ಲೇಖಕರು: ಡಾ.ಬಾಬು ಕೃಷ್ಣಮರ‍್ತಿ, ಡಾ.ಎಸ್.ಆರ್.ಲೀಲಾ
ಪ್ರಕಾಶಕರು: ಅಯೋಧ್ಯಾ ಬುಕ್ಸ್
ಬೆಲೆ: ₹399.00
ಯಾವುದೋ ಅಜ್ಞಾತ ಕುಗ್ರಾಮವೊಂದರಲ್ಲಿ ಹುಟ್ಟಿದ ಚಂದ್ರಶೇಖರನೆಂಬ ಕೂಸು 'ಆಹ್ಲಾದ'ನಾಗಿ ರೂಪುಗೊಂಡ ಕಥೆಯೇ ಬಾಬುಕೃಷ್ಣಮರ‍್ತಿಯವರ ಅಜೇಯ. ಆಜಾದ್ ಕೆಲವರಿಗೆ ಸ್ಫರ‍್ತಿದಾಯಕ, ಹಲವರಿಗೆ ಪಥಪ್ರರ‍್ಶಕ, ಇನ್ನು ಕೆಲವರಿಗೆ ಪ್ರೇರಕ. ಏಕೆಂದರೆ ಆತನ ಬದುಕು ಸರ‍್ಥಕ. ದುಷ್ಟರನ್ನು ದಮನಿಸುವ ಧೀರ ಪ್ರವೃತ್ತಿ ಆತನದು. ಸದಾ ಜಾಗೃತವಾಗಿರುವ ನೈತಿಕ ಪ್ರಜ್ಞೆ, ದೃಢವಾದ ಮನೋಬಲ ಎರಡನ್ನೂ ಮೇಲೈಸಿ ಒಮ್ಮೆಲೆ ಕರ‍್ಯರೂಪಕ್ಕಿಳಿಸುವ ಕ್ರಿಯಾಶೀಲತೆಯಿಂದ ಕೂಡಿದ ಅಸಾಮಾನ್ಯ ವ್ಯಕ್ತಿ ಆಜಾದ. ಒಂದು ನಾಟಕದ ಜೀವಾಳ ಇರುವುದೇ ಕಥೆಯ ಓಟದಲ್ಲಿ, ಅದು ಪಡೆದುಕೊಳ್ಳುವ ಅನಿರೀಕ್ಷಿತ ತಿರುವುಗಳಲ್ಲಿ, ಹೋರಾಟದ ಸಂರ‍್ಭಗಳಲ್ಲಿ, ಸಂರ‍್ಷದ ಸನ್ನಿವೇಶಗಳಲ್ಲಿ, ಗಂಡೆದೆಯ ಅಜೇಯನ ಸಾಹಸಮಯ ಬದುಕಿನಲ್ಲಿ ಇದೆಲ್ಲ ಭರಪೂರ ಇದ್ದು ನಾಟಕದ ಭಿತ್ತಿಗೆ ವೈವಿಧ್ಯವನ್ನೂ ಜೀವಂತಿಕೆಯನ್ನೂ ತುಂಬಿದೆ. ನಾಟಕವನ್ನು ಆವರಿಸಿರುವುದು ಯುವಕರ ಕೆಚ್ಚು, ಬ್ರಿಟಿಷರ ರೊಚ್ಚು. ಅಜೇಯನ ಪತ್ವವೆ ನಾಟಕದ ಮಹತ್ವದ ಅಂಶವೂ ಹೌದು. ರಂಗಭೂಮಿಯಲ್ಲಿ ಮೈದಾಳುವ ಅಜೇಯ ಜನಮನವನ್ನು ಜಯಿಸುವುದು ನಿಶ್ಚಯ.