ರಾಷ್ಟ್ರದ ಅಖಂಡತೆಯನ್ನು ಮತ್ತು ಸಾರ್ವಭೌಮತ್ವದ ರಕ್ಷಣೆಗಾಗಿ ಕಾಲಗಳ ಪರಿವೇ ಇಲ್ಲದೆ, ರಾಷ್ಟ್ರಪ್ರೇಮವನ್ನೇ ಶ್ರೇ? ಎಂದು ಪರಿಗಣಿಸಿ, ಸೇವಾಧರ್ಮವನ್ನು ಮಾಡಿ, ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧರು ಅನೇಕರು. ಅಂತಹ ಯೋಧರಲ್ಲಿ ಓರ್ವರು ಮೇಜರ್ ಸಂದೀಪ್ ಉನ್ನಿಕೃ?ನ್.
೧೯೭೭ರಲ್ಲಿ ಕೇರಳದ ಕೋಯಿಕ್ಕೋಡ್ ನಲ್ಲಿ ಜನಿಸಿದ್ದ ಸಂದೀಪ್ ಅವರ ತಂದೆ ನಿವೃತ್ತ ಇಸ್ರೋ ಅಧಿಕಾರಿ ಕೆ.ಉನ್ನೀಕೃ?ನ್ ಹಾಗೂ ತಾಯಿ ಧನಲಕ್ಷ್ಮೀ ಉನ್ನೀಕೃ?ನ್. ಚಿಕ್ಕಂದಿನಿಂದಲೂ ಭಾರತೀಯ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬ ತುಡಿತ ಹೊಂದಿದ್ದ ಸಂದೀಪ್ ಬಾಲ್ಯದ ದಿನಗಳಲ್ಲಿ ಉತ್ತಮ ಕ್ರೀಡಾಪಟು ಎಂದು ಗುರುತಿಸಿಕೊಂಡಿದ್ದರು.
೧೯೯೫ರಲ್ಲಿ ಭಾರತೀಯ ಸೇನೆಯ ಭಾಗವಾದ ಸಂದೀಪ್ ಮಹಾರಾ?ದ ಪುಣೆಯಲ್ಲಿರುವ ನ್ಯಾ?ನಲ್ ಡಿಫೆನ್ಸ್ ಅಕಾಡೆಮಿಗೆ ಸೇರಿದರು. ೧೯೯೯ ಜೂನ್ ೧೨ರಂದು, ಅವರು ಭಾರತೀಯ ಸೇನೆಯ ಬಿಹಾರ ರೆಜಿಮೆಂಟ್‌ನ ೭ ನೇ ಬೆಟಾಲಿಯನ್‌ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ೧೯೯೯ರಲ್ಲಿ ಆಪರೇ?ನ್ ವಿಜಯದಲ್ಲಿ, ಪಾಕಿಸ್ತಾನ ಪಡೆಗಳಿಂದ ಭಾರೀ ಫಿರಂಗಿ ಗುಂಡಿನ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ಮುಖಾಂತರ ತಮ್ಮ ಶತ್ರುಗಳ ವಿರುದ್ಧ ಹೋರಾಡಿದ ಸಂದೀಪ್ ೩೧ ಡಿಸೆಂಬರ್ ೧೯೯೯ ರ ಸಂಜೆ ಅವರು ಆರು ಸೈನಿಕರ ತಂಡವನ್ನು ಮುನ್ನಡೆಸಿದರು ಮತ್ತು ಎದುರಾಳಿಯಿಂದ ೨೦೦ ಮೀಟರ್ ದೂರದಲ್ಲಿ ಪೋಸ್ಟ್ ಸ್ಥಾಪಿಸಿ ತಮ್ಮ ಕೆಚ್ಚೆದೆಯನ್ನು ಸಾಬೀತುಪಡಿಸುತ್ತಾರೆ.
೨೦೦೩ ಜೂನ್ ೧೨ರಂದು ಕ್ಯಾಪ್ಟನ್ ಶ್ರೇಣಿಯಲ್ಲಿ ಸ್ಥಾನ ಪಡೆದ ಸಂದೀಪ್, ೨೦೦೫ ಜೂನ್ ೧೩ ರಂದು ಮೇಜರ್ ಶ್ರೇಣಿಗೆ ಬಡ್ತಿ ಪಡೆದರು. ಗುಲ್ಮಾರ್ಗ್ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನಲ್ಲಿಯೂ ತರಬೇತಿ ಪಡೆದ ಅವರು ಸಿಯಾಚಿನ್, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಹೈದರಾಬಾದ್ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ ನಂತರ, ಅವರು ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಓSಉ)ಗೆ ಆಯ್ಕೆಯಾದರು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು ಜನವರಿ ೨೦೦೭ರಲ್ಲಿ ಓSಉ ಯ ೫೧ ವಿಶೇ? ಕ್ರಿಯಾ ಗುಂಪಿನ (೫೧ Sಂಉ) ತರಬೇತಿ ಅಧಿಕಾರಿಯಾಗಿ ನಿಯೋಜಿಸಲಾಯಿತು ಮತ್ತು ಓSಉಯ ವಿವಿಧ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು.
೨೦೦೮ರ ನವೆಂಬರ್ ೨೬ ರಂದು ಪಾಕಿಸ್ತಾನದ ೧೦ ಭಯೋತ್ಪಾದಕರು ಸಮುದ್ರದ ಮೂಲಕ ಭಾರತದ ಮುಂಬೈನಲ್ಲಿ ನುಸುಳಿ ಬಾಂಬ್ ದಾಳಿಯ ಮೂಲಕ ೧೬೬ ಅಮಾಯಕ ಜನರನ್ನು ಹತ್ಯೆಗೈಯುತ್ತಾರೆ. ಭಾರತೀಯ ಸೇನೆಯ ಮೇಜರ್ ಸಂದೀಪ್ ಉನ್ನಿಕೃ?ನ್ ಅವರು ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಭಯೋತ್ಪಾದಕರನ್ನು ತಟಸ್ಥಗೊಳಿಸುವ ಜವಾಬ್ದಾರಿಯುತ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಓSಉ) ಘಟಕದ ಭಾಗವಾಗಿದ್ದರು. ಅವರು ಇತರೆ ಅಧಿಕಾರಿಗಳೊಂದಿಗೆ ಹೋಟೆಲ್‌ಗೆ ಪ್ರವೇಶಿಸಿದರು ಮತ್ತು ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿಯಲ್ಲಿ ತೊಡಗಿದರು. ಏಕಕಾಲದಲ್ಲಿ ೫೦ ಒತ್ತೆಯಾಳುಗಳನ್ನು ಸ್ಥಳಾಂತರಿಸಿದರು. ಹತ್ತಾರು ಜೀವಗಳನ್ನು ಉಳಿಸುವ ಸಂದರ್ಭದಲ್ಲಿ ಹೋಟೆಲ್‌ನೊಳಗೆ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದರು. ಗುಂಡಿನ ಚಕಮಕಿ ಮುಂದುವರೆಯುತ್ತಲೇ ಗುಂಡು ಅವರ ಎದೆಗೆ ನಾಟಿದಾಗಲೂ, "ದಯವಿಟ್ಟು ಮೇಲೆ ಹತ್ತಿ ಬರಬೇಡಿ, ನಾನೊಬ್ಬನೇ ಅವರನ್ನು ಎದುರಿಸುತ್ತೇನೆ", ಎಂದು ಹೇಳಿ ಶತ್ರುಗಳ ವಿರುದ್ಧ ಸೆಟೆದು ನಿಂತು ಮುನ್ನುಗ್ಗಿದ ವೀರ ಯೋಧ ಸಂದೀಪ್ ಉನ್ನಿಕೃ?ನ್ ಅಂದು ಅನೇಕರನ್ನು ಉಳಿಸುವುದಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡುತ್ತಾರೆ.
ಕೆಚ್ಚೆದೆಯ ಯೋಧ ಸಂದೀಪ್ ಉನ್ನಿಕೃ?ನ್ ತಮ್ಮ ದೇಶಸೇವೆಗೆ ಸೇನಾ ಸೇವಾ ಮೆಡಲ್, ಸ್ಪೆಶಲ್ ಸರ್ವೀಸ್ ಮೆಡಲ್, ಆಪರೇಶನ್ ಪರಾಕ್ರಮ್ ಮೆಡಲ್ ಜೊತೆಗೆ ಅಶೋಕ ಚಕ್ರ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗುತ್ತಾರೆ.
ಶಶಿ ಕಿರಣ್ ಟಿಕ್ಕಾ ಅವರ ನಿರ್ದೇಶನದಲ್ಲಿ ಮೇಜರ್ ಸಂದೀಪ್ ಉನ್ನಿಕೃ?ನ್ ಅವರ ಜೀವನಾಧಾರಿತ ಚಲನಚಿತ್ರವಾದ ಮೇಜರ್ ೨೦೨೨ರಂದು ತೆರೆ ಕಂಡಿದ್ದು, ೨೬/೧೧ರ ಮುಂಬೈ ದಾಳಿಯಲ್ಲಿ ಜನರ ರಕ್ಷಣೆಗಾಗಿ ಪ್ರಾಣತೆತ್ತ ವೀರಯೋಧನ ಕುರಿತು ಇಂದಿನ ಯುವಜನತೆಯ ಮುಂದಿರಿಸಲಾಗಿದೆ.