ನಮ್ಮನ್ನು ಅನುಸರಿಸಿ: Facebook Twitter Instagram YouTube

ಶ್ರೀ ಗುರುನಾನಕ್

ಅಪ್‌ಲೋಡ್ ಮಾಡಿದ ದಿನಾಂಕ: 10-06-2026 09:45

ಶ್ರೀ ಗುರುನಾನಕ್
ರತ್ನಪ್ರಸವಿ ತಾಯಿ ಭಾರತಾಂಬೆಯ ಮಡಿಲಲ್ಲಿ ಅಸಂಖ್ಯ ಶ್ರೇಷ್ಠ ಸಂತರುಗಳ ಅವತಾರವಾಗಿದೆ. ತಮ್ಮ ವಿಶಿಷ್ಟ ಚಿಂತನೆಗಳೊAದಿಗೆ ಅವರು ಮಾನವ ಜನಾಂಗದ ಕಲ್ಪನೆಗಳಿಗೆ ಹೊಸ ದಿಶೆಯನ್ನು ತೋರಿಸಿದ್ದಾರೆ. ಭಾರತ ಕಂಡ ಸಂತ ಪರಂಪರೆ ಶ್ರೇಷ್ಠ ಚಿಂತಕರಲ್ಲಿ ಒಬ್ಬರು, ಶೌರ್ಯ, ಸಾಹಸ, ಅಪ್ರತಿಮ ದೇಶಭಕ್ತಿಗೆ ಹೆಸರಾದ ಸಿಖ್ ಪಂಥದ ಸ್ಥಾಪಕರು ಶ್ರೀ ಗುರುನಾನಕ್.

ಪರಿಚಯ: ಗುರುನಾನಕ್ ೧೫ ಏಪ್ರಿಲ್ ೧೪೬೯ರಲ್ಲಿ ಪಂಜಾಬಿನ ರಾಯ್ ಬೊಯಿಲಿ ತಾಲ್ವಂಡಿ, ಪ್ರಸ್ತುತ ಪಾಕಿಸ್ಥಾನದ ನಾನ್‌ಕಾನ ಸಾಹೇಬ್ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಕಲ್ಯಾಣ ಚಂದ್‌ದಾಸ್ ಬೇಡಿ ತಾಲ್ವಂಡಿಯಲ್ಲಿ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿದ್ದರು. ತಾಯಿ ಮಾತಾ ತೃಪ್ತಾ. ಗುರುನಾನಾಕರಿಗೆ ಬಾಲ್ಯದಲ್ಲಿಯೇ ಅಧ್ಯಾತ್ಮದತ್ತ ಅತೀವ ಒಲವು. ಗುರುನಾನಕ್ ೧೬ ವಯಸ್ಸಿಗೆ ತಲುಪುತ್ತಿದ್ದಂತೆ ಇವರ ಸಹೋದರಿ ಸುಲ್ತಾನ್‌ಪುರದಲ್ಲಿ ಕೆಲಸಕ್ಕಾಗಿ ಕಳುಹಿಸುತ್ತಾರೆ. ದೆಹಲಿ ಸುಲ್ತಾನರ ಲೆಕ್ಕಾಚಾರವನ್ನು ಲಾಹೋರ್‌ನಲ್ಲಿ ಗಮನಿಸುವ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ. ಕಾಲಾಂತರದಲ್ಲಿ ಗುರುನಾನಕರ ಮೇಲೆ ವ್ಯವಹಾರದಲ್ಲಿ ಕಳ್ಳತನದ ಆರೋಪವನ್ನು ಹಾಕಲಾಗುತ್ತದೆ. ಇದರಿಂದ ತೀವ್ರವಾಗಿ ನೊಂದ ನಾನಕರು ಲೌಕಿಕ ಜೀವನವನ್ನು ತೊರೆಯಲು ನಿರ್ಧರಿಸಿ ಇದಕ್ಕಿದ್ದಂತೆ ಒಂದು ದಿನ ಸಂಜೆ ಊರ ಕೆರೆಯ ಬಳಿ ಕಾಣೆಯಾಗುತ್ತಾರೆ. ಗುರುನಾನಕರ ಅಲಭ್ಯತೆಯಿಂದ ಮನೆಯವರಿಗೆ ಗಾಬರಿಯಾಗುತ್ತದೆ. ಆದರೆ ಅಚ್ಚರಿ ಎಂಬAತೆ ಗುರುನಾನಕರು ಮೂರು ದಿನಗಳ ನಂತರ ಅದೇ ಸ್ಥಳದಲ್ಲಿ ಪ್ರತ್ಯಕ್ಷರಾಗುತ್ತಾರೆ. ಈ ಬಾರಿ ಅವರು ಹಿಂದಿನAತಿರುವುದಿಲ್ಲ. ನೋಡಲು ತೇಜೋಮಯವಾಗಿರುತ್ತಾರೆ.  ತನಗೆ ದಿವ್ಯದರ್ಶನವಾಗಿದೆ ತಾನು ಹಿಂದಿನAತಿಲ್ಲ ಎಂದು ನಾನಕರು ಸಮಾಜಕ್ಕೆ ತಿಳಿಸುತ್ತಾರೆ.

ನಂತರದ ಕಾಲಘಟ್ಟದಲ್ಲಿ ಸಮಾಜದಲ್ಲಿರುವ ಕಳಂಕಗಳನ್ನು ವಿರೋಧಿಸಿ ಸಮಾನತೆಯ ಸಂದೇಶವನ್ನು ಸಾರುತ್ತಾರೆ. ದೇವರು ಒಬ್ಬನೇ ಅವನು ನಿರ್ಗುಣ, ನಿರಾಕಾರ. ಆತ ಪ್ರತಿ ವಸ್ತುವಿನಲ್ಲೂ ಇದ್ದಾನೆ ಎಂಬುದನ್ನು ಸಮಾಜಕ್ಕೆ ಬೋಧಿಸುತ್ತಾರೆ. ಇವರ ಬೋಧನೆಗಳಿಗೆ ಆಕರ್ಷಿತರಾಗಿ ಇವರಿಗೆ ಮೊದಲ ಶಿಷ್ಯನಾಗಿ ದೊರೆತದ್ದು ಬಡಗಿ ಲಾಲ. ಮುಂದೆ ಸಂಪೂರ್ಣ ರಾಷ್ಟçದಲ್ಲಿ ಸಂಚರಿಸಿ ತಮ್ಮ ಚಿಂತನೆಯನ್ನು ಹರಡುತ್ತಾರೆ. ಭಾರತ ಮಾತ್ರವಲ್ಲದೆ ದೂರದ ಅರೇಬಿಯಾ, ಸಿರಿಯ, ಟಿಬೆಟ್, ದಕ್ಷಿಣ ಏಷ್ಯಾದ ಪ್ರವಾಸವನ್ನು ಕೈಗೊಳ್ಳುತ್ತಾರೆ ಇವರ ಬೋಧನೆಗಳಿಗೆ ಆಕರ್ಷಿತರಾಗಿ ವಿಶ್ವದಾದ್ಯಂತ ಇವರ ಶಿಷ್ಯರ ಸಂಖ್ಯೆ ಏರುತ್ತಾ ಹೋಗುತ್ತದೆ. ನಂತರದ ಸಮಯದಲ್ಲಿ ಕರ್ತಾರ್‌ಪುರದಲ್ಲಿ ರೈತನಾಗಿ ನೆಲೆಯೂರಿ ಜಾತಿ, ಧರ್ಮ, ಲಿಂಗವನ್ನು ಮೀರಿದ ಸಾಮೂಹಿಕ ಸಹಭೋಜನವನ್ನು ಪ್ರಾರಂಭಿಸುತ್ತಾರೆ. ಇವರ ಜೀವನದ ಪ್ರತಿ ಹಂತದಲ್ಲೂ ಇವರು ತುಂಬಿಕೊAಡದ್ದು ಸಮಾನತೆಯನ್ನು. ಹಿಂದುಸ್ತಾನಿ ಭಾಷೆಯಲ್ಲಿ ಕಲಿಯುವುದು ಎನ್ನುವುದಕ್ಕೆ ‘ಸೀಕ್’ ಎನ್ನುತ್ತಾರೆ. ಇವರ ಬೋಧನೆಗಳನ್ನು ಅರಿಯಲು ಬಂದ ವಿದ್ಯಾರ್ಥಿಗಳು ಮುಂದೆ ಸಿಖ್ಖರಾಗುತ್ತಾರೆ. 

ಗುರುನಾನಕರು ಒಬ್ಬ ಶ್ರೇಷ್ಠ ಕವಿಯು ಹೌದು. ಇವರು ತಮ್ಮ ಬೋಧನೆಗಳನ್ನು ೯೭೪ ಭಜನೆಗಳ ರೂಪದಲ್ಲಿ ಬರೆದಿಟ್ಟಿದ್ದರು. ಇದುವೇ ಮುಂದೆ ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹೇಬ್ ಆಗುತ್ತದೆ. ಸಮಾಜದಲ್ಲಿ ಸಮಾನತೆಯ ಜ್ಯೋತಿಯನ್ನು ಬೆಳಗಿಸಲು ಶ್ರಮಿಸಿದ, ಕ್ಷಾತ್ರ ಪರಂಪರೆಗೆ ಹೆಸರುವಾಸಿಯಾಗಿರುವ ಸಿಖ್ ಪಂತವನ್ನು ಸ್ಥಾಪಿಸಿದ ಗುರುನಾನಕ್ ೨೨ ಸೆಪ್ಟೆಂಬರ್ ೧೫೩೯ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ದೈವಾಧೀನರಾಗುತ್ತಾರೆ.

⬅ ಮುಖಪುಟ