"ಶಿವರಾಮ ಕಾರಂತರನ್ನು ನಿಮಗೆ ಪರಿಚಯ ಮಾಡಿಕೊಡುವುದು ಒಂದೇ, ನೇಸರನನ್ನು ಸೊಡರಿನಿಂದ ತೋರಿಸುವುದು ಒಂದೇ" ಎಂದವರು ನವ್ಯ ಕಾಲದ ಮಹತ್ವದ ಕವಿ ಗೋಪಾಲಕೃ? ಅಡಿಗರು. ಶಿವರಾಮ ಕಾರಂತರು ಒಂದಿಡೀ ತಲೆಮಾರನ್ನು ಇಡಿಯಾಗಿ ಆವರಿಸಿಕೊಂಡ ಮಹಾ ವಿಸ್ಮಯ.
ನಡೆದಾಡುವ ವಿಶ್ವಕೋಶ ಕಾರಂತರ
ಕಿರು ಪರಿಚಯ: ಶಿವರಾಮ ಕಾರಂತರು ಜನಿಸಿದ್ದು ಅಕ್ಟೋಬರ್ ೧೦, ೧೯೦೨ರಲ್ಲಿ. ಉಡುಪಿಯ ಸಾಲಿಗ್ರಾಮ ಅವರ ಜನ್ಮಸ್ಥಳ. ಕೂಡು ಕುಟುಂಬದಲ್ಲಿ ಜನಿಸಿದ ಕಾರಂತರು ಹುಟ್ಟೂರಿನಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಕವಿಯಾಗಿ, ಕಾದಂಬರಿಕಾರರಾಗಿ ಮತ್ತು ನಾಟಕಕಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆಂದೇ ತಮ್ಮನ್ನು ಅರ್ಪಿಸಿಕೊಂಡರು. ಕಾರಂತರು ಬರಹಗಾರರಾಗಿ ಅ? ಅಲ್ಲದೆ ಅಪ್ಪಟ ಪರಿಸರ ಪ್ರೇಮಿಯಾಗಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದವರು. ಯಕ್ಷಗಾನ, ನಾಟಕ, ಬಯಲಾಟ ಕಲೆಗಳಲ್ಲೂ ಕಾರಂತರು ಪರಿಣಿತಿಯನ್ನು ಹೊಂದಿದ್ದರು. ಅ? ಅಲ್ಲ ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಕಾರಂತರು ಮುಂಚೂಣಿಯಲ್ಲಿದ್ದು ಸ್ವಾತಂತ್ರ್ಯದ ಕಿಡಿಯನ್ನು ದೇಶ ಬಾಂಧವರಲ್ಲಿ ಹೊತ್ತಿಸಿದ್ದರು.
ಶಿವರಾಮ ಕಾರಂತರ ಮಹತ್ವದ ಕೃತಿಗಳು: ಢಮ್ ಢಮ್ ಎಂದು ದುಡಿಯನ್ನು ಬಾರಿಸುತ್ತಲೇ ನೆಲಕ್ಕೊರಗಿ ಕಣ್ಣು ಮುಚ್ಚುವ ಚೋಮನ ಪಾತ್ರವನ್ನು (ಚೋಮನ ದುಡಿ ಕೃತಿ) ಕನ್ನಡ ಸಾಹಿತ್ಯ ಲೋಕದ ಯಾವ ಓದುಗರೂ ಮರೆಯುವುದಿಲ್ಲ. ಇನ್ನು ಬೆಟ್ಟದ ಜೀವ ಕೃತಿ ಉಂಟು ಮಾಡಿದ ಪುಳಕ ಎಂಥವರನ್ನೂ ಹಿಡಿದು ಕೂರಿಸಿಬಿಡುತ್ತದೆ. ಮೂಕಜ್ಜಿಯ ಕನಸುಗಳು ಕೃತಿಯಲ್ಲಿನ ಮುಗ್ಧ ಹುಡುಗ ಸುಬ್ರಾಯ ಮತ್ತು ಮೂಕಜ್ಜಿಯ ಪಾತ್ರಗಳು ಕೊಟ್ಟ ಸಂತಸವನ್ನು ಪ್ರತಿಯೊಬ್ಬ ಓದುಗನೂ ತನ್ನ ಮನಸ್ಸಿನಲ್ಲಿ ಭದ್ರವಾಗಿ ಇಟ್ಟುಕೊಂಡಿದ್ದಾನೆ.
ಸರಸಮ್ಮನ ಸಮಾಧಿ, ಗೊಂಡಾರಣ್ಯ, ಮೂಜನ್ಮ, ಅಳಿದ ಮೇಲೆ, ಹೆತ್ತಾಳಾ ತಾಯಿ, ಕರುಳಿನ ಕರೆ ಹೀಗೆ ಸದಾ ಕಾಡುವ ಅಸಂಖ್ಯಾತ ಕಾದಂಬರಿಗಳನ್ನು ಕಾರಂತರು ರಚಿಸಿದ್ದರು. ಅವರು ರಚಿಸಿದ ಕಥೆ, ನಾಟಕ, ಪ್ರವಾಸ ಕಥನ ಸೇರಿದಂತೆ ಇನ್ನಿತರ ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯ ಲೋಕವನ್ನು ಉನ್ನತದತ್ತ ಕರೆದೊಯ್ದಿದೆ. ಅದರಲ್ಲೂ ಶಿವರಾಮ ಕಾರಂತರ ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಆತ್ಮಕಥೆ ಪ್ರತಿಯೊಬ್ಬರ ಕೈ ಬೆರಳನ್ನು ಹಿಡಿದು ನಡೆಸಿಕೊಂಡು ಹೋಗುತ್ತದೆ.
ಕಾರಂತರಿಗೆ ಒಲಿದ ಪ್ರಶಸ್ತಿಗಳು: ಶಿವರಾಮ ಕಾರಂತರು ಪ್ರಶಸ್ತಿಯನ್ನು ಮೀರಿ ಬೆಳೆದಿದ್ದವರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಅವರ ಉತ್ಕೃ? ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಭೂ?ಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಸಾಕ? ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿವೆ.
ಕಾರಂತ ಅಜ್ಜನ ಬಗ್ಗೆ ಇನ್ನ?
ಕಾರಂತರು ಸದಾ ಹೊಸತನಕ್ಕೆ ತುಡಿಯುತ್ತಿದ್ದವರು. ಬಾಲವನ ಅವರ ವಿಶಿ? ಪ್ರಯೋಗ. ರಾಜಕೀಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದರು. ಪರಿಸರ ಮತ್ತು ವಿಜ್ಞಾನ ವಿ?ಯಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಕೆಲಸಗಳು ನಿಜಕ್ಕೂ ಶ್ಲಾಘನೀಯ.
ಶಿವರಾಮ ಕಾರಂತರು ತಮ್ಮ ೯೫ನೇ ವಯಸ್ಸಿನಲ್ಲಿ ಅಂದರೆ ಡಿಸೆಂಬರ್ ೯, ೧೯೯೭ರಲ್ಲಿ ಉಡುಪಿಯ ಮಣಿಪಾಲ್‌ನಲ್ಲಿ ತೀರಿ ಹೋದರು. ವೃದ್ಧಾಪ್ಯದಲ್ಲೂ ಕಾರಂತರ ಹುಮ್ಮಸ್ಸು ತಗ್ಗಿರಲಿಲ್ಲ. ಸಾಧನೆಗೆ ನಿರ್ದಿ? ನಿಲ್ದಾಣವಿಲ್ಲ ಎಂದು ತೋರಿಸಿಕೊಟ್ಟ ‘ಕಾರಂತ ನೀ ಸದಾ ಜೀವಂತ!