ಲೇಖಕರು: ಪ್ರಸಾದ್ ಆದ್ಯ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬೆಲೆ: ₹225.00
“ಮನೆಯೇ ಮೊದಲ ಪಾಠಶಾಲೆ” ಎಂಬ ನಾಣ್ಣುಡಿಯಂತೆ, ಇಂದಿನ ಯುವ ಪೀಳಿಗೆಗೆ ಮತ್ತು ಮಕ್ಕಳಿಗೆ ಮೌಲ್ಯಯುತ ಸಂಸ್ಕಾರ ನೀಡುವ ೧೨ ಅಪರೂಪದ ನೀತಿ ಕಥೆಗಳ ಅದ್ಭುತ ಸಂಕಲನವೇ “ಪ್ರಚೋದಯಾತ್”. ಲೇಖಕ ಪ್ರಸಾದ್ ಆದ್ಯ ಅವರು ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಹಿನ್ನೆಲೆಯಲ್ಲಿ ಈ ಕಥೆಗಳನ್ನು ರಚಿಸಿದ್ದಾರೆ. ಅಜ್ಜ-ಅಜ್ಜಿಯರ ಕಥೆಗಳಿಂದ ವಂಚಿತರಾಗಿರುವ ಇಂದಿನ ಮಕ್ಕಳಿಗೆ ಸತ್ಯ, ರ‍್ಮ, ಹಾಗೂ ಸುಸಂಸ್ಕೃತ ಜೀವನದ ಪರಿಚಯ ಮಾಡಿಸಲು ಇದೊಂದು ಅತ್ಯುತ್ತಮ ಕೃತಿ. ಇದರಲ್ಲಿರುವ ಪ್ರತಿಯೊಂದು ಕಥೆಯೂ ಒಂದೊಂದು ವಿಶಿಷ್ಟ ನೀತಿಯನ್ನು ಸಾರುತ್ತದೆ. ಹಳೆಯ ವಿಚಾರಗಳೇ ಆದರೂ, ಇಂದಿನ ಪೀಳಿಗೆಗೆ ಒಗ್ಗುವಂತೆ ಹೊಸರೂಪದಲ್ಲಿ ಅತ್ಯಂತ ಆಸಕ್ತಿದಾಯಕವಾಗಿ ನಿರೂಪಿಸಲಾಗಿದೆ. ಕೇವಲ ಅನ್ನ, ನೀರು, ಗಾಳಿಯಷ್ಟೇ ಅಲ್ಲದೆ, ಪ್ರೀತಿ, ಮಮತೆ ಹಾಗೂ ಸುಸಂಸ್ಕೃತ ಪರಿಸರ ಸಿಕ್ಕಾಗ ಮಾತ್ರ ಮಗುವಿನ ರ‍್ವಾಂಗೀಣ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಮರ‍್ಗರ‍್ಶನ ಮಾಡುವ ಕಥೆಗಳು ಇಲ್ಲಿವೆ. ಪಾಶ್ಚಾತ್ಯ ಜೀವನ ಶೈಲಿಯ ಪ್ರಭಾವದಿಂದ ಯಾಂತ್ರಿಕವಾಗುತ್ತಿರುವ ಇಂದಿನ ದಿನಗಳಲ್ಲಿ, ನಮ್ಮ ಸನಾತನ ರ‍್ಮದ ವಿಕಸನ, ಧರ‍್ಮಿಕ ಪ್ರಜ್ಞೆ ಹಾಗೂ ಜೀವನ ಮೌಲ್ಯಗಳನ್ನು ಯುವ ಪೀಳಿಗೆಗೆ ಉಣಬಡಿಸಲು ‘‘ಪ್ರಚೋದಯಾತ್’’ ಖಂಡಿತವಾಗಿಯೂ ಪ್ರತಿಯೊಂದು ಮನೆಯಲ್ಲೂ ಇರಬೇಕಾದ ಪುಸ್ತಕವಾಗಿದೆ.
ಪುಸ್ತಕಕ್ಕಾಗಿ ಸಂರ‍್ಕಿಸಿ: ೮೯೦೪೩೩೩೫೮೧