ಲೇಖಕರು: ಮೂಲ- ರ‍್ಮಪಾಲ್, ಡಾ. ಮಾಧವ ಪೆರಾಜೆ
ಪ್ರಕಾಶಕರು: ಪರಸ್ಪರ
ಬೆಲೆ: ₹600.00
೧೮ನೇ ಶತಮಾನದ ಭಾರತೀಯ ಸ್ಥಳೀಯ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸುವ ರ‍್ಮಪಾಲ್ ಅವರು ಬರೆದ ಪ್ರಸಿದ್ಧ ಕೃತಿ ʼಖಿhe ಃeಚಿuಣiಜಿuಟ ಖಿಡಿeeʼ. ಈ ಪುಸ್ತಕದ ಕನ್ನಡಾನುವಾದವೇ ಚೆಲುವ ತರು. ಬ್ರಿಟಿಷ್ ಆಳ್ವಿಕೆಯ ಮೊದಲು ಭಾರತದಲ್ಲಿ ವ್ಯಾಪಕವಾದ, ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇತ್ತು ಎಂಬುದನ್ನು ಈ ಪುಸ್ತಕವು ದಾಖಲೆಗಳ ಸಹಿತ ಸಾಬೀತುಪಡಿಸುತ್ತದೆ.
೧೮೦೦ರ ಆರಂಭದಲ್ಲಿ ಬ್ರಿಟಿಷರ ಸಮೀಕ್ಷೆಗಳ ಪ್ರಕಾರ, ಭಾರತದ ಹಳ್ಳಿಗಳಲ್ಲಿ ಕನಿಷ್ಠ ಒಂದು ಶಾಲೆಗಳಿದ್ದವು. ಸ್ಥಳೀಯ ಮಾಸ್ತರುಗಳು ಓದು, ಬರೆಯುವುದು ಮತ್ತು ಅಂಕಗಣಿತವನ್ನು ಪರಿಣಾಮಕಾರಿಯಾಗಿ ಕಲಿಸುತ್ತಿದ್ದರು. ಭಾರತೀಯ ಶಿಕ್ಷಣ ವ್ಯವಸ್ಥೆಯು ಸಮೃದ್ಧವಾಗಿತ್ತು, ಆದರೆ ಬ್ರಿಟಿಷ್ ನೀತಿಗಳಿಂದಾಗಿ ಅದು ಕುಸಿದುಹೋಯಿತು ಎಂಬ ವಿಶ್ಲೇಷಣೆ ಈ ಪುಸ್ತಕದಲ್ಲಿದೆ. ಇದು ಬ್ರಿಟಿಷ್ ಆಡಳಿತದ ಮೊದಲು ಭಾರತದ ಶಿಕ್ಷಣ ವ್ಯವಸ್ಥೆ ಎಷ್ಟು ಉನ್ನತವಾಗಿತ್ತು ಎಂಬುದನ್ನು ತಿಳಿಸುವ ಕೃತಿಯಾಗಿದೆ.
ಪುಸ್ತಕಕ್ಕಾಗಿ ಸಂರ‍್ಕಿಸಿ: ೬೩೬೦೫೮೧೯೫೭, ೦೮೦-೨೬೬೧೨೭೩೦