’ಕೂಜಂತಂ ರಾಮ ರಾಮೇತಿ
ಮಧುರ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೋಕಿಲಮ್’
ಕಾವ್ಯವೆಂಬ ಮರದ ಮೇಲೆ ಕುಳಿತು ರಾಮ ರಾಮ ಎಂದು ಇಂಪಾಗಿ, ರಾಗ ಮತ್ತು ಲಯಬದ್ಧವಾಗಿಯೂ ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ ಎನ್ನುತ್ತದೆ ಮೇಲಿನ ಸ್ತೋತ್ರ.
ವಾಲ್ಮೀಕಿ ಈ ನೆಲದ ಶ್ರೇ? ಕವಿ. ಅವರು ಹಿಂದೂ ಧರ್ಮದಲ್ಲಿನ ಪ್ರಮುಖ ಗುರುಗಳಲ್ಲಿ ಒಬ್ಬರು. ಶ್ರೀ ರಾಮನಿಗೆ ದೈವತ್ವದ ಸ್ಥಾನವನ್ನು ಒದಗಿಸಿ ರಾಮಾಯಣ ಎಂಬ ಮಹಾಕಾವ್ಯವನ್ನು ಬರೆದವರು. ರಾಮನನ್ನು ಭಕ್ತಿಯಿಂದ ಸ್ತುತಿಸುವ ನಾವು ವಾಲ್ಮೀಕಿಯನ್ನೂ ಸ್ತುತಿಸಬೇಕು. ’ರಾಮ’ ಎಂಬ ಎರಡಕ್ಷರದ ಅದ್ಭುತವನ್ನು ಜಗಜ್ಜಾಹೀರು ಗೊಳಿಸಿದವರು ವಾಲ್ಮೀಕಿ. ವಾಲ್ಮೀಕಿ ಎಂಬ ಒಬ್ಬ ಸಾಮಾನ್ಯ ವ್ಯಕ್ತಿ ರೋಚಕ ಎನಿಸುವ ರಾಮಾಯಣವನ್ನು ಬರೆಯದೇ ಹೋಗಿದ್ದರೆ ನಮಗೆ ರಾಮ, ಲಕ್ಷ್ಮಣ, ಸೀತೆ, ಹನುಮಾ ಯಾರೊಬ್ಬರೂ ಗೊತ್ತಾಗುತ್ತಿರಲಿಲ್ಲ.
’ರಾಮ’ ಮಂತ್ರವನ್ನು ಎದೆಯಲ್ಲಿ ಬಿತ್ತಿಕೊಂಡು ರಾಮನ ಕತೆಯನ್ನು ರಾಮಾಯಣವಾಗಿಸಿ ಜಗತ್ತನ್ನು ಬೆರಗುಗೊಳಿಸಿದ ವಾಲ್ಮೀಕಿ ಸರ್ವ ಕಾಲಕ್ಕೂ ಸಲ್ಲುವ ಕವಿ ಮತ್ತು ದೇವ ಋಷಿ.
ವಾಲ್ಮೀಕಿ ಪೂರ್ವ ಹೆಸರು ರತ್ನಾಕರ ಅಂತಲೂ ಅವರು ತಾವು ಯುವಕನಾಗಿದ್ದಾಗ ಬೇಡನಾಗಿ ಕಾಡು ಮೇಡುಗಳಲ್ಲಿ ಅಲೆಮಾರಿಯಂತೆ ಸುತ್ತಾಡುತ್ತಿದ್ದರು ಎಂತಲೂ ರಾಮಾಯಣವನ್ನು ಓದಿದ ಮತ್ತು ಕೇಳಿದ ನಮಗೆ ತಿಳಿದೇ ಇದೆ. ಮುಂದೊಮ್ಮೆ ಭಗವಾನ್ ಶ್ರೀರಾಮನು ವಾಲ್ಮೀಕಿಯೊಳಗೆ ಪ್ರವೇಶಿಸಿ ಅವರನ್ನು ಭಕ್ತನಾಗಿ ಮಾಡಿ, ಬೇಡನೊಬ್ಬನನ್ನು ಮಹಾನ್ ಋಷಿಯಾಗಿಸಿ ರಾಮಾಯಣ ಎಂಬ ಶ್ರೇ? ಮಹಾಕಾವ್ಯವನ್ನು ಬರೆಯುವಂತೆ ಮಾಡಿರಬಹುದು ಎಂದೂ ನಂಬಲಾಗಿದೆ.
ರಾಮಾಯಣದ ಹುಟ್ಟು: ವಾಲ್ಮೀಕಿ ಒಮ್ಮೆ ನದಿ ತೀರದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯೊಂದನ್ನು ಅನ್ಯಾಯವಾಗಿ ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಅತೀವ ಸಂಕಟದಿಂದ ಚೀರಿಕೊಳ್ಳುತ್ತದೆ. ಹಕ್ಕಿಯೊಂದರ ನೋವಿನ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಶ್ಲೋಕ ಒಂದರ ಮೂಲಕ ಶಪಿಸುತ್ತಾರೆ. ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಎಂದು ಹೇಳಲಾಗುತ್ತದೆ.
ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಬಾಯಿಂದ ಹೊರಹೊಮ್ಮಿದ ಮಾತುಗಳನ್ನು ಗಮನಿಸಿ ಆ ವೇಳೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ಈ ನೆಲದ ಅದ್ಭುತ ಕತೆಯಾದ ರಾಮಾಯಣ ಕಾವ್ಯವನ್ನು ರಚಿಸಲು ಹೇಳುತ್ತಾರೆ. ನಾರದರಿಂದ ಅವರಿಗೆ ತಿಳಿದಿದ್ದ ರಾಮನ ಕತೆಯನ್ನು ಆಲಿಸಿಕೊಂಡು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವನ್ನು ಬರೆದರು. ಮುಂದೆ ರಾಮಾಯಣ ಮನೆಮನೆಯ ಮಾತಾಯಿತು. ರಾಮ ದೇವರಾದನು. ರಾಮನನ್ನು ಎಲ್ಲವೂ ಆಗಿಸಿದ ವಾಲ್ಮೀಕಿ ಆದಿಕವಿ ಅ? ಅಲ್ಲ ರಸ ಕವಿ, ಋಷಿ ಕವಿ, ಭಾರತವೆಂಬ ಪುಣ್ಯ ನೆಲದ ಅದ್ಭುತ ಕವಿ.
ವಾಲ್ಮೀಕಿಯನ್ನು ಸ್ಮರಿಸಲೆಂದೇ ಆಶ್ವಯುಜ ಶುದ್ಧ ಹುಣ್ಣಿಮೆಯ ದಿನವನ್ನೇ ಮಹರ್ಷಿ ವಾಲ್ಮೀಕಿ ಜಯಂತಿ ಎಂದು ಆಚರಿಸಲಾಗುತ್ತಿದೆ. ಈ ನೆಲದ ಕತೆಯನ್ನು ಬರೆದ ವಾಲ್ಮೀಕಿಯನ್ನೇ ನಾಯಕನನ್ನಾಗಿಸಿ ಎ? ಕವಿಗಳು ಇಲ್ಲಿಯವರೆಗೆ ಸಾಕ? ಬೆರಗಿನ ಕೃತಿಗಳನ್ನು ಬರೆದಿದ್ದಾರೆ.