"ಐರೋಪ್ಯರಿಗೆ ಈ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಗುಣಧರ್ಮ ತಿಳಿದಿದ್ದರೆ ನೋಬೆಲ್ ಪಾರಿತೋ?ಕಕ್ಕೆ ಅದನ್ನು ಬಿಟ್ಟರೆ ಯಾವ ಕೃತಿಯೂ ಅರ್ಹವಲ್ಲ ಎಂದು ಅವರು ನಿರ್ಧರಿಸುತ್ತಿದ್ದರು" ಎಂದವರು ಈ ನಾಡಿನ ಪ್ರಸಿದ್ಧ ಪತ್ರಕರ್ತ ಮತ್ತು ಲೇಖಕ ಪಾಟೀಲ ಪುಟ್ಟಪ್ಪ. ಅವರ ಮಾತು ಅಕ್ಷರಶಃ ನಿಜ.ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಈ ನೆಲದ ಸರ್ವಶ್ರೇ? ಮಹಾಕಾವ್ಯ. ’ಪಂಪ ಮತ್ತು ರನ್ನನ ಕಾಲಕ್ಕೇ ಮಹಾಕಾವ್ಯಗಳ ಯುಗ ಮುಗಿದು ಹೋಯಿತು ಈಗ ಅದರ ಸೃಷ್ಟಿ ಕ?’ ಎಂಬ ಮಾತುಗಳ ಮಧ್ಯೆಯೇ ಕುವೆಂಪು ಬಹು ಸಲೀಸಾಗಿ ಅದ್ಭುತ ಮತ್ತು ಪರಿಣಾಮಕಾರಿಯಾದ ಮಹಾಕಾವ್ಯವೊಂದನ್ನು ಬರೆದು ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಭಾ? ಬರೆದರು.
ಪರಿಚಯ: ಶ್ರೀ ರಾಮಾಯಣ ದರ್ಶನಂ ಕುವೆಂಪು ಅವರ ನಿಜವಾದ ಸಾಧನೆ. ಅದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಮಹಾಕಾವ್ಯ. ಮೂಲದಲ್ಲಿ ವಾಲ್ಮೀಕಿಯ ರಾಮಾಯಣವನ್ನು ಆಧರಿಸಿ ಈ ಮಹಾಕಾವ್ಯವನ್ನು ಕುವೆಂಪು ರಚಿಸಿದ್ದರೂ ಇಲ್ಲಿ ನಮಗೆ ಬೇರೆಯದ್ದೇ ಲೋಕ ಕಾಣುತ್ತದೆ. ಆಧುನಿಕತೆಗೆ ತಕ್ಕುದಾದ ತತ್ವಗಳನ್ನು ತಮ್ಮ ಈ ಮಹಾಕಾವ್ಯದಲ್ಲಿ ಪ್ರತಿಪಾದಿಸಿ ಕುವೆಂಪು ಹೊಸ ಆಯಾಮಗಳನ್ನು ಸೃಷ್ಟಿಸಿದ್ದಾರೆ ಮತ್ತು ನಮ್ಮನ್ನು ಚಿಂತನೆಗೆ ಹಚ್ಚಿದ್ದಾರೆ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲೂ ರಾಮನಿದ್ದಾನೆ. ಅವನು ಮಾನವ ಪ್ರೀತಿಯ ರಾಮ. ಅಹಿಂಸಾವಾದಿ ರಾಮ. ವಾಲ್ಮೀಕಿ ತನ್ನ ರಾಮಾಯಣದಲ್ಲಿ ಯುದ್ಧದ ಕತೆಯನ್ನು ಹೇಳಿದರೆ ಕುವೆಂಪು ತಮ್ಮ ಮಹಾಕಾವ್ಯದಲ್ಲಿ ಮನು?ನ ಸಹಜ ಗುಣ ಮತ್ತು ಅವನ ಅಂತಃಕರಣವನ್ನು ಬಿಚ್ಚಿಟ್ಟಿದ್ದಾರೆ. ಬಹುಮುಖ್ಯವಾಗಿ ಈ ಮಹಾಕಾವ್ಯದುದ್ದಕ್ಕೂ ಸ್ತ್ರೀ ಸಮಾನತವಾದ ಕಾಣುತ್ತದೆ. ಕುವೆಂಪು ಹೆಣ್ಣಿನ ದನಿಯಾಗಿದ್ದಾರೆ. ಹೆಣ್ಣಿನ ಮೂಲಕವೇ ಈ ನೆಲದ ಎಲ್ಲಾ ಕತೆಯನ್ನು ಹೇಳಿಸಿದ್ದಾರೆ. ಮಹಾಕಾವ್ಯದಲ್ಲಿ ಹೆಣ್ಣು ಗಂಡು ಇಬ್ಬರನ್ನೂ ಒಂದೇ ತೂಕದಲ್ಲಿ ಇಟ್ಟಿದ್ದಾರೆ.
ಇನ್ನು ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ರಾಮ ನಾಯಕನಲ್ಲ. ಅವನೊಬ್ಬ ಸಾಮಾನ್ಯ ಪಾತ್ರಧಾರಿ ಅ?. ಊರ್ಮಿಳಾ, ಮಂಥರೆ, ಸುಗ್ರೀವ ಈ ಪಾತ್ರಗಳಿಗೆ ಜೀವ ತುಂಬುವ ಮತ್ತು ಅವರ ಮೂಲಕ ಆಧುನಿಕ ಜಗತ್ತಿನ ವಾಸ್ತವತೆಯನ್ನು ತೆರೆದಿಡುವ ಪ್ರಯತ್ನವನ್ನು ಕುವೆಂಪು ಮಾಡಿದ್ದಾರೆ. ಅವರು ಯಾವ ಪಾತ್ರಕ್ಕೂ ಪುರಾಣದ ಪೋ?ಕುಗಳನ್ನು ತೊಡಿಸದೆ ಮತ್ತು ದೈವತ್ವದ ಸ್ಥಾನವನ್ನು ಕೊಡದೆ ಸಾಮಾನ್ಯ ವ್ಯಕ್ತಿಗಳಂತೆ ಸಮಾಜದ ಮುಂದೆ ತಂದು ನಿಲ್ಲಿಸಿದ್ದಾರೆ. ಹಾಗೆ ಎಲ್ಲಿಯೂ ನಡೆದು ಹೋದ ಕತೆ ಎಂದು ಬಿಂಬಿಸದೆ ನಡೆಯುತ್ತಿರುವ ಕತೆ ಎಂಬಂತೆ ತಮ್ಮ ಅಪಾರ ಕಾವ್ಯ ಕಸುವಿನಿಂದ ಸಮರ್ಥವಾಗಿ ತೋರಿಸಿದ್ದಾರೆ. ಕುವೆಂಪು ತಮ್ಮ ಈ ಮಹಾಕಾವ್ಯದಲ್ಲಿ ಜಾತ್ಯತೀತ, ಧರ್ಮತೀತ ಮತ್ತು ಸಮಾನತೆಯ ತತ್ವವನ್ನು ಸಾರಿದ್ದಾರೆ. ಎಲ್ಲರೊಳಗೊಂದಾಗಿ ಬದುಕುವ ಇರಾದೆ ತೋರಿದ್ದಾರೆ. ಅವರು ಸ್ವಾತಂತ್ರ್ಯ ಪೂರ್ವ ಭಾರತದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಆ ಕಾಲದ ಸಂಕೀರ್ಣ ಅನುಭವವೂ ಇದೆ. ಸರಳ ರಗಳೆ, ಛಂದಸ್ಸು, ಅಲಂಕಾರ ಮತ್ತು ಉಪಮೆಗಳ ಬಳಕೆ ಮಾಡಿ ಮಹಾಕಾವ್ಯವನ್ನು ಪ್ರಸ್ತುತಿ ಮಾಡಿರುವ ಕುವೆಂಪು ನಿಜಕ್ಕೂ ಕಾವ್ಯ ನ್ಯಾಯವನ್ನು ಒದಗಿಸಿದ್ದಾರೆ.
ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಅಯೋಧ್ಯಾ, ಕಿಷ್ಕಿಂದ, ಲಂಕಾ ಮತ್ತು ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳಿವೆ. ಬರೋಬ್ಬರಿ ೨೨,೨೯೧ ಸಾಲುಗಳನ್ನು ಕುವೆಂಪು ಇಲ್ಲಿ ಬರೆದಿದ್ದಾರೆ. ಶ್ರೀ ರಾಮಾಯಣ ದರ್ಶನಂ ಕನ್ನಡದ ಮಹೋನ್ನತ ಕೃತಿ. ಎಲ್ಲಾ ಅರ್ಹತೆಗಳನ್ನೂ ಮೀರಿದ ಕೃತಿ. ಎಲ್ಲದಕ್ಕೂ ಅರ್ಹವಾದ ಕೃತಿ.
ಹೆಚ್ಚಿನ ಮಾಹಿತಿ: ಶ್ರೀ ರಾಮಾಯಣ ದರ್ಶನಂ ಕೃತಿಯ ಮೊದಲ ಭಾಗ ೧೯೪೯ ರಲ್ಲಿ ಮತ್ತು ಎರಡನೆಯ ಭಾಗ ೧೯೫೧ ರಲ್ಲಿ ಪ್ರಕಟವಾಗಿದೆ. ಈ ಕೃತಿಗೆ ೧೯೬೮ರಲ್ಲಿ ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ದಕ್ಕಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. ಸಾಕ? ಭಾರತೀಯ ಭಾ?ಗಳಿಗೆ ಈ ಕೃತಿ ಅನುವಾದಗೊಂಡಿದೆ.