೆಸ್‌ನಲಿದ್ದ ಪಾಲ್ ನಂತರದ ದಿನಗಳಲ್ಲಿ ಅಲ್ಲಿಂದ ಹೊರ ನಡೆದು ಬಂದಿದ್ದರು. ಬ್ರಿಟಿಷರಿಗೆ ಪತ್ರ ಬರೆದು ದಯನೀಯವಾಗಿ ಸ್ವಾತಂತ್ರ‍್ಯ ಕೊಡಿ ಎಂತಲೂ ಮತ್ತು ಶಾಸನಸಭೆಗಳಲ್ಲಿ ಮಂತ್ರಿ ಸ್ಥಾನ ಕೊಡಿ ಎಂದು ಪ್ರಾರ್ಥಿಸುತ್ತಿದ್ದ ಮಂದಗಾಮಿಗಳನ್ನು ಪಾಲ್ ಕಟುವಾಗಿ ಟೀಕಿಸುತ್ತಿದ್ದರು.

ಅವರು ಬಾಲ ಗಂಗಾಧರ ತಿಲಕ್, ಲಾಲ ಲಜಪತ್ ರಾಯ್ ಅವರೊಂದಿಗೆ ಕೈ ಜೋಡಿಸಿ ತೀವ್ರಗಾಮಿತನದಿಂದ ಬ್ರಿಟಿಷರನ್ನು ಎದುರಿಸುತ್ತಿದ್ದರು. ಈ ಮೂವರು ಭಾರತದಲ್ಲಿ ತ್ರಿವಳಿಗಳು ಎಂತಲೇ ಹೆಸರಾಗಿದ್ದರು. ದೇಶದ ಬಹುತೇಕ ಜನರಿಗೆ ಇವರ ಹೋರಾಟದ ಮಾರ್ಗ ಹಿಡಿಸಿತ್ತು. ಸಹಸ್ರಾರು ದೇಶಭಕ್ತರು ಇವರ ಬೆನ್ನಿಗೆ ನಿಂತಿದ್ದರು ಕೂಡ.

ಬಹುಕಾಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಪಾಲ್ ಮುಂದೆ ತಮ್ಮದೇ 'ನ್ಯೂ ಇಂಡಿಯಾ' ಎಂಬ ಪತ್ರಿಕೆಯ ಮೂಲಕ ರಾಷ್ಟಿçÃಯವಾದಿ ಚಿಂತನೆಗಳನ್ನು ಬರೆದು ಜನರನ್ನು ಸೆಳೆದರು. ಪಾಲ್ ಅವರ ಚಿಂತನೆಗಳು ಹಲವರನ್ನು ಹೋರಾಟದತ್ತ ಪ್ರೇರೇಪಿಸುತ್ತಿದ್ದವು. ಅಷ್ಟೇ ಅಲ್ಲ. ಸಮಾಜ ಸುಧಾರಕರೂ ಆಗಿದ್ದ ಪಾಲ್ ದೇಶದ ಶೋಷಿತ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದರು. ಕಾರ್ಮಿಕರ ನ್ಯಾಯಯುತವಾದ ವೇತನಕ್ಕಾಗಿ ಶ್ರಮಿಸಿದ್ದರು. ಆಗಾಗ್ಗೆ ದೇಶದ ಅಭದ್ರತೆ ಬಗ್ಗೆ ಹೇಳುತ್ತಿದ್ದರು.

ಪಾಲ್ ಅವರದ್ದು ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಎಂಬುದಕ್ಕೆ ಅವರ ಜೀವನದ್ದೇ ಒಂದು ಉದಾಹರಣೆ ಕೊಡಬಹುದು; ಪಾಲ್ ಸಮಾಜದಲ್ಲಿ ಸುಧಾರಣೆ ತರಲೆಂದು ತಮ್ಮ ಹೆಂಡತಿ ತೀರಿಕೊಂಡಾಗ ಓರ್ವ ವಿಧವೆ ಮಹಿಳೆಯನ್ನು ಆ ಕಾಲಕ್ಕೆ ಮದುವೆಯಾಗಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದರು.ಮಮಾನವೀಯತೆಯ ಸಂದೇಶ ಸಾರಿದರು. ಪಾಲ್ ಅವರು ಅಂದು ಹೇಳಿದ ಮತ್ತು ಬರೆದಿಟ್ಟ ಸಾಕಷ್ಟು ವಿಚಾರಗಳು ಈಗಲೂ ಪ್ರಸ್ತುತ. ಭಾರತಕ್ಕೆ ಪೂರಕ. 

ನವ ಭಾರತದ ಕನಸನ್ನು ಕಂಡಿದ್ದ ಪಾಲ್ ತಮ್ಮ ಬದುಕಿನ ಕೊನೆಯ ಗಳಿಗೆಯವರೆಗೂ ಅಪ್ರತಿಮ ದೇಶಭಕ್ತನಾಗಿಯೇ ಉಳಿದಿದ್ದರು. ಅವರು ೧೯೩೨ ಏಪ್ರಿಲ್ ೨೦ ರಂದು ಈ ಲೋಕವನ್ನು ಅಗಲಿದರು.

⬅ ಮುಖಪುಟ