ನಮ್ಮನ್ನು ಅನುಸರಿಸಿ: Facebook Twitter Instagram YouTube

ಕವಿರಾಜಮಾರ್ಗ

ಅಪ್‌ಲೋಡ್ ಮಾಡಿದ ದಿನಾಂಕ: 02-04-2026 14:12

ಕವಿರಾಜಮಾರ್ಗ
ಕವಿರಾಜಮಾರ್ಗ ಕನ್ನಡದಲ್ಲಿ ಉಪಲಬ್ಧವಿರುವ ಗ್ರಂಥಗಳ ಪೈಕಿ ಅತ್ಯಂತ ಪುರಾತನವಾದುದು ಮತ್ತು ಜಗತ್ತಿನ ಅತ್ಯಂತ ಹಳೆಯ ಲಾಕ್ಷಣಿಕ ಗ್ರಂಥಗಳ ಸಾಲಲ್ಲಿ ಸ್ಥಾನಪಡೆದಿದೆ. ರಾಷ್ಟ್ರಕೂಟ ದೊರೆ ಅಮೋಘವ? ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನಿಂದ ಕವಿರಾಜಮಾರ್ಗ ರಚಿಸಲ್ಪಟ್ಟಿದೆ. ಇದು ವ್ಯಾಕರಣ, ಅಲಂಕಾರ, ಧ್ವನಿರಚನೆ ಸೇರಿದಂತೆ ಅನೇಕ ಸಾಹಿತ್ಯಿಕ ವಿಚಾರಗಳನ್ನು ಚರ್ಚಿಸಿ ಮುಂದಿನ ಕವಿಗಳಿಗೆ ರಾಜಮಾರ್ಗ ತೋರಿದ ಹೊತ್ತಿಗೆ. 

ಹಾಗಿದ್ದರೆ ಕವಿರಾಜಮಾರ್ಗ ಕೇವಲ ಶಾಸ್ತ್ರಗ್ರಂಥವೇ? ಅಲ್ಲಿ ಕೇವಲ ವ್ಯಾಕರಣಗಳ ಬಗ್ಗೆ ಚರ್ಚಿಸಲಾಗಿದೆಯೇ ಎಂದರೆ ಖಂಡಿತ ಇಲ್ಲ. ಏಕೆಂದರೆ ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿ, ಭೌಗೋಳಿಕತೆ, ರಾಜಕೀಯ ಸ್ಥಿತಿಗತಿ ಹೀಗೆ ಅಂದಿನ ಅನೇಕ ವಿಚಾರಗಳನ್ನ ಚರ್ಚಿಸುವಾಗ ಕವಿರಾಜಮಾರ್ಗವನ್ನ ಹೊರತುಪಡಿಸಿ ಮಾತನಾಡಲು ಸಾಧ್ಯವಿಲ್ಲ. ಹೀಗಾಗಿ ನಿಸ್ಸಂದೇಹವಾಗಿ ಕವಿರಾಜಮಾರ್ಗ ಬಹುಮುಖಿ ನೆಲೆಯಲ್ಲಿ ಅಂದಿನ ಕನ್ನಡ ನಾಡಿನ ಮತ್ತು ಸಾಹಿತ್ಯದ ಮಾಹಿತಿ ನೀಡುವ ಗ್ರಂಥವಾಗಿದೆ.

ಕವಿರಾಜಮಾರ್ಗ ಒಟ್ಟು ಮೂರು ಪರಿಚ್ಛೇದಗಳನ್ನ ಒಳಗೊಂಡಿದ್ದು. ಸರಸ್ವತಿ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ. ದೋ?ನುದೋ?  ವರ್ಣನಾ ನಿರ್ಣಯದಲ್ಲಿ ಕಾವ್ಯದೋ?ದ ಬಗ್ಗೆ ಚರ್ಚಿಸಿದರೆ, ಶಬ್ದಾಲಂಕಾರ ವರ್ಣನಾನಿರ್ಣಯ ಮತ್ತು ಅರ್ಥಲಂಕಾರ ವರ್ಣನಾನಿರ್ಣಯದಲ್ಲಿ ಅಲಂಕಾರಗಳ ಚರ್ಚೆಯಾಗಿದೆ. ಕನ್ನಡ ಕಾವ್ಯದೊಳಗೆ ಸಂಸ್ಕೃತವನ್ನು ಹೇಗೆ? ಯಾವ ಪ್ರಮಾಣದಲ್ಲಿ? ಬಳಸಬೇಕು ಎಂಬುದನ್ನು ತನ್ನ ಗ್ರಂಥದಲ್ಲಿ ಚರ್ಚಿಸುವ ಮೂಲಕ ಅನ್ಯ ಭಾ?ಗಳಿಂದ ಕನ್ನಡದ ಅನನ್ಯತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಮಾರ್ಗಕಾರ ಚಿಂತಿಸುತ್ತಾನೆ.. 

ಕವಿರಾಜಮಾರ್ಗವೂ ೯ನೇ ಶತಮಾನಕ್ಕಿಂತಲೂ ಮುಂಚಿನ ಪೂರ್ವದ ಹಳಗನ್ನಡದ ಅಸ್ತಿತ್ವವನ್ನು ಸ್ಪ?ಪಡಿಸುತ್ತದೆ. ವಿಮಳ, ಉದಯ, ನಾಗುರ್ಜನ, ಜಯಬಂಧು ಮೊದಲಾದ ಕನ್ನಡದ ಕವಿಗಳ ಉಲ್ಲೇಖವು ಮಾರ್ಗಕಾರನಿಗೂ ಮುಂಚೆ ಕನ್ನಡ ಸಾಹಿತ್ಯ ಅಸ್ತಿತ್ವದಲ್ಲಿತ್ತು ಎಂಬುದನ್ನು ಪ್ರಚುರಪಡಿಸುತ್ತದೆ. 

ಕಾವೇರಿಯಿಂದಮಾ ಗೋದಾವರಿ ವರಮಿರ್ಪಾ ನಾಡದಾ ಕನ್ನಡದೊಳ್ ಎಂದು ಹೇಳುವ ಮೂಲಕ ನಮ್ಮ ನಾಡಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿರೇಖೆಗಳನ್ನು ಗುರುತಿಸುವ ಪ್ರಯತ್ನ ಮಾಡಿದ ಮೊಟ್ಟಮೊದಲ ಉಪಲಬ್ದ ಪುಸ್ತಕ ಕವಿರಾಜಮಾರ್ಗ. ಅಂದಿನ ತಿರುಳ್ಗನ್ನಡ ಪ್ರದೇಶಗಳು, ಕರ್ನಾಟಕದ ಗಡಿಗಳು, ಉಪಭಾ?ಗಳ ಕುರಿತ ಮಾಹಿತಿ ಈ ಹೊತ್ತಿಗೆಯಲ್ಲಿದೆ.
ಕನ್ನಡ ಸಾಹಿತ್ಯದ ವಿಶಿ? ರೂಪಗಳಾದ ಚತ್ತಾಣ, ಬೆದಂಡೆ, ಒನಕೆವಾಡು ಪ್ರಕಾರಗಳ ಬಗ್ಗೆ ಈ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಕುರಿತೋದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಎಂದು ಹೇಳುವ ಮೂಲಕ ಕನ್ನಡಿಗರ ಮೌಖಿಕ ಪರಂಪರೆಯ ಕುರಿತು ಹೆಮ್ಮೆಯನ್ನು ಮೂಡಿಸುತ್ತದೆ. ಕನ್ನಡಿಗರ ಔದಾರ್ಯವನ್ನು ಮೆಚ್ಚಿಕೊಳ್ಳುತ್ತಾ ನಿ?ಕ್ಷಪಾತವೂ, ಬುದ್ಧಿಶಾಲಿಯೂ, ನ್ಯಾಯಪರವೂ ಆದ ಅವರ ಗುಣಸ್ವಭಾವಗಳನ್ನು (ಸುಭಟರ್ಕಳ್, ಚೆಲ್ವರ್ಕಳ್, ಗುಣಿವಳಿ, ಅಭಿಮಾನಿಗಳ್, ವಿವೇಕಿಗಳ್..) ತನ್ನ ಗ್ರಂಥದಲ್ಲಿ ಶ್ರೀವಿಜಯ ಉಲ್ಲೇಖಿಸುತ್ತಾನೆ. 

ಕೇವಲ ಕಾವ್ಯಮೀಮಾಂಸೆಯ ಗ್ರಂಥವಾಗಿ ಉಳಿಯದೆ ಕನ್ನಡ ವಿದ್ವತ್ ವಲಯದಲ್ಲಿ  ಸಾಂಸ್ಕೃತಿಕ ಪಠ್ಯವಾಗಿಯೇ ಗುರುತಿಸಿಕೊಂಡಿರುವ ಮೇರು ಗ್ರಂಥ ಕವಿರಾಜಮಾರ್ಗ. ೯ನೇ ಶತಮಾನದಲ್ಲಿ ಶ್ರೀವಿಜಯ ದಂಡಿಯ ಕಾವ್ಯದರ್ಶವನ್ನು ಆಧಾರವಾಗಿಟ್ಟುಕೊಂಡು ಕನ್ನಡ ಸಂಸ್ಕೃತಿ ಮತ್ತು ಪುಟ್ಟಕನ್ನಡ ಜಗತ್ತನ್ನೇ ತನ್ನ ಗ್ರಂಥದಲ್ಲಿ ಕಟ್ಟಿಕೊಟ್ಟ ಬಗೆ ಅನುಪಮವಾದುದು.

⬅ ಮುಖಪುಟ