ನಮ್ಮನ್ನು ಅನುಸರಿಸಿ: Facebook Twitter Instagram YouTube

ಭೀಮಸೇನ ಜೋಷಿ (೪ ಫೆಬ್ರವರಿ, ೧೯೨೨ - ೨೪ ಜನವರಿ, ೨೦೧೧)

ಅಪ್‌ಲೋಡ್ ಮಾಡಿದ ದಿನಾಂಕ: 02-04-2026 14:25

ಭೀಮಸೇನ ಜೋಷಿ (೪ ಫೆಬ್ರವರಿ, ೧೯೨೨ - ೨೪ ಜನವರಿ, ೨೦೧೧)
"ಜೋಷಿ ನೀವು ರಾಜ್ಯಸಭೆಗೆ ಯಾಕೆ ಹೋಗಬಾರದು?" ಎಂದು ಯಾರೋ ಬಾಯಿ ಮಾತಿಗೆ ಹೇಳಿದಾಗ "ನನ್ನಲ್ಲಿರುವ ಎರಡು ತಂಬೂರಿಗಳೇ ರಾಜ್ಯಸಭೆ ಮತ್ತು ಲೋಕಸಭೆ" ಎಂದವರು ತಮ್ಮ ಮಾರ್ಧ್ವನಿಯಿಂದ ಇಡೀ ಭಾರತೀಯರನ್ನು ಕಾಡಿದ ಈ ನೆಲದ ಅಸಾಮಾನ್ಯ ಗಾಯಕ ಪಂ. ಭೀಮಸೇನ ಜೋಷಿ. ಜೋಷಿ ದಶಕಗಳ ಕಾಲ ಶುದ್ಧವಾಗಿ ಹರಿದ ನಾದಗಂಗೆ. ಅವರು ಸಂಗೀತವನ್ನೇ ಬದುಕಾಗಿಸಿಕೊಂಡು ಸಂಗೀತಕ್ಕಾಗಿಯೇ ಬದುಕಿದವರು. ತಮ್ಮ ಗಾಯನದಿಂದ ಎಲ್ಲವನ್ನು ಮತ್ತು ಎಲ್ಲರನ್ನೂ ಗೆದ್ದವರು. ನಿಜ ಅರ್ಥದಲ್ಲಿ ಜೋಷಿ ಪವಾಡ ಪುರು?. ಅವರು ತಮ್ಮ ಅಪಾರವಾದ ಸಂಗೀತ ಸಾಧನೆಯಿಂದಲೇ ತಲೆಮಾರುಗಳನ್ನು ಮೋಡಿಗೊಳಿಸಿದವರು. ತಾವು ಇರುವ ಕಾಲಕ್ಕೂ ಸಂಗೀತದ ವಿಸ್ಮಯ ಲೋಕವೊಂದನ್ನು ಸೃಷ್ಟಿಸಿದ್ದವರು. ತಮ್ಮ ಅಸಂಖ್ಯಾತ ಶಿ?ರಿಗೆ ಸ್ವರ ಸಂಸ್ಕಾರವನ್ನು ಕಲಿಸಿದವರು.

ಭೀಮಸೇನ ಜೋಷಿ ಪರಿಚಯ: ಭಾರತರತ್ನ ಪಂ.ಭೀಮಸೇನ ಜೋಷಿ ಮೂಲತಃ ಕರ್ನಾಟಕದ ಗದಗ ಜಿಲ್ಲೆಯವರು. ಗುರುರಾಜ ಜೋಷಿ ಮತ್ತು ಗೋದುಬಾಯಿ ದಂಪತಿ ಪುತ್ರರಾಗಿ ೧೯೨೨ ಫೆಬ್ರವರಿ ೪ ರಂದು ಜನಿಸಿದ ಜೋಷಿಯವರು ಬಾಲ್ಯದಲ್ಲೇ ಸಂಗೀತಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಹಸಿವು ಮತ್ತು ನೀರಡಿಕೆಯನ್ನು ಮರೆತು ಸಂಗೀತವನ್ನು ಅಭ್ಯಸಿಸಿದ್ದರು. ಬಹುಮುಖ್ಯವಾಗಿ ಜೋಷಿ ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಸಿದ್ಧರಾಗಿದ್ದವರು. ಕೀರ್ತನೆ, ದಾಸಪದ್ಯ, ಭಜನೆ, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಹಾಡುವ ಮೂಲಕ ಜೋಷಿ ಎಲ್ಲರ ಮನಗಳಿಗೆ ಹತ್ತಿರವಾಗಿದ್ದರು.

ಕನ್ನಡದಲ್ಲೂ ಹಾಡಿದ್ದ ಕನ್ನಡಿಗ ಜೋಷಿ: "ಭಾಗ್ಯದ ಲಕ್ಷ್ಮಿ ಬಾರಮ್ಮ" ಎಂಬ ಕನ್ನಡದ ದಾಸ ಪದ್ಯವನ್ನು ಜೋಷಿ ಮಾಂತ್ರಿಕವಾಗಿ ಹಾಡಿ ಕನ್ನಡಿಗರನ್ನೂ ಬೆರಗುಗೊಳಿಸಿದವರು. ಜೋಷಿ ಭಕ್ತಿ ಭಾವದಿಂದ ಹಾಡಿದ ಹತ್ತಾರು ಕನ್ನಡ ಭಜನ ಗೀತೆಗಳನ್ನು ಕೇಳಿ ಈಗಲೂ ಆನಂದಪಡುವವರಿದ್ದಾರೆ.

ಪ್ರಶಸ್ತಿ ಮತ್ತು ಪುರಸ್ಕಾರ: ಜೋಷಿ ಅವರಿಗೆ ಪದ್ಮಪ್ರಶಸ್ತಿ ಬಂದಾಗ ಅವರ ಶಿ?ರು ಅವರನ್ನು ಅಭಿನಂದಿಸಲು ಹಾರ, ತುರಾಯಿಗಳೊಂದಿಗೆ ಹೋದಾಗ "ಅದನ್ನು ಅಲ್ಲಿಡಿ ನಡೀರಿ ತಂಬೂರಿ ಹಚ್ಚಿ" ಎಂದಿದ್ದರಂತೆ. ಅಂದರೆ ಭೀಮಸೇನ ಜೋಷಿ ಎಂದಿಗೂ ಪ್ರಶಸ್ತಿಯ ಗೀಳಿಗೆ ಬಿದ್ದವರಲ್ಲ. ಪ್ರಚಾರ ಮತ್ತು ಪ್ರಸಿದ್ಧಿಯ ಹಿಂದೆ ಓಡಿದವರೂ ಅಲ್ಲ. ತಮಗೆ ಸಿಕ್ಕಿದ್ದನ್ನು ವಿನಯವಾಗಿ ತಮ್ಮದಾಗಿಸಿಕೊಂಡವರು. ಮಹಾ ಮೌನಿಯಾಗಿಯೇ  ಅಸಾಧ್ಯವಾದದ್ದನ್ನು ಸಂಗೀತ ಕ್ಷೇತ್ರದಲ್ಲಿ ಸಾಧಿಸಿದ  ಜೋಷಿ ಪದ್ಮಶ್ರೀ, ಪದ್ಮವಿಭೂ?ಣ, ದೇಶಿಕೋತ್ತಮ, ಗೌರವ ಡಾಕ್ಟರೇಟ್, ಸ್ವರ ಭಾಸ್ಕರ ಸಂಗೀತಚಾರ್ಯ  ಹೀಗೆ ನೂರಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ  ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿಗೂ ಭಾಜನರಾದವರು.

ಶತಮಾನದ ಅದ್ಭುತ ವ್ಯಕ್ತಿ ಮತ್ತು ಮಹಾನ್ ಸಾಧಕ ಭೀಮಸೇನ ಜೋಷಿ ಅವರು ಜನವರಿ ೨೪ ೨೦೧೧ ರಂದು ಭೂಲೋಕದಲ್ಲಿ ಹಾಡುವುದನ್ನು ನಿಲ್ಲಿಸಿದರು. ಅರ್ಥಾತ್ ಕೊನೆಯುಸಿರೆಳೆದರು. 

⬅ ಮುಖಪುಟ