ಟಾಗೋರರು ನಮ್ಮ ಭಾರತದ ಪುಣ್ಯ ನೆಲದಲ್ಲಿ ಜನಿಸಿ ಇಂದು ಇಡೀ ಜಗತ್ತು ಗೌರವಿಸುವ ಒಬ್ಬ ಮಹತ್ವದ ಕವಿಯಾಗಿ ಉಳಿದುಕೊಂಡಿರುವುದು ನಮ್ಮ ಹೆಮ್ಮೆ. ಒಬ್ಬ ಬಂಗಾಳ ಮೂಲದ ಹುಡುಗ ಕವಿಯಾಗಿ, ಕಾದಂಬರಿಕಾರನಾಗಿ, ನಾಟಕಕಾರನಾಗಿ, ಸಂಗೀತಗಾರನಾಗಿ ಹಾಗೂ ಬಹುಭಾ? ವಿದ್ವಾಂಸನಾಗಿ ಬೆಳೆದು ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪಡೆಯುವ?ರ ಮಟ್ಟಿಗೆ ಸಾಧಿಸುತ್ತಾನೆ ಎಂದರೆ ಅದು ಸುಲಭದ ವಿ?ಯವಲ್ಲ. ಹಾಗಾಗಿ ನಾವು ಟಾಗೋರ್ ಅವರನ್ನು ಅಭಿಜಾತ ಪ್ರತಿಭೆ ಎಂದು ಉತ್ಪ್ರೇಕ್ಷೆ ಇಲ್ಲದೆ ಕರೆಯಬಹುದು.
ಬಾಲ್ಯ: ಟ್ಯಾಗೋರ್ ಅವರು ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಮೇ ೭, ೧೮೬೧ ರಲ್ಲಿ ಬಂಗಾಳದಲ್ಲಿ ಜನಿಸಿದರು. ತಂದೆ ದೇಬೆಂದ್ರನಾಥ ಟ್ಯಾಗೋರ್ ತಾಯಿ ಶಾರದಾದೇವಿ. ಟ್ಯಾಗೋರರು ಕಿರಿಯ ಪ್ರಾಯದಲ್ಲಿಯೇ ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಂಡಿದ್ದವರು. ಅದ್ಭುತ ಎಂಬಂತೆ ತಮ್ಮ ಎಂಟನೇ ವಯಸ್ಸಿನಲ್ಲಿಯೇ ಹದವರಿತ ಮತ್ತು ಅರ್ಥಗರ್ಭಿತವಾದ ಪದ್ಯಗಳನ್ನು ರಚಿಸಲು ಪ್ರಾರಂಭಿಸಿದ್ದರು. ೧೬ನೇ ವಯಸ್ಸಿನಲ್ಲಿ ರವೀಂದ್ರರು "ಭಾನುಶಿಂಘೊ" ಎಂಬ ಮಹತ್ವದ ಕವಿತೆಯನ್ನು ಬಂಗಾಳ ಭಾ?ಯಲ್ಲಿ ಪ್ರಕಟಿಸಿದರು.
ಬಹುಮುಖ ಪ್ರತಿಭೆ: ಟಾಗೋರರು ಕೇವಲ ಕವಿತೆಗಳನ್ನ? ಅಲ್ಲದೆ ಸಣ್ಣ ಕಥೆ, ಕಾದಂಬರಿ, ನಾಟಕ ಮತ್ತು ವಿದ್ವತ್ಪೂರ್ಣವಾದ ಗ್ರಂಥ ಮಾಲೆಗಳನ್ನು ಬರೆದು ಪ್ರಕಟಿಸಿದರು. ರವೀಂದ್ರನಾಥ ಟಾಗೋರ್ ಅವರನ್ನು ಒಂದು ಪ್ರತಿಭೆಯಿಂದ ಗುರುತಿಸಲಾಗದು. ಜಗತ್ತಿನ ಅತ್ಯದ್ಭುತವಾದ ಪುಸ್ತಕಗಳನ್ನೆಲ್ಲ ಓದಿಕೊಂಡಿದ್ದ ಅವರು ಲಂಡನ್‌ನಲ್ಲಿ ಕಾನೂನು ಪದವಿಯನ್ನು ಪಡೆದಿದ್ದರು. ಆದರೆ ಅವರು ವಕೀಲಿ ವೃತ್ತಿಯನ್ನು ಪಕ್ಕಕ್ಕಿಟ್ಟು ಬೇರೆ ಸೃಜನಶೀಲ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೇ ಹೆಚ್ಚು. ಈಗಾಗಲೇ ಹೇಳಿದಂತೆ ಅವರು ಹೃದಯಸ್ಪರ್ಶಿಯಾಗಿ ಬರೆಯುತ್ತಿದ್ದರು. ತಮ್ಮದೇ ಪದ್ಯಗಳಿಗೆ ಸಂಗೀತ ಸಂಯೋಜನೆ ಮಾಡಿ ಮಧುರವಾಗಿ ಹಾಡುತ್ತಿದ್ದರು. ಸಾಕ? ವಿ?ಯಗಳ ಬಗ್ಗೆ ತತ್ವಜ್ಞಾನಿಗಳಂತೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಒಟ್ಟಾರೆ ಅವರು ಸದಾ ಹರಿಯುವ ತೊರೆಯಂತೆ ಹೊಸತನಕ್ಕೆ ತುಡಿಯುತ್ತಿದ್ದರು.
ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ ಟಾಗೋರ್: ಟಾಗೋರ್ ಅವರು ಸಾರ್ವಭೌಮತ್ವವನ್ನು ಧಿಕ್ಕರಿಸಿದ ಪ್ರಬಲ ರಾಷ್ಟ್ರೀಯತಾವಾದಿ. ಸ್ವಾತಂತ್ರ್ಯ ಚಳುವಳಿಗೆ ಪ್ರೇರೇಪಿಸುವ ಕ್ರಾಂತಿಕಾರಿ ಗೀತೆಗಳನ್ನು ಬರೆದ ಕರಪತ್ರಗಳನ್ನು ಟಾಗೋರ್ ಅವರು ಹಂಚಿದ್ದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ತಮಗೆ ಬ್ರಿಟಿ? ಸರ್ಕಾರ ನೀಡಿದ್ದ ನೈಟ್ ಹುಡ್ ಪದವಿಯನ್ನು ಮುಲಾಜಿಲ್ಲದೆ ತ್ಯಜಿಸಿದ್ದರು. ಇಳಿ ವಯಸ್ಸಿನಲ್ಲಿಯೂ ಅವರಲ್ಲಿ ಬ್ರಿಟಿ?ರ ಮೇಲೆ ರೋಶಾಗ್ನಿ ಇತ್ತು. ಭಾರತೀಯರ ಎದೆಯಲ್ಲಿ ಸ್ವಾತಂತ್ರದ ಬೀಜ ಬಿತ್ತುವ ಹುಮ್ಮಸ್ಸಿತ್ತು.
ಸಾಹಿತ್ಯ: ಟಾಗೋರ್ ಅವರ ಅವರ ಪದ್ಯಗಳು ಬಂಗಾಳ ಅ? ಅಲ್ಲದೆ ಈ ಜಗದ ಅಸಂಖ್ಯಾತ ವ್ಯಕ್ತಿಗಳ ನಾಲಿಗೆಯ ಮೇಲೆ ಜೀವಂತವಾಗಿದೆ. ಲೆಕ್ಕಕ್ಕೆ ಸಿಗದ? ಪುಸ್ತಕಗಳನ್ನು ಬರೆದಿದ್ದ ಟ್ಯಾಗೋರರಿಗೆ ಭಾರಿ ಮಹತ್ವವನ್ನು ತಂದುಕೊಟ್ಟ ಕೃತಿ "ಗೀತಾಂಜಲಿ" ಭಾರತೀಯ ಸಂಸ್ಕೃತಿಯ ಅಂತರಾತ್ಮವನ್ನು ಶೋಧಿಸಿರುವ ಆ ಕೃತಿ ವಿಶ್ವದ ಸಾಕ? ಭಾ?ಗೆ ತರ್ಜುಮೆಗೊಂಡು ಕಾವ್ಯ ರಸಿಕರ ಮನಸ್ಸನ್ನು ಸಂಪೂರ್ಣವಾಗಿ ಗೆದ್ದಿದೆ. ಅದೇ ಕೃತಿ ೧೯೧೩ ರಲ್ಲಿ ನೊಬೆಲ್ ಪ್ರಶಸ್ತಿಯನ್ನು ತನ್ನ ಮುಡಿಗೇರೆಸಿಕೊಂಡಿತು. ಮಾನಸಿ, ಸೋನಾರ್, ಗಿತಿಮಾಲ್ಯ, ಚಾರ್ ಓಧಯ್ ಅವರ ಇತರೆ ಕೃತಿಗಳು.
ಶಾಂತಿನಿಕೇತನ: ಶಾಂತಿನಿಕೇತನ ವಿಶ್ವವಿದ್ಯಾನಿಲಯವು ಇಂದು ಭಾರತದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲೊಂದು. ಶಾಂತಿನಿಕೇತನವನ್ನು ಮುನ್ನಲೆಗೆ ತಂದು ಅದಕ್ಕೊಂದು ವಿಶಿ? ಕಳೆಯನ್ನು ತಂದು ಕೊಟ್ಟವರು ಟಾಗೋರ್ ಅವರು. ಸದ್ಯ ಪಶ್ಚಿಮ ಬಂಗಾಳದಲ್ಲಿರುವ ಆ ವಿಶ್ವವಿದ್ಯಾನಿಲಯದಲ್ಲಿ ಇಂದಿರಾ ಗಾಂಧಿ, ಸತ್ಯಜಿತ್ ರೇ ಸೇರಿದಂತೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಅಮರ್ತ್ಯಸೇನ್ ಸೇರಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳು ತಮ್ಮ ವಿದ್ಯಾಭ್ಯಾಸ ನಡೆಸಿದ್ದರು. ಟಾಗೋರರು ತಮ್ಮ ಕಲ್ಪನೆಯ ವಾತಾವರಣವನ್ನು ವಿಶ್ವವಿದ್ಯಾಲಯದಲ್ಲಿ ನಿರ್ಮಿಸಿ ವಿದ್ಯಾರ್ಥಿಗಳ ಓದಿಗೆ ಅನುವು ಮಾಡಿಕೊಟ್ಟಿದ್ದರು.
ಸಾಧನೆಯನ್ನೇ ದಾಹವಾಗಿಸಿಕೊಂಡಿದ್ದ ಮತ್ತು ಸ್ಫೂರ್ತಿಯ ಸೆಲೆಯಂತಿದ್ದ ಹೃದಯ ವೈಶಾಲ್ಯತೆಯ ವ್ಯಕ್ತಿ ರವೀಂದ್ರನಾಥ ಟ್ಯಾಗೋರರು ೭ ಆಗಸ್ಟ್ ೧೯೪೧ ರಂದು ಕಲ್ಕತ್ತಾದಲ್ಲಿ ಕೊನೆಯುಸಿರೆಳೆದರು. ಬಿಳಿ ಗಡ್ಡಧಾರಿ, ಸಂತ ಸ್ವರೂಪಿ ಮಂದಸ್ಮಿತ ಮುಖದ ಟ್ಯಾಗೋರರು ಚಿರಸ್ಥಾಯಿ!