ನಮ್ಮನ್ನು ಅನುಸರಿಸಿ: Facebook Twitter Instagram YouTube

ಭಾರತೀಯ ನೌಕಾಪಡೆ ದಿನ

ಅಪ್‌ಲೋಡ್ ಮಾಡಿದ ದಿನಾಂಕ: 02-04-2026 14:14

ಭಾರತೀಯ ನೌಕಾಪಡೆ ದಿನ
ಭಾರತದ ಸಾಧನೆ ಮತ್ತು ಪರಾಕ್ರಮವನ್ನು ಬರಿಯ ಮಾತುಗಳಲ್ಲಿ ಹೇಳುವುದು ಕ? ಸಾಧ್ಯ. ಈ ನಾಡಿನ ಶೌರ್ಯದ ಅನ್ವರ್ಥವಾಗಿ ನಿಲ್ಲಬಲ್ಲ ವ್ಯವಸ್ಥೆಗಳಲ್ಲಿ ಭಾರತೀಯ ನೌಕಪಡೆಯೂ ಪ್ರಮುಖವಾದದ್ದು. ಡಿ.೪ ರಂದು ರಾಷ್ಟ್ರೀಯ ನೌಕಾಸೇನಾ ದಿನವನ್ನು ನಾವು ಆಚರಿಸುತ್ತೇವೆ.

ಭಾರತೀಯ ನೌಕಪಡೆಯ ಸಾಧನೆ: ಸರಿಯಾಗಿ ೫೨ ವ?ಗಳ ಹಿಂದೆ ಇಂಡೋ- ಪಾಕ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವು ಸೋಲಿನ ಭೀತಿ ಅನುಭವಿಸಿತು. ಸೋಲಿನಿಂದ ಹತಾಶರಾಗಿದ್ದ ಪಾಕಿಗಳು ಹೇಗಾದರೂ ಭಾರತೀಯರನ್ನು ಹಿಮ್ಮೆಟ್ಟಿಸಬೇಕು ಎಂದು ನಿರ್ಧರಿಸಿ ತನ್ನ ಕೆಟ್ಟ ಚಾಳಿಯಿಂದ ಕಳ್ಳ ದಾರಿಯನ್ನು ಹಿಡಿದು ೧೯೭೧ರ ಡಿಸೆಂಬರ್ ಮೂರರ ಸಂಜೆ ಇದ್ದಕ್ಕಿದ್ದಂತೆ ಭಾರತೀಯ ವಾಯುನೆಲೆಗಳ ಮೇಲೆ ಆಕ್ರಮಣ ಪ್ರಾರಂಭಿಸಿತು. ಅದಕ್ಕೆಲ್ಲ ಕ್ಯಾರೆ ಎನ್ನದ ಭಾರತವು ಸ್ವಲ್ಪವೂ ವಿಚಲಿತವಾಗದೆ ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರವಾಗಿ ನಿರ್ಘಾಟ್, ವೀರ್ ಮತ್ತು ನಿಪತ್ ಎನ್ನುವ ೩ ಕ್ಷಿಪಣಿ ದೋಣಿಗಳನ್ನು ಕರಾಚಿ ಕಡೆಗೆ ರವಾನಿಸಿತು. ಅ? ಅಲ್ಲದೆ ಆಪರೇ?ನ್ ಟ್ರೈಡೆಂಟ್ ಸಮಯದಲ್ಲಿ ಭಾರತೀಯ ನೌಕಾಪಡೆಯು PಓS ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿ ಗಹಗಹಿಸಿತು. ಜತೆಗೆ ನೂರಾರು ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿಗಳನ್ನು ಸಂಹರಿಸಲಾಯಿತು ಭಾರತದ ನೌಕಾಪಡೆಯ ಅಂದಿನ ಮಹತ್ವದ ಸಾಧನೆಯನ್ನು ಭಾರತೀಯರು ನೆನಪಿಸಿಕೊಳ್ಳಬೇಕು ಎಂಬ ಸಲುವಾಗಿ ಪ್ರತಿ ವ? ಡಿಸೆಂಬರ್ ೪ರಂದು ನೌಕಾಪಡೆಯ ದಿನವನ್ನಾಗಿ ಭಾರತವು ಆಚರಿಸುತ್ತಿದೆ. 

ಭಾರತದ ನೌಕಾಪಡೆ ನಮ್ಮ ಹೆಮ್ಮೆ: ಭಾರತೀಯ ನೌಕಾಪಡೆಯು ಭಾರತೀಯ ರಕ್ಷಣೆ ಪಡೆಗಳ ಒಂದು ಅಂಗವಾಗಿದೆ. ಅದರಲ್ಲೂ ನಮ್ಮ ನೌಕಾಪಡೆ ಜಗತ್ತಿನ ಐದನೆಯ ಅತಿದೊಡ್ಡ ನೌಕಾಪಡೆಯಾಗಿದೆ. ಭಾರತೀಯ ನೌಕಾಪಡೆ ೧೫೫ ನೌಕೆಗಳನ್ನು ಹೊಂದಿದ್ದು, ಬಲಿ?ವಾದ ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧನೌಕೆಯನ್ನು ಹೊಂದಿದೆ. ಸಂಪೂರ್ಣ ಏ? ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು. ಅಲ್ಲಿ ೨೦೦೦ಕ್ಕೂ ಹೆಚ್ಚು ನೌಕಾ ಕಮಾಂಡೋಗಳಿದ್ದಾರೆ. 

ಭಾರತೀಯ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ: ಮಹಾರಾಜ ಶಿವಾಜಿ ಭಾರತೀಯ ನೌಕಾಪಡೆಯ ಪಿತಾಮಹ. ಇತ್ತೀಚಿಗ? ನೌಕಾಪಡೆಯ ಧ್ವಜದಲ್ಲಿ ಶಿವಾಜಿ ಮಹಾರಾಜರ ರಾಜ ಮುದ್ರೆಯನ್ನು ಹಾಕಲಾಗಿದೆ. ಅ?ಕ್ಕೂ ದೇಶಕ್ಕೆ ಸ್ವಾತಂತ್ರ್ಯ ಲಭಿಸುವವರೆಗೂ ಸೇಂಟ್ ಜಾರ್ಜ್ ಕ್ರಾಸ್ ಎನ್ನಲಾಗುವ ಕೆಂಪು ಬಣ್ಣದ ಪ್ಲಸ್ ಆಕಾರದ ಒಂದು ಮೂಲೆಯಲ್ಲಿ ಬ್ರಿಟನ್ ಧ್ವಜವನ್ನು ಅಳವಡಿಸಲಾಗಿತ್ತು. ೧೯೫೦ರಲ್ಲಿ ಯೂನಿಯನ್ ಜಾಕ್ ಸ್ಥಳದಲ್ಲಿ ಭಾರತದ ರಾಷ್ಟ್ರಧ್ವಜವನ್ನು ನೌಕಾಪಡೆಗೆ ಅಳವಡಿಸಿದರು. ಮತ್ತೆ ೨೦೦೧ರಲ್ಲಿ ತ್ರಿವರ್ಣ ಧ್ವಜವನ್ನು ಉಳಿಸಿಕೊಂಡು ಸೇಂಟ್ ಜಾರ್ಜ್ ಕ್ರಾಸ್ ತೆಗೆಯಲಾಯಿತು, ಒಂದು ಕಡೆಗೆ ನೌಕಾದಳದ ಲಾಂಛನವನ್ನು ಅಳವಡಿಸಲಾಯಿತು. ೨೦೦೪ರಲ್ಲಿ ಮತ್ತೆ ಹಿಂದಿನ ಸ್ಥಿತಿಗೆ ಧ್ವಜದ ಸ್ವರೂಪ ಬದಲಾಯಿತು. ಆದರೆ ಇದೀಗ ಮತ್ತೆ ನೌಕಾದಳದ ಲಾಂಛನವನ್ನು ಸೇರ್ಪಡೆ ಮಾಡಿ ಸೇಂಟ್ ಜಾರ್ಜ್ ಕ್ರಾಸ್ ಅನ್ನು ತೆಗೆದುಹಾಕಲಾಗಿದೆ. ಈಗ ಹೊಸ ಧ್ವಜದಲ್ಲಿ ಒಂದು ಮೂಲೆಯಲ್ಲಿ ತ್ರಿವರ್ಣ ಧ್ವಜವಿದ್ದರೆ ಮತ್ತೊಂದು ಮೂಲೆಯಲ್ಲಿ ನೌಕಾದಳದ ಲಾಂಛನವಿದೆ. ಇದರಲ್ಲೂ ಬದಲಾವಣೆ ಮಾಡಲಾಗಿದ್ದು, ಹಿನ್ನೆಲೆ ಬಣ್ಣವಾಗಿ ನೆವಿ ಬ್ಲೂ ಬಳಸಲಾಗಿದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಈ ಭಾಗದ ಆಕಾರವನ್ನು ಅ?ಕೋನವಾಗಿ ರೂಪಿಸಲಾಗಿದೆ. ಅ?ಕೋನ ಎನ್ನುವುದು, ಅ? ದಿಕ್ಕುಗಳಲ್ಲೂ ಸಮುದ್ರವನ್ನು ಕಾಯುವ ಸಂಕಲ್ಪವನ್ನು ಮೂಡಿಸುತ್ತದೆ. ವಿಶೇ?ವೆಂದರೆ ಛತ್ರಪತಿ ಶಿವಾಜಿ ಮಹಾರಾಜದ ರಾಜಮುದ್ರೆಯೂ ಇದೇ ಅ?ಕೋನಾಕಾರವನ್ನು ಹೊಂದಿತ್ತು. ಶಿವಾಜಿ ಮಹಾರಾಜರ ಶೌರ್ಯ ಮತ್ತು ಸಾಧನೆಗಳನ್ನು ನೆನಪು ಮಾಡಿಕೊಂಡು ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಧ್ವಜದಲ್ಲಿ ಶಿವಾಜಿ ಮಹಾರಾಜರ ರಾಜ ಮುದ್ರೆಯನ್ನು ಸೇರಿಸಲಾಗಿದೆ.

⬅ ಮುಖಪುಟ