ನಮ್ಮನ್ನು ಅನುಸರಿಸಿ: Facebook Twitter Instagram YouTube

ಮಕ್ಕಳಿಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಕಥೆಗಳು

ಅಪ್‌ಲೋಡ್ ಮಾಡಿದ ದಿನಾಂಕ: 31-07-2026 11:08

ಮಕ್ಕಳಿಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಕಥೆಗಳು

ಲೇಖಕರು: ರೋಹಿತ್ ಚಕ್ರತರ‍್ಥ

ಪ್ರಕಾಶಕರು: ಅಯೋಧ್ಯಾ ಬುಕ್ಸ್

ಬೆಲೆ: ₹120.00

ಪಾಕಿಸ್ತಾನದ ದೈತ್ಯದೇಹೀ ಪ್ರಧಾನಿಯ ಜೊತೆ ನೀವು ಹೇಗೆ ಮಾತಾಡುತ್ತೀರಿ? ಎಂದು ಪತ್ರರ‍್ತರು ಕೇಳಿದಾಗ "ನಾನು ತಲೆ ಎತ್ತಿ ಮಾತಾಡುತ್ತೇನೆ. ಆತ ತಲೆ ತಗ್ಗಿಸಿ ಮಾತು ಕೇಳುವಂತೆ ಮಾಡುತ್ತೇನೆ" ಎಂಬ ಎದೆಗಾರಿಕೆ ತೋರಿದ್ದವರು ಭಾರತದ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ. ಅವರು ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದುದು ಒಂದು ರ‍್ಷ. ಕೆಲವು ತಿಂಗಳು ಮಾತ್ರ. ಆದರೆ ಅಷ್ಟರಲ್ಲೇ ಅವರು ಇಡೀ ಭಾರತದ ಎಲ್ಲ ಪ್ರಜೆಗಳ ಹೃದಯಗಳನ್ನು ಆವರಿಸಿಕೊಂಡರು. ಅವರ 'ಜೈ ಜವಾನ್ ಜೈ ಕಿಸಾನ್' ಆಧುನಿಕ ಭಾರತದ ಘೋಷವಾಕ್ಯವೇ ಆಗಿಹೋಗಿತ್ತು.
ಶಾಸ್ತ್ರಿಗಳು ಹುಟ್ಟಿದ್ದು ಬಡತನದಲ್ಲಿ. ಕತ್ತರಿಸಿದಷ್ಟೂ ಮಿನುಗುವ ವಜ್ರದಂತೆ ಅವರ ವ್ಯಕ್ತಿತ್ವ. ಹೆಚ್ಚು ಕಷ್ಟಗಳನ್ನು ಸಹಿಸಿಕೊಂಡು ಹೆಚ್ಚು ಹೊಳಪು ಪಡೆಯಿತು. ಪ್ರಾಮಾಣಿಕತೆ, ಸತ್ಯಸಂಧತೆ, ನಿಷ್ಠಪಟ ಮೊದಲಾದ ಸದ್ಗುಣಗಳಿಗೆ ಅನ್ರ‍್ಥವಾಗಿದ್ದವರು ಶಾಸ್ತ್ರಿಗಳು, ದೊಡ್ಡ ಹುದ್ದೆಯಲ್ಲದ್ದೂ ಇಷ್ಟು ಸರಳವಾಗಿರಬಹುದೆ ಎಂದು ಜನ ಹುಬ್ಬೇರಿಸುವಂತೆ ಅವರು ತಮ್ಮ ಬದುಕನ್ನು ಬಾಳಿದರು. ಅವರ ಬದುಕಿನ ಅತ್ಯಂತ ಅಪರೂಪದ ಘಟನೆಗಳನ್ನು ಪೋಣಿಸಿರುವ ಈ ಪುಸ್ತಕ ಶಾಸ್ತ್ರಿಗಳ ವ್ಯಕ್ತಿತ್ವದ ಪರಿಚಯವನ್ನು ಸರಳ ಶಬ್ದಗಳಲ್ಲಿ ಮಾಡಿಕೊಡುತ್ತದೆ.

⬅ ಮುಖಪುಟ